Search
  • Follow NativePlanet
Share
ಮುಖಪುಟ » ಸ್ಥಳಗಳು» ಜಬಲ್ಪೂರ್

ಜಬಲ್ಪೂರ ಪ್ರವಾಸೋದ್ಯಮ: ಸುಂದರ ಅಮೃತ ಶಿಲೆಗಳು ಮತ್ತು ಇನ್ನಷ್ಟು ಆಕರ್ಷಣೆಗಳು!

25

ನರ್ಮದ ನದಿಯ ದಂಡೆಯ ಮೇಲಿರುವ ಜಬಲ್ಪೂರ ಮಧ್ಯಪ್ರದೇಶದ ಮುಖ್ಯ ನಗರಗಳಲ್ಲಿ ಒಂದು. ಇದು ಪ್ರಮುಖ ನಗರವಾಗಲು ಹಾಗೂ ಪ್ರವಾಸಿ ಸ್ಥಳವಾಗಲು ಹಲವು ಕಾರಣಗಳಿವೆ. ಜಬಲ್ಪೂರವನ್ನು ಭಾರತದ ಅಮೃತಶಿಲೆಗಳ ನಗರವೆಂದು ಕರೆಯುತ್ತಾರೆ. ಇಲ್ಲಿನ ಭೇದಘಾಟ್ ಅಮೃತಶಿಲೆಗಳಿಗೆ ಪ್ರಸಿದ್ಧವಾದದ್ದು. ಇದೊಂದು ಕಾಸ್ಮಪೊಲಿಟನ್ ನಗರ.

ಇದು ತನ್ನ ಮಿಲಿಟರಿ ಹಾಗೂ ಕೈಗಾರಿಕೆಯ ಕಾರಣದಿಂದ ಆರ್ಥಿಕವಾಗಿ ಕೂಡ ಮುಂದುವರೆದಿರುವ ನಗರ. ಐತಿಹಾಸಿಕವಾಗಿ ಕೂಡ ಈ ನಗರಕ್ಕೆ ಪ್ರಾಮುಖ್ಯತೆಯಿದೆ. ಇದು ಬ್ರಿಟೀಷರ ಆಳ್ವಿಕೆಗೆ ಒಳಪಡುವ ಮುನ್ನ ಗೊಂಡಾಗಳು, ಕಲಿಚೂರಿ ರಾಜವಂಶಗಳು ಮತ್ತು ಮರಾಠರು ಮತ್ತು ಮೊಘಲರು ಕೂಡ ಈ ನಗರವನ್ನು ಕೆಲ ಕಾಲ ಆಳಿದ್ದರು.

ಜಬಲ್ಪೂರದ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳು

ಜಬಲ್ಪೂರದಲ್ಲಿ ಹಲವಾರು ಪ್ರೇಕ್ಷಣೀಯ ತಾಣಗಳಿವೆ. ಚೌಸಟ್ ಯೋಗಿನಿ ದೇವಾಲಯ, ಪಿಸಾನಹರಿ ಕಿ ಮದಿಯ ಮತ್ತು ತ್ರಿಪುರ ಸುಂದರಿ ದೇವಾಲಯಗಳು ಇಲ್ಲಿನ ಪ್ರಮುಖ ದೇವಾಸ್ಥಾನಗಳು. ದುಮ್ನಾ ನೇಚರ್ ರಿಸರ್ವ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆ. ಇದು ಪ್ರಾಣಿಪ್ರಿಯರಿಗೆ ಪ್ರಿಯವಾದ ತಾಣ. ಅದೇ ರೀತಿ ಇಲ್ಲಿನ ಬಾರ್ಗಿ ಅಣೆಕಟ್ಟು ಪಕ್ಷಿಪ್ರಿಯರಿಗೆ ಪ್ರಿಯವಾದ ತಾಣ. ಇದು ದೇಶ ವಿದೇಶಗಳಿಂದ ಪಕ್ಷಿಪ್ರಿಯರನ್ನು ಸೆಳೆಯುತ್ತಿದೆ. ಅಣೆಕಟ್ಟಿನ ಸಮೀಪದ ಸ್ಥಳ ಮತ್ತು ದುವಾಧಾರ್ ಜಲಪಾತ ಪ್ರಸಿದ್ಧ ಪ್ರವಾಸಿತಾಣಗಳು.

ಇನ್ನುಳಿದ ಪ್ರವಾಸಿ ತಾಣಗಳೆಂದರೆ ತಿಲ್ವಾರ ಘಾಟ್, ಹನುಮಾನ್ ತಲ್ ಮತ್ತು ಸಂಗ್ರಾಮ್ ಸಾಗರ್ ಲೇಕ್. ಮದನ ಮಹಲ್ ಮತ್ತು ರಾಣಿ ದುರ್ಗಾವತಿ ಸ್ಮಾರಕ ವಸ್ತುಸಂಗ್ರಹಾಲಯಗಳು ಹಿಂದಿನ ವೈಭವದ ದಿನಗಳ ನೆನಪನ್ನು ಸಾರುವ ತಾಣಗಳು. ನಗರದ ಕೋಟೆಗಳು ಮತ್ತು ದೇವಾಲಯಗಳು ಹಿಂದಿನ ದಿನಗಳ ನೆನಪನ್ನು ಇಂದಿಗೂ ತಮ್ಮಲ್ಲಿ ಉಳಿಸಿಕೊಂಡಿವೆ. ಇಲ್ಲಿನ ಬ್ಯಾಲೆನ್ಸಿಂಗ್‍ ರಾಕ್ಸ್ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಲ್ಲೊಂದು. ಭೇದಾಘಾಟಿನ ಅಮೃತಶಿಲೆಗಳು ಫೋಟೋಗ್ರಫಿ ಪ್ರಿಯರಿಗೆ ನೆಚ್ಚಿನ ತಾಣ. ಇದು ನವವಿವಾಹಿತರಿಗೆ ಕೂಡ ಪ್ರಿಯವಾದ ತಾಣ.

ಜಬಲ್ಪೂರ: ಚಾಟ್ಸ್ ಮತ್ತು ಕೋವಾ ಜಿಲೇಬಿಗಳ ನಗರ

ಜಬಲ್ಪೂರದಲ್ಲಿ ಪ್ರವಾಸಿಗರ ಬಾಯಲ್ಲಿ ನೀರೂರಿಸುವಂತಹ ತಿನಿಸುಗಳು ಸಿಗುತ್ತವೆ. ಅವುಗಳಲ್ಲಿ ಚಾಟ್ಸ್ ಮತ್ತು ಕೋವಾ ಜಿಲೇಬಿಗಳ ರುಚಿ ನೋಡಲೇಬೇಕು. ಇಲ್ಲಿನ ಚಾಟ್ ಗಲಿ ಒಂದೇ ರಸ್ತೆಯಲ್ಲಿ ಹಲವು ರೀತಿಯ ಚಾಟ್ಸ್ ಸಿಗುವುದಕ್ಕೆ ಹೆಸರುವಾಸಿಯಾಗಿದೆ. ಜಬಲ್ಪೂರದ ಸಂಜೆಯನ್ನು ರುಚಿಕರವಾಗಿಸಲು ಒಳ್ಳೆಯ ಚಾಟ್ಸ್, ರಬ್ಡಿ ಮತ್ತು ಕೋವಾ ಜಿಲೇಬಿಗಳನ್ನು ಸವಿಯಬೇಕು.

ಜಬಲ್ಪೂರ: ಮಧ್ಯಪ್ರದೇಶದ ಸಂಸ್ಕಾರಧಾನಿ

ಮಧ್ಯಪ್ರದೇಶದ ಸಾಂಸ್ಕೃತಿಕ ರಾಜಧಾನಿ ಎಂದು ಜಬಲ್ಪೂರವನ್ನು ಗುರುತಿಸಲಾಗುತ್ತದೆ. ಕಲೆ ಮತ್ತು ಸಂಸ್ಕೃತಿಯಲ್ಲಿ ಹೆಸರು ಮಾಡಿದ ಹಲವು ಖ್ಯಾತನಾಮರೊಂದಿಗೆ ಜಬಲ್ಪೂರದ ಸಂಬಂಧವಿದೆ. ಭಾರತದ ಸಂವಿಧಾನದ ಪೀಠಿಕೆಯನ್ನು ರೂಪಿಸಲು ಶ್ರಮಿಸಿದವರಲ್ಲಿ ಒಬ್ಬರಾದ ಅಂತಾರಾಷ್ಟ್ರೀಯ ಖ್ಯಾತಿಯ ಬಿಯೋಹರ್ ರಾಮ ಮನೋಹರ್ ಸಿನ್ಹಾ ಇಲ್ಲಿನವರೆ.

ಜಬಲ್ಪೂರ: ಸ್ನೂಕರ್ ಆಟ ಹುಟ್ಟಿದ ನಗರ

ಬ್ರಿಟೀಷರ ಕಾಲದಲ್ಲಿ, ಅವರು ಸ್ನೂಕರ್ ಆಟವನ್ನು ಹುಟ್ಟುಹಾಕಿದ್ದು ಈ ನಗರದಲ್ಲಿ. ಬ್ರಿಟೀಷರಲ್ಲಿ ಆಗ ಜನಪ್ರಿಯವಾಗಿದ್ದ ಆಟ ಬಿಲಿಯರ್ಡ್ಸ್. 1875ರಲ್ಲಿ ಬ್ರಿಟೀಷ್ ಆರ್ಮಿ ಆಫೀಸರ್ ಮೆಸ್ಸಿನಲ್ಲಿ ಈ ಆಟ ಬಿಲಿಯರ್ಡ್ಸ್ನ ಸ್ಥಾನ ಪಡೆಯಿತು.

ಜಬಲ್ಪೂರಕ್ಕೆ ಹೋಗುವುದು ಹೇಗೆ?

ಜಬಲ್ಪೂರವನ್ನು ಸುಲಭವಾಗಿ ರಸ್ತೆ, ರೈಲು ಮತ್ತು ವಾಯುಮಾರ್ಗದ ಮೂಲಕ ತಲುಪಬಹುದು. ಇಲ್ಲಿ ರೈಲು ಮತ್ತು ವಿಮಾನ ನಿಲ್ದಾಣಗಳಿವೆ. ಇಲ್ಲಿನ ದುಮ್ನಾ ವಿಮಾನ ನಿಲ್ದಾಣಕ್ಕೆ ಮುಂಬೈ, ಇಂದೋರ್ ಮತ್ತು ದೆಹಲಿಗಳಿಂದ ನಿಯಮಿತವಾಗಿ ವಿಮಾನ ಸಂಚಾರವಿದೆ.

ಪ್ರವಾಸಕ್ಕೆ ಸೂಕ್ತ ಸಮಯ

ಚಳಿಗಾಲದಲ್ಲಿ ವಾತಾವರಣವು ಆಹ್ಲಾದಕರವಾಗಿರುವುದರಿಂದ ಇದು ಪ್ರವಾಸಕ್ಕೆ ಸೂಕ್ತ ಸಮಯ.

ಜಬಲ್ಪೂರ್ ಪ್ರಸಿದ್ಧವಾಗಿದೆ

ಜಬಲ್ಪೂರ್ ಹವಾಮಾನ

ಉತ್ತಮ ಸಮಯ ಜಬಲ್ಪೂರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಜಬಲ್ಪೂರ್

  • ರಸ್ತೆಯ ಮೂಲಕ
    ಜಬಲ್ಪೂರ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಜಬಲ್ಪೂರದಿಂದ ನಿಯಮಿತವಾಗಿ ಎಲ್ಲೆಡೆಗೆ ಖಾಸಗಿ ಮತ್ತು ರಾಜ್ಯ ಸಾರಿಗೆ ಬಸ್ ಸೌಲಭ್ಯವಿದೆ. ಬಸ್ ಮೂಲಕ ಈ ನಗರಕ್ಕೆ ಸುಲಭವಾಗಿ ತಲುಪಬಹುದು. ಖಾಸಗಿ ಟ್ಯಾಕ್ಸಿಗಳು ಕೂಡ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜಬಲ್ಪೂರದ ರೈಲು ನಿಲ್ದಾಣವು ಮಧ್ಯಪ್ರದೇಶ ಮತ್ತು ಭಾರತದ ವಿವಿಧ ಭಾಗಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ದೆಹಲಿ, ಮುಂಬೈ, ಕೊಲ್ಕತ್ತಾ, ಅಹಮದಬಾದ್, ಚೆನೈ, ಭೋಪಾಲ್ ಇತ್ಯಾದಿ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜಬಲ್ಪೂರಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಇಲ್ಲಿಗೆ 20 ಕಿಮೀ ದೂರದಲ್ಲಿರುವ ದುಮ್ನಾ ವಿಮಾನ ನಿಲ್ದಾಣ. ಈ ನಿಲ್ದಾಣಕ್ಕೆ ಮುಂಬೈ, ಇಂದೋರ್ ಮತ್ತು ದೆಹಲಿಗಳಿಂದ ವಿಮಾನ ಸೌಲಭ್ಯವಿದೆ. ದೆಹಲಿಯ ವಿಮಾನಗಳು ಭೋಪಾಲ್ ಮೂಲಕ ಇಲ್ಲಿಗೆ ಬರುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City