Search
 • Follow NativePlanet
Share
ಮುಖಪುಟ » ಸ್ಥಳಗಳು» ಹುಬ್ಬಳ್ಳಿ

ಹುಬ್ಬಳ್ಳಿ-ಒಂದು ಅವಳಿನಗರ

21

 

 

ಹುಬ್ಬಳ್ಳಿ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಒಂದು ಮತ್ತು ಇದನ್ನು ಧಾರವಾಡದ ಅವಳಿ ನಗರದ ಎಂದು ಕರೆಯಲಾಗುತ್ತದೆ. ಇದು ಕರ್ನಾಟಕದ ಧಾರವಾಡ ಜಿಲ್ಲೆಯ ಆಡಳಿತದ ರಾಜಧಾನಿಯೂ ಆಗಿದೆ. ಹುಬ್ಬಳ್ಳಿಯು ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರವಾಗಿದೆ ಮತ್ತು ಕೈಗಾರಿಕೆ, ವಾಹನ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದು ಬೆಂಗಳೂರಿನ ನಂತರದ ಸ್ಥಾನವನ್ನು ಪಡೆದಿದೆ.

ಕನ್ನಡ ಭಾಷೆಯಲ್ಲಿ "ಹುಬ್ಬಳ್ಳಿ" ಎಂದರೆ "ಹೂಬಿಡುವ ಬಳ್ಳಿ" ಇದರಿಂದ ಹುಬ್ಳಿ ಎಂಬ ಪದ ಹುಟ್ಟಿಕೊಂಡಿತು. ಹುಬ್ಬಳ್ಳಿ ಐತಿಹಾಸಿಕ ನಗರ ಮತ್ತು ಚಾಲುಕ್ಯರ ಅವಧಿಯಿಂದಲೂ ಅಸ್ತಿತ್ವದಲ್ಲಿದ್ದ ನಗರ. ಹಿಂದೆ ಈ ನಗರಕ್ಕೆ 'ರಾಯರ ಹುಬ್ಬಳ್ಳಿ' ಅಥವಾ 'ಎಲೆಯ ಪುರವದ ಹಳ್ಳಿ' ಮತ್ತು"ಪುರ್ಬಳ್ಳಿ" ಹೆಸರುಗಳು ಇದ್ದವು. ವಿಜಯನಗರ ರಾಜರ ಆಳ್ವಿಕೆಯಲ್ಲಿ, ರಾಯರ ಹುಬ್ಬಳ್ಳಿ ಹತ್ತಿ, ಪೆಟ್ಲುಪ್ಪು ಮತ್ತು ಕಬ್ಬಿಣದ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು.

ಇತಿಹಾಸದ ಒಂದು ನೋಟ

 

ಹುಬ್ಬಳ್ಳಿಯು ಮರಾಠರು, ಮೊಘಲರು ಮತ್ತು ಬ್ರಿಟಿಷರ ದಾಳಿಗೆ ಸದಾ ಗುರಿಯಾಗುತ್ತಿತ್ತು. ಬ್ರಿಟಿಷರು ಇಲ್ಲಿ ಒಂದು ಕಾರ್ಖಾನೆಯನ್ನು ಸ್ಥಾಪಿಸಿದ್ದರು. ಅದನ್ನು 1675ರಲ್ಲಿ ಶಿವಾಜಿ ಕೊಳ್ಳೆ ಹೊಡೆದನು. ಹುಬ್ಬಳ್ಳಿ ಸ್ವಲ್ಪ ಕಾಲ ಮೊಘಲರ ಸವಣೂರು ನವಾಬ್ ಆಳ್ವಿಕೆಗೆ ಒಳಪಟ್ಟಿತು ಮತ್ತು ದುರ್ಗದಬೈಲ್ ನ ಸುತ್ತಮುತ್ತ ಬಸಪ್ಪಶೆಟ್ಟಿ ಎಂಬ ವ್ಯಾಪಾರಿ ಹೊಸ ನಗರವನ್ನು ನಿರ್ಮಿಸಿದ್ದನು. ಇದು 1755-56ರ ಅವಧಿಯಲ್ಲಿ ಮರಾಠರಿಂದ ವಶಪಡಿಸಿಕೊಳ್ಳಲ್ಪಟ್ಟಿತು ಮತ್ತು ಈ ಮಧ್ಯೆ ಹೈದರ್ ಅಲಿ ಸಹ ಈ ಪ್ರದೇಶವನ್ನು ವಶಪಡಿಸಿಕೊಂಡಿದ್ದನು, ಆದರೆ ಮರಾಠರು 1790ರಲ್ಲಿ ಇದನ್ನು ಮರಳಿ ಪಡೆದರು.

1817 ರಲ್ಲಿ ಹಳೆಯ ಹುಬ್ಬಳ್ಳಿ ಬ್ರಿಟಿಷ್ ನಿಯಂತ್ರಣದಲ್ಲಿ ಬಂದಿತು ಮತ್ತು 1820 ರಲ್ಲಿ ಹೊಸ ಹುಬ್ಬಳ್ಳಿ ಸಹ ಅದನ್ನೇ ಅನುಸರಿಸಿತು. 1880 ರಲ್ಲಿ, ಬ್ರಿಟಿಷರು ಹುಬ್ಬಳ್ಳಿಯಲ್ಲಿ ಒಂದು ರೈಲ್ವೆ ಕಾರ್ಯಾಗಾರವನ್ನು ಪ್ರಾರಂಭಿಸಿದರು ಇದು ಈ ಸ್ಥಳವನ್ನು ಪ್ರಸಿದ್ಧ ಕೈಗಾರಿಕಾ ಪ್ರದೇಶವನ್ನಾಗಿ ರೂಪಾಂತರಗೊಳಿಸಿತು. ಇಂದು, ಹುಬ್ಬಳ್ಳಿ ತನ್ನ ವಿವಿಧ ಹತ್ತಿ ಗಿರಣಿ ಮತ್ತು ಸಂಸ್ಕರಣೆ ಗಿರಣಿಗಳು ಹಾಗೂ ತನ್ನ ಜವಳಿ ಉದ್ಯಮಗಳಿಂದ ಪ್ರಸಿದ್ಧವಾಗಿದೆ.

ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಹತ್ತಿ ಮತ್ತು ಕಡಲೆಕಾಯಿಗಳನ್ನು ಪ್ರಮುಖ ಬೆಳೆಗಳಾಗಿ ಬೆಳೆಯುವುದರಿಂದ ಇದು ಕರ್ನಾಟಕದಲಿ ಹತ್ತಿ ಮತ್ತು ಕಡಲೆಕಾಯಿ ವ್ಯಾಪಾರದ ಪ್ರಮುಖ ಕೇಂದ್ರವಾಗಿದೆ. ಹುಬ್ಬಳ್ಳಿಯು ನೈರುತ್ಯ ರೈಲ್ವೆ ವಲಯ ಮತ್ತು ಹುಬ್ಬಳ್ಳಿ ವಿಭಾಗದ ಕೇಂದ್ರ ಕಚೇರಿಯಾಗಿದೆ.

ಪ್ರವಾಸಿಗರಿಗಾಗಿ ಹುಬ್ಬಳ್ಳಿಯಲ್ಲಿ ಏನೇನಿದೆ

ಹುಬ್ಬಳ್ಳಿ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಪ್ರಮುಖ ಪ್ರವಾಸಿಗರ ಆಕರ್ಷಣೆಯ ತಾಣವಾಗಿ ಹೊರಹೊಮ್ಮಿದೆ. ಹುಬ್ಬಳ್ಳಿ ಅತಿ ಪ್ರಖ್ಯಾತ ಪ್ರವಾಸಿ ಆಕರ್ಷಣೆಗಳು ಭವಾನಿಶಂಕರ ದೇವಸ್ಥಾನ, ಅಸರ್, ಸಿದ್ಧಾರೂಡ ಮಠ, ಉಣಕಲ್ ಕೆರೆ, ನೃಪತುಂಗ ಬೆಟ್ಟ ಮತ್ತು ಗ್ಲಾಸ್ ಹೌಸ್.

ಹುಬ್ಬಳ್ಳಿ ತನ್ನ ಭೇಟಿಯಲ್ಲಿ ತನ್ನ ಅವಳಿ ನಗರ ಧಾರವಾಡದ ಪ್ರಯಾಣಕ್ಕೂ ಅವಕಾಶ ಕಲ್ಪಿಸುತ್ತದೆ. ನವಿಲು ತೀರ್ಥ, ಸಾತೊಡ್ಡಿ, ಸೊಗಲ ಮತ್ತು ಮಾಥೋಡ ಜಲಪಾತಗಳು, ಇಸ್ಕಾನ ದೇವಸ್ಥಾನ, ಸೈಕ್ಸ್ ಪಾಯಿಂಟ್ ಮತ್ತು ಉಳವಿಗಳಿಗೂ ಭೇಟಿ ನೀಡಬಹುದು. ಇಲ್ಲಿಂದ ಇನ್ನೂ ಅನೇಕ ಪ್ರವಾಸಿ ತಾಣಗಳಿಗೆ ಪ್ರಯಾಣ ಬೆಳೆಸಬಹುದು ಉದಾಹರಣೆಗೆ ಬಿಜಾಪುರ, ಬೀದರ್, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ಹಂಪಿ.

ನಗರವು ಮಲೆನಾಡು ಮತ್ತು ಡೆಕ್ಕನ್ ಪ್ರಸ್ಥಭೂಮಿ ಮಧ್ಯದಲ್ಲಿದ್ದು, ಉಷ್ಣವಲಯದ ತೇವ ಮತ್ತು ಒಣ ಹವಾಮಾನವನ್ನು ಅದರ ಭೇಟಿಮಾಡುವವರಿಗೆ ಒದಗಿಸುತ್ತದೆ. ಮತ್ತು ಅಕ್ಟೋಬರ್ ನಿಂದ ಫೆಬ್ರವರಿ ಹುಬ್ಬಳ್ಳಿ ಭೇಟಿಗೆ ಅತ್ಯಂತ ಸೂಕ್ತ ಕಾಲ.ಇದು ಎಲ್ಲಾ ಕರ್ನಾಟಕದ ಪ್ರಮುಖ ಸ್ಥಳಗಳಿಗೆ ಮತ್ತು ನೆರೆಯ ರಾಜ್ಯಗಳಿಗೆ ರೈಲುಗಳ ಮತ್ತು ರಸ್ತೆಗಳ ಮೂಲಕ ಸಂಪರ್ಕ ಹೊಂದಿದೆ ಆದ್ದರಿಂದ ಹುಬ್ಬಳ್ಳಿಯನ್ನು ಸುಲಭವಾಗಿ ತಲುಪಬಹುದು. ಹುಬ್ಬಳ್ಳಿ ವಿಮಾನ ನಿಲ್ದಾಣವು ಸ್ಥಳೀಯ ವಿಮಾನ ನಿಲ್ದಾಣವಾಗಿದೆ ಮತ್ತು ಬೆಂಗಳೂರು, ಹೈದರಾಬಾದ್ ಹಾಗು ಮುಂಬೈಯ ನಿರಂತರ ವಿಮಾನಗಳು ಸಹಾಯವನ್ನು ಒದಗಿಸುತ್ತದೆ.

ಹುಬ್ಬಳ್ಳಿ ಪ್ರಸಿದ್ಧವಾಗಿದೆ

ಹುಬ್ಬಳ್ಳಿ ಹವಾಮಾನ

ಉತ್ತಮ ಸಮಯ ಹುಬ್ಬಳ್ಳಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಹುಬ್ಬಳ್ಳಿ

 • ರಸ್ತೆಯ ಮೂಲಕ
  ಹುಬ್ಬಳ್ಳಿಯು ಮಂಗಳೂರು ,ಪುಣೆ, ಮೈಸೂರು, ಬೆಂಗಳೂರು, ಗೋವಾ ಮತ್ತು ಮುಂಬೈ ಬಸ್ ಸೇವೆ ಮೂಲಕ ಸಂಪರ್ಕ ಹೊಂದಿದೆ ವೋಲ್ವೋ ಬಸ್ಗಳು, ಖಾಸಗಿ ಬಸ್ಗಳು ಮತ್ತು ಸರ್ಕಾರಿ ಸ್ವಾಮ್ಯದ NWKRTC (ಉತ್ತರ ವೆಸ್ಟ್ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ಬಸ್ ಹುಬ್ಬಳ್ಳಿಯಿಂದ ಸತತವಾಗಿ ಸಂಚರಿಸುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಹುಬ್ಬಳ್ಳಿ ರೈಲು ನಿಲ್ದಾಣ, ಹುಬ್ಬಳ್ಳಿ ಹತ್ತಿರದ ರೈಲು ತುದಿ 4 ಕಿಮೀ ದೂರ ಇದೆ. ಹುಬ್ಬಳ್ಳಿ ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ ಹಾಗೂ ಕೆಲವು ಉದಾಹರಣೆಗೆ ಮಂಗಳೂರು ಮತ್ತು ಬೆಂಗಳೂರು. ಪ್ರವಾಸಿಗರು ಇಲ್ಲಿ ನಗರದ ತಲುಪಲು ಟ್ಯಾಕ್ಸಿಗಳು ಪಡೆದುಕೊಳ್ಳಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಹುಬ್ಬಳ್ಳಿ ವಿಮಾನ ನಿಲ್ದಾಣ ಭಾರತದ ಪ್ರಮುಖ ನಗರಗಳಿಂದ ಹುಬ್ಬಳ್ಳಿಯನ್ನು ಸಂಪರ್ಕಿಸುವ ಹತ್ತಿರದ ವಿಮಾನ ನಿಲ್ದಾಣ. ಇದು ನಗರದಿಂದ 7 ಕಿಮೀ ದೂರ ಇದೆ. ದಬೊಲಿಮ್ ವಿಮಾನ ನಿಲ್ದಾಣ, ಗೋವಾ , ಹತ್ತಿರದ ಅಂತಾರಾಷ್ಟ್ರೀಯ ವಿಮಾನ, ಸುಮಾರು 264 ಕಿಮೀ ದೂರದಲ್ಲಿ ಇದೆ. ಈ ವಿಮಾನ ನಿಲ್ದಾಣವು ಪ್ರಮುಖ ಭಾರತೀಯ ನಗರಗಳ ಹಾಗೂ ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕ ಹೊಂದಿದೆ. ಹಲವಾರು ಋತುಮಾನದ ಚಾರ್ಟರ್ ವಿಮಾನಯಾನಗಳನ್ನು ಗಮ್ಯಸ್ಥಾನವನ್ನು ತಲುಪಲು ದಬೊಲಿಮ್ ವಿಮಾನನಿಲ್ದಾಣದಿಂದ ಸೇವೆ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
03 Jul,Sun
Return On
04 Jul,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
03 Jul,Sun
Check Out
04 Jul,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
03 Jul,Sun
Return On
04 Jul,Mon