Search
  • Follow NativePlanet
Share

ಕಲ್ನಾ : ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳ ಭೂಮಿ

8

ಕಲ್ನಾ ಎಂಬ ಈ ಪಟ್ಟಣವು ಅಂಬಿಕಾ ಕಲ್ನಾ ಎಂಬ ಹೆಸರನ್ನೂ ಹೊಂದಿದ್ದು, ಇದು ಪಶ್ಚಿಮ ಬಂಗಾಳದಲ್ಲಿದೆ. ಈ ಪಟ್ಟಣವು ಮಾ ಅಂಬಿಕ ಅಥವಾ ತಾಯಿ ಅಂಬಿಕ ಎಂದೂ ಕರೆಯಲ್ಪಡುವ ಕಾಳಿ ದೇವಿಗೆ ಸಮರ್ಪಿತವಾಗಿದೆ. ಈ ಸ್ಥಳವು ಹಿಂದೂಗಳ ಪಾಲಿಗೆ ಅದರಲ್ಲೂ ವಿಶೇಷವಾಗಿ ಬೆಂಗಾಲಿಗಳ ಪಾಲಿಗೆ ಧಾರ್ಮಿಕಾಗಿ ಅತೀ ಮಹತ್ವದ ಸ್ಥಳವಾಗಿದೆ.  ಮಾತ್ರವಲ್ಲದೇ, ಇಲ್ಲಿ ಕೆಲವು ಬಹಳ ಮಹತ್ತರವಾದ ಮತ್ತು ಮುಖ್ಯವಾದ ಐತಿಹಾಸಿಕ ಸ್ಮಾರಕಗಳಿವೆ.  ಈ ಮೇಲಿನ ತಾಣಗಳ ಪಟ್ಟಿಗೆ ಶಿಖರಪ್ರಾಯವೆಂಬಂತೆ ರಾಜ್ಬರಿ ಎಂಬ ಹೆಸರಿನ ಅರಮನೆಯೂ ಮತ್ತು 108 ಶಿವಾಲಯಗಳೂ ಕೂಡ ಇಲ್ಲಿವೆ.

ಸ್ಥಳೀಯ ಸಂಸ್ಕೃತಿ

ಕಲ್ನಾ ಎಂದೆಂದಿಗೂ ಕೂಡ ಬೇಸಾಯದ ದೃಷ್ಟಿಯಿಂದ ಪ್ರಬಲವಾಗಿಯೇ ಇದ್ದು, ದಾರಿಯಲ್ಲಿ ಸಾಗುವಾಗ ಪ್ರವಾಸಿಗರು ವಿವಿಧ ಧಾನ್ಯಗಳು, ಆಲೂಗೆಡ್ಡೆ ಮತ್ತು ಗೋಣಿನಾರಿನ ಸಸ್ಯಗಳನ್ನಿಲ್ಲಿ ವೀಕ್ಷಿಸಬಹುದು. ಇಲ್ಲಿನ ಸ್ಥಳೀಯ ಜನಸಂಖ್ಯೆಯು ಹಿಂದೂ ಮತ್ತು ಮುಸ್ಲಿಂ ಎರಡರ ಸಮುದಾಯವನ್ನೂ ಹೊಂದಿದ್ದು, ಇವರಿಲ್ಲಿ ಪರಿಪೂರ್ಣವಾದ ಸಾಮರಸ್ಯದಿಂದ ಬಾಳುತ್ತಿದ್ದಾರೆ. ಇಲ್ಲಿನ ಗುಡಿಕೈಗಾರಿಕೆಗಳಲ್ಲಿ ಉತ್ಪನ್ನವಾಗುವ ಅಗಣಿತ ಉಪಯುಕ್ತ ವಸ್ತೂಗಳೂ ಸಹ ಇಲ್ಲಿ ಯಥೇಚ್ಚವಾಗಿ ಲಭ್ಯವಿವೆ.

ದೇವಾಲಯದ ನಗರ

ದೇವಾಲಯದ ನಗರ ಎಂಬರ್ಥದಲ್ಲಿ ಭಾಷಾಂತರಗೊಳ್ಳುವ ಕಲ್ನಾವು, ಸಂತ ಬಾಬಾ ಪಗ್ಲಾ (Pagla) ಅವರ ಹುಟ್ಟೂರಾಗಿದೆ.  ಇಲ್ಲಿ ಬೆಂಗಾಲಿ ಹೊಸ ವರ್ಷವು ಆರಂಭವಾಗುವುದಕ್ಕೆ ಮುಂಚೆ ಕಡೆಯ ವರ್ಷದ ಕೊನೆಯ ಶನಿವಾರದಂದು ಈ ಸಂತನಿಗಾಗಿ ಇಲ್ಲಿ ವಿಶೇಷ ಪ್ರಾರ್ಥನಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಸುಪ್ರಸಿದ್ಧವಾದ 108 ದೇವಸ್ಥಾನಗಳನ್ನು ಎರಡು ಸಮ ಕೇಂದ್ರೀಯ ವೃತ್ತಗಳಲ್ಲಿ ನಿರ್ಮಿಸಲಾಗಿದ್ದು, ಒಂದು ವೃತ್ತವು 74 ದೇವಸ್ಥಾನಗಳನ್ನೂ ಹಾಗೂ ಮತ್ತೊಂದು ವೃತ್ತವು 34 ದೇವಸ್ಥಾನಗಳನ್ನೂ ಒಳಗೊಂಡಿವೆ.  ದೇವಾಲಯಗಳ ಕಲಾತ್ಮಕತೆಯು ಮೆಚ್ಚಿಕೊಳ್ಳತಕ್ಕದ್ದಾಗಿದೆ.

ಹಬ್ಬಗಳು ಮತ್ತು ಆಚರಣೆಗಳು

ಸರಸ್ವತಿ ಪೂಜಾ, ಕಾಲಿ ಪೂಜಾ, ಮತ್ತು ದುರ್ಗಾ ಪೂಜಾ ಗಳು ಇಲ್ಲಿನ ಮೂರು ಅತೀ ಪ್ರಮುಖ ಧಾರ್ಮಿಕ ಸಂದರ್ಭಗಳಾಗಿದ್ದು,  ಕಲ್ನಾಕ್ಕೆ ಭೇಟಿ ನೀಡುವ ಯಾರೊಬ್ಬರೂ ಕೂಡ ಈ ಸಂದರ್ಭಗಳಿಂದ ವಂಚಿತರಾಗಬಾರದು.  ಮಾತ್ರವಲ್ಲದೇ, 4 ದಿನಗಳ ಪರ್ಯಂತ ನಡೆಯುವ ಮಹಿಷಮರ್ದಿನಿ ಪೂಜೆಯ ವೇಳೆಯಲ್ಲಿ,  ಕಲ್ನಾದಲ್ಲಿ ಅನೇಕ ಸ್ಟಾಲ್ ಗಳು, ಸವಾರಿಗಳು ಮತ್ತು ಮನೋರಜನಾ ಕಾರ್ಯಕ್ರಮಗಳಿಂದ ಹಬ್ಬದ ವಾತಾವರಣವೊಂದರ ಸೃಷ್ಟಿಯಾಗುತ್ತದೆ.

ಕಲ್ನಾದ ಸುತ್ತಮುತ್ತ

ಧಾರ್ಮಿಕ ಪ್ರವಾಸಿಗರಿಗೆ  ಕಲ್ನಾದಲ್ಲಿ ಇನ್ನೂ ನೋಡತಕ್ಕ ಅನೇಕ ಸ್ಥಳಗಳಿವೆ. ಈ ದೇವಾಲಯಗಳ ಪಟ್ಟಣವನ್ನು ವೀಕ್ಷಿಸಲು ಕಾಲ್ನಡಿಗೆಯೇ ಅತ್ಯುತ್ತಮವಾದದ್ದು.

ಕಲ್ನಾ ಪ್ರಸಿದ್ಧವಾಗಿದೆ

ಕಲ್ನಾ ಹವಾಮಾನ

ಉತ್ತಮ ಸಮಯ ಕಲ್ನಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕಲ್ನಾ

  • ರಸ್ತೆಯ ಮೂಲಕ
    ಕಲ್ನಾವನ್ನು ಕೊಲ್ಕತ್ತಾ ದಿಂದ ರಾಜ್ಯ ಹೆದ್ದಾರಿಗಳಾದ 6 ಮತ್ತು 1 ರ ಮೂಲಕ ತಲುಪಬಹುದು. ಕಲ್ನಾವು ಕೊಲ್ಕತ್ತಾ ದಿಂದ 92 ಕಿ.ಮೀ. ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಲ್ನಾಕ್ಕೆ ಕೊಲ್ಕತ್ತಾ ನಿಲ್ದಾಣವೇ ಸಮೀಪವಾಗಿದ್ದು, ಇದು ದೇಶದ ಇತರ ಎಲ್ಲಾ ಭಾಗಗಳಿಗೂ ಸಂಪರ್ಕಿಸುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕಲ್ನಾಕ್ಕೆ ಅತೀ ಸಮೀಪವಿರುವ ವಿಮಾನದ ನಿಲ್ದಾಣವು ಕೊಲ್ಕತ್ತಾ ವಿಮಾನ ನಿಲ್ದಾಣವಾಗಿದ್ದು, ಇದು ಪ್ರಮುಖ ಭಾರತೀಯ ನಗರಗಳನ್ನು ಸಂಪರ್ಕಿಸುತ್ತದೆ. ಮಾತ್ರವಲ್ಲದೇ, ಈ ವಿಮಾನ ನಿಲ್ದಾಣವು ಇನ್ನೂ ಅನೇಕ ಅಂತರರಾಷ್ಟ್ರೀಯ ತಾಣಗಳನ್ನೂ ಸಹ ಸಂಪರ್ಕಿಸುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat