Search
  • Follow NativePlanet
Share
ಮುಖಪುಟ » ಸ್ಥಳಗಳು » ಕಬಿನಿ » ಹವಾಮಾನ

ಕಬಿನಿ ಹವಾಮಾನ

ನವೆಂಬರ್  ನಿಂದ ಜೂನ್ ತಿಂಗಳುಗಳಲ್ಲಿ ಕಬಿನಿ ಪ್ರದೇಶಕ್ಕೆ ಪ್ರವಾಸಿಗರು ಭೇಟಿ ನೀಡಲು ಸೂಕ್ತ ಸಮಯವೆನ್ನಬಹುದು. ಏಕೆಂದರೆ ಹಚ್ಚಹಸಿರಿನಿಂದ ಕಂಗೊಳಿಸುವ ದಟ್ಟಕಾಡಿನಲ್ಲಿ ಪ್ರವಾಸದ ಮಜವನ್ನು ಸವಿಯಬಹುದಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ) : ಬೇಸಿಗೆ ಕಾಲದಲ್ಲಿ ಹೆಚ್ಚಿನ ಬಿಸಿಲಿನ ಪ್ರಖರತೆ ಕಬಿನಿ ಪ್ರದೇಶದಲ್ಲಿ ಇರುವುದಿಲ್ಲ. ಬೇಸಿಗೆಯ ಹಗಲಿನಲ್ಲಿ ಉಷ್ಣಾಂಶ 36 ಡಿ.ಸೆ.ನಷ್ಟು ಏರಿರುತ್ತದೆ.  ರಾತ್ರಿಯಲ್ಲಿ ಉಷ್ಣಾಂಶ 10 ಡಿ.ಸೆ.ವರೆಗೂ ಇಳಿಕೆಯಾಗಿ ತಂಪನೆಯ ವಾತಾವರಣ ಸೃಷ್ಟಿಯಾಗಿರುತ್ತದೆ.

ಮಳೆಗಾಲ

(ಜೂನ್ ನಿಂದ ಸೆಪ್ಟೆಂಬರ್) : ಕಬಿನಿ ಪ್ರದೇಶಲ್ಲಿ ಭಾರೀ ಪ್ರಮಾಣದ ಮಳೆಯಾಗುವುದರಿಂದ ಮಳೆಗಾಲದಲ್ಲಿ ಈ ಪ್ರದೇಶಕ್ಕೆ ಪ್ರವಾಸಿಗರು ಬರದಿರುವುದೇ ಲೇಸೆನ್ನಬಹುದು. ಮಳೆಗಾಲದಲ್ಲಿ ಅರಣ್ಯದಲ್ಲಿ ಸುತ್ತಾಡಲು ಪ್ರವಾಸಿಗರಿಗೆ ಸಾಧ್ಯವಾಗುವುದಿಲ್ಲ.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ) : ಚಳಿಗಾಲದಲ್ಲಿ ಕಬಿನಿ ಪ್ರದೇಶವು ತಂಪಾದ ಆಹ್ಲಾದಕರ ವಾತಾರವಣ ಹೊಂದಿರುತ್ತದೆ. ಈ ಸಮಯದಲ್ಲಿ ಅತೀ ಕಡಿಮೆ ಎಂದರೆ 6 ಡಿ.ಸೆ.ವರೆಗೂ ಉಷ್ಣಾಂಶ ಇಳಿಕೆಯಾಗಿರುತ್ತದೆ. ಗರಿಷ್ಠ 26 ಡಿ.ಸೆ.ನಷ್ಟು ಉಷ್ಣಾಂಶ ಏರಿಕೆಯಾಗಿರುತ್ತದೆ. ಈ ಸಮಯದಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ಹೆಚ್ಚಿನ ಪ್ರಾಣಿಗಳು ಕಾಣಸಿಗುವುದಿಲ್ಲವಾದ್ದರಿಂದ ಇಲ್ಲಿಗೆ ಪ್ರವಾಸ ಕೈಗೊಳ್ಳುವುದು ಒಳ್ಳೆಯದಲ್ಲವೆನ್ನಬಹುದು.