Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಧಮಲ್ » ಹವಾಮಾನ

ಕಂಧಮಲ್ ಹವಾಮಾನ

ಕಂಧಮಲ್‍ಗೆ ಭೇಟಿ ನೀಡುವುದಾದರೆ ಸೆಪ್ಟೆಂಬರ್ ನಿಂದ ಮೇ ತಿಂಗಳ ಅವಧಿಯಲ್ಲಿ ಭೇಟಿ ನೀಡುವುದು ಉತ್ತಮ. ಇಲ್ಲವಾದಲ್ಲಿ ಪ್ರವಾಸಿಗರು ಅತಿಯಾದ ಬಿಸಿಲಿನಿಂದ ಕೂಡಿದ ಬೇಸಿಗೆಯಿಂದ ನರಳಬಹುದು. ಈ ಸಮಯದಲ್ಲಿ ಸ್ವಲ್ಪ ಹಿಮದಿಂದ ಕೂಡಿದ ಚಳಿಗಾಲವನ್ನು ಪ್ರವಾಸಿಗರು ಆಸ್ವಾದಿಸಬಹುದು. ಬೇಸಿಗೆಯ ಈ ವಿಹಾರ ತಾಣಕ್ಕೆ ಚಳಿಗಾಲದಲ್ಲಿ ಭೇಟಿ ನೀಡುವುದಾದಲ್ಲಿ ತಪ್ಪದೆ ಬೆಚ್ಚಗಿನ ಉಡುಪುಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬಾರದು.

ಬೇಸಿಗೆಗಾಲ

ಕಂಧಮಲ್‍ನಲ್ಲಿ ಸಮಶೀತೋಷ್ಣವಲಯದ ಹವಾಗುಣವು ಕಂಡು ಬರುತ್ತದೆ. ಈ ಅವಧಿಯಲ್ಲಿ ಇಲ್ಲಿ ಬಿಸಿಲು ಮತ್ತು ಒಣ ಹವೆಯಿಂದ ಕೂಡಿದ ವಾತಾವರಣ ಕಂಡು ಬರುತ್ತದೆ. ಬೇಸಿಗೆಯು ಇಲ್ಲಿ ಕಿರು ಅವಧಿಯಿಂದ ಕೂಡಿರುತ್ತದೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಮೊದಲ ವಾರದಲ್ಲಿ ಇಲ್ಲಿ ಬೇಸಿಗೆ ಇರುತ್ತದೆ. ಆದಾಗಿಯೂ ದರಿಂಗ್‍ಬಡಿ ಮತ್ತು ಬೆಲ್‍ಗಡ್‍ಗಳು ಎತ್ತರವಾದ ಪ್ರದೇಶದಲ್ಲಿ ನೆಲೆಗೊಂಡಿರುವುದರಿಂದಾಗಿ,ವರ್ಷಪೂರ್ತಿ ಇಲ್ಲಿನ ಹವಾಮಾನ ತಂಪಾಗಿ ಇರುತ್ತದೆ. ಇದರಿಂದಾಗಿ ಇವುಗಳು ಒರಿಸ್ಸಾದ ಅತ್ಯುತ್ತಮ ಬೇಸಿಗೆ ವಿಹಾರ ತಾಣಗಳಾಗಿ ಗುರುತಿಸಿಕೊಂಡಿವೆ.

ಮಳೆಗಾಲ

ಮಳೆಗಾಲವು ಇಲ್ಲಿ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಮಧ್ಯಭಾಗದವರೆಗೆ ಇರುತ್ತದೆ. ಇಲ್ಲಿ ಮಳೆಯು ಸಾಧಾರಣದಿಂದ ಕೂಡಿ ಭಾರೀ ವರ್ಷಧಾರೆಯವರೆಗೆ ಬೀಳುತ್ತದೆ.    ಅದರಲ್ಲೂ ಜೂನ್ 15ನೇ ತಾರೀಖಿನಿಂದ ಸೆಪ್ಟೆಂಬರ್ ವರೆಗೆ ಇಲ್ಲಿ ಮಳೆಗಾಲವು ತನ್ನ ಔನ್ನತ್ಯವನ್ನು ತಲುಪಿರುತ್ತದೆ. ಮಳೆಗಾಲವು ಈ ಸ್ಥಳಕ್ಕೆ ನೈಜ ಸೊಬಗನ್ನು ತಂದು ಕೊಡುತ್ತದೆ. ಈ ಅವಧಿಯಲ್ಲಿ ಇಲ್ಲಿನ ಜಲಪಾತಗಳು ತಮ್ಮ ಸಂಪೂರ್ಣ ಸಾಮರ್ಥ್ಯದಿಂದ ಧುಮ್ಮಿಕ್ಕಿ ಹರಿಯುತ್ತಿರುತ್ತವೆ.

ಚಳಿಗಾಲ

ಚಳಿಗಾಲವು ಇಲ್ಲಿ ದೀರ್ಘಾವಧಿಯಿಂದ ಕೂಡಿರುತ್ತದೆ. ಇಲ್ಲಿ ಅಕ್ಟೋಬರ್ ನಿಂದ ಮಾರ್ಚ್ ಕಡೆಯ ಭಾಗದವರೆಗೆ ಚಳಿಗಾಲವಿರುತ್ತದೆ. ದರಿಂಗ್‍ಬಡಿಯಂತಹ ಪ್ರದೇಶಗಳಲ್ಲಿ ಈ ಅವಧಿಯಲ್ಲಿ ಉಷ್ಣಾಂಶವು 0° ಸೆಲ್ಶಿಯಸ್‍ವರೆಗೆ ಕುಸಿಯುವ ಸಂಭವವಿರುತ್ತದೆ. ಹಾಗಾಗಿ ಇಲ್ಲಿ ಆಗಾಗ ಹಿಮಪಾತವನ್ನು ಸಹ ನೋಡಬಹುದಾಗಿದೆ. ಬೇರೆಡೆಗಳಲ್ಲಿ ಉಷ್ಣಾಂಶವು 3° ಯಿಂದ 4° ಸೆಲ್ಶಿಯಸ್‍ವರೆಗೆ ಇರುತ್ತದೆ.