ಇಲ್ಲಿ ಶಾಪಿಂಗ್ ಮಾಡುವುದು ಕೂಡ ಹಿತವಾದ ಅನುಭವವನ್ನು ನೀಡುತ್ತದೆ. ಈಗಷ್ಟೇ ಮರದಿಂದ ಕಿತ್ತು ತಂದ ಹಣ್ಣು, ತಾಜಾ ಜೇನುತುಪ್ಪಗಳು ಇಲ್ಲಿನ ವಿಶೇಷ. ಮೌಲ್ಯವರ್ಧಿತ ಜೇನು ತುಪ್ಪವೂ ಇಲ್ಲಿ ಸಿಗುತ್ತದೆ. ಪುಟ್ಟ ಪುಟ್ಟ ಅಂಗಡಿಗಳಲ್ಲಿ ಕಿವಿಸ್, ಆಲಿವ್, ಸ್ಟ್ರಾಬೆರಿ ಹಣ್ಣುಗಳು ಮಾರಾಟವಾಗುತ್ತವೆ. ಕೃತಕವಾಗಿ ಬೆಳೆದ ತಾಜಾ ಅಣಬೆಗಳು ಸಹ ಯೋಗ್ಯ ಬೆಲೆಗೆ ಲಭ್ಯ. ಪ್ರವಾಸಿಗರು ಇಲ್ಲಿ ಸಣ್ಣ ಸಣ್ಣ ಕುಂಡಗಳಲ್ಲಿ ಬೆಳೆಸಿದ ಹಣ್ಣು ಮತ್ತು ಹೂ ಗಿಡಗಳನ್ನೂ ಖರೀದಿ ಮಾಡಬಹುದಾಗಿದ್ದು, ತೋಟಗಾರಿಕಾ ಇಲಾಖೆ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ.


Click it and Unblock the Notifications