Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲಾಹಂಡಿ » ಹವಾಮಾನ

ಕಲಾಹಂಡಿ ಹವಾಮಾನ

ಇಲ್ಲಿ ಮಳೆಗಾಲವು ಕಡಿಮೆಯಾಗಿದ್ದು ಇದು ಅಲ್ಪ ಕಾಲಾವಧಿಗೆ ಸೀಮಿತವಾಗಿರುವುದರಿಂದ, ಪ್ರವಾಸಿಗರು ನಗರದಲ್ಲಿ ಪಯಣಿಸುತ್ತಾ, ವಿವಿಧ ಪ್ರಕೃತಿ ರಮ್ಯ ತಾಣಗಳನ್ನು ವೀಕ್ಷಿಸಬಹುದು.  ಬಿರುಬೇಸಿಗೆಯ ನಂತರ ಹಸಿರು ವನಗಳು ಮರುಹುಟ್ಟನ್ನು ಪಡೆಯುವುದರ ಮೂಲಕ ತಮ್ಮ ಲವಲವಿಕೆಯನ್ನು ಮರಳಿ ಪಡೆಯುತ್ತವೆ ಮತ್ತು ಜಲಪಾತಗಳು ಮೈದುಂಬಿ ಹರಿಯುತ್ತವೆ.

ಬೇಸಿಗೆಗಾಲ

ಬೇಸಿಗೆಯ ಕಾಲಾವಧಿಯು ಮಾರ್ಚ್ ನಿಂದ ಜೂನ್ ತಿಂಗಳಿನ ಅವಧಿಯದ್ದಾಗಿರುತ್ತದೆ.  ಈ ಅವಧಿಯಲ್ಲಿ ಉಷ್ಣತೆಯು ಸರಿಸುಮಾರು 41 ಡಿಗ್ರಿ ಸೆಲ್ಷಿಯಸ್ ನಷ್ಟು ತಲುಪುತ್ತದೆ.  ಗರಿಷ್ಟ ಉಷ್ಣಾಂಶವು 45 ಡಿಗ್ರಿಯನ್ನು ತಲುಪುತ್ತದೆ.  ಕನಿಷ್ಟ ಉಷ್ಣಾಂಶವು ಎಂದಿಗೂ 33 ಡಿಗ್ರಿ ಸೆಲ್ಷಿಯಸ್ ಗಿಂತಲೂ ಕಡಿಮೆ ಇರುವುದಿಲ್ಲ. ಈ ಅವಧಿಯಲ್ಲಿ ಕಲಾಹಂಡಿಯಲ್ಲಿ ಸತತವಾಗಿ ಬೀಸುವ ಅತಿಯಾದ ಬಿಸಿಗಾಳಿಯಿಂದಾಗಿ ಇಲ್ಲಿನ ವಾಸವು ಕಷ್ಟಕರವಾಗುತ್ತದೆ.

ಮಳೆಗಾಲ

ಮಳೆಗಾಲಾವಧಿಯು ಜುಲೈ ನಿಂದ ಸೆಪ್ಟೆಂಬರ್ ತಿಂಗಳಿನ ಅವಧಿಯದ್ದಾಗಿರುತ್ತದೆ.  ಕಲಾಹಂಡಿಯು ಮಳೆಗಾಲದಲ್ಲಿ ಅಲ್ಪ ಪ್ರಮಾಣದ ಮಳೆಯನ್ನು ಪಡೆದು ಹವಾಮಾನವು ಉಲ್ಲಾಸದಾಯಕವಾಗಿರುತ್ತದೆ.  ಈ ಅವಧಿಯಲ್ಲಿ ಕಲಾಹಂಡಿಗೆ ನೀಡುವ ಭೇಟಿಯು ಒಂದು ಉತ್ತಮ ಅನುಭವವಾಗಬಲ್ಲುದು.

ಚಳಿಗಾಲ

ಚಳಿಗಾಲವು ಬಹಳ ಅಲ್ಪಾವಧಿಯದ್ದಾಗಿದ್ದು, ಡಿಸೆಂಬರ್ ನಿಂದ ಫೆಬ್ರವರಿ ಯವರೆಗೆ ಇರುತ್ತದೆ.  ಪಾದರಸದ ಮಟ್ಟವು ಈ  ಅವಧಿಯಲ್ಲಿ 5 ಡಿಗ್ರಿ ಸೆಲ್ಷಿಯಸ್ ಗಿಂತಲೂ ಕೆಳಕ್ಕೆ ಬೀಳುತ್ತದೆ.  ಜನವರಿ ತಿಂಗಳು ಅತಿ ತಂಪಾಗಿರುತ್ತದೆ.  ಕಲಾಹಂಡಿ ಪಟ್ಟಣವು ಈ ಅವಧಿಯಲ್ಲಿ ದಟ್ಟ ಮಂಜಿನಿಂದ ಕವಿದಿದ್ದು, ಸುತ್ತಲಿನ ಪರಿಸರವು ಸರಿಯಾಗಿ ಗೋಚರಿಸುವುದಿಲ್ಲ.