Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಹವಾಮಾನ

ಕಣ್ಣೂರು ಹವಾಮಾನ

ವಿಪರೀತ ಮಳೆ ಹಾಗೂ ಬೇಸಿಗೆಯ ಬಿಸಿಲು ಹೆಚ್ಚಾಗಿರುವ ಸಮಯ ಬಿಟ್ಟು ಕಣ್ಣೂರಿಗೆ ಇಡೀ ವರ್ಷದಲ್ಲಿ ಯಾವಾಗ ಬೇಕಾದರೂ ಭೇಟಿ ನೀಡಬಹುದು. ಈ ಪ್ರದೇಶಕ್ಕೆ ಭೇಟಿ ನೀಡಲು ಉತ್ತಮ ಕಾಲ ಸೆಪ್ಟಂಬರ್ ನಿಂದ ಫೆಬ್ರವರಿ ಮಧ್ಯಭಾಗದವರೆಗೆ. ಈ ಸಮಯದಲ್ಲೇ ಅನೇಕ ದೇವಾಲಯಗಳ ಉತ್ಸವಗಳು ಹಾಗೂ ಕಾರ್ಯಕ್ರಮಗಳು ನಡೆಯುತ್ತವೆ. ಇದು ಪ್ರವಾಸಕ್ಕೆ ಸೂಕ್ತ ಕಾಲವಾಗಿದೆ.

ಬೇಸಿಗೆಗಾಲ

ಬೇಸಿಗೆ ಕಾಲದಲ್ಲಿ ಕಣ್ಣೂರಿನಲ್ಲಿ ಬಿಸಿಗಾಳಿ ಜೊತೆಗೆ ಶುಷ್ಕ ಹವೆ ಇದ್ದು ಶೆಕೆ ಹೆಚ್ಚಾಗಿರುತ್ತದೆ. ಮಾರ್ಚ್ ತಿಂಗಳಲ್ಲಿ ಆರಂಭವಾಗುವ ಬೇಸಿಗೆ ಸತತ ಮುಂದಿನ ಮೂರು ತಿಂಗಳವರೆಗೂ ಇರುತ್ತದೆ. ಬೇಸಿಗೆಯಲ್ಲಿ ಗರಿಷ್ಠ ಉಷ್ಠಾಂಶ 38 ಡಿಗ್ರಿ ಸೆಲ್ಶಿಯಸ್ ಇರುವುದರಿಂದ ಈ ಸಮಯದಲ್ಲಿ ಇಲ್ಲಿ ಇರಲು ಬಹಳ ಕಷ್ಟವಾಗುತ್ತದೆ.

ಮಳೆಗಾಲ

ಕೇರಳಾದ ಇತರ ಸಮುದ್ರ ತೀರ ಪ್ರದೇಶದಂತೆ ಕಣ್ಣೂರಿನಲ್ಲೂ ಮಳೆಗಾಲದಲ್ಲಿ ಹೆಚ್ಚು ಮಳೆ ಬೀಳುತ್ತದೆ. ಜೂನ್ ನಿಂದ ಸೆಪ್ಟಂಬರ್ ತಿಂಗಳವರೆಗೆ ಮುಂಗಾರು ಆರಂಭವಾಗಿ ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ಹಿಂಗಾರು ಮಳೆ ಬೀಳುತ್ತದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಈ ಪ್ರದೇಶದಲ್ಲಿ ಅಧಿಕ ಮಳೆ ಇರುವುದರಿಂದ ಆ ಸಮಯದಲ್ಲಿ ಇಲ್ಲಿಗೆ ಪ್ರವಾಸಕ್ಕೆ ಬರುವುದು ಸೂಕ್ತವಲ್ಲ.

ಚಳಿಗಾಲ

ಕಣ್ಣೂರಿನ ಸೌಂದರ್ಯವನ್ನೆಲ್ಲಾ ಕಣ್ತುಂಬಿಕೊಳ್ಳಬೇಕೆಂದರೆ ಚಳಿಗಾಲದಲ್ಲಿ ಇಲ್ಲಿಗೆ ಬರಬೇಕು. ಹವಮಾನ ಈ ಕಾಲದಲ್ಲೇಲ್ಲಾ ಬಹಳ ಅಹ್ಲಾದಕರ ಹಾಗೂ ಹಿತವಾಗಿರುತ್ತದೆ. ಚಳಿಗಾಲ ಡಿಸೆಂಬರ್ ತಿಂಗಳಲ್ಲಿ ಆರಂಭವಾಗಿ ಫೆಬ್ರವರಿಯಲ್ಲಿ ಕೊನೆಯಾಗುತ್ತದೆ. ಡಿಸೆಂಬರ್ ತಿಂಗಳಲ್ಲಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಶಿಯಸ್ ಇದ್ದು ಬಹಳ ಚಳಿ ಇರುತ್ತದೆ.