Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಶಿಮಠ » ಹವಾಮಾನ

ಜೋಶಿಮಠ ಹವಾಮಾನ

ಜೋಶಿಮಠಕ್ಕೆ ಯಾವುದೆ ಅಡೆ-ತಡೆಗಳಿಲ್ಲದೆ ಭೇಟಿ ನೀಡಲು ಬೇಸಿಗೆಯು ಉತ್ತಮ ಸಮಯವಾಗಿದೆ.

ಬೇಸಿಗೆಗಾಲ

(ಏಪ್ರಿಲ್-ಜೂನ್): ಏಪ್ರಿಲ್ ನಲ್ಲಿ ಪ್ರಾರಂಭವಾಗುವ ಬೇಸಿಗೆಯು ಜೂನ್ ನಲ್ಲಿ ಅಂತ್ಯಗೊಳ್ಳುತ್ತದೆ. ಸಾಮಾನ್ಯವಾಗಿ ಈ ಸಮಯದಲ್ಲಿ ದಾಖಲಾಗುವ ಗರಿಷ್ಠ ತಾಪಮಾನವು 34°C ಆಗಿದ್ದು, ಕನಿಷ್ಠ ತಾಪಮಾನವು 12°C ಆಗಿರುತ್ತದೆ.

ಮಳೆಗಾಲ

(ಜುಲೈ-ಸೆಪ್ಟಂಬರ್): ಜೋಶಿಮಠದಲ್ಲಿ ಮಳೆಗಾಲವು ಜುಲೈ ನಲ್ಲಿ ಪ್ರಾರಂಭವಾಗಿ ಸೆಪ್ಟಂಬರ್ ನಲ್ಲಿ ಕೊನೆಗೊಳ್ಳುತ್ತದೆ. ಈ ಸ್ಥಳವು ನೈರುತ್ಯ ಮಾರುತಗಳ ಪ್ರಭಾವದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯನ್ನು ಪಡೆಯುತ್ತದೆ ಹಾಗು ಸಾಮಾನ್ಯವಾಗಿ ಈ ಸಂದರ್ಭದಲ್ಲಿ ತಂಪಾದ ವಾತಾವರಣವಿರುತ್ತದೆ.

ಚಳಿಗಾಲ

(ಡಿಸೆಂಬರ್-ಫೆಬ್ರುವರಿ): ಈ ಸಂದರ್ಭದಲ್ಲಿ ಈ ಪ್ರದೇಶವು ಅಪಾರ ಪ್ರಮಾಣದ ಹಿಮಪಾತವನ್ನು ಕಾಣುತ್ತದೆ. ಡಿಸೆಂಬರ್ ನಿಂದ ಪ್ರಾರಂಭವಾಗುವ ಚಳಿಗಾಲ ಫೆಬ್ರುವರಿ ತನಕ ಇರುತ್ತದೆ. ಸಾಮಾನ್ಯವಾಗಿ ಈ ಸಮಯದಲ್ಲಿ ದಾಖಲಾಗುವ ಗರಿಷ್ಠ ತಾಪಮಾನವು 8°C ಆಗಿದ್ದು, ಕನಿಷ್ಠ ತಾಪಮಾನವು 0°C ಆಗಿರುತ್ತದೆ.