Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಳಹಸ್ತಿ » ಹವಾಮಾನ

ಕಾಳಹಸ್ತಿ ಹವಾಮಾನ

ಅಕ್ಟೋಬರ್‌ನಿಂದ ಫೆಬ್ರುವರಿ ತಿಂಗಳೊಳಗೆ ಕ್ಷೇತ್ರದಲ್ಲಿ ಹಲವು ಹಬ್ಬಗಳನ್ನು ಆಚರಿಸಲಾಗುವುದಿಂದ ಪಟ್ಟಣದ ಸುತ್ತ ಒಂದು ಸುತ್ತಿಗೆ ಇದೇ ಸುಸಮಯ.

ಬೇಸಿಗೆಗಾಲ

ಆಂಧ್ರದ ಬಹುಪಾಲು ನಗರಗಳಂತೆ ಕಾಳಹಸ್ತಿಯೂ ಒಣಹವೆ ಹೊಂದಿರುವ ಪ್ರದೇಶ. ಬೇಸಿಗೆ ಕಾಲದಲ್ಲಿ ತಾಪಮಾನ 42 ಡಿಗ್ರಿಗಳಷ್ಟು ತೀವ್ರವಾಗಿ, ಮನೆಯಿಂದ ಹೊರಗೆ ಕಾಲಿಡುವುದೂ ದುಸ್ತರವಾಗುತ್ತದೆ. ಫೆಬ್ರವರಿ ಕಡೆ ವಾರದಿಂದ ಆರಂಭವಾಗುವ ಬೇಸಿಗೆ ಮೇ ತಿಂಗಳಾಂತ್ಯದವರೆಗೂ ಇರುತ್ತದೆ.

ಮಳೆಗಾಲ

ಜೂನ್ ಎರಡನೇ ವಾರದಿಂದ ಆರಂಭವಾಗುವ ಚಳಿಗಾಲ ಆಗಸ್ಟ್ ತಿಂಗಳಾಂತ್ಯದವರೆಗೂ ಇರುತ್ತದೆ. ಸಾಮಾನ್ಯ ಮಳೆಯಿಂದ ಅತಿ ಹೆಚ್ಚು ಮಳೆವರೆಗೂ ಈ ಪ್ರದೇಶ ವ್ಯತಿರಿಕ್ತವಾಗಿರುತ್ತದೆ. ಗಾಳಿ ತೀವ್ರತೆ ಮೇಲೆ ನಿರ್ಧರಿತವಾಗುವ ಮಳೆ ಕೆಲವೊಮ್ಮೆ ಅಸಹನೀಯವೆನಿಸುತ್ತದೆ. ಆದರೆ, ತಾಪಮಾನ ಕಡಿಮೆಯಾಗುವುದರಿಂದ ಹವಾಮಾನ ತಂಪಾಗಿರುತ್ತದೆ.

ಚಳಿಗಾಲ

ಡಿಸೆಂಬರ್‌ನಿಂದ ಆರಂಭವಾಗುವ ಚಳಿಗಾಲ ಫೆಬ್ರುವರಿ ಎರಡನೇ ವಾರದವರೆಗೂ ಇರುತ್ತದೆ. ಈ ಮೂರು ತಿಂಗಳಲ್ಲಿ ಹವಾಮಾನ ಹಿತಕರವಾಗಿದ್ದು, 32 ಡಿಗ್ರಿಗಳಷ್ಟು ತಾಪಮಾನ ಹೊಂದಿರುತ್ತದೆ.