Search
  • Follow NativePlanet
Share
ಮುಖಪುಟ » ಸ್ಥಳಗಳು » ಜಯನ್ತಿಯ ಹಿಲ್ಸ್ » ಹವಾಮಾನ

ಜಯನ್ತಿಯ ಹಿಲ್ಸ್ ಹವಾಮಾನ

ಎಲ್ಲಾ ಮೂರು ಋತುಗಳು ಭಿನ್ನವಾಗಿರುವುದನ್ನು ನೀಡುತ್ತದೆ ಮತ್ತು ಪ್ರವಾಸಿಗಳು ಜೈನ್ತಿಯಾ ಹಿಲ್ಸ್ ಗೆ ಭೇಟಿ ನೀಡಬಹುದು. ಮಳೆಗಾಲದಲ್ಲಿ ಹಿಲ್ಸ್ ನ ಅತ್ಯಾಕರ್ಷಕ ಸೊಬಗನ್ನು ವೀಕ್ಷಿಸಬಹುದು. ಬೇಸಿಗೆ ಮತ್ತು ಚಳಿಗಾಲ ಕಣಿವೆ ಮತ್ತು ಬೆಟ್ಟದ ಇನ್ನೊಂದು ಶಾಂತ ಮುಖವನ್ನು ತೋರಿಸುತ್ತದೆ. ಪ್ರವಾಸಿಗರು ಅವರ ಅನುಕೂಲಕ್ಕೆ ತಕ್ಕಂತೆ ಯೋಜನೆ ಹಾಕಿಕೊಳ್ಳಬಹುದು.

ಬೇಸಿಗೆಗಾಲ

ಬೇಸಿಗೆಯಲ್ಲಿ ಜೈನ್ತಿಯಾ ಹಿಲ್ಸ್ ನ ಹವಾಮಾನ ಹಿತಕರ ಮತ್ತು ತಂಪಾಗಿರುತ್ತದೆ. ಹಿಲ್ಸ್ ನಲ್ಲಿ ಹೆಚ್ಚಿನ ಉಷ್ಣತೆ ಅಥವಾ ತಂಪು ಕೂಡ ಇರಲ್ಲ.  ಈ ಸಮಯದಲ್ಲಿ ಜೈನ್ತಿಯಾ ಹಿಲ್ಸ್ ಗೆ ಭೇಟಿ ನೀಡಿದರೆ ಪ್ರವಾಸಿ ಕಾರುಗಳು ಟ್ರೆಕ್ಕಿಂಗ್ ಮತ್ತು ಹೈಕಿಂಗ್ ಗೆ ಹೋಗುತ್ತದೆ. ಜೈನ್ತಿಯಾ ಹಿಲ್ಸ್ ನಲ್ಲಿರುವ ಹಲವಾರು ಗುಹೆಗಳು ಈ ಸಮಯದಲ್ಲಿ ವೀಕ್ಷಿಸಬಹುದಾಗಿದೆ.

ಮಳೆಗಾಲ

ಮೇಘಾಲಯದಲ್ಲಿ ಮಳೆಯೆನ್ನುವುದು ಅದರ ಅವಿಭಾಜ್ಯ ಅಂಗವೆನ್ನುವಂತಾಗಿದೆ ಮತ್ತು ಜೈನ್ತಿಯಾ ಹಿಲ್ಸ್ ನಲ್ಲೂ ಭಾರೀ ಮಳೆಯಾಗುತ್ತದೆ. ಮಾನ್ಸೂನ್ ತಿಂಗಳು ಜೂನ್ ನಿಂದ ಆರಂಭವಾಗಿ ಆಗಸ್ಟ್-ಸಪ್ಟೆಂಬರ್ ತನಕ ಮುಂದುವರಿಯುತ್ತದೆ. ಅತಿಯಾದ ಮಳೆಯಿಂದ ಈ ಪ್ರದೇಶ, ಅದರಲ್ಲೂ ಮಲಿದೊರ್ ನ ಸಿಲ್ಚರ್ ಮಾರ್ಗದಲ್ಲಿ ಆಗಾಗ ಭೂಕುಸಿತವಾಗುತ್ತದೆ.

ಚಳಿಗಾಲ

ನವಂಬರ್ ನಿಂದ ಫೆಬ್ರವರಿ ತನಕ ಜೈನ್ತಿಯಾ ಹಿಲ್ಸ್ ನಲ್ಲಿ ಚಳಿಗಾಲವಾಗಿರುತ್ತದೆ. ಈ ಸಮಯದಲ್ಲಿ ತುಂಬಾ ಚಳಿಯಿದ್ದು, ಕನಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ತನಕ ಕುಸಿಯುತ್ತದೆ. ಅದಾಗ್ಯೂ ದಿನದ ಅವಧಿಯಲ್ಲಿ ಬಿಸಿಲಿರುವ ಕಾರಣ ಹೊರಾಂಗಣ ಚಟುವಟಿಕೆಗಳಿಗೆ ಇದು ಹಿತಕರವಾಗಿರುತ್ತದೆ.