Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂಫಾಲ್ » ಹವಾಮಾನ

ಇಂಫಾಲ್ ಹವಾಮಾನ

ನೀವು ಇಂಫಾಲ್ ನಗರಕ್ಕೆ ಭೇಟಿ ನೀಡಲು ಯೋಜನೆ ಹಾಕಿದ್ದರೆ  ಪ್ರಯಾಣಕ್ಕೆ ಅತ್ಯುತ್ತಮ ಕಾಲ ಪ್ರಮುಖ ಪ್ರವಾಸಿ ಋತುವಾದ ಬೇಸಿಗೆಯ ತಿಂಗಳುಗಳ ಅವಧಿ. ಮಾನ್ಸೂನ್ ನಲ್ಲಿ ತೀವ್ರವಾದ ಮಳೆಯಿಂದಾಗಿ ಇಲ್ಲಿನ ಕೆಲವು ಸ್ಥಳಗಳಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಬಹುದು. ಆದಾಗ್ಯೂ, ನೀವು ಸಾಹಸಿಗರಾಗಿದ್ದರೆ ಕೊರೆಯುವ ಚಳಿಗೆ ಮೈಯೊಡ್ಡಿ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಬಹುದು!

ಬೇಸಿಗೆಗಾಲ

ಇಲ್ಲಿ ಬೇಸಿಗೆ ಮಾರ್ಚ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ತಾಪಮಾನವು ಗರಿಷ್ಠ 30 ಡಿಗ್ರಿ ಸೆ.ಮತ್ತು ಕನಿಷ್ಠ 12 ಡಿಗ್ರಿ.ಸೆ ದಾಖಲಾಗುವ ಜೂನ್ ತಿಂಗಳ ತನಕ ಮುಂದುವರಿಯುತ್ತದೆ. ಮೇ ತಿಂಗಳಿನಲ್ಲಿ ತಾಪಮಾನ 30 ಡಿ.ಸೆ ಆಸುಪಾಸಿನಲ್ಲಿ ದಾಖಲಾಗುತ್ತಿದ್ದು ಇದು ಅತ್ಯಂತ ಉಷ್ಣತೆ ಹೊಂದಿರುವ ತಿಂಗಳು. ಇದು ವರ್ಷದ ಈ ಸಮಯದಲ್ಲಿ ಅತ್ಯಂತ ತೇವದಿಂದ ಕೂಡಿರುವ ತಿಂಗಳೂ ಕೂಡ ಆಗಿದೆ.

ಮಳೆಗಾಲ

ಇಂಫಾಲ್ ನಲಿ ಜುಲೈ ತಿಂಗಳಿನಲ್ಲಿ ಆರಂಭವಾದ ಮಳೆಗಾಲವು ಅಕ್ಟೋಬರ್ ತಿಂಗಳಿನಲ್ಲಿ ಕೊನೆಗೊಳ್ಳುವುದರ ಮೂಲಕ  ವಸಂತ ಕಾಲ ಮುಗಿಯುತ್ತದೆ. ವಿಶೇಷವಾಗಿ  ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ 20 ಸೆಂಟಿಮೀಟರ್ ವರೆಗೆ ಮಳೆಯಾಗುತ್ತಿದ್ದು ಈ ತಿಂಗಳುಗಳನ್ನು ಭಾರಿ ಪ್ರಮಾಣದ ಮಳೆಯಾಗುವ ತಿಂಗಳುಗಳು ಎಂದೇ ಪರಿಗಣಿಸಲಾಗಿದೆ.

ಚಳಿಗಾಲ

ಜನವರಿ ತಿಂಗಳಿನಲ್ಲಿ ಇಂಫಾಲ್ ನಲ್ಲಿ ಭಾರಿ ಚಳಿಗಾಲ ಆರಂಭ. ಈ ಸಮಯದಲ್ಲಿ ತಾಪಮಾನವು  0 ಡಿ.ಸೆ ವರೆಗೆ ಕುಸಿಯುತ್ತಿದ್ದು ಅತೀ ಹೆಚ್ಚು ಚಳಿಯಾಗುತ್ತದೆ. ದಿನದ ತಾಪಮಾನ 25 ಡಿಗ್ರಿ.ಸೆ ನಷ್ಟು ದಾಖಲಾಗುತ್ತದೆ. ಚಳಿಗಾಲವು ನವೆಂಬರ್ತಿಂಗಳಿನಲ್ಲಿ ಆರಂಭವಾಗುತ್ತದೆ ಮತ್ತು ಫೆಬ್ರವರಿಯ ಕೊನೆಯವರೆಗೂ ಮುಂದುವರಿಯುತ್ತದೆ. ಈ ಸಮಯದಲ್ಲಿ ಬೀಸುವ ಶೀತಲ ಮಾರುತಗಳು ನಗರವನ್ನೇ ತಣ್ಣಗಾಗಿಸುತ್ತವೆ.