Search
  • Follow NativePlanet
Share
» »ಯಾಣದಿಂದ ಗೋಕರ್ಣದವರೆಗೆ ರೋಮಾಂಚಕ ಪ್ರವಾಸ

ಯಾಣದಿಂದ ಗೋಕರ್ಣದವರೆಗೆ ರೋಮಾಂಚಕ ಪ್ರವಾಸ

By Vijay

ಸ್ನೇಹಿತರೊಂದಿಗೊಡಗೂಡಿ ಪ್ರತಿ ಕ್ಷಣಗಳಲ್ಲೂ ರೋಮಾಂಚನವನ್ನುಂಟು ಮಾಡುವ ಒಂದು ಅದ್ಭುತ ಪ್ರವಾಸ ಕೈಗೊಳ್ಳುವ ತವಕ ನಿಮ್ಮಲ್ಲಿದೆಯೆ? ಹಾಗಿದ್ದರೆ ಯಾಕೊಮ್ಮೆ ದಟ್ಟಾರಣ್ಯದಲ್ಲೊಂದು ಟ್ರೆಕ್ ಪ್ರವಾಸ ನಂತರ ಉತ್ಸಾಹಗೊಳಿಸುವ ಕಡಲ ತಡಿಗೊಂದು ಭೇಟಿ ನೀಡಬಾರದು?

ಈ ಪ್ರವಾಸವು ಪ್ರತಿಯೊಂದು ಹಂತಗಳಲ್ಲೂ ನಿಮಗೆ ಮಹದಾನಂದವನ್ನುಂಟು ಮಾಡಬಲ್ಲುದು. ನೀವು ಕರ್ನಾಟಕದ ಯಾವ ಭಾಗಗಳಿಂದೆ ಆಗಲಿ ಈ ಒಂದು ಅದ್ಭುತ ಪ್ರವಾಸವನ್ನು ಸುಲಭವಾಗಿ ಮಾಡಬಹುದು. ಹೌದು, ಯಾಣ ಎಂಬ ಅದ್ಭುತ ತಾಣಕ್ಕೊಂದು ಟ್ರೆಕ್ ಮಾಡಿ ನಂತರ ಪ್ರಖ್ಯಾತ ಗೋಕರ್ಣಕ್ಕೆ ಭೇಟಿ ನೀಡುವುದು ಒಂದು ಅವಿಸ್ಮರಣೀಯ ಪ್ರವಾಸವಾಗಬಹುದು.

ವಿಶೇಷ ಲೇಖನ : ಹುಬ್ಬಳ್ಳಿಯಿಂದೊಂದು ಸುಂದರವಾದ ಪ್ರವಾಸ

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಯಾಣವು ತನ್ನಲ್ಲಿರುವ ಅಸ್ವಾಭಾವಿಕವಾದ ಎರಡು ಬೃಹತ್ ಗಾತ್ರದ ಬೆಟ್ಟದಂತಿರುವ ರಚನೆಗಳಿಗೆ ಪ್ರಸಿದ್ಧವಾಗಿದೆ. ನಾವು ಸಾಮಾನ್ಯವಾಗಿ ನೋಡುವಂತೆ ಬೆಟ್ಟಗಳಲ್ಲಿ ಕಂಡುಬರುವ ಹಾಗೆ ಇಲ್ಲಿ ಕಲ್ಲಿನ ಪದರಗಳು ವಿಶಿಷ್ಟ ರೀತಿಯಲ್ಲಿ ಕಂಡುಬರುತ್ತವೆ. ಇದನ್ನು ನೋಡುವುದೆ ಒಂದು ವಿಶಿಷ್ಟ ಅನುಭವ.

ಈ ಪ್ರವಾಸಕ್ಕೆ ಆಧಾರ (ಬೇಸ್) ಸ್ಥಳವಾಗಿ ಶಿರಸಿಯನ್ನು ಆಯ್ದುಕೊಳ್ಳಬಹುದು. ಉತ್ತರ ಕರ್ನಾಟಕ ಭಾಗದಿಂದ ಬರುವುದಾದರೆ ಹುಬ್ಬಳ್ಳಿಯಿಂದ ಶಿರಸಿಗೆ ದೊರೆಯುವ ಬಸ್ಸುಗಳ ಮೂಲಕ ಬರಬಹುದು. ದಕ್ಷಿಣ ಕರ್ನಾಟಕ ಭಾಗದಿಂದ ಅದರಲ್ಲೂ ವಿಶೇಷವಾಗಿ, ಬೆಂಗಳೂರು, ಮಂಗಳೂರು ಮುಂತಾದ ಪ್ರಮುಖ ಪಟ್ಟಣಗಳಿಂದ ಶಿರಸಿಗೆ ಸಾಕಷ್ಟು ಬಸ್ಸುಗಳು ಲಭ್ಯವಿದೆ. ಇನ್ನೂ ಬಾಡಿಗೆ ಟ್ಯಾಕ್ಸಿ ಅಥವಾ ನಿಮ್ಮ ಸ್ವಂತ ವಾಹನಗಳ ಮೂಲಕ ತೆರಳುತ್ತಿದ್ದರೆ ಶಿರಸಿಯನ್ನು ತಲುಪಿ ಅಲ್ಲಿಂದ ಈ ಪ್ರವಾಸ ಕೈಗೊಳ್ಳಬಹುದು.

ವಿಶೇಷ ಲೇಖನ : ಕಾರಿನಲ್ಲಿ ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ

ಒಂದೊಮ್ಮೆ ಶಿರಸಿಗೆ ತಲುಪಿದರೆ ಅಲ್ಲಿಂದ ಬಾಡಿಗೆ ಟ್ಯಾಕ್ಸಿ ಅಥವಾ ಕಾರನ್ನು ಪಡೆದು ಯಾಣಕ್ಕೆ ಪ್ರಯಾಣಿಸಬಹುದು. ಇಲ್ಲವೆಂದಿದ್ದಲ್ಲಿ ಶಿರಸಿಯಿಂದ ಹೆಗಡೆಕಟ್ಟದ ಮೂಲಕ ಮತ್ತಿಘಟ್ಟ, ದೇವನಳ್ಳಿಗೆ ಹೋಗುವ ಬಸ್ಸನ್ನು ಹಿಡಿದು "ವಡ್ಡಿ ಕ್ರಾಸ್" ಎಂಬ ನಿಲ್ದಾಣದಲ್ಲಿಳಿಯಬೇಕು. ಇಲ್ಲಿಂದ ಆರು ಕಿ.ಮೀ ಗಳಷ್ಟು ಟ್ರೆಕ್ ಮಾಡುವ ಮೂಲಕ ಯಾಣವನ್ನು ತಲುಪಬಹುದು.

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿಗಳ ಸುಂದರ ಪರಿಸರದಲ್ಲಿ ನೆಲೆಸಿರುವ ಯಾಣವು ಶಿರಸಿಯಿಂದ 40 ಕಿ.ಮೀ ಹಾಗೂ ಕುಮಟಾದಿಂದ 20 ಕಿ.ಮೀ ಗಳಷ್ಟು ದೂರದಲ್ಲಿದೆ. ಅಸಾಧಾರಣ ಹಾಗೂ ಅಸ್ವಾಭಾವಿಕ ಬಂಡೆಗಳಿಂದ ರಚನೆಗೊಂಡಿರುವ ಯಾಣದಲ್ಲಿರುವ ಶಿಲೆಗಳ ಬೃಹತ್ ಗಾತ್ರದ ರಚನೆಯು ಪರಿಸರ ಪ್ರೇಮಿಗಳನ್ನು ಸೇರಿದಮ್ತೆ ಅನೇಕ ಪ್ರವಾಸಿರನ್ನೂ ಸಹ ಆಕರ್ಷಿಸುತ್ತದೆ.

ಚಿತ್ರಕೃಪೆ: Srinivas G

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಪುರಾತತ್ವ ಶಾಸ್ತ್ರ ಸಂಶೋಧಕರಿಗೆ, ಶಿಲಾ ಶಾಸ್ತ್ರಜ್ಞರಿಗೆ, ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿರುವ ಈ ಶಿಲಾ ರಚನೆಗಳು ತಮ್ಮ ಸುತ್ತಲೂ ಕೌತುಕಮಯವಾದ ದಂತ ಕಥೆಗಳನ್ನೂ ಸಹ ಹೊಂದಿವೆ.

ಚಿತ್ರಕೃಪೆ: Vinodtiwari2608

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಇಲ್ಲಿ ಆ ರೀತಿಯ ಎರಡು ರಚನೆಗಳಿದ್ದು, ಸ್ಥಳೀಯವಾಗಿ ಇವುಗಳನ್ನು ಭೈರವೇಶ್ವರ ಶಿಖರ ಹಾಗೂ ಮೋಹಿನಿ ಶಿಖರಗಳೆಂದು ಕರೆಯಲಾಗುತ್ತದೆ. ಭೈರವೇಶ್ವರ ಶಿಖರ 390 ಅಡಿಗಳಷ್ಟು ಎತ್ತರವಾಗಿದ್ದರೆ, ಮೋಹಿನಿ ಶಿಖರವು ಸುಮಾರು 300 ಅಡಿಗಳಷ್ಟು ಎತ್ತರವಾಗಿದೆ.

ಚಿತ್ರಕೃಪೆ: Vinodtiwari2608

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಯಾಣವು ಪ್ರಕೃತಿಯ ಮಡಿಲಿನಲ್ಲಿ, ದಟ್ಟ ಅರಣ್ಯದಲ್ಲಿ, ಸೊಂಪಾಗಿ ಬೆಳೆದ ಹಸಿರಿನ ಸಿರಿಯಲ್ಲಿ ನೆಲೆಸಿರುವ ಸುಂದರ ತಾಣವಾಗಿದ್ದು ಯುವ ಜನಾಂಗದವರ ಪಾಲಿಗೆ ಅದ್ಭುತವಾದ ಟ್ರೆಕ್ಕಿಂಗ್ ತಾಣವಾಗಿದೆ. ಕೇವಲ ಟ್ರೆಕ್ಕಿಂಗ್ ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳ ಜನರ ಪಾಲಿಗೆ ಇದೊಂದು ಧಾರ್ಮಿಕ ಕ್ಷೇತ್ರವೂ ಹೌದು.

ಚಿತ್ರಕೃಪೆ: Vinodtiwari2608

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಏಕೆಂದರೆ ಯಾಣದ ಭೈರವೇಶ್ವರ ಬೆಟ್ಟದ ಕೆಳಗೆ ಗುಹೆಯೊಂದಿದ್ದು ಅಲ್ಲಿ ಸ್ವಯಂಭು ಶಿವಲಿಂಗವನ್ನು ಕಾಣಬಹುದು. ಅಷ್ಟೆ ಅಲ್ಲ ಮೇಲಿನ ತೇವಭರಿತ ರಚನೆಗಳಿಂದ ನೀರಿನ ಹನಿಯು ಲಿಂಗಕ್ಕೆ ಅಭಿಶೇಕ ಮಾಡುತ್ತಿರುವ ರೀತಿಯಲ್ಲಿ ಬೀಳುತ್ತವೆ. ಶಿವನೆ ಸ್ವತಃ ಇಲ್ಲಿದ್ದಾನೆಂದು ನಂಬಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳೂ ಸಹ ಈ ತಾಣಕ್ಕೆ ಭೇಟಿ ನೀಡುತ್ತಾರೆ. ಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿ ರಥೋತ್ಸವವನ್ನು ಸಹ ಆಯೋಜಿಸಲಾಗುತ್ತದೆ.

ಚಿತ್ರಕೃಪೆ: Vinodtiwari2608

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಯಾಣಕ್ಕೆ ಗುರುತರವಾದ ಹೆಸರನ್ನು ತಂದು ಕೊಟ್ಟಿರುವ ಈ ವಿಶಿಷ್ಟ ಸ್ಟ್ಯಾಲಕ್ಟೈಟ್ ಹಾಗೂ ಸ್ಟ್ಯಾಲಗಾಮೈಟ್ಸ್ ಶಿಲಾ ರಚನೆಗಳು ತಮ್ಮ ಅಸಾಧಾರಣವಾದ ರಚನೆಗಳಿಂದ ಪ್ರವಾಸಿಗರನ್ನು ಭೂವಿಜ್ಞಾನಿಗಳನ್ನು ಆಕರ್ಷಿಸುತ್ತದೆ. ಭೈರವೇಶ್ವರ ಶಿಖರಕ್ಕೆ ಒಂಬತ್ತು ಅಡಿಯ ನೈಸರ್ಗಿಕವಾದ ಒಳ ಪ್ರವೇಶ ಹಾದಿಯಿದ್ದು, ಈ ಗುಹೆಯೊಳಗೆ ಹೋದಾಗ ಕಂಚಿನ ಚಂಡಿಕಾ ದೇವಿಯ ವಿಗ್ರಹವನ್ನು ಕಾಣಬಹುದು.

ಚಿತ್ರಕೃಪೆ: Vinodtiwari2608

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಅಲ್ಲದೆ ನೈಸರ್ಗಿಕ ನೀರಿನ ತೊರೆಯೊಂದಿದ್ದು ಅದನ್ನು ಸ್ಥಳೀಯವಾಗಿ ಗಂಗೋದ್ಭವ ಎಂದು ಕರೆಯಲಾಗುತ್ತದೆ. ಮುಂದೆ ಈ ನೀರಿನ ತೊರೆಯು ಉಪ್ಪಿನಪಟ್ಟಣ ಎಂಬಲ್ಲಿ ಅಘನಾಶಿನಿ ನದಿಯಲ್ಲಿ ಸೇರುತ್ತದೆ. ವಿಜ್ಞಾನಿಗಳು ಇಲ್ಲಿ ನೈಸರ್ಗಿಕವಾಗಿ ಮೂಡಿದ ಶಿವಲಿಂಗವು ಸ್ಟ್ಯಾಲಕ್ಟೈಟ್ ಹಾಗೂ ಸ್ಟ್ಯಾಲಗಾಮೈಟ್ಸ್ ಗಳಿಂದ ರಚನೆಯಗಿದೆಯೆಂದು ವಿಶ್ಲೇಷಿಸಿದ್ದಾರೆ.

ಚಿತ್ರಕೃಪೆ: Nvvchar

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಮತ್ತೊಂದು ವಿಶೇಷವೆಂದರೆ ಯಾಣದಲ್ಲಿರುವ ಈ ಪ್ರಸಿದ್ಧ ಎರಡು ಕಪ್ಪು ಬೆಟ್ಟಗಳ ಹಿಂದೆ ಒಂದು ಕುತೂಹಲಕಾರಿ ದಂತ ಕಥೆ ಅಡಗಿದೆ. ಅದರ ಪ್ರಕಾರ, ಹಿಂದೆ ಒಬ್ಬ ದೃಷ್ಟ ಅಸುರನಿದ್ದನು. ಅವನು ಸಾಕಷ್ಟು ಕಠಿಣ ತಪಸ್ಸನ್ನಾಚರಿಸಿ ದೇವರಿಂದ ಒಂದು ಅದ್ಭುತವಾದ ಹಾಗೂ ಅಷ್ಟೆ ಭಯಂಕರವಾದ ವರ ಪಡೆದಿದ್ದನು. ಆ ವರದಂತೆ ಆತನು ಯಾರ ತಲೆಯ ಮೇಲೆ ಕೈಯಿಟ್ಟರೂ ಅವರು ಕ್ಷಣ ಮಾತ್ರದಲ್ಲೆ ಸುಟ್ಟು ಭಸ್ಮರಾಗುತ್ತಿದ್ದರು.

ಚಿತ್ರಕೃಪೆ: Vinodtiwari2608

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಅಂತೆಯೆ ಅವನಿಗೆ ಭಸ್ಮಾಸುರ ಎಂಬ ಹೆಸರು ಬಂದಿತ್ತು. ಸಾಕಷ್ಟು ಉಪಟಳಗಳ ನಂತರ ಒಂದೊಮ್ಮೆ ಅವನು ತನ್ನ ಕೈಯನ್ನು ಶಿವನ ತಲೆ ಮೇಲಿಟ್ಟು ನೋಡಬೇಕೆಂಬ ಕುತೂಹಲ ಉಂಟಾಗಿ ಶಿವನನ್ನು ಸಮೀಪಿಸಿದನು. ಇದರ ಪರಿಣಾಮವನ್ನರಿತ ಮಹಾ ವಿಷ್ಣು ಇದನ್ನು ತಪ್ಪಿಸುವ ಉದ್ದೇಶದಿಂದ ತಾನು ಅತ್ಯಂತ ಸುಂದರಿ ಎನ್ನಬಹುದಾದ ಮೋಹಿನಿಯ ವೇಶ ಧರಿಸಿ ಭಸ್ಮಾಸುರನ ಮುಂದೆ ಬಂದನು.

ಚಿತ್ರಕೃಪೆ: Vinodtiwari2608

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಆ ಮೋಹಿನಿಯನ್ನು ಕಂಡೊಡನೆಯೆ ಭಸ್ಮಾಸುರನಿಗೆ ಮೋಹವುಂಟಾಗಿ ಅವಳನ್ನು ಪಡೆಯಲು ತವಕಿಸಿದನು. ಆದರೆ ಮೋಹಿನಿಯು ಮೊದಲಿಗೆ ತನ್ನ ಹಾಗೆ ನೃತ್ಯ ಮಾಡಿ ತನ್ನನ್ನು ಪ್ರಸನ್ನಗೊಳಿಸಿದಾಗ ಮಾತ್ರವೆ ತಾನು ಭಸ್ಮಾಸುರನನ್ನು ಮದುವೆಯಾಗುವುದಾಗಿ ಹೇಳಿ ಶರತ್ತು ವಿಧಿಸಿದಳಿ.

ಚಿತ್ರಕೃಪೆ: Vinodtiwari2608

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಇದಕ್ಕೊಪ್ಪಿದ ಭಸ್ಮಾಸುರ ಅವಳಂತೆ ನರ್ತಿಸಲಾರಂಭಿಸಿದ. ಹೀಗೆ ನೃತ್ಯವು ಅತ್ಯುನ್ನತ ಘಟ್ಟ ತಲುಪಿದಾಗ ಮೋಹಿನಿ ರೂಪದಲ್ಲಿದ್ದ ವಿಷ್ಣು ನೃತ್ಯದ ಒಂದು ಭಂಗಿಯಾಗಿ ತನ್ನ ಕೈಯನ್ನು ತನ್ನ ತಲೆಯ ಮೇಲಿಟ್ಟುಕೊಂಡನು. ಇದರ ಪರಿಣಾಮವನ್ನು ಊಹಿಸಲಾರದ ಭಸ್ಮಾಸುರ ತಾನು ತನ್ನ ಕೈಯನ್ನು ತನ್ನ ತಲೆಯ ಮೇಲಿಟ್ಟುಕೊಂಡನು. ಅಲ್ಲಿಗೆ ಅವನ ಕಥೆ ಮುಗಿಯಿತು. ತಕ್ಷಣ ಬೆಂಕಿಯಲ್ಲಿ ಊರಿದು ಭಸ್ಮವಾಗಿ ಹೋಗಿಬಿಟ್ಟನು.

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಅದಕ್ಕೆ ಕುರುಹು ಎಂಬಂತೆ ಇಂದಿಗೂ ಯಾಣದ ಬೆಟ್ಟಗಳ ಅಕ್ಕ ಪಕ್ಕದಲ್ಲಿ ಬೂಧಿಯ ಹಾಗೆ ಗೋಚರಿಸುವ ಸಡಿಲವಾದ ಕಪ್ಪು ಮಣ್ಣನ್ನು ಕಾಣಬಹುದು. ಭಕ್ತರ ನಂಬಿಕೆಯಂತೆ ಅದು ಭಸ್ಮಾಸುರನ ಬೂಧಿಯಂತೆ.

ಚಿತ್ರಕೃಪೆ: Doc.aneesh

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಭಕ್ತರ ನಡುವೆ ಇದು ಭೈರವ ಕ್ಷೇತ್ರ ಎಂದೂ ಸಹ ಪ್ರಸಿದ್ಧಿಯಾಗಿದ್ದು ಮಹಾಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿ ಹತ್ತು ದಿನಗಳ ಕಾಲ ಅದ್ದೂರಿಯಾದ ಉತ್ಸವವನ್ನು ಆಚರಿಸಲಾಗುತ್ತದೆ. ನಂತರ ಕೊನೆಯಲ್ಲಿ ಗುಹೆಯೊಳಗೆ ದೊರೆಯುವ ಪವಿತ್ರ ನೀರನ್ನು ಭಕ್ತಾದಿಗಳು ತೆಗೆದುಕೊಂಡು ಗೋಕರ್ಣಕ್ಕೆ ಭೇಟಿ ನೀಡಿ ಅಲ್ಲಿನ ಮಹಾಬಲೇಶ್ವರನಿಗೆ ಅಭಿಷೇಕ ಮಾಡ್ಡುತ್ತಾರೆ. ಇದರಿಂದ ಸರ್ವ ಪಾಪ ಕರ್ಮಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.

ಚಿತ್ರಕೃಪೆ: Vinodtiwari2608

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಈ ಒಂದು ನಿಟ್ಟಿನಲ್ಲಿ ಇಲ್ಲಿ ಒಂದು ಜನಪ್ರೀಯ ನಾಣ್ಣುಡಿಯು ಪ್ರಚಲಿತದಲ್ಲಿದೆ. ಅದರ ಪ್ರಕಾರ, "ಸೊಕ್ಕಿದ್ದವನು ಯಾಣಕ್ಕೆ ಹೋಗುತ್ತಾನೆ, ದುಡ್ಡಿರೋನು ಗೋಕರ್ಣಕ್ಕೆ ಹೋಗುತ್ತಾನೆ". ಇಲ್ಲಿ ಸೊಕ್ಕು ಎಂದರೆ ಅನ್ಯತಾ ಭಾವಿಸದೆ ಗಟ್ಟಿ ಗುಂಡಿಗೆ ಅಥವಾ ಧೈರ್ಯ ಎಂದು ಅರ್ಥೈಸಿಕೊಳ್ಳಬೇಕು.

ಚಿತ್ರಕೃಪೆ: Vinodtiwari2608

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಈ ಅದ್ಭುತ ಬೆಟ್ಟ ರಚನೆಗಳಿಂದ ಸುಮಾರು ಎಂಟು ಕಿ.ಮೀ ದೂರ ಸಾಗಿದರೆ ಒಂದು ನಯನ ಮನೋಹರವಾದ ಜಲಪಾತ ಕೇಂದ್ರವನ್ನು ಭೇಟಿ ಮಾಡಬಹುದು. ಇದನ್ನು ವಿಭೂತಿ ಜಲಪಾತ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Shash89

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಯಾಣವು ಶಿರಸಿಯಿಂದ 40 ಕಿ.ಮೀ ಹಾಗೂ ಕುಮಟಾದಿಂದ 25 ಕಿ.ಮೀ ಗಳಷ್ಟು ದೂರದಲ್ಲಿದೆ. ಶಿರಸಿಯಿಂದ ಕುಮಟಾದೆಡೆ ಸಾಗುವಾಗ ದಟ್ಟ ಅರಣ್ಯದಲ್ಲೊಂದು ಏಕ ಪಥದ ಅಡ್ಡವಾದ ಮಾರ್ಗವನ್ನು ನಿರ್ಮಿಸಲಾಗಿದ್ದು ಅಲ್ಲಿಂದ ಯಾಣಕ್ಕೆ ತಲುಪಬಹುದು. ಈ ಮಾರ್ಗ ನಿರ್ಮಿಸಿದಾಗಿನಿಂದ ಟ್ರೆಕ್ ಮಾರ್ಗದ ಉದ್ದವು ಮೊದಲಿನ ಹಾಗಿರದೆ ಗಣನೀಯವಾಗಿ ಕಡಿಮೆಯಾಗಿದ್ದು ಇಂದು ಕೇವಲ ಅರ್ಧ ಕಿ.ಮೀ ಗಳಷ್ಟು ಮಾತ್ರವೆ ಚಾರಣ ಮಾಡಿ ಯಾಣದ ಶಿಲಾ ಬೆಟ್ಟಗಳಿಗೆ ಭೇಟಿ ನೀಡಬಹುದು.

ಚಿತ್ರಕೃಪೆ: Nvvchar

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಯಾಣದಲ್ಲಿ ಶಿಲಾ ಬೆಟ್ಟಗಳನ್ನು, ಗುಹೆಯನ್ನು, ಚಾರಣವನ್ನು ಹಾಗೂ ವಿಭೂತಿ ಜಲಪಾತವನ್ನು ಸಂದರ್ಶಿಸಿ ಆನಂದಿಸಿದ ನಂತರ ನೈರುತ್ಯಕ್ಕೆ ರಾಷ್ಟ್ರೀಯ ಹೆದ್ದಾರಿ 17 ಅನ್ನು ಬಳಸಿಕೊಂಡು ಸುಮಾರು 30 ಕಿ.ಮೀ ಗಳಷ್ಟು ಕ್ರಮಿಸಿ ಕರ್ನಾಟಕದ ಅದ್ಭುತ ಕೋಟೆಗಳ ಪೈಕಿ ಒಂದಾದ ಮಿರ್ಜಾನ್ ಕೋಟೆಗೆ ಭೇಟಿ ನೀಡಬಹುದು.

ಚಿತ್ರಕೃಪೆ: Lisa.davis

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಈ ಕೋಟೆಯ ನಿರ್ಮಾಣದ ಕುರಿತು ಗೊಂದಲಗಳಿದ್ದು ಒಂದು ಮೂಲದ ಪ್ರಕಾರ ಇದರ ನಿರ್ಮಾಣ 1200 ರ ಸಂದರ್ಭದಲ್ಲಾಗಿದ್ದು, ಇದರ ನಿರ್ಮತೃ ನವಾಯತ್ ಅಸ್ಪರ್ ಬತುತಾ ಅಂತಿದ್ದರೆ ಇನ್ನೊಂದು ಮೂಲಗಳ ಪ್ರಕಾರ ವಿಜಯನಗರ ಸಾಮ್ರಾಜ್ಯದಡಿಯಲ್ಲಿದ್ದ ಈ ಕೋಟೆಯನ್ನು ಗೇರುಸೊಪ್ಪದ ರಾಣಿ ಚೆನ್ನಭೈರವದೇವಿ ನಿರ್ಮಿಸಿ ಸುಮಾರು 54 ವರ್ಷಗಳ ಕಾಲ ಆಡಳಿತ ನಡೆಸಿದ್ದಳೆನ್ನುತ್ತದೆ.

ಚಿತ್ರಕೃಪೆ: Sydzo

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಇತಿಹಾಸ ಏನೆ ಇರಲಿ ಆದರೆ ಈ ಕೋಟೆಯು ಒಂದು ಸುಂದರವಾದ ಐತಿಹಾಸಿಕ ರಚನೆಯಾಗಿದ್ದು ಕರಾವಳಿಯ ಅದ್ಭುತ ಸೊಬಗನ್ನು ತನ್ನ ಸುತ್ತಮುತ್ತಲಿನಲ್ಲಿ ಮೈಗೂಡಿಸಿಕೊಂಡಿರುವುದನ್ನು ನೋಡಿದಾಗ ಆಗುವ ಆನಂದ ಅಷ್ಟಿಷ್ಟಲ್ಲ.

ಚಿತ್ರಕೃಪೆ: Gandharva S

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಮಿರ್ಜಾನ್ ಕೋಟೆಯಿಂದ ವಾಯವ್ಯಕ್ಕೆ ರಾಷ್ಟ್ರೀಯ ಹೆದ್ದಾರಿ 17 ಅನ್ನು ಬಳಸಿಕೊಂಡು ಇನ್ನೂ 22 ಕಿ.ಮೀ ಕ್ರಮಸಿ, ಕರ್ನಾಟಕದ ಮತ್ತೊಂದು ಪ್ರವಾಸ ಪ್ರಸಿದ್ಧ ಕ್ಷೇತ್ರವಾದ ಗೋಕರ್ಣವನ್ನು ತಲುಪಬಹುದು.

ಚಿತ್ರಕೃಪೆ: Nechyporuk Iuliia

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣವು ಒಂದು ಪುಣ್ಯ ಕ್ಷೇತ್ರ ವಾಗಿರುವುದಲ್ಲದೆ ಅಲ್ಲಿರುವ ಸುಂದರ ಕಡಲ ತೀರಗಳ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಹೊಂದಿದೆ . ಈ ಸ್ಥಳವು ಎರಡು ನದಿಗಳಾದ ಅಗನಾಶಿನಿ ಮತ್ತು ಗಂಗಾವಳಿಯ ಸಂಗಮದ ಸಾನಿಧ್ಯದಲ್ಲಿದ್ದು ಆ ನದಿಗಳು ಒಂದಾಗುವ ಆಕಾರವು ಗೋವಿನ ಕಿವಿಯ ಆಕಾರವನ್ನು ಹೊಂದಿರುವ ಕಾರಣ ಈ ಸ್ಥಳಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Infoayan

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಗೋಕರ್ಣದಲ್ಲಿ ಶಿವನು ಮಹಾಬಲೇಶ್ವರನಾಗಿ ನೆಲೆಸಿದ್ದು ಅಸಂಖ್ಯಾತ ಭಕ್ತರು ಶಿವನ ದರುಶನಕ್ಕಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಿವಲಿಂಗವು ರಾವಣನಿಂದ ತಂದಿದುದಾಗಿದೆ ಎಂಬ ನಂಬಿಕೆಯಿದೆ.

ಚಿತ್ರಕೃಪೆ: Sbblr geervaanee

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಕ್ಷೇತ್ರದಲ್ಲಿ ಮಹಾಬಲೇಶ್ವರನ ದೇವಾಲಯ ಹೊರತುಪಡಿಸಿ ಮಹಾ ಗಣಪತಿ ದೇವಾಲಯ , ಭದ್ರಕಾಳಿ ದೇವಾಲಯ, ವರದರಾಜ ದೇವಾಲಯ ಮತ್ತು ವೆಂಕಟರಮಣ ದೇವಾಲಯಗಳನ್ನೂ ಸಹ ಕಾಣಬಹುದು. ಗೋಕರ್ಣದಲ್ಲಿರುವ ಶ್ರೀ ಸೀತಾ ರಾಮ ಲಕ್ಷ್ಮಣ ದೇವಾಲಯ.

ಚಿತ್ರಕೃಪೆ: Miran Rijavec

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಗೋಕರ್ಣವು ಅತ್ಯಂತ ವೇಗವಾಗಿ ಪ್ರಿಯವಾಗುತ್ತಿರುವ ಪ್ರವಾಸಿ ತಾಣವಾಗಿದ್ದು ಗೋವಾದ ಅನೇಕ ಸಮುದ್ರ ತೀರಗಳನ್ನು ಹಿಮ್ಮೆಟ್ಟಿಸುವಂತಹ ಸುಂದರವಾದ ಹಲವು ಕರಾವಳಿ ಪ್ರದೇಶಗಳನ್ನು ಹೊಂದಿದೆ. ಕುಡ್ಲೆ ಸಮುದ್ರ ತೀರ, ಗೋಕರ್ಣ ತೀರ, ಹಾಫ್ ಮೂನ್ ಸಮುದ್ರ ತೀರ, ಪ್ಯಾರಾಡೈಸ್ ತೀರ ಹಾಗೂ ಓಂ ಸಮುದ್ರ ತೀರಗಳು ಇಲ್ಲಿರುವ ಐದು ಪ್ರಮುಖ ಕಡಲ ತೀರಗಳಾಗಿವೆ.

ಚಿತ್ರಕೃಪೆ: Andy Wright

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಕುಡ್ಲೆ ಕರಾವಳಿ ಪ್ರದೇಶವು ಅತ್ಯಂತ ದೊಡ್ಡ ತೀರವಾಗಿದ್ದು ಸೂಕ್ತ ಸಮಯವಾದ ನವೆಂಬರ್ ನಿಂದ ಫೆಬ್ರವರಿಯಲ್ಲಿ ಜನಭರಿತವಾಗಿರುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಇದು ಈಜುವುದಕ್ಕೆ ಬಹಳ ಅಪಾಯಕಾರಿ ಸ್ಥಳವಾಗಿದೆ.

ಚಿತ್ರಕೃಪೆ: Abhijit Shylanath

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಓಂ ಸಮುದ್ರ ತೀರವು ಹಿಂದೂಗಳ ಚಿಹ್ನೆ ಯಾದ ಓಂ ಆಕಾರದಲ್ಲಿರುವ ಸುಂದರವಾದ ಕರಾವಳಿ ರೇಖೆಯನ್ನು ಹೊಂದಿದೆ. ಈ ಬೃಹತ್ ಚಿಹ್ನೆಯ ಸುತ್ತಾಕಾರ ಸಣ್ಣ ಕೊಳವನ್ನು ನಿರ್ಮಿಸಿದ್ದು ಇದು ಈಜು ಬಾರದ ಜನರಿಗೂ ಜಲಕ್ರೀಡೆಯಾಡಲು ಸುರಕ್ಷಿತ ಸ್ಥಳವಾಗಿದೆ.

ಚಿತ್ರಕೃಪೆ: Sankara Subramanian

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಸಮುದ್ರ ತೀರಗಳ ಹೊರತಾಗಿ ಗೋಕರ್ಣವು ಹಿಂದೂ ಧರ್ಮದವರಿಗೆ ಒಂದು ಪವಿತ್ರ ತೀರ್ಥ ಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದಿದೆ. ಈ ಸ್ಥಳದಲ್ಲಿ ಗಂಗವಲಿ ಹಾಗೂ ಅಘನಾಶಿನಿ ನದಿಗಳು ಒಂದು ವಿಶಿಷ್ಟ ಆಕಾರದಲ್ಲಿ ಸಂಗಮಗೊಳ್ಳುತ್ತವೆ ಹಾಗೂ ಆ ಆಕಾರವು ಮೇಲಿನಿಂದ ನೋಡಿದಾಗ ಗೋವಿನ ಕಿವಿಯ ಹಾಗೆ ಗೋಚರಿಸುತ್ತದೆ. ಅದೆ ಕಾರಣದಿಂದ ಈ ಸ್ಥಳಕ್ಕೆ ಗೋವಿನ ಕರ್ಣ ಅರ್ಥಾತ್ ಗೋಕರ್ಣ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Mrjohncummings

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಇಲ್ಲಿನ ಮಹಾಬಲೇಶ್ವರ ದೇವಸ್ಥಾನವು ಪ್ರಭಾವಶಾಲಿಯಾಗಿದ್ದು ಶಿವನಿಗೆ ಮುಡಿಪಾಗಿದೆ. ಶಿವನು ಇಲ್ಲಿ ಆತ್ಮಲಿಂಗದ ರೂಪದಲ್ಲಿ ನೆಲೆಸಿದ್ದಾನೆಂದು ಹೇಳಲಾಗಿದೆ. ಇದು ಮುಕ್ತಿ ಸ್ಥಳವಾಗಿಯೂ ಹೆಸರುವಾಸಿಯಾಗಿದೆ. ಅಂದರೆ ಮೃತ ಪಟ್ಟ ವ್ಯಕ್ತಿಯ ಸಂಬಂಧಿಕರು ಈ ಕ್ಷೇತ್ರಕ್ಕೆ ಬಂದು ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದರೆ ಆ ವ್ಯಕ್ತಿಗೆ ಮುಕ್ತಿ ಪ್ರಾಪ್ತಿಯಾಗುತ್ತದೆಂದು ನಂಬಲಾಗಿದೆ.

ಚಿತ್ರಕೃಪೆ: Nvvchar

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಗೋಕರ್ಣದಲ್ಲಿರುವ, ಸುತ್ತಲೂ ಹಲವಾರು ದೇಗುಲಗಳನ್ನು ಹೊಂದಿರುವ ಕೋಟಿತೀರ್ಥ ಕಲ್ಯಾಣಿಯು ಮತ್ತೊಂದು ವಿಶೇಷವಾಗಿದೆ. ವಿಸರ್ಜನೆ ಮುಂತಾದ ಧಾರ್ಮಿಕ ವಿಧಿ ವಿಧಾನಗಳಿಗೆಂದು ಈ ಪವಿತ್ರ ಕೊಳವನ್ನು ಉಪಯೋಗಿಸಲಾಗುತ್ತದೆ. ಇದು ಬಹಳ ಆಳವಾಗಿದ್ದು ಅಪಾಯಕಾರಿಯಾಗಿದೆ.

ಚಿತ್ರಕೃಪೆ: Miran Rijavec

ಯಾಣದಿಂದ ಗೋಕರ್ಣದೆಡೆಗೆ:

ಯಾಣದಿಂದ ಗೋಕರ್ಣದೆಡೆಗೆ:

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಬಳಿಯಿರುವ ರಥ ಬೀದಿ ಹಾಗೂ ಇಲ್ಲಿ ಜರುಗುವ ರಥೋತ್ಸವದಲ್ಲಿ ಬಳಸಲಾಗುವ ರಥ ಅಥವಾ ತೇರು.

ಚಿತ್ರಕೃಪೆ: Nvvchar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X