Search
  • Follow NativePlanet
Share
ಮುಖಪುಟ » ಸ್ಥಳಗಳು » ಕಡಪಾ » ಹವಾಮಾನ

ಕಡಪಾ ಹವಾಮಾನ

ಕಡಪಾಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಫೆಬ್ರವರಿ ನಡುವಿನ ಸಮಯ ಉತ್ತಮವಾದುದು. ಈ ಸಂದರ್ಭದಲ್ಲಿ ಅಂದರೆ ಚಳಿಗಾಲದಲ್ಲಿ ಪ್ರವಾಸ ಹೇಳಿ ಮಾಡಿಸಿದಂತಿರುತ್ತದೆ. ಪ್ರವಾಸವೂ ಸುಖಕರವಾಗಿರುತ್ತದೆ. ಯಾವುದೇ ಸಮಸ್ಯೆ ಎದುರಾಗದು. ಸಂಜೆ ಹಾಗೂ ರಾತ್ರಿ ಹೊತ್ತು ಕೊಂಚ ಚಳಿ ಇರುತ್ತದೆ. ಇದರಿಂದ ಪ್ರವಾಸಿಗರು ಹಗುರಾದ ಉಲ್ಲನ್‌ ಬಟ್ಟೆಯನ್ನು ಜತೆಗೆ ತಂದುಕೊಳ್ಳುವುದು ಉತ್ತಮ.

ಬೇಸಿಗೆಗಾಲ

ಕಡಪಾದಲ್ಲಿ ಬೇಸಿಗೆ ವಿಪರೀತ ಸೆಖೆಯಿಂದ ಕೂಡಿರುತ್ತದೆ. ಬೇಸಿಗೆಯಲ್ಲಿ ತಾಪಮಾನ 32 ರಿಂದ 37 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ. ಮಾರ್ಚ್ ತಿಂಗಳಲ್ಲಿ ಬೇಸಿಗೆ ಆರಂಭವಾಗುತ್ತದೆ. ಜೂನ್‌ವರೆಗೂ ಮುಂದುವರಿಯುತ್ತದೆ. ಮೇ ಹಾಗೂ ಜೂನ್‌ ವಿಪರೀತ ಸೆಖೆ ಇರುವ ತಿಂಗಳುಗಳು. ಬೇಸಿಗೆ, ಸೆಖೆಯಿಂದ ಮಾತ್ರವಲ್ಲ ಒಣ ಹವೆ, ತೇವಾಂಶ ರಹಿತ ವಾತಾವರಣದಿಂದ ಕೂಡಿರುತ್ತದೆ. ಈ ಸಂದರ್ಭದಲ್ಲಿ ಪ್ರವಾಸ ಕಷ್ಟಕರ.

ಮಳೆಗಾಲ

ಜೂನ್‌ ಕೊನೆಯಲ್ಲಿ ಆರಂಭವಾಗುವ ಮಳೆಗಾಲ ಜುಲೈ, ಆಗಸ್ಟ್‌ ಹಾಗೂ ಸೆಪ್ಟೆಂಬರ್‌ವರೆಗೂ ಇರುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ವಿಶಿಷ್ಟ ವಾತಾವರಣ ಇರುತ್ತದೆ. ಸಣ್ಣದಾಗಿ ಮಳೆ ಸುರಿಯುತ್ತದೆ. ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ಈ ಮಳೆ ಆಗುತ್ತದೆ. ಈ ಪ್ರದೇಶ ಸಾಮಾನ್ಯದಿಂದ ಕೆಲವೊಮ್ಮೆ ಭಾರಿ ಮಳೆಯನ್ನೂ ಎದುರಿಸುತ್ತದೆ. ಹೀಗಾಗಿ ಈ ಕಾಲದಲ್ಲಿ ತಾಪಮಾನ ಕೊಂಚ ಕಡಿಮೆ ಇರುತ್ತದೆ. ಆದರೆ ತೇವಾಂಶ ಪ್ರಮಾಣ ಹೆಚ್ಚಿರುತ್ತದೆ. ಮಳೆಗಾಲ ಕೂಡ ಇಲ್ಲಿನ ಪ್ರವಾಸಕ್ಕೆ ಯೋಗ್ಯ ಕಾಲವಲ್ಲ.

ಚಳಿಗಾಲ

ವಿಶಿಷ್ಟ ಚಳಿಗಾಲ ಇಲ್ಲಿನದು. ಸಾಮಾನ್ಯ ಚಳಿ ಈ ಅವಧಿಯಲ್ಲಿ ಇರುತ್ತದೆ. ಅದೇನೇ ಇರಲಿ ಬಿಸಿಲಿನ ತಾಪ, ಉಷ್ಣತೆ ವಿಪರೀತ ಇರುವುದಿಲ್ಲ. ಮಧ್ಯಾಹ್ನದ ನಂತರದ ಅವಧಿ ಹೊರಗೆ ಸುತ್ತಾಡಲು ಸೂಕ್ತ ಕಾಲ. ಸಂಜೆ ಹಾಗೂ ರಾತ್ರಿ ಇಲ್ಲಿ ವಾತಾವರಣ ಸ್ವರ್ಗ ಸದೃಶವಾಗಿರುತ್ತದೆ. ನವೆಂಬರ್‌ನಿಂದ ಫೆಬ್ರವರಿವರೆಗೆ ಚಳಿಗಾಲ ಇರುತ್ತದೆ. ತೇವಾಂಶ ಪ್ರಮಾಣವೂ ಈ ಸಂದರ್ಭದಲ್ಲಿ ಇಳಿದಿರುತ್ತದೆ.