Search
 • Follow NativePlanet
Share
ಮುಖಪುಟ » ಸ್ಥಳಗಳು» ಕಣ್ಣೂರು

ಕಣ್ಣೂರು : ಪ್ರಕೃತಿ ಹಾಗೂ ಸಂಸ್ಕೃತಿಗಳ ಮಿಲನ

84

ಪರಂಗಿಯವರ ಭಾಷೆಯಲ್ಲಿ ಹೇಳಬೇಕೆಂದರೆ 'ಕ್ಯಾನನೂರ್' ಎಂಬುದು ಈ ಊರಿನ ಹೆಸರು. ಅತ್ಯಂತ ಶ್ರೀಮಂತ ಪಾರಂಪರೆ ಹಾಗೂ ಪಕ್ಕಾ ಸಾಂಸ್ಕೃತಿಕ ಹಿನ್ನೆಲೆ ಇರುವ ಕೇರಳಾ ರಾಜ್ಯದ ಉತ್ತರ ಭಾಗ ಜಿಲ್ಲೆ ಇದಾಗಿದೆ. ಇದರ ಗಡಿ ಪ್ರದೇಶಗಳು ಹಾಗೂ ಪಶ್ಚಿಮ ಘಟ್ಟಗಳು ಅರಬ್ಬಿ ಸಮುದ್ರದಲ್ಲಿ ಹಂಚಿಹೋಗಿದ್ದು, ಇಲ್ಲಿಯ ಸಾಂಸ್ಕೃತಿಕ ಪರಂಪರೆ ಹಾಗೂ ನೈಸರ್ಗಿಕ ಸೌಂದರ್ಯದ ಸೊಬಗು ಎಲ್ಲರನ್ನು ತನ್ನತ್ತ ಆಕರ್ಷಿಸುತ್ತದೆ. ಹಿಂದೆ ಮಲಬಾರ್ ಸಂಸ್ಥಾನದಲ್ಲಿ ಈ ಜಿಲ್ಲೆ ಸಾಂಸ್ಕೃತಿಕ, ಧಾರ್ಮಿಕ ಹಾಗೂ ವಾಣಜ್ಯ ಕೇಂದ್ರವಾಗಿತ್ತು.

ಸಾಂಸ್ಕೃತಿಕ ನೆಲೆಬೀಡಾಗಿರುವ, ಪ್ರಾಕೃತಿಕ ಸೌಂದರ್ಯವನ್ನೊಳಗೊಂಡಿರುವ ಈ ಪ್ರದೇಶವನ್ನು ಅನೇಕ ರಾಜ ಮಹಾರಾಜರು ತಮ್ಮ ಸಾಮ್ರಾಜ್ಯದ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿದ್ದರು. ಈ ಪ್ರದೇಶದ ಇತಿಹಾಸವನ್ನು ನೋಡುವಾಗ ಅತ್ಯಂತ ಜ್ಞಾನಿಯಾದ ಮಹಾರಾಜ ಸೊಲೋಮೋನನ ಕಾಲ ಹಡಗುಗಳು ಕಣ್ಣೂರಿನ ಸಮುದ್ರ ತೀರದಲ್ಲಿ ಲಂಗರು ಹಾಕಿದ್ದವು ಎಂದು ಗೊತ್ತಾಗುತ್ತದೆ. ಈ ಪ್ರದೇಶವು ಡಚ್ಚರು, ಪೋರ್ಚುಗೀಸರು, ಮೈಸೂರಿನ ಸಂಸ್ಥಾನದವರು ಹಾಗೂ ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದರೂ ಇಲ್ಲಿನ ಪಾರಂಪರಿಕ ಸಂಸ್ಕೃತಿಯು ಮಾಸಿಹೋಗಿಲ್ಲ.

ಜಾನಪದ ನೆಲೆ ಹಾಗೂ ಸಮುದ್ರ ತೀರಗಳು

ಕಣ್ಣೂರು ಪ್ರದೇಶ ತನ್ನ ಪಾಂಡಿತ್ಯ-ವಿದ್ವತ್ ಹಾಗೂ ವಿಶೇಷವಾದ ಉಡುಪಿನಿಂದಾಗಿ ಇಡೀ ವಿಶ್ವವನ್ನು ತನ್ನತ್ತ ಸೆಳೆದ ಪ್ರದೇಶವಾಗಿದ್ದು ತಿಯಾಟ್ಟಂ ಎಂಬ ಜಾನಪದ ಶೈಲಿಯ ದೇವಾಲಯವು ಅತ್ಯಂತ ವಿಶೇಷವಾಗಿ ಕಂಗೊಳಿಸುತ್ತದೆ. ಇಲ್ಲಿನ ಪ್ರಮುಖ ದೇವಾಲಯಗಳಾದ ಸುಂದರೇಶ್ವರ ದೇವಾಲಯ, ಕೊಟ್ಟಿಯೂರು ಶಿವ ದೇವಾಲಯ, ಊರ್ಫಾಜಸ್ಸಿ ಕಾವು ದೇವಾಲಯ, ಶ್ರೀ ಮಾವಿಲೈಕಾವು ದೇವಾಲಯ, ಶ್ರೀ ರಾಘವಾಪುರಂ ದೇವಾಲಯ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಮತ್ತು ಕಿಜಾಕಿಕರ ಶ್ರೀ ಕೃಷ್ಣ ದೇವಾಲಯ ಅತ್ಯಂತ ಜನಪ್ರಿಯವಾಗಿವೆ.

ಕಣ್ಣೂರಿನ ಕಡಲ ತೀರಗಳು ಅತ್ಯಂತ ಸುಂದರ ಹಾಗೂ ಆಕರ್ಷಕವಾಗಿದ್ದು ಪ್ರಕೃತಿ ಪ್ರೇಮಿಗಳು ಹಾಗೂ ಒಂದೆರಡು ದಿನಗಳ ಕಾಲ ಯಾವುದೇ ಜಂಜಾಟ ಇಲ್ಲದೆ ಕಾಲಕಳೆಯ ಬೇಕೆನ್ನುವವರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿನ ಹೆಸರಾಂತ ಬೀಚ್ ಗಳಾದ ಪಾಯಂಬಲಂ ಬೀಚ್, ಮೀನ್ಕುನ್ನು ಬೀಚ್, ಕಿಳುನ್ನಾ ಎಳಾರಾ ಬೀಚ್ ಹಾಗೂ ಮುಳುಪಿಳಂಗಡ್ ಬೀಚ್ ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಪಾರಂಪರಿಕ ಸೊಗಡು ಹಾಗೂ ಸೊಗಡಿನ ಪರಂಪರೆ

ಕಣ್ಣೂರಿನ ಆಧುನಿಕ ಇತಿಹಾಸದ ಪುಟಗಳನ್ನು ತಿರುವಿ ಹಾಕುವಾಗ ಇಲ್ಲಿನ ವಿಶಾಲವಾದ ಪಾರಂಪರಿಕ ಕಟ್ಟಡಗಳು ಮತ್ತು ಅವುಗಳ ಆಕರ್ಷಕ ಅಡುಗೆ ಮನೆಗಳು ಎಲ್ಲರ ಗಮನ ಸೆಳೆಯುತ್ತವೆ. ಇಲ್ಲಿನ ಗುಂಡರ್ಟ್ ಬಂಗಲೋ, ಹೋಲಿ ಟ್ರಿನಿಟಿ ಕ್ಯಾಥೆಡ್ರಲ್ ಮತ್ತು ಸೆಂಟ್ ಏಂಜಲೋ ಕೋಟೆ ಇಲ್ಲಿಯ ವಸಾಹತುಶಾಹಿಗಳ ಸಂಸ್ಥಾಪಕರ ಬದುಕು ಹಾಗೂ ಜೀವನ ಶೈಲಿಗೆ ಹಿಡಿದ ಕೈಗನ್ನಡಿಯಾಗಿವೆ. ಭೋಜನ ಪ್ರಿಯರಿಗಂತೂ ಈ ಪ್ರದೇಶ ತುಂಬಾ ಮೆಚ್ಚುಗೆ ಆಗುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿಗೆ ಬರುವ ಪ್ರವಾಸಿಗರೆಲ್ಲರೂ ಒಮ್ಮೆ ರುಚಿ ನೋಡಲೇ ಬೇಕಾದ ಅತ್ಯಂತ ರುಚಿಕರ ಭೋಜನ 'ತಲಚೇರಿ ದಮ್ ಬಿರಿಯಾನಿ'. ಬಾಯಿ ರುಚಿ ಹತ್ತಿಸುವ ಇತರ ತಿನಿಸುಗಳೆಂದರೆ ಆರಿ ಉಂಡ, ನೈಪತೀರಿ, ಉನ್ನಕ್ಕಾಯ, ಪಾಳಮ್ ನಿರಾಚಟ್ಟು, ಇಲಯಾಡ, ಕಲಾತಾಪಮ್ ಹಾಗೂ ಕಿನ್ನಾತಾಪ್ಪಂ.

ಭಾರತದ ಇತರೆ ಪ್ರದೇಶಗಳಿಂದ ರೈಲು ಹಾಗೂ ರಸ್ತೆ ಮಾರ್ಗಗಳ ಉತ್ತಮ ಸಂಪರ್ಕ ಈ ಪ್ರದೇಶಕ್ಕಿದೆ. ಈ ಕಡಲತೀರದ ಪ್ರದೇಶದಲ್ಲಿ ವರ್ಷವಿಡಿ ಉತ್ತಮ ಹವಾಮಾನವಿರುವುದರಿಂದ ಪ್ರವಾಸಿಗರು ತಮಗೆ ಅನುಕೂಲವಾದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಕಣ್ಣೂರು ತನ್ನೊಡಲಲ್ಲಿ ಅಡಗಿರುವ ಆಕರ್ಷಕವಾದ ಪ್ರಕೃತಿ ಸೌಂದರ್ಯ ಹಾಗೂ ಸಂಸ್ಕೃತಿ - ಪಾರಂಪರಿಕ ರಹಸ್ಯವನ್ನು ಭೇದಿಸಲು ವಿಶ್ವದೆಲ್ಲೆಡೆಯ ಪ್ರಕೃತಿ ಆರಾಧಕರನ್ನು ಆಕರ್ಷಿಸುತ್ತದೆ.

ಕಣ್ಣೂರು ಪ್ರಸಿದ್ಧವಾಗಿದೆ

ಕಣ್ಣೂರು ಹವಾಮಾನ

ಉತ್ತಮ ಸಮಯ ಕಣ್ಣೂರು

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕಣ್ಣೂರು

 • ರಸ್ತೆಯ ಮೂಲಕ
  ರಸ್ತೆ ಮಾರ್ಗದ ಮೂಲಕ ಕಣ್ಣೂರಿಗೆ ತಲುಪಲು ಉತ್ತಮ ರಸ್ತೆಗಳಿದ್ದು ಪ್ರಮುಖ ನಗರಗಳಿಂದ ಬಸ್ ಸೌಕರ್ಯವಿದೆ. ಕೇರಳಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್.ಆರ್.ಟಿ.ಸಿ)ಬಸ್ ಗಳು ಹಾಗೂ ಖಾಸಗಿ ಬಸ್ ಗಳು ಕಣ್ಣೂರಿನಿಂದ ಕೇರಳಾದ ಪ್ರಮುಖ ನಗರಗಳು ಹಾಗೂ ಮಂಗಳೂರು, ತೆಲಚೇರಿ, ಎರ್ನಾಕುಲಂ, ಕ್ಯಾಲಿಕಟ್ ಹಾಗೂ ತಿರುವನಂತಪುರಂಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಕಣ್ಣೂರಿನಿಂದ ವೊಲ್ವೋ ಹಾಗೂ ಇತರ ಲಕ್ಸುರಿ ಬಸ್ ಗಳು ಮೈಸೂರು, ಬೆಂಗಳೂರು ಹಾಗೂ ಚೆನ್ನೈ ನಗರಗಳಿಗೆ ಸಂಚರಿಸುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕೇರಳಾದ ಉತ್ತರ ಭಾಗದಲ್ಲಿ ಕಣ್ಣೂರು ರೇಲು ನಿಲ್ದಾಣ ಪ್ರಮುಖ ಕೇಂದ್ರವಾಗಿದೆ. ದೇಶದ ಪ್ರಮುಖ ನಗರಗಳಿಂದ ಕಡಿಮೆ ಖರ್ಚಿನಲ್ಲಿ ಕಣ್ಣೂರಿಗೆ ತಲುಪಲು ರೇಲು ಮಾರ್ಗ ಉತ್ತಮ ಆಯ್ಕೆ. ಎಲ್ಲಾ ಪ್ರಮುಖ ನಗರಗಳಿಂದ ರೇಲು ಸಂಪರ್ಕ ಕಣ್ಣೂರಿಗೆ ಇದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ಹೊಸ ದೆಹಲಿ, ಪೂನಾ ಹಾಗೂ ಮುಂಬೈ ನಗರಗಳಿಂದ ರೇಲು ಸಂಪರ್ಕವನ್ನು ಒದಗಿಸಲಾಗಿದೆ. ಕಣ್ಣೂರು ನಗರದ ಹೃದಯ ಭಾಗದಲ್ಲಿ ರೇಲು ನಿಲ್ದಾಣವಿದೆ. ಪ್ರವಾಸಿಗರು ಟ್ಯಾಕ್ಸಿ, ಆಟೋ, ಬಸ್ ಹಿಡಿದು ನಗರ ಪ್ರವಾಸ ಮಾಡಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕಣ್ಣೂರಿನಲ್ಲಿ ವಿಮಾನ ನಿಲ್ದಾಣ ಇಲ್ಲ. ಸುಮಾರು 150 ಕಿ.ಮೀ.ದೂರದ ಮಂಗಳೂರು ಹಾಗೂ 125 ಕಿ.ಮೀ.ದೂರದ ಕ್ಯಾಲಿಕಟ್ ವಿಮಾನ ನಿಲ್ದಾಣ ಈ ಸ್ಥಳಕ್ಕೆ ಹತ್ತಿರವಾದದ್ದು. ಕ್ಯಾಲಿಕಟ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಹೈದರಾಬಾದ್, ಚೆನ್ನೈ, ಹೊಸ ದೆಹಲಿ ಹಾಗೂ ಮುಂಬೈ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ವಿಮಾನ ನಿಲ್ದಾಣದಿಂದ ಕಣ್ಣೂರು ನಗರ ತಲುಪಲು ಮಂಗಳೂರು ಮತ್ತು ಕ್ಯಾಲಿಕಟ್ ನಿಂದ ಟ್ಯಾಕ್ಸಿಗಳು ಲಭ್ಯವಿದೆ. ಈ ನಗರಗಳಿಂದ ಬಸ್ ಸಂಚಾರವೂ ಇದೆ.
  ಮಾರ್ಗಗಳ ಹುಡುಕಾಟ

ಕಣ್ಣೂರು ಲೇಖನಗಳು

One Way
Return
From (Departure City)
To (Destination City)
Depart On
14 Jun,Mon
Return On
15 Jun,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Jun,Mon
Check Out
15 Jun,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Jun,Mon
Return On
15 Jun,Tue