Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮಷೇಡಪುರ್ » ಹವಾಮಾನ

ಜಮಷೇಡಪುರ್ ಹವಾಮಾನ

ಮಾನ್ಸೂನ ತಿಂಗಳುಗಳಲ್ಲಿ ಇಲ್ಲಿಯ ಹವಾಮಾನ ತುಂಬಾ ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಈ ನಗರದ ಸುಂದರ ಪ್ರಾಕೃತಿಕ ದೃಶ್ಯಗಳನ್ನು ಮತ್ತು ಇತರ ಸುಂದರ ಸ್ಥಳಗಳನ್ನು ನೋಡಿ ಆನಂದಿಸಬಹುದು. ಮತ್ತು ಮಳೆಗಾಲವನ್ನು ಇಷ್ಟಪಡುವ ಪ್ರವಾಸಿಗರು ಮಳೆಗಾಲದ ಸಮಯದಲ್ಲಿ ಇಲ್ಲಿ ಭೇಟಿ ನೀಡಿ ಸಂತೋಷವನ್ನು ಅನುಭವಿಸಬಹುದು. . ಅಕ್ಟೋಬರನಲ್ಲಿ ಇಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. ಇದರಿಂದ ಸುಂದರ ಸ್ಥಳಗಳನ್ನು ವೀಕ್ಷಿಸಲು ಅನುಕೂಲವಾಗುತ್ತದೆ.

ಬೇಸಿಗೆಗಾಲ

ಮಾರ್ಚನಿಂದ ಮೇ ತಿಂಗಳವರೆಗೂ  ಜಮಷೇಡಪುರ್ದಲ್ಲಿ ಬೇಸಿಗೆ ಕಾಲ ಕಂಡು ಬರುತ್ತದೆ. ಈ ಸಮಯದಲ್ಲಿ ಇಲ್ಲಿಯ ತಾಪಮಾನವು 23 ಸೆ ನಿಂದ 40 ಸೆ  ನಡುವೆ  ತೂಗಾಡುತ್ತಿರುತ್ತದೆ.

ಮಳೆಗಾಲ

ಜೂನ ನಿಂದ ಸೆಪ್ಟೆಂಬರ ತಿಂಗಳನವರೆಗೂ ಈ ನಗರದಲ್ಲಿ ಮಳೆಗಾಲದ ಅವಧಿಯಿರುತ್ತದೆ. ಈಗ ಈ  ಪ್ರದೇಶದಲ್ಲಿ  ಸುಂದರವಾದ ನೈರುತ್ಯ ಮಳೆಯನ್ನು  ನೀವು ಕಾಣಬಹುದು. ಈ ಮಳೆಯು 1200 ಮಿಲಿ ಮೀಟರ್ ಮತ್ತು 1400 ಮಿಲಿ ಮೀಟರ ನಷ್ಟಿರುತ್ತದೆ. ಈ ಸಮಯದಲ್ಲಿ ಇಲ್ಲಿ ಸೌಮ್ಯವಾದ ತಾಪಮಾನ ಕಂಡು ಬರುವುದು.

ಚಳಿಗಾಲ

ಜಮಷೇಡಪುರ್ದಲ್ಲಿ ಚಳಿಗಾಲವು ನವಂಬರ ತಿಂಗಳಿನಿಂದ ಹಿಡಿದು ಫೆಬ್ರುವರಿ ತಿಂಗಳಿನವರೆಗೂ ಕಂಡು ಬರುತ್ತದೆ. ಆಗ ಇಲ್ಲಿಯ ತಾಪಮಾನವು 28 ಡಿಗ್ರಿ ಸೆ ನಿಂದ 12 ಡಿಗ್ರಿ ಸೆ ನವರೆಗೂ ಇರುತ್ತದೆ.