Search
  • Follow NativePlanet
Share

ಜಿಂದ್: ದೇವಾಲಯಗಳಿಗೆ ಗೌರವಾರ್ಪಣೆ

34

ಮಹಾಭಾರತದಲ್ಲಿ ಪಾಂಡವರು ಜಯ ಹಾಗೂ ಯಶಸ್ಸಿನ ದೇವತೆಯಾದ ಜೈಂತಿಗೆ ಗೌರವ ಸೂಚಕವಾಗಿ ಜಯಂತಿ ದೇವಿ ದೇವಸ್ಥಾನ ನಿರ್ಮಿಸಿರುವಂತಹ ಜೈನತಪುರಿಯಿಂದ ಹೆಸರನ್ನು ಪಡೆದುಕೊಂಡಿರುವ ಹರ್ಯಾಣದ ಒಂದು ಜಿಲ್ಲೆ ಜಿಂದ್. ದೇವಸ್ಥಾನವಿದ್ದ ಕಾರಣ ಜೈನತಪುರಿ ಎನ್ನುವ ಹೆಸರನ್ನು ಪಡೆದುಕೊಂಡಿದ್ದ ನಗರವನ್ನು ಈಗ ಜಿಂದ್ ಎಂದು ಕರೆಯಲಾಗುತ್ತಿದೆ.

ಪುರಾಣಕಥೆಗಳನ್ನು ಹೊರತುಪಡಿಸಿದರೆ, ಇಲ್ಲಿ ನಡೆಸಿದ ಉತ್ಖನನದ ವೇಳೆ ಜಿಲ್ಲೆಯ ಪ್ರಾಚೀನ ಇತಿಹಾಸದ ಬಗ್ಗೆ ತಿಳಿದುಬಂದಿದೆ. ಹರಪ್ಪನ್ ನಾಗರಿಕತೆಗಿಂತ ಮೊದಲಿನ, ಬಳಿಕದ ಮತ್ತು ಬಣ್ಣ ಹಚ್ಚಲಾದ ಮಡಕೆಗಳು ಉತ್ಖನನದ ವೇಳೆ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಪುರಾಣಗಳಲ್ಲಿ ಉಲ್ಲೇಖಿಸಿದಂತಹ ತೀರ್ಥಗಳಿಗೆ ಉತ್ಖನನದ ವೇಳೆ ಸಾಕ್ಷಿಗಳು ಸಿಕ್ಕಿದೆ.

ಜಿಂದ್ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಹಲವಾರು ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಜಿಂದ್ ಪ್ರಮುಖ ಯಾತ್ರಾಸ್ಥಳ. ಶಿವನಿಗಾಗಿ ಇರುವ ಭೂತೇಶ್ವರ ಮಂದಿರವನ್ನು ಭೂತನಾಥನೆಂದೂ ಕರೆಯಲಾಗುತ್ತದೆ. ಜಿಂದ್ ನ ರಾಜನಾಗಿದ್ದ ರಘ್ ಬೀರ್ ಸಿಂಗ್ ಈ ಮಂದಿರ ನಿರ್ಮಿಸಿದ್ದ.

ಧಾಮತನ್ ಸಾಹಿಬ್ ನಲ್ಲಿ ಪುರಾತನ ಶಿವ ಮಂದಿರ ಹಾಗೂ ರಾಮಾಯಣ ಬರೆದಂತಹ ಋಷಿ ವಾಲ್ಮೀಕಿಯ ಆಶ್ರಮವಿದೆ. ಇಲ್ಲಿರುವ ಜಯಂತಿ ಮಂದಿರ ಸುಮಾರು 550 ವರ್ಷ ಪುರಾತನವಾದದ್ದು.ರಾಮರಾಯಿ ಅಥವಾ ರಾಮರ್ಹದಾ ಎನ್ನುವ ಐದು ಕೊಳಗಳನ್ನು ಪರಶುರಾಮ ದೇವರು ನಿರ್ಮಿಸಿದ ಕಾರಣಕ್ಕಾಗಿ ಇದರ ಸಮೀಪವೇ ಪರಶುರಾಮನಿಗಾಗಿ ಕಟ್ಟಿದ ಮಂದಿರವೊಂದಿಗೆ. ಹನ್ಸದೆಹಾರ್ ಎನ್ನುವ ಪುರಾತನ ನಗರಕ್ಕೆ ಭೇಟಿ ನೀಡಿದರೆ ಯೋಗ್ಯವೆನಿಸಲಿದೆ.

ತೆಹ್ಸಿಲ ನರ್ವಾನದಲ್ಲಿರುವ ಹಜರತ್ ಗೈಬಿ ಸಾಹಿಬ್ ಸಮಾಧಿ ತನ್ನದೇ ಆದ ಭಕ್ತರನ್ನು ಸೆಳೆಯುತ್ತದೆ. ಸಮಾಧಿಯು ಖ್ಯಾತ ಸೂಫಿ ಸಂತ ಹಜರತ್ ಗಾಯಿಬಿ ಸಾಹಿಬ್ ಅವರ ಅವಶೇಷಗಳ ನೆಲೆಯಾಗಿದೆ.ಮೂರು ಇತಿಹಾಸ ಕೇಂದ್ರ ಹಾಗೂ ನಾಗೇಶ್ವರ ಮಹಾದೇವ, ನಾಗದಮ್ನಿ ದೇವಿ ಮತ್ತು ನಾಗಕ್ಷೇತ್ರಗಳನ್ನು ಹೊಂದಿರುವ ನಗರ ಸಫಿದಾನ್. ಜಿಂದ್ ನಿಂದ ಐದು ಕಿ.ಮೀ. ದೂರದಲ್ಲಿರುವ ಇಕ್ಕಾಸ್ ಎಂಬಲ್ಲಿರುವ ಏಕಹಂಸ ದೇವಾಲಯವು ಮತ್ತೊಂದು ಪ್ರಮುಖ ಯಾತ್ರಾಸ್ಥಳ.

ಅಶ್ವಿನಿ ಕುಮಾರ ತೀರ್ಥ ಮತ್ತೊಂದು ಯಾತ್ರಾಸ್ಥಳ. ಮಹಾಭಾರತದಲ್ಲಿ ಉಲ್ಲೇಖವಿರುವ ಅಶ್ವಿನಿ ಕುಮಾರ ತೀರ್ಥದ ಪವಿತ್ರ ನೀರಿನಲ್ಲಿ ಸ್ನಾನ ಮಾಡುವುದರಿಂದ ಭಕ್ತರ ಆತ್ಮಶುದ್ಧಿಯಾಗಿ ಮೋಕ್ಷಕ್ಕೆ ದಾರಿ ಮಾಡುಕೊಡುತ್ತದೆ ಎನ್ನುವುದು ಧರ್ಮಗ್ರಂಥಗಳಲ್ಲಿದೆ. ಪವಿತ್ರ ಸ್ಥಳದಲ್ಲಿರುವ ನೀರಿನಲ್ಲಿ ರೋಗನಿವಾರಕ ಗುಣ ಮತ್ತು ಗುಣಪಡಿಸಲಾಗದ ಅನೇಕ ರೋಗಗಳನ್ನು ಗುಣಪಡಿಸುತ್ತದೆ ಎನ್ನುವ ನಂಬಿಕೆಯಿದೆ.

ಬರಾಹ ಗ್ರಾಮದಲ್ಲಿ ವಿಷ್ಣುವಿಗಾಗಿ ಇರುವ ವರಾಹ ತೀರ್ಥವು ಜಿಂದ್ ನಿಂದ ಹತ್ತು ಕಿ.ಮೀ. ದೂರದಲ್ಲಿದೆ. ಹಂದಿಯ ರೂಪದಲ್ಲಿ ವಿಷ್ಣು ಈ ಸ್ಥಳದಲ್ಲಿ ನೆಲೆ ನಿಂತಿದ್ದನೆಂದು ನಂಬಲಾಗಿದೆ. ಜಿಂದ್ ನಿಂದ  ಆರು ಕಿ.ಮೀ. ದೂರದಲ್ಲಿರುವ ನಿರ್ಜನ ಗ್ರಾಮದಲ್ಲಿರುವ ದೇವತೆಗಳ ದೇವ ಮಹಾದೇವನಿಗಾಗಿರುವ ಇರುವ ಪವಿತ್ರ ಸ್ಥಳ ಮುಂಜವತಾ ತೀರ್ಥವಿದೆ. ಯಕ್ಷಿನಿ ಮಹಾರ್ಗಹಿಗಾಗಿರುವ ದೇವಸ್ಥಾನವು ಯಕ್ಷಿನಿ ತೀರ್ಥದಲ್ಲಿದೆ. ಇದು ಜಿಂದ್ ನಿಂದ 8 ಕಿ.ಮೀ. ದೂರದಲ್ಲಿರುವ ದಖ್ನಿಖೆರಾದಲ್ಲಿದೆ.

ಜಿಂದ್ ನಿಂದ ದಕ್ಷಿಣಕ್ಕೆ 7 ಕಿ.ಮೀ. ದೂರಲ್ಲಿರುವ ಪೊಂಕರ್ ಖೇರಿ ಗ್ರಾಮದಲ್ಲಿರುವ ಪುಷ್ಕರ ಮಂದಿರವು ಮತ್ತೊಂದು ಪ್ರಸಿದ್ಧ ಯಾತ್ರಾಸ್ಥಳ. ಈ ಮಂದಿರವನ್ನು ಪರಶುರಾಮ ನಿರ್ಮಿಸಿದನೆಂದು ಧರ್ಮಗ್ರಂಥಗಳು ಹೇಳುತ್ತವೆ. ಬಾಬ ಫೊಂಕೆರ್ ಮಂದಿರವು ಜನರ ನಂಬಿಕೆ ಮತ್ತು ವಿಶ್ವಾಸವನ್ನಿಟ್ಟಿರುವ ಮತ್ತೊಂದು ಧಾರ್ಮಿಕ ಕೇಂದ್ರ.

ಕಸೋಹನ್ ಗ್ರಾಮದಲ್ಲಿರುವ ಕಾಯಶೋಧನ ಮಂದಿರವು ಜಿಂದ್ ನಿಂದ ಉತ್ತರಕ್ಕೆ 16 ಕಿ.ಮೀ. ದೂರದಲ್ಲಿದೆ. ವಿಷ್ಣು ಈ ಪ್ರದೇಶದಲ್ಲಿ ಸ್ನಾನ ಮಾಡಿ ಕಾಯಶೋಧನ, ಲೋಕೋದ್ಧಾರ ಮಾಡಿದನೆಂದು ಪುರಾಣಗ್ರಂಥಗಳಲ್ಲಿದೆ.

ಜಿಂದ್ ಜಿಲ್ಲೆಯ ಸಿಮ್ಲಾ ಗ್ರಾಮದಲ್ಲಿರುವ ನರ್ವಾನ ತೆಹ್ಸಿಲನಲ್ಲಿ ಶ್ರೀ ತೀರ್ಥವಿದೆ. ಇದು ಆರಾಧನೆಗೆ ಪರಮೋಚ್ಛ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲೇ ಒಂದು ಪವಿತ್ರ ಕೊಳವಿದೆ ಮತ್ತು ಇದರಲ್ಲಿ ಸ್ನಾನ ಮಾಡುವುದರಿಂದ ಭಕ್ತರಿಗೆ ಶಾಂತಿ ಮತ್ತು ಸಂತೋಷ ಸಿಗುತ್ತದೆ.

ಜಿಂದ್ ನ ನರ್ವಾನ ತೆಹ್ಸಿಲ್ ನಲ್ಲಿರುವ ಸಂಘನ್ ಗ್ರಾಮದಲ್ಲಿ ದೇವತೆಗಾಗಿ ಒಂದು ಮಂದಿರವಿದೆ. ಈ ತೀರ್ಥದಲ್ಲಿ ವಿಶೇಷವಾಗಿ ಮಹಿಳೆಯರು ಪ್ರಾರ್ಥನೆ ಮಾಡುವುದರಿಂದ ಅವರನ್ನು ಶಂಖಿನಿ ಲಕ್ಷಣಗಳು ಆಶೀರ್ವದಿಸುತ್ತದೆ ಎಂದು ನಂಬಲಾಗಿದೆ.

ಜಿಂದ್ ಭೇಟಿಗೆ ಉತ್ತಮ ಸಮಯ

ಜಿಂದ್ ನಲ್ಲಿ ಬೇಸಿಗೆ, ಚಳಿಗಾಲ ಮತ್ತು ಮಳೆಗಾಲ ಮೂರು ಋತುಗಳು ಸಮಾನವಾಗಿರುತ್ತದೆ. ನವಂಬರ್ ನಿಂದ ಮಾರ್ಚ್ ಮಧ್ಯೆ ಜಿಂದ್ ಗೆ ಭೇಟಿ ನೀಡಲು ಒಳ್ಳೆಯ ಸಮಯ

ತಲುಪುವುದು ಹೇಗೆ

ಜಿಂದ್ ಗೆ ರಸ್ತೆ ಮೂಲಕ ಒಳ್ಳೆಯ ಸಂಪರ್ಕವಿದೆ. ಜಿಂದ್ ನಿಲ್ದಾಣವು ಇತರ ದೊಡ್ಡ ನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.

ಜಿಂದ್ ಪ್ರಸಿದ್ಧವಾಗಿದೆ

ಜಿಂದ್ ಹವಾಮಾನ

ಉತ್ತಮ ಸಮಯ ಜಿಂದ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಜಿಂದ್

  • ರಸ್ತೆಯ ಮೂಲಕ
    ಜಿಂದ್ ಗೆ ರಾಷ್ಟ್ರೀಯ ಹೆದ್ದಾರಿ 71ರ ಒಳ್ಳೆಯ ಸಂಪರ್ಕವಿದೆ. ಭಿವಾನಿ, ಅಂಬಾಲ, ಚಂದೀಗಢ್, ಫರೀದಾಬಾದ್, ಹಿಸಾರ, ಜಗಧರಿ ಮತ್ತು ಕರ್ನಲ್ ಗೆ ಮೆಟಲ್ ರಸ್ತೆಗಳ ಒಳ್ಳೆಯ ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಉತ್ತರ ರೈಲ್ವೆ ವಲಯದಲ್ಲಿರುವ ಜಿಂದ್ ರೈಲು ನಿಲ್ದಾಣವು ನಗರವನ್ನು ದೆಹಲಿ, ಪಾಟಿಯಾಲ, ಚಂದೀಗಢ್ ಮತ್ತು ಹರ್ಯಾಣ ಹಾಗೂ ನೆರೆಯ ರಾಜ್ಯಗಳಿಗೆ ಸಂರ್ಪಕ ಕಲ್ಪಿಸುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ನಗರಕ್ಕೆ ಹತ್ತಿರದ ವಿಮಾನ ನಿಲ್ದಾಣ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇದು 120 ಕಿ.ಮೀ. ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಬಾಡಿಗೆ ಕಾರು ಅಥವಾ ಖಾಸಗಿ ಅಥವಾ ಎಚ್ ಎಸ್ ಆರ್ ಟಿಸಿ ಬಸ್ ಗಳಲ್ಲಿ ಪ್ರಯಾಣಿಸಬಹುದಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat