Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಜಿರಪಳ್ಳಿ » ಹವಾಮಾನ

ಕಂಜಿರಪಳ್ಳಿ ಹವಾಮಾನ

ಕಂಜರಪಳ್ಳಿಗೆ ಭೇಟಿ ನೀಡಲು ಉತ್ತಮವಾದ ಕಾಲವೆಂದರೆ ಮಳೆಗಾಲದ ಮುಕ್ತಾಯದ ನಂತರ ಮತ್ತು ಚಳಿಗಾಲದ ಪ್ರಾರಂಭದ ಮೊದಲು. ಸೆಪ್ಟೆಂಬರ್ ನಿಂದ ಫೇಬ್ರವರಿ ತಿಂಗಳಿನ ಮಧ್ಯಭಾಗದವರೆಗೆ ನೀವು ನಿಮ್ಮ ಬ್ಯಾಗ್ ತುಂಬಿಸಿಕೊಂಡು ದೇವರ ಸ್ವಂತ ನೆಲೆಯಾದ ಇಲ್ಲಿಗೆ ಪ್ರವಾಸ ಹೊರಡಬಹುದು.

ಬೇಸಿಗೆಗಾಲ

ಕಂಜಿರಪಳ್ಳಿಯಲ್ಲಿ ಕೇರಳದ ಇತರ ಭಾಗಗಳಲ್ಲಿರುವಂತೆಯೇ ವಾತಾವರಣವಿದೆ. ಮಾರ್ಚ್ ನಿಂದ ಮೇವರೆಗೆ ಬೇಸಿಗೆಯಿರುತ್ತದೆ. ಅತಿಯಾದ ಸ್ಥಿತಿಗೆ ಬೇಸಿಗೆ ತಲುಪುವುದಿಲ್ಲ. ಬೇಸಿಗೆಯಲ್ಲಿ ಉಷ್ಣತೆ ಮತ್ತು ಶುಷ್ಕ ಹವೆಯಿದ್ದು ಆಕರ್ಷಣೆಗಳಿಗೇನೂ ನಿಷೇಧವಿಲ್ಲ.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮಳೆಗಾಲವಿರುತ್ತದೆ. ಈ ಸಮಯದಲ್ಲಿ ಅತಿಯಾದ ಮಳೆ ಸುರಿಯುತ್ತದೆ. ವಾತಾವರಣ ತಂಪಾಗಿದ್ದು ಈ ಋತುವಿನಲ್ಲಿ ಕಂಜಿರಪಳ್ಳಿಗೆ ಪ್ರವಾಸ ಕೈಗೊಳ್ಳಬಹುದು.

ಚಳಿಗಾಲ

ಹಿತವಾದ ಚಳಿಗಾಲ ಡಿಸೆಂಬರ್ ನಲ್ಲಿ ಶುರುವಾಗಿ ಫೇಬ್ರವರಿಯವರೆಗೂ ಮುಂದುವರೆಯುತ್ತದೆ. ವಾತಾವರಣದ ತಂಪಿನಿಂದಾಗಿ ಈ ಸಮಯದಲ್ಲಿ ಇಲ್ಲಿ ಪ್ರಯಾಣಿಸುವುದು ಸುಖಕರ ಅನುಭವ ನೀಡುತ್ತದೆ.