Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಹವಾಮಾನ

ಇಂದೋರ್ ಹವಾಮಾನ

ಇಂದೋರಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಮಾರ್ಚ್ ತಿಂಗಳುಗಳ ನಡುವಿನ ಅವಧಿಯು ಹೇಳಿ ಮಾಡಿಸಿದ ಸಮಯವಾಗಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಆಹ್ಲಾದಕರವಾಗಿರುತ್ತದೆ. ಇದರಿಂದಾಗಿ ಇಲ್ಲಿ ಸ್ಥಳ ವೀಕ್ಷಣೆ ಮಾಡಲು ಅನುಕೂಲಕರವಾಗಿರುತ್ತದೆ. ಪ್ರವಾಸಿಗರು ಸುಡುವ ಬಿಸಿಲಿನ ಗೊಡವೆಯಿಲ್ಲದೆ ನೆಮ್ಮದಿಯಾಗಿ ಇಲ್ಲಿ ಸ್ಥಳವೀಕ್ಷಣೆ ಮಾಡಬಹುದು.

ಬೇಸಿಗೆಗಾಲ

ಇಂದೋರಿನಲ್ಲಿ ಬಿರು ಬಿಸಿಲಿನ ಬೇಸಿಗೆಯನ್ನು ನಾವು ನೋಡಬಹುದು. ಏಪ್ರಿಲ್‍ನಿಂದ ಜೂನ್‍ವರೆಗೆ ಇಲ್ಲಿ ನಿರಂತರವಾಗಿ ಏರುವ ತಾಪಮಾನವನ್ನು ನಾವು ನೋಡಬಹುದು. ಅದರಲ್ಲಿಯೂ ಮೇ ತಿಂಗಳಿನಲ್ಲಿ ಇಲ್ಲಿ ಉಷ್ಣಾಂಶ ತನ್ನ ತುತ್ತ ತುದಿಯನ್ನು ತಲುಪಿರುತ್ತದೆ. ಇಲ್ಲಿ ಬೇಸಿಗೆಯಲ್ಲಿ ಉಷ್ಣಾಂಶವು 35 ರಿಂದ 40 ಡಿಗ್ರಿಯಿರುತ್ತದೆ. ಆದರೆ ಮೇನಲ್ಲಿ ಇದು 45 ಡಿಗ್ರಿ ತಲುಪಿರುತ್ತದೆ.

ಮಳೆಗಾಲ

ಇಂದೋರಿನಲ್ಲಿ ಮಳೆಗಾಲವು ಬೇಸಿಗೆಯ ಬಿಸಿಲನ್ನು ತಣಿಸಲೆಂದು ಬರುವಂತೆ ಬರುತ್ತದೆ. ಇಲ್ಲಿ ಮಳೆಗಾಲವು ಜುಲೈನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಈ ಪ್ರಾಂತ್ಯದಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳ ಪ್ರಭಾವದಿಂದಾಗಿ ಮಿತವಾದ ಮಳೆ ಬೀಳುತ್ತದೆ. ಇಲ್ಲಿ ಸರಾಸರಿ 30 - 35 ಇಂಚಿನಷ್ಟು ಮಳೆ ಬೀಳುತ್ತದೆ.

ಚಳಿಗಾಲ

ಚಳಿಗಾಲದ ಸಮಯದಲ್ಲಿ ಇಂದೋರಿನಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ಇಲ್ಲಿ ಚಳಿಗಾಲವು ನವೆಂಬರಿನಿಂದ ಫೆಬ್ರವರಿಯವರೆಗೆ ಇರುತ್ತದೆ. ರಾತ್ರಿಯ ವೇಳೆಯಲ್ಲಿ ಇಲ್ಲಿನ ಉಷ್ಣಾಂಶವು 10 ಡಿಗ್ರಿಯಿರುತ್ತದೆ. ಜನವರಿಯಲ್ಲಿ ಇಲ್ಲಿ ಚಳಿಯು ತನ್ನ ತುತ್ತತುದಿಯನ್ನು ತಲುಪಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು 2 ಡಿಗ್ರಿ ಸೆಲ್ಶಿಯಸ್ ತಲುಪಿರುತ್ತದೆ. ಚಳಿಗಾಲವು ಇಂದೋರಿಗೆ ಭೇಟಿ ನೀಡಲು ಹೇಳಿ ಮಾಡಿಸಿದ ಸಮಯವಾಗಿರುತ್ತದೆ.