Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಹವಾಮಾನ

ಜೈಸಲ್ಮೇರ್ ಹವಾಮಾನ

ಜೈಸಲ್ಮೇರಿನ ಪ್ರಸಿದ್ಧ ಮರುಭೂಮಿ ಉತ್ಸವವು ಫೆಬ್ರವರಿ ತಿಂಗಳಿನಲ್ಲಿ ನಡೆಯುತ್ತದೆ. ಸೆಪ್ಟಂಬರ್ ತಿಂಗಳಿನಲ್ಲಿ ಇಲ್ಲಿ ಪ್ರಸಿದ್ಧ ರಾಮದೇವರ ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ಸಲುವಾಗಿ ಪ್ರವಾಸಿಗರು ವಿಶ್ವದೆಲ್ಲೆಡೆಯಿಂದ ಈ ಸ್ಥಳಕ್ಕೆ ಆಗಮಿಸುತ್ತಾರೆ. ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿಯು ಇಲ್ಲಿಗೆ ಪ್ರವಾಸ ಹೊರಡಲು ಹೇಳಿ ಮಾಡಿಸಿದ ಸಮಯವಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ) ; ಮಾರ್ಚ್ ತಿಂಗಳಿನಲ್ಲಿ ಬೇಸಿಗೆ ಶುರುವಾಗಿ ಮೇನಲ್ಲಿ ಅಂತ್ಯವಾಗುತ್ತದೆ. ಆಗ ಇಲ್ಲಿನ ಉಷ್ಣಾಂಶವು ಗರಿಷ್ಠ 45.6° ಸೆಲ್ಶಿಯಸ್ ಇದ್ದು, ಕನಿಷ್ಠ 25° ಸೆಲ್ಶಿಯಸ್ ಇರುತ್ತದೆ. ಬೇಸಿಗೆಯು ಹವಾಗುಣವು ಬಿಸಿಲಿನಿಂದ ಕೂಡಿದ್ದು ಅಸೌಖ್ಯಕರವಾಗಿರುತ್ತದೆ.

ಮಳೆಗಾಲ

(ಜೂನ್ ನಿಂದ ಸೆಪ್ಟಂಬರ್) ; ಜೈಸಲ್ಮೇರ್ ಪ್ರಾಂತ್ಯವು ಮಳೆಗಾಲದಲ್ಲಿ ಅಲ್ಪ ಪ್ರಮಾಣದ ಮಳೆಯನ್ನು ಕಾಣುತ್ತದೆ. ಈ ಕಾಲದಲ್ಲಿ ವರ್ಷದ ಸರಾಸರಿ 15 ಸೆ. ಮೀ ನಷ್ಟು ಮಳೆಯು ಬೀಳುತ್ತದೆ.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ); ಜೈಸಲ್ಮೇರಿನಲ್ಲಿ ಚಳಿಗಾಲದಲ್ಲಿ ತಂಪಾದ ಹವಾಗುಣವಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಗರಿಷ್ಠ 23.6° ಸೆಲ್ಶಿಯಸ್ ಇದ್ದರೆ, ಕನಿಷ್ಠ 4.9°ಸೆಲ್ಶಿಯಸ್ ಇರುತ್ತದೆ.