Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು » ಹವಾಮಾನ

ಜಮ್ಮು ಹವಾಮಾನ

ಜಮ್ಮು ಸ್ಥಳಕ್ಕೆ ಪ್ರವಾಸದ ಯೋಜನೆಯುಳ್ಳ ಪ್ರವಾಸಿಗರು, ಅಕ್ಟೋಬರ್ ಮತ್ತು ಮಾರ್ಚ್ ನಡುವೆ ಈ ತಾಣಕ್ಕೆ ಭೇಟಿ ನೀಡುವುದು ಸೂಕ್ತ.

ಬೇಸಿಗೆಗಾಲ

(ಏಪ್ರಿಲ್ ನಿಂದ ಮೇ): ಬೇಸಿಗೆ ಸಮಯದಲ್ಲಿ ಜಮ್ಮುವಿಗೆ ಭೇಟಿ ನೀಡುವ ಪ್ರವಾಸಿಗರು, ಬಿಸಿಲು, ಬೆವರುವಿಕೆ ಮತ್ತು ಆರ್ದ್ರತೆಯ ಪರಿಸ್ಥಿತಿಗಳನ್ನು ಎದುರಿಸಬೇಕು. ಬೇಸಿಗೆ ಸಮಯದಲ್ಲಿ, ತಾಪಮಿ. ಸೆನಷ್ಟು ಏರಿರುತ್ತದೆ. ಆದಾಗ್ಯೂ ಜುಲೈನಲ್ಲಿ ಬಾರಿ ಮಳೆಗಾಳದಿಂದಾಗಿ ಈ ತಾಪಮಾನ ಹೆಚ್ಚು ಸಮಯ ಉಳಿಯುವುದಿಲ್ಲ.

ಮಳೆಗಾಲ

(ಜೂನ್ ನಿಂದ  ಮಧ್ಯಂತರ ಸೆಪ್ಟೆಂಬರ್): ಮಳೆಗಾಲವು  ಬೇಸಿಗೆ ನಂತರ, ಜೂನ್ ನಿಂದ ಪ್ರಾರಂಭವಾಗುತ್ತದೆ. ಈ ಪ್ರದೇಶದಲ್ಲಿ ಸರಾಸರಿ ಮಳೆ 1246 ಮಿ.ಮೀ ದಾಖಲಾಗುತ್ತದೆ. ಈ ಕಾಲದಲ್ಲಿ, ಭೇಟಿ ನೀಡುವ ಪ್ರವಾಸಿಗರು ಸುಮಾರು 70% ರಷ್ಟು ತೇವಾಂಶದ ಮಟ್ಟವನ್ನು ಎದುರಿಸಬೇಕಾಗುತ್ತದೆ.  ಮಳೆಗಾಲದಲ್ಲಿ  ಇಡೀ ಕಣಿವೆಯ ಪ್ರದೇದಗಳಲ್ಲಿ ದಟ್ಟ ಮಂಜು ಕವಿದಿರುತ್ತದೆ.

ಚಳಿಗಾಲ

(ಮಧ್ಯಂತರ ನವೆಂಬರ್ ನಿಂದ ಮಾಚ್): ಜಮ್ಮುವಿನಲ್ಲಿ ಚಳಿಗಾಲದ ಋತುವು ನವಂಬರ್ ಮಧ್ಯದಿಂದ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ ತಿಂಗಳ ತನಕ ವಿಸ್ತರಿಸುತ್ತದೆ. ಚಳಿಗಾಲದ ಅವಧಿಯಲ್ಲಿ ಜಮ್ಮುವಿನಲ್ಲಿ ಭಾರಿ ಹಿಮಪಾತವಾಗುತ್ತದೆ. ಇದರ ಪರಿಣಾಮವಾಗಿ, ಚಳಿಗಾಲದಲ್ಲಿ ಜಮ್ಮುಗೆ ಭೇಟಿ ನೀಡುವ ಪ್ರಯಾಣಿಕರು ತೀವ್ರ ಚಳಿ ಮತ್ತು  ಘನೀಕರಿಸುವ ಹವಾಮಾನದೊಂದಿಗೆ ವ್ಯವಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.