Search
  • Follow NativePlanet
Share
ಮುಖಪುಟ » ಸ್ಥಳಗಳು» ಜೌನಪುರ್

ಜೌನಪುರ್ : ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ತಾಣ

19

ಉತ್ತರ ಪ್ರದೇಶದಲ್ಲಿನ ಜೌನಪುರ ಜಿಲ್ಲೆಯಲ್ಲಿ ಜೌನಪುರ ನಗರವಿದೆ. ಈ ನಗರದ ಇತಿಹಾಸವು 1359 ರಷ್ಟು ಹಿಂದಿನದು. ಆಗ ಈ ಪ್ರದೇಶವು ಶೀರಾಜ಼್-ಏ-ಹಿಂದ್ ಎಂದು ಪ್ರಸಿದ್ಧವಾಗಿತ್ತು. ಇದನ್ನು ಫಿರೋಜ್ ಷಾ ತುಘಲಕ್ ಸ್ಥಾಪಿಸಿದನು. ಇಂದಿನ ಆಧುನಿಕ ದಿನಗಳಲ್ಲಿ ಜೌನಪುರವು ದೇಶದ ಉಳಿದ ಭಾಗಗಳು ಕಂಡಿರುವ ಆರ್ಥಿಕ ಪ್ರಗತಿಯನ್ನು ಇನ್ನೂ ಕಾಣಬೇಕಿದೆ. ಜೌನಪುರ ಪ್ರವಾಸೋದ್ಯಮವು ಐತಿಹಾಸಿಕ ಮತ್ತು ಪವಿತ್ರ ಯಾತ್ರಾ ಸ್ಥಳಗಳಿಂದಾಗಿ ಪ್ರವಾಸಿಗರನ್ನು ವರ್ಷಪೂರ್ತಿ ಸೆಳೆಯುತ್ತಿದೆ.

ಜೌನಪುರದ ಸುತ್ತಮುತ್ತಲ ಪ್ರವಾಸಿ ತಾಣಗಳು

ಜೌನಪುರದಲ್ಲಿ ಹಲವು ಆಸಕ್ತಿದಾಯಕ ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು ಮತ್ತು ಪವಿತ್ರ ಯಾತ್ರಾ ಸ್ಥಳಗಳು ವರ್ಷಪೂರ್ತಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ. ಇದರಲ್ಲಿ ಒಂದು ಷಾಹಿ ಸೇತುವೆ. ಇದು ಮುಘಲ್ ಸೇತುವೆ, ಅಕಬರಿ ಸೇತುವೆ ಅಥವಾ ಮುನೀಂ ಖಾನ್ ಸೇತುವೆ ಎಂದು ಕೂಡ ಪ್ರಸಿದ್ಧವಾಗಿದೆ. ಇದು ಜೌನಪುರದಲ್ಲಿರುವ ಮುಘಲ್ ವಾಸ್ತುಶೈಲಿಯ ಮುಖ್ಯ ಹೆಗ್ಗುರುತುಗಳಲ್ಲಿ ಒಂದು.

ಷಾಹಿ ಕಿಲ್ಲಾ, ಗೋಮತಿ ನದಿಗೆ ಕಟ್ಟಲಾದ ಷಾಹಿ ಸೇತುವೆಯ ಸನಿಹದಲ್ಲಿದೆ. ಇದನ್ನು ಮುಘಲ್ ಆಕ್ರಮಣಕಾರರು ನಾಶಮಾಡಿದ ದೇವಾಲಯದ ವಸ್ತುಗಳನ್ನು ಬಳಸಿ ಅದೇ ಪ್ರದೇಶದಲ್ಲಿ ನಿರ್ಮಿಸಲಾಯಿತು. ಅಟಾಲಾ ಮಸೀದಿಯನ್ನು ಕೂಡ ಇದೇ ರೀತಿ ದೇವಾಲಯವನ್ನು ನಾಶ ಮಾಡಿದ ನಂತರ ಅದೇ ಹೆಸರಿನಲ್ಲಿ ನಿರ್ಮಿಸಲಾಯಿತು. ಜಮಾ ಮಸೀದಿಯು 15 ನೇಯ ಶತಮಾನದಲ್ಲಿ ಫಿರೋಜ್ ಷಾ ತುಘಲಕ್ಕನು ಕಟ್ಟಿಸಿದನು. ಲಾಲ್ ದರ್ವಾಜ ಮಸೀದಿಯನ್ನು ಕೂಡ ಇದೇ ರೀತಿ ಮುಸ್ಲಿಂ ಆಕ್ರಮಣಕಾರರು ನಾಶ ಮಾಡಿದ ಹಿಂದೂ ಸ್ಥಳಗಳು, ದೇವಾಲಯಗಳು ಮತ್ತು ಇತರ ಸ್ಮಾರಕಗಳ ವಸ್ತುಗಳನ್ನು ಬಳಸಿ ಕಟ್ಟಲಾಗಿದೆ.

ಜೌನಪುರ ತಲುಪುವುದು ಹೇಗೆ?

ಜೌನಪುರವನ್ನು ರಸ್ತೆ ಮತ್ತು ರೈಲಿನ ಮೂಲಕ ತಲುಪಬಹುದು. ವಿಮಾನದ ಮೂಲಕ ಪ್ರಯಾಣಿಸಲು ಬಯಸುವವರು ದೆಹಲಿಯವರೆಗೆ ವಿಮಾನದಲ್ಲಿ ಬಂದು ಅಲ್ಲಿಂದ ರೈಲು ಅಥವ ರಸ್ತೆಯ ಮೂಲಕ ಜೌನಪುರ ತಲುಪಬಹುದು.

ಜೌನಪುರಕ್ಕೆ ಹೋಗಲು ಸೂಕ್ತ ಸಮಯ

ನವಂಬರ್-ಫೆಬ್ರವರಿ ಜೌನಪುರಕ್ಕೆ ಪ್ರವಾಸಕ್ಕೆ ಹೋಗಲು ಸೂಕ್ತ ಸಮಯ.

ಜೌನಪುರ್ ಪ್ರಸಿದ್ಧವಾಗಿದೆ

ಜೌನಪುರ್ ಹವಾಮಾನ

ಉತ್ತಮ ಸಮಯ ಜೌನಪುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಜೌನಪುರ್

  • ರಸ್ತೆಯ ಮೂಲಕ
    ಜೌನಪುರವು ಉತ್ತರ ಪ್ರದೇಶದ ಮುಖ್ಯ ಪಟ್ಟಣಗಳು ಮತ್ತು ನಗರಗಳಾದ ಲಕ್ನೋ, ವಾರಣಾಸಿ ಮತ್ತು ಅಲಹಬಾದಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. NH-56, SH-36 ಗಳ ಮೂಲಕ ಜೌನಪುರವು ಎಲ್ಲ ಮುಖ್ಯ ನಗರಗಳೊಂದಿಗೆ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜೌನಪುರವು ಭಾರತದ ಎಲ್ಲ ಪ್ರಮುಖ ನಗರಗಳೊಂದಿಗೆ ಮೂರು ಮುಖ್ಯ ರೈಲು ನಿಲ್ದಾಣಗಳ ಮೂಲಕ ಸಂಪರ್ಕ ಹೊಂದಿದೆ: ಜೌನಪುರ ನಗರ ನಿಲ್ದಾಣ, ಷಹಗಂಜ್ ಜಂಕ್ಷನ್ ಮತ್ತು ಕೆರಾಕಟ್ ನಿಲ್ದಾಣ. ಇಲ್ಲಿಗೆ ದೆಹಲಿ ಮತ್ತು ಮುಂಬೈಗಳಿಂದ ನಿತ್ಯ ರೈಲುಗಳು ಪ್ರಯಾಣಿಸುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜೌನಪುರದಲ್ಲಿ ವಿಮಾನ ನಿಲ್ದಾಣವಿಲ್ಲ. ದೆಹಲಿಯವರೆಗೆ ವಿಮಾನದಲ್ಲಿ ಹೋಗಿ ಅಲ್ಲಿಂದ ಇಲ್ಲಿಗೆ ಬಸ್ಸು ಅಥವ ರೈಲಿನ ಮೂಲಕ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat