Search
  • Follow NativePlanet
Share
ಮುಖಪುಟ » ಸ್ಥಳಗಳು» ಜಯನ್ತಿಯ ಹಿಲ್ಸ್

ಜೈನ್ತಿಯಾ ಹಿಲ್ಸ್(ಬೆಟ್ಟಗಳು)-ವಿಹಂಗಮ ಭೂದೃಶ್ಯ ಮತ್ತು ಅಲೆಯಾಕಾರದ ಬೆಟ್ಟಗಳು

31

ಜೈನ್ತಿಯಾ ಬೆಟ್ಟ ಹಾಗೂ ಕಣೆವೆಗಳು ನೈಜ ಸೌಂದರ್ಯದಿಂದ ಮೈದಳೆದಿದೆ. ಅಲೆಯಾಕಾರದ ಬೆಟ್ಟಗಳ ಸಾಲುಗಳು, ದಾರಿಯುದ್ದಕ್ಕೆ ಭಯ ಹುಟ್ಟಿಸುವಂತಹ ನದಿಗಳ ಪ್ರಪಾತದ ಕೊರತೆಯಿಲ್ಲ. ಜೈನ್ತಿಯಾ ಹಿಲ್ಸ್ ಪ್ರವಾಸೋದ್ಯಮ ಕೇವಲ ನೈಸರ್ಗಿಕ ಸೌಂದರ್ಯ ಮಾತ್ರವಲ್ಲದೆ ಶ್ರೀಮಂತ ಇತಿಹಾಸ ಮತ್ತು ಪ್ರಸಕ್ತ ಬಾಂಗ್ಲಾದೇಶದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ. ಜೈನ್ತಿಯಪುರ(ಈಗಿನ ಬಾಂಗ್ಲಾದೇಶ) ರಾಜ್ಯದ ರಾಜಧಾನಿಯಲ್ಲಿ ನೆಲೆಸಿದ್ದ ಜೈನ್ತಿಯಾ ಕಿಂಗ್ ಈ ಬೆಟ್ಟಗಳ ಸಾಲಿನಲ್ಲಿ ನರ್ತಿಂಗ್ ಎನ್ನುವ ಸಣ್ಣ ಗ್ರಾಮವನ್ನು ರಚಿಸಿ ಅದನ್ನು ಬೇಸಿಗೆಯ ರಾಜಧಾನಿಯಾಗಿ ಮಾಡಿದ್ದ. ಇದರ ಪರಿಣಾಮ ರಸ್ತೆಗಳು ಹೆಚ್ಚಾಗಿ ಸಾಂಸ್ಕೃತಿಕ ವಿನಿಮಯ ಬಲವಾಯಿತು.  

ಎರಡು ಜಿಲ್ಲೆಗಳಾದ ಪಶ್ಚಿಮ ಜೈನ್ತಿಯಾ ಬೆಟ್ಟಗಳು ಮತ್ತು ಪೂರ್ವ ಜೈನ್ತಿಯಾ ಬೆಟ್ಟಗಳಿಗೆ ಜೈನ್ತಿಯಾ ಬೆಟ್ಟಗಳು ಪದವನ್ನು ಬಳಸಲಾಗುತ್ತದೆ. ಪಶ್ಚಿಮ ಜೈನ್ತಿಯಾ ಹಿಲ್ಸ್ ನ ಜಿಲ್ಲಾ ಕಚೇರಿ ಜೊವಾಯಿಯಲ್ಲಿದ್ದರೆ, ಪೂರ್ವ ಜೈನ್ತಿಯಾ ಹಿಲ್ಸ್ ನ ಜಿಲ್ಲಾ ಕೇಂದ್ರ ಖಲೈರ್ಹಟ್ ನಲ್ಲಿದೆ. ಏಕಶಿಲೆಗಳ ಬೃಹತ್ ಸಂಗ್ರಹವನ್ನು ಹೊಂದಿರುವಂತಹ ನಾರ್ತಿಂಗ್ ನ್ನು ಜೈನ್ತಿಯ ಪ್ರವಾಸೋದ್ಯಮ ಒಳಗೊಂಡಿದೆ. ಇಲ್ಲಿರುವ ದುರ್ಗಾ ದೇವಸ್ಥಾನ ಕೂಡ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.

ಜೈನ್ತಿಯಾ ಹಿಲ್ಸ್ ನ್ನು ತಲುಪುದು ಹೇಗೆ?

ಶಿಲ್ಲಾಂಗ್ ನ ರಾಜಧಾನಿಯಾಗಿರುವ ಜೊವಾಯಿ ಶಿಲ್ಲಾಂಗ್ ನಿಂದ 65 ಕಿ.ಮೀ. ದೂರದಲ್ಲಿದೆ. ಎರಡು ನಗರಗಳ ಮಧ್ಯೆ ಪ್ರಯಾಣ ಎರಡು ಗಂಟೆ ಬೇಕಾಗುತ್ತದೆ. ಜೈನ್ತಿಯಾ ಹಿಲ್ಸ್ ಗೆ ರಸ್ತೆಯೇ ಸಾರಿಗೆಗೆ ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಜೈನ್ತಿಯಾ ಹಿಲ್ಸ್ ನಲ್ಲಿರುವ ಪ್ರವಾಸಿ ತಾಣಗಳನ್ನು ನೋಡಲು ಪ್ರವಾಸಿಗಳು ಜೊವಾಯಿಯನ್ನು ತಮ್ಮ ಪ್ರಧಾನ ಶಿಬಿರವನ್ನಾಗಿ ಮಾಡಬಹುದು.

ಜೈನ್ತಿಯಾ ಹಿಲ್ಸ್ ಹವಾಮಾನ

ಜೈನ್ತಿಯಾ ಹಿಲ್ಸ್ ಮನ್ಸೂನ್ ಸಮಯದಲ್ಲಿ ಭಾರೀ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಆಹ್ಲಾದಕರವಾಗಿ ಬೆಚ್ಚಗಿರುತ್ತದೆ ಮತ್ತು ಚಳಿಗಾಲ ತುಂಬಾ ತಂಪಾಗಿರುತ್ತದೆ. ಪ್ರವಾಸಿಗಳು ಬೇಸಿಗೆಯಲ್ಲಿ ಮಳೆ ಕಡಿಮೆಯಿರುವಾಗ ಜೈನ್ತಿಯಾ ಹಿಲ್ಸ್ ಗೆ ಭೇಟಿ ನೀಡಬಹುದು.

ಜಯನ್ತಿಯ ಹಿಲ್ಸ್ ಪ್ರಸಿದ್ಧವಾಗಿದೆ

ಜಯನ್ತಿಯ ಹಿಲ್ಸ್ ಹವಾಮಾನ

ಉತ್ತಮ ಸಮಯ ಜಯನ್ತಿಯ ಹಿಲ್ಸ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಜಯನ್ತಿಯ ಹಿಲ್ಸ್

  • ರಸ್ತೆಯ ಮೂಲಕ
    ತ್ರಿಪುರ ಮತ್ತು ಅಸ್ಸಾಂನನ್ನು ಸಂಪರ್ಕಿಸುವ ಶಿಲ್ಲಾಂಗ್ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 44 ಜೈನ್ತಿಯಾ ಹಿಲ್ಸ್ ಮೂಲಕ ಸಾಗುತ್ತದೆ. ಇದು ಎರಡು ಜಿಲ್ಲೆಗಳ ಆಕರ್ಷಣೆಗಳಿಗೆ ಜೀವನಾಡಿಯಾಗಿದೆ. ಶಿಲ್ಲಾಂಗ್ ನಿಂದ ಜೈನ್ತಿಯಾ ಹಿಲ್ಸ್ ನ ಎಲ್ಲಾ ಭಾಗಗಳಿಗೆ ಪ್ರವಾಸಿಗಳು ಸುಲಭವಾಗಿ ಸಾರಿಗೆ ವ್ಯವಸ್ಥೆಯಿದೆ. ಸ್ಥಳೀಯ ಬಸ್ ಗಳು ಮತ್ತು ಟ್ಯಾಕ್ಸಿಗಳು ಸುಲಭವಾಗಿ ಲಭ್ಯವಾಗುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮೇಘಾಲಯದಲ್ಲಿ ಯಾವುದೇ ರೈಲ್ವೆ ನಿಲ್ದಾಣಗಳಿಲ್ಲ ಮತ್ತು ಗುವಾಹಟಿ ರೈಲು ನಿಲ್ದಾಣ ಇಲ್ಲಿಗೆ ಸಮೀಪದ ನಿಲ್ದಾಣ. ರೈಲ್ವೆ ನಿಲ್ದಾಣದಿಂದ ಶಿಲ್ಲಾಂಗ್ ಗೆ ನೇರ ಸಾರಿಗೆಯಿದೆ. ಶಿಲ್ಲಾಂಗ್ ಗೆ ತಲುಪಿದ ಬಳಿಕ ಜೈನ್ತಿಯಾ ಹಿಲ್ಸ್ ಗೆ ಬಸ್ ಮತ್ತು ಟ್ಯಾಕ್ಸಿಗಳು ಲಭ್ಯವಿರುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜೈನ್ತಿಯಾ ಹಿಲ್ಸ್ ಗೆ ಉಮರೊಯಿ ವಿಮಾನ ನಿಲ್ದಾಣ ಸಮೀಪದ ವಿಮಾನ ನಿಲ್ದಾಣ. ಅದಾಗ್ಯೂ ಈ ವಿಮಾನ ನಿಲ್ದಾಣವೀಗ ಕಾರ್ಯನಿರ್ವಹಿಸದಿರುವ ಕಾರಣ ಗುವಾಹಟಿಯಲ್ಲಿ ಗೋಪಿನಾಥ ಬೊರ್ಡೊಲೊಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜೈನ್ತಿಯಾಗೆ ತಲುಪಲು ಅನೂಕೂಲಕರವಾಗಲಿದೆ. ಪ್ರವಾಸಿಗಳು ಶಿಲ್ಲಾಂಗ್ ಗೆ ತಲುಪಿ ಅಲ್ಲಿಂದ ರಸ್ತೆ ಮೂಲಕ ಜೊವಾಯಿ ಅಥವಾ ಖಲೈರ್ಹಟ್ ಗೆ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun