Search
  • Follow NativePlanet
Share
» »ಆನೆ ಸವಾರಿ ಮಾಡ್ಬೇಕಾ ಹಾಗಾದ್ರೆ ಇಲ್ಲಿಗೆ ಹೋಗಿ

ಆನೆ ಸವಾರಿ ಮಾಡ್ಬೇಕಾ ಹಾಗಾದ್ರೆ ಇಲ್ಲಿಗೆ ಹೋಗಿ

By Manjula Balaraj Tantry

ಕಬಿನಿ ಜಲಾಶಯವು ಸ್ಥಳೀಯರಿಗೆ ಒಂದು ಪಿಕ್ನಿಕ್ ತಾಣವಾಗಿ ರೂಪುಗೊಂಡಿದೆ. ಅನೇಕ ಪ್ರಯಾಣಿಗರು ತಾಂತ್ರಿಕ ಉತ್ಸಾಹಿಗಳಾಗಿದ್ದು ಅವರು ಜಗತ್ತಿನಾದ್ಯಂತ ಪರಿಶೋಧಿಸುವ ರಚನೆಗಳನ್ನು ಪ್ರೀತಿಸುತ್ತಾರೆ. ಕಬಿನಿ ಸುತ್ತಲೂ ಇನ್ನೂ ಅನೇಕ ಸ್ಥಳಗಳಿವೆ, ಇದು ಕಾವೇರಿ ನದಿಯ ಉಪನದಿಯಾಗಿದೆ. ಜಂಗಲ್ ಸಫಾರಿ, ಆನೆ ಸವಾರಿ, ಬೋಟಿಂಗ್ ಮಾಡಬೇಕೆಂದಿದ್ದರೆ ಕಬಿನಿಗೆ ಭೇಟಿ ನೀಡಿ.

1 ಜಂಗಲ್ ಸಫಾರಿ

1 ಜಂಗಲ್ ಸಫಾರಿ

Nirjhar bera

ಇಲ್ಲಿಯ ವಿವಿಧ ಬಗೆಯ ಸಸ್ಯ ಹಾಗೂ ಪ್ರಾಣಿಗಳನ್ನು ನೋಡ ಬಯಸುವ ಪರಿಸರ ಪ್ರೇಮಿಗಳಿಗೆ ಜಂಗಲ್ ಸಫಾರಿ ಒಂದು ಅದ್ಬುತ ಅವಕಾಶ. ಪ್ರವಾಸಿಗರು ಇಲ್ಲಿ ಪ್ರವಾಸ ನಿರ್ವಾಹಕರ ಮಾರ್ಗದರ್ಶನದಲ್ಲಿ ಕೆಲವು ಸಂತೋಷದಾಯಕ ಸಮಯವನ್ನು ಇಲ್ಲಿ ಕಳೆಯಬಹುದು.

2 ಎಲಿಫೆಂಟ್ (ಆನೆ) ಸಫಾರಿ

2 ಎಲಿಫೆಂಟ್ (ಆನೆ) ಸಫಾರಿ

SheranKhan2012

ಕೆಲವು ನಿರ್ಬಂಧಿತ ಪ್ರದೇಶಗಳಲ್ಲಿ ಬಸ್ಸುಗಳ ಪ್ರಯಾಣ ಇರುವುದಿಲ್ಲ ಆದುದರಿಂದ ಪ್ರವಾಸಿಗರು ಎಲಿಫೆಂಟ್ ಸಫಾರಿಯ ಭವ್ಯ ಅನುಭವವನ್ನು ಪಡೆಯಬಹುದಾಗಿದೆ. ಈ ಮೀಸಲು ಪ್ರದೇಶದಲ್ಲಿರುವ ಪಳಗಿದ ಆನೆಗಳ ಮೇಲೆ ಸವಾರಿ ಒಂದು ಸೊಗಸಾದ ಅನುಭವವಾಗಿದೆ.

3 ಬೋಟಿಂಗ್ (ದೋಣಿ ವಿಹಾರ)

3 ಬೋಟಿಂಗ್ (ದೋಣಿ ವಿಹಾರ)

PC: Jan Walldén

ಕಬಿನಿ ನೀರಿನಲ್ಲಿ ದೋಣಿವಿಹಾರ ಮಾಡುವುದೆಂದರೆ ಕಣ್ಣಿಗೆ ಒಂದು ಹಬ್ಬವೇ ಸರಿ ಇಲ್ಲಿಯ ಅದ್ಬುತವಾದ ನೋಟವು ಈ ವಿಹಾರಕ್ಕೆ ಮೆರುಗನ್ನು ತಂದುಕೊಡುತ್ತದೆ. ದಟ್ಟವಾದ ಕಾಡುಗಳ ಜೊತೆಗೆ ದೋಣಿ ವಿಹಾರ ಮಾಡುವಾಗ ಅನೇಕ ಪ್ರಾಣಿಗಳನ್ನು ಈ ನೈಸರ್ಗಿಕ ವಾಸಸ್ಥಾನದಲ್ಲಿ ಕಾಣಬಹುದಾಗಿದೆ. ಕಬಿನಿ ನದಿ ತನ್ನ ದಡದಲ್ಲಿ 55 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕಬಿನಿ ಸಂರಕ್ಷಿತ ಅರಣ್ಯ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುತ್ತದೆ.

4 ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನ

4 ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನ

PC:Dineshkannambadi

ಸಸ್ಯ ಮತ್ತು ಪ್ರಾಣಿಗಳ ವೈವಿಧ್ಯತೆಯಿಂದಾಗಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಭಾರತದ ಅತ್ಯಂತ ಪ್ರಸಿದ್ಧ ವನ್ಯಜೀವಿ ನಿಕ್ಷೇಪಗಳಲ್ಲಿ ಒಂದಾಗಿದೆ. ಇದು ಕೇವಲ ಸಸ್ಯಗಳು ಮತ್ತು ಪೊದೆಗಳು ಮತ್ತು ಬಹು ಜಾತಿಯಷ್ಟೇ ಅಲ್ಲ, ಸಸ್ತನಿಗಳು, ಸರೀಸೃಪಗಳು, ಕ್ರಾವ್ ಲರ್ ಗಳು ಮತ್ತು ಅಪರೂಪದ ಪಕ್ಷಿಗಳಿಗೆ ಕೂಡಾ ನೆಲೆಯಾಗಿದೆ. ಈ ರಾಷ್ಟ್ರೀಯ ಉದ್ಯಾನವನವು 270ಕ್ಕೂ ಹೆಚ್ಚಿನ ತಳಿಯ ಪಕ್ಷಿಗಳ ನ್ನು ಹೊಂದಿದ್ದು ಅವುಗಳಲ್ಲಿ ಕೆಲವು ಅಳಿವಂಚಿನಲ್ಲಿರುವ ಓರಿಯಂಟಲ್ ವೈಟ್ ಬ್ಯಾಕ್ಡ್ ವಲ್ಚರ್, ಚುಕ್ಕೆಯ ಹದ್ದುಗಳು, ತೋಳಗಳು, ಹಾವುಗಳು ನೀಲಗಿರಿ ವುಡ್ - ಪಾರಿವಾಳಗಳು ಇತ್ಯಾದಿಗಳನ್ನೊಳಗೊಂಡಿದೆ.

5 ಕಬಿನಿ ಅಣೆಕಟ್ಟು

5 ಕಬಿನಿ ಅಣೆಕಟ್ಟು

PC: Kiranmadhu.e

ಕಬಿನಿ ಆಣೆಕಟ್ಟು ದಕ್ಷಿಣ-ಪಶ್ಚಿಮ ಭಾರತದ ಕರ್ನಾಟಕ ರಾಜ್ಯದಲ್ಲಿರುವ ಮೈಸೂರು ಜಿಲ್ಲೆಯಲ್ಲಿದೆ. ಇದು ಕಬಿನಿ ನದಿಗೆ ಕಟ್ಟಲಾಗಿದ್ದು ದಕ್ಷಿಣ ಭಾರತದಲ್ಲಿರುವ ಇದು ಕಾವೇರಿ ನದಿಯ ಪ್ರಮುಖ ಉಪನದಿಯಾಗಿದೆ. ಈ ಅಣೆಕಟ್ಟು ಸರ್ಗೂರ್ ಪಟ್ಟಣಕ್ಕೆ ಸಮೀಪವಿರುವ ಕಬಿನಿ ಜಲಾಶಯದ ಅಗಾಧ ಜಲಾಶಯವನ್ನು ರೂಪಿಸುತ್ತದೆ ಮತ್ತು ಇದು ಮೈಸೂರುನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ. ಈ ಸ್ಥಳವು ಹಚ್ಚ ಹಸಿರಿನ ಸುತ್ತಮುತ್ತಲಿನ ಪ್ರದೇಶದಿಂದ ಕೂಡಿದೆ ಮತ್ತು ಸುಂದರವಾದ ನದಿ ನೀರು ತನ್ನ ಗಮ್ಯಸ್ಥಾನದ ಕಡೆಗೆ ಪ್ರಶಾಂತವಾಗಿ ಹರಿಯುತ್ತದೆ. ಇಲ್ಲಿ ಗೆ ಭೇಟಿ ಕೊಡುವವರು ಶಾಂತಿಯುತವಾದ ವಾತಾವರಣವನ್ನು ಅನುಭವಿಸುತ್ತಾರೆ.

6 ಬ್ರಹ್ಮಗಿರಿ(ಬೆಟ್ಟ)

6 ಬ್ರಹ್ಮಗಿರಿ(ಬೆಟ್ಟ)

Christian Ferrer

ಬ್ರಹ್ಮಗಿರಿ ಪಶ್ಚಿಮ ಘಟ್ಟದ ಒಂದು ಪರ್ವತ ಶ್ರೇಣಿಯಾಗಿದ್ದು ಇದು ಕರ್ನಾಟಕದ ಕೊಡಗು ಜಿಲ್ಲೆಯ ಗಡಿ ಪ್ರದೇಶದಲ್ಲಿದೆ. ಇದು ದಕ್ಷಿಣದಲ್ಲಿ ಕೇರಳ ರಾಜ್ಯದ ವಯನಾಡ್ ಜಿಲ್ಲೆಯಲ್ಲಿ ಗಡಿಯನ್ನು ರೂಪಿಸುತ್ತದೆ.ಸಮುದ್ರ ಮಟ್ಟದಿಂದ 1,608 ಮೀಟರ್ ಎತ್ತರದಲ್ಲಿರುವುದರಿಂದ ಬ್ರಹ್ಮಗಿರಿ ಬೆಟ್ಟವು ಕಾಡುಗಳಿಂದ ಕೂಡಿದೆ ಮತ್ತು ಬಹಳಷ್ಟು ವನ್ಯಜೀವಿಗಳನ್ನು ಹೊಂದಿದೆ.ಬ್ರಹ್ಮಗಿರಿಯ ಕೇರಳದ ಭಾಗದಲ್ಲಿ, ವಿಷ್ಣುವಿಗೆ ಅರ್ಪಿತವಾದ ತಿರುನೆಲ್ಲಿ ದೇವಸ್ಥಾನವು ನೆಲೆಸಿದೆ.

7 ಹೋಗುವುದು ಹೇಗೆ?

7 ಹೋಗುವುದು ಹೇಗೆ?

PC:Sudharshan Solairaj

ಹತ್ತಿರದ ರೈಲ್ವೆ ನಿಲ್ದಾಣ: ಮೈಸೂರು ರೈಲ್ವೇ ನಿಲ್ದಾಣದಿಂದ ಕೇವಲ 10 ಕಿ.ಮೀ ದೂರದಲ್ಲಿದೆ.
ಹತ್ತಿರದ ಏರ್ಪೋರ್ಟ್: ಕಬಿನಿಯಿಂದ 250 ಕಿ.ಮೀ ದೂರದಲ್ಲಿ ಬೆಂಗಳೂರು ವಿಮಾನ ನಿಲ್ದಾಣವಿದೆ.

Read more about: kabini karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X