Search
  • Follow NativePlanet
Share
ಮುಖಪುಟ » ಸ್ಥಳಗಳು » ಜಬಲ್ಪೂರ್ » ಆಕರ್ಷಣೆಗಳು
  • 01ಅಮೃತ ಶಿಲೆಗಳು

    ಬೇದಾಘಾಟ್ನಲ್ಲಿನ ಅಮೃತ ಶಿಲೆಗಳು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆ. ನರ್ಮದಾ ನದಿಯ ಸುತ್ತಲಿರುವ ಈ ಶಿಲೆಗಳು 100 ಅಡಿಗಳಷ್ಟು ಎತ್ತರದ್ದು. ಸೂರ್ಯ ರಶ್ಮಿಗಳು ಇದರ ಮೇಲೆ ಬಿದ್ದಾಗ ಇದರ ಪ್ರತಿಫಲನವನ್ನು ನೀರಿನಲ್ಲಿ ನೋಡುವುದು ಒಂದು ಅವಿಸ್ಮರಣೀಯ ಸೌಂದರ್ಯಾನುಭೂತಿಯನ್ನು ಒದಗಿಸುತ್ತದೆ. ಈ ಅನುಭವಕ್ಕಾಗಿಯೇ ಪ್ರವಾಸಿಗರು...

    + ಹೆಚ್ಚಿಗೆ ಓದಿ
  • 02ಧುವಾದಾರ್ ಜಲಪಾತ

    ಜಬಲ್ಪೂರ ಮತ್ತು ಮಧ್ಯಪ್ರದೇಶದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು ಈ ಧುವಾದಾರ್ ಜಲಪಾತ. ಹತ್ತು ಮೀಟರ್ ಎತ್ತರದಿಂದ ಧುಮ್ಮಿಕ್ಕುವ ನರ್ಮದಾ ನದಿಯ ಈ ಜಲಪಾತ ನೋಡಲು ತುಂಬ ಸುಂದರವಾಗಿದೆ. ಈ ಜಲಪಾತವು ಅಮೃತ ಶಿಲೆಗಳ ಮೇಲೆ ಹರಿಯುತ್ತಾ ಆರ್ಭಟಿಸುತ್ತಾ ಧುಮ್ಮಿಕುವುದನ್ನು ನೋಡಲು ಸುಂದರವಾಗಿರುತ್ತದೆ. ಜಲಪಾತ ಧುಮ್ಮಿಕ್ಕುವಾಗ ಮಂಜಿನ...

    + ಹೆಚ್ಚಿಗೆ ಓದಿ
  • 03ಚೌಸಟ್ ಯೋಗಿನಿ ದೇವಾಲಯ

    ಈ ದೇವಾಲಯವು ಜಬಲ್ಪೂರದ ಪ್ರಸಿದ್ಧ ಅಮೃತ ಶಿಲೆಗಳ ಸಮೀಪದಲ್ಲಿದೆ. ಇಲ್ಲಿ ದುರ್ಗಾ ದೇವಿಯ 64 ಮಂದಿ ಪರಿಚಾರಿಕರ ವಿಗ್ರಹಗಳಿವೆ. ಇಲ್ಲಿನ ಮೂಲವಿಗ್ರಹ ಶಿವ. ಇದರ ಸುತ್ತಲೂ ದೇವಿಯರ ವಿಗ್ರಹಗಳಿವೆ. ಇದನ್ನು ಕ್ರಿಪೂ 1000 ದಲ್ಲಿ ಕಲಿಚೂರಿ ವಂಶಸ್ಥರು ಕಟ್ಟಿಸಿದರು. ಮೊಘಲರ ದಾಳಿಯ ಸಂದರ್ಭದಲ್ಲಿ ಇದು ನಾಶವಾಯಿತು. ಭಗ್ನಗೊಂಡಿರುವ...

    + ಹೆಚ್ಚಿಗೆ ಓದಿ
  • 04ಹನುಮಾನ ತಲ್

    ಹನುಮಾನ ತಲ್

    ಜಬಲ್ಪೂರ ನಗರದಿಂದ ಕೆಲವು ಕಿಮೀ ದೂರದಲ್ಲಿ ಈ ಕೆರೆಯಿದೆ. ನಗರದ 52 ಕೆರೆಗಳಲ್ಲಿ 13 ಒಣಗಿಹೋಗಿದೆ. ಹನುಮಾನ್ ತಲ್ಅನ್ನು ಸರ್ಕಾರದವರು ಸಂರಕ್ಷಿಸುತ್ತಿದ್ದಾರೆ. ನಗರೀಕರಣದ ಪ್ರಭಾವದಿಂದ ಈ ಕೆರೆಗಳು ಹಾಳಾಗುತ್ತಿವೆ. ಹೆಸರೇ ಸೂಚಿಸುವಂತೆ ಇದೊಂದು ಪವಿತ್ರ ಸ್ಥಾನ. ಇಲ್ಲಿನ ಸ್ಥಳೀಯರ ನಂಬಿಕೆ ಪ್ರಕಾರ ಹನುಮಂತನು ಇಲ್ಲಿ...

    + ಹೆಚ್ಚಿಗೆ ಓದಿ
  • 05ಮದನ್ ಮಹಲ್ ಕೋಟೆ

    ಜಬಲ್ಪೂರವನ್ನು 11 ನೇಯ ಶತಮಾನದಲ್ಲಿ ಆಳಿದ ಅರಸರು ಕಟ್ಟಿದ ಕೋಟೆ ಮದನ ಮಹಲ್ ಕೋಟೆ. ನಗರದಿಂದ ಸ್ವಲ್ಪ ದೂರದಲ್ಲಿ ಬೆಟ್ಟದ ಮೇಲಿರುವ ಈ ಕೋಟೆಯನ್ನು ರಾಜ ಮದನ್ಸಿಂಗ್ ಕಟ್ಟಿಸಿದನು. ಇದು ಅವನ ತಾಯಿ ರಾಣಿ ದುರ್ಗಾವತಿಗೆ ಕೂಡ ಸೇರಿದ್ದು. ಈಗ ಈ ಕೋಟೆ ಶಿಥಿಲಾವಸ್ಥೆಯಲ್ಲಿದೆ. ಇದು ರಾಣಿ ದುರ್ಗಾವತಿಯ ಆಳ್ವಿಕೆ ಮತ್ತು ಸೈನ್ಯದ...

    + ಹೆಚ್ಚಿಗೆ ಓದಿ
  • 06ತ್ರಿಪುರ ಸುಂದರಿ ದೇವಾಲಯ

    ತ್ರಿಪುರ ಸುಂದರಿ ದೇವಾಲಯ

    ತ್ರಿಪುರ ಸುಂದರಿ ದೇವಾಲಯವು ತಿವಾರ್ ಹಳ್ಳಿಯಲ್ಲಿದೆ. ಇದು ಬೇದಾಘಾಟ್ ರಸ್ತೆಯಲ್ಲಿ ಜಬಲ್ಪೂರದಿಂದ 13 ಕಿಮೀ ದೂರದಲ್ಲಿದೆ. ಈ ದೇವಾಲಯವನ್ನು 11ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಮೂರ್ತಿ ಭೂಮಿಯಿಂದ ಉದ್ಭವವಾಗಿರುವುದಂತೆ. ತ್ರಿಪುರ ಎಂದರೆ ಮೂರು ನಗರಗಳು ಎಂದರ್ಥ ಮತ್ತು ಸುಂದರಿ ಎಂದರೆ ಸುಂದರವಾದ ಮಹಿಳೆ...

    + ಹೆಚ್ಚಿಗೆ ಓದಿ
  • 07ರಾಣಿ ದುರ್ಗಾವತಿ ವಸ್ತುಸಂಗ್ರಹಾಲಯ

    ರಾಣಿ ದುರ್ಗಾವತಿ ವಸ್ತುಸಂಗ್ರಹಾಲಯ

    ಈ ವಸ್ತುಸಂಗ್ರಹಾಲಯವು ಐತಿಹಾಸಿಕ ಮಹತ್ವವನ್ನು ಪಡೆದ ಮತ್ತೊಂದು ಸ್ಥಳ. ರಾಣಿ ದುರ್ಗಾವತಿಯ ಕೊಡುಗೆಯನ್ನು ಸ್ಮರಿಸಲು ಈ ಸಂಗ್ರಹಾಲಯವನ್ನು 1964 ರಲ್ಲಿ ನಿರ್ಮಿಸಲಾಯಿತು. ಇದು ಆ ಕಾಲದ ವೈಭವದ ದಿನಗಳ ನೋಟವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಇದು ರಾಣಿಯ ಬದುಕಿನ ಮತ್ತು ಆಕೆಯ ಆಳ್ವಿಕೆಯ ಹಲವು ವಸ್ತುಗಳನ್ನು...

    + ಹೆಚ್ಚಿಗೆ ಓದಿ
  • 08ಬಾರ್ಗಿ ಅಣೆಕಟ್ಟು

    ಬಾರ್ಗಿ ಅಣೆಕಟ್ಟು

    ನರ್ಮದ ನದಿಗೆ ಕಟ್ಟಲಾಗಿರುವ ಮುಖ್ಯವಾದ ಅಣೆಕಟ್ಟುಗಳಲ್ಲಿ ಬಾರ್ಗಿ ಅಣೆಕಟ್ಟು ಕೂಡ ಒಂದು. ಇದು ನದಿಗೆ ಆರಂಭದಲ್ಲಿ ಕಟ್ಟಲಾದ 30 ಅಣೆಕಟ್ಟುಗಳಲ್ಲಿ ಒಂದು. ಈ ಅಣೆಕಟ್ಟು ಜಬಲ್ಪೂರ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ನೀರು ಒದಗಿಸುತ್ತದೆ. ಬಾರ್ಗಿ ಡೈವರ್ಷನ್ ಪ್ರಾಜೆಕ್ಟ್ ಮತ್ತು ರಾಣಿ ಅವಂತಿಬಾಯಿ ಲೋಧಿ ಸಾಗರ ಯೋಜನೆಗಳು ಈ...

    + ಹೆಚ್ಚಿಗೆ ಓದಿ
  • 09ತಿಲ್ವಾರ ಘಾಟ್

    ಜಬಲ್ಪೂರದ ಇತಿಹಾಸದಲ್ಲಿ ತಿಲ್ವಾರ ಘಾಟಿಗೆ ಪ್ರಮುಖ ಸ್ಥಾನವಿದೆ. ಇದು ನರ್ಮದಾ ನದಿಯ ದಂಡೆಯಲ್ಲಿದೆ. ಮಹಾತ್ಮ ಗಾಂಧಿಯವರು ಅಸ್ಥಿ ವಿಸರ್ಜನೆ ನಡೆದದ್ದು ಇದೇ ಸ್ಥಳದಲ್ಲಿ. ಇದರ ನೆನಪಿನಲ್ಲಿ ಗಾಂಧಿ ಸ್ಮಾರಕವನ್ನು ಇಲ್ಲಿ ಕಟ್ಟಿದ್ದಾರೆ. ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮೂರು ಬಾರಿ ಜಬಲ್ಪೂರದಲ್ಲಿ...

    + ಹೆಚ್ಚಿಗೆ ಓದಿ
  • 10ಸಂಗ್ರಾಮ ಸಾಗರ್ ಕೆರೆ

    ಸಂಗ್ರಾಮ ಸಾಗರ್ ಕೆರೆ

    ಜಬಲ್ಪೂರದ ಮತ್ತೊಂದು ಪ್ರಮುಖ ಆಕರ್ಷಣೆ. ಇದು ನಗರದಿಂದ 15 ಕಿಮೀ ದೂರದಲ್ಲಿದೆ. ಈ ಕೆರೆ ಮತ್ತು ಇದರ ಸುತ್ತಲಿರುವ ಕಟ್ಟಡಗಳನ್ನು ಗೋಂಡರ ರಾಜ ಸಂಗ್ರಾಮಸಿಂಗ್ 15ನೇ ಶತಮಾನದಲ್ಲಿ ಕಟ್ಟಿಸಿದನಂತೆ. ಈ ಸ್ಥಳವು ಮಧ್ಯಕಾಲೀನ ವಾಸ್ತುಶಿಲ್ಪಕಲೆಯನ್ನು ಬಿಂಬಿಸುತ್ತದೆ. ಈ ಕೆರೆಯು ವಲಸೆ ಹಕ್ಕಿಗಳ ತಾಣವಾಗಿ ಕೂಡ ಜನಪ್ರಿಯವಾಗಿದೆ....

    + ಹೆಚ್ಚಿಗೆ ಓದಿ
  • 11ಬ್ಯಾಲೆನ್ಸಿಂಗ್ ರಾಕ್

    ಬ್ಯಾಲೆನ್ಸಿಂಗ್ ರಾಕ್

    ಮಧ್ಯಪ್ರದೇಶದ ಜಬಲ್ಪೂರದ ಬ್ಯಾಲೆನ್ಸಿಂಗ್ ರಾಕ್ಸ್ ನಿಜವಾಗಿಯೂ ಒಂದು ಭೌಗೋಳಿಕ ಅದ್ಭುತ. ಇದು ಮದನ್ ಮಹಲ್ ಕೋಟೆಗೆ ಹೋಗುವ ದಾರಿಯಲ್ಲಿದೆ. ಇದು ಅಡ್ಡಾದಿಡ್ಡಿಯಿರುವ ಕಲ್ಲುಗಳ ಸಮೂಹ. ಇವು ಹಲವು ಸಾವಿರ ವರ್ಷಗಳ ಹಿಂದೆ ಉಂಟಾದ ಜ್ವಾಲಾಮುಖಿಯಿಂದ ಆಗಿರುವಂತದ್ದು. ಇಷ್ಟು ವರ್ಷಗಳು ಕಳೆದರೂ ಕೂಡ ಇವು ಇನ್ನೂ ಹಾಗೇ ಉಳಿದಿರುವುದು...

    + ಹೆಚ್ಚಿಗೆ ಓದಿ
  • 12ಪಿಸಾನಹರಿ ಕಿ ಮದಿಯಾ

    ಪಿಸಾನಹರಿ ಕಿ ಮದಿಯಾ

    ಪಿಸಾನಹರಿ ಕಿ ಮದಿಯಾ ದಿಗಂಬರ ಜೈನ ಸಮುದಾಯದ ಪವಿತ್ರ ಯಾತ್ರಾಸ್ಥಳ. ಈ ಜೈನ ದೇವಾಲಯವು ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜಿನ ಸಮೀಪದಲ್ಲಿದೆ. ಇದು 500 ವರ್ಷಗಳ ಪುರಾತನ ದೇವಾಲಯ. ಇದು ತನ್ನ ವಾಸ್ತು ಶಿಲ್ಪ ಕಲೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಪುರಾಣಗಳ ಪ್ರಕಾರ ಈ ದೇವಾಲಯವನ್ನು ಒಬ್ಬ ಬಡ ಮಹಿಳೆಯು ಜೈನ...

    + ಹೆಚ್ಚಿಗೆ ಓದಿ
  • 13ದುಮ್ನಾ ಅಭಯಾರಣ್ಯ

    ದುಮ್ನಾ ಅಭಯಾರಣ್ಯ

    ದುಮ್ನಾ ಅಭಯಾರಣ್ಯವು ಜಬಲ್ಪೂರದಿಂದ 10 ಕಿಮೀ ದೂರದಲ್ಲಿದೆ. ಇದು ನಿಸರ್ಗ ಮತ್ತು ಪ್ರಾಣಿಪ್ರಿಯರಿಗೆ ನೆಚ್ಚಿನ ತಾಣ. ಇದು ದುಮ್ನಾ ವಿಮಾನ ನಿಲ್ದಾಣದ ಹಾದಿಯಲ್ಲಿದೆ. ಇದು 1058 ಹೆಕ್ಟೇರ್ ಪ್ರದೇಶದಲ್ಲಿದೆ. ಇಲ್ಲಿ ವಿವಿಧ ಜಾತಿಯ ವನ್ಯಮೃಗಗಳನ್ನು ಕಾಣಬಹುದು. ಇಲ್ಲಿಗೆ ಭೇಟಿ ನೀಡಲು ಅರಣ್ಯಾಧಿಕಾರಿಗಳ ಅನುಮತಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat