Search
  • Follow NativePlanet
Share
» »ವೇಡಂತಾಂಗಳ್ ಎಂಬ ಲವಲವಿಕೆಯ ಅಂಗಳ

ವೇಡಂತಾಂಗಳ್ ಎಂಬ ಲವಲವಿಕೆಯ ಅಂಗಳ

By Vijay

ಚೆನ್ನೈನಲ್ಲಿದ್ದಾಗ, ಇಲ್ಲವೆ ಚೆನ್ನೈಗೆ ಭೇಟಿ ನೀಡಿದಾಗ ಸಮಯಾವಕಾಶ ದೊರೆತರೆ, ಅದರಲ್ಲೂ ವಿಶೇಷವಾಗಿ ಚೆನ್ನೈ ನಗರ ಹೊರತು ಪಡಿಸಿ ಸುತ್ತಮುತ್ತಲಲ್ಲಿರುವ ಯಾವುದಾದರೂ ವಿಶಿಷ್ಟ ತಾಣಕ್ಕೆ ಭೇಟಿ ನೀಡಲು ಮನ ಹಂಬಲಿಸಿದರೆ ವೇಡಂತಾಂಗಳ್ ಎಂಬ ಸುಂದರ ಹಾಗೂ ವಿಶಿಷ್ಟವಾದ ಪಕ್ಷಿ ಧಾಮಕ್ಕೆ ಹೋಗಲು ಮರೆಯದಿರಿ.

ಟ್ರಾವಲ್ ಗುರು ಮೂಲಕ ಹೋಟೆಲ್ ಬುಕ್ಕಿಂಗ್ ಮೇಲೆ 40% ರಷ್ಟು ಕಡಿತ

ಈ ಚೊಕ್ಕಾದ, ಹಸಿರಿನಿಂದ ಕಂಗೊಳಿಸುವ ಧಾಮವು ಚೆನ್ನೈ ನಗರದಿಂದ 80 ಕಿ.ಮೀ ಗಳಷ್ಟು ದೂರದಲ್ಲಿದೆ. ರಸ್ತೆ ಮೂಲಕ ಚೆನ್ನೈಯಿಂದ ವೇಡಂತಾಂಗಳ್ ಗೆ ಬಹಳಷ್ಟು ಬಸ್ಸುಗಳಿವೆ. ಸರ್ಕಾರಿ ಬಸ್ಸು ಹಾಗೂ ಖಾಸಗಿ ಬಸ್ಸುಗಳು ಮಹಾಬಲಿಪುರಂ, ಕಾಂಚೀಪುರಂ ಮತ್ತು ಚೆಂಗಲ್ ಪೇಟ್ ಮೂಲಕ ಹಾದುಹೋಗುತ್ತದೆ. ವೇಡಂತಾಂಗಳ್ ಗೆ ಬಸ್ಸುಗಳ ಮೂಲಕ ಪ್ರಯಾಣಿಸುವುದು ಸುಲಭ ಹಾಗೂ ಹಣವನ್ನೂ ಉಳಿಸಬಹುದು.

ವಿಶೇಷ ಲೇಖನ : ಚಿಲಿಪಿಲಿ ಜುಟ್ಟುಗಳ ರಂಗನತಿಟ್ಟು

ಮೂಲತಃ ಈ ಪ್ರದೇಶದಲ್ಲಿ ಸಣ್ಣ ಪುಟ್ಟ ಕೆರೆಗಳಿದ್ದು ಇಂದು ಒಂದು ಬೃಹತ್ ಕೆರೆಯಾಗಿ ಅಲ್ಲಲ್ಲಿ ಚಿಕ್ಕ ಚಿಕ್ಕ ಗಿಡ ಮರಗಳಿಂದ ಆವೃತವಾಗಿರುವ ನಡುಗಡ್ಡೆಗಳನ್ನು ಕಾಣಬಹುದು. ಈ ರೀತಿಯ ಒಂದು ಸಹಜ ವ್ಯವಸ್ಥೆಯಿಂದಲೆ ಸಾಕಷ್ಟು ಪಕ್ಷಿಗಳು ಈ ಪ್ರದೇಶಕ್ಕೆ ಮಾರು ಹೋಗಿ ಇಲ್ಲಿಗೆ ವಲಸೆ ಬರುತ್ತವೆ.

ವೇಡಂತಾಂಗಳ್:

ವೇಡಂತಾಂಗಳ್:

ಶತಮಾನಗಳ ಹಿಂದೆ ರಾಜಮಹಾರಾಜರು ಬೇಟೆಗೆ ಹೋಗುತ್ತಿದ್ದ ಪ್ರದೇಶವಾಗಿದ್ದ ಕಾರಣದಿಂದಲೇ ಇರಬೇಕು ಈ ಪ್ರದೇಶಕ್ಕೆ ವೇಡಂತಾಂಗಳ್ ಎನ್ನುವ ಹೆಸರಿಟ್ಟಿದ್ದಾರೆ. ವೇಡಂತಾಂಗಳ್ ಎಂದರೆ ಬೇಟೆಗಾರನ ಹೆಲ್ಮೆಟ್(ಶಿರಸ್ತ್ರಾಣ) ಎಂದರ್ಥ.

ಚಿತ್ರಕೃಪೆ: Balaji.B

ವೇಡಂತಾಂಗಳ್:

ವೇಡಂತಾಂಗಳ್:

ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿರುವ ವೇಡಂತಾಂಗಳ್ ರಾಷ್ಟ್ರದ ಅತೀ ಪುರಾತನ ಹಾಗೂ ಜನಪ್ರಿಯ ಪಕ್ಷಿಧಾಮ. ಇಷ್ಟು ಮಾತ್ರವಲ್ಲದೆ ಸುಮಾರು 250 ವರ್ಷಗಳಿಂದ ಈ ಪಕ್ಷಿಧಾಮವನ್ನು ಸ್ಥಳೀಯ ನಿವಾಸಿಗಳೇ ವ್ಯವಸ್ಥಿತವಾಗಿ ಇಟ್ಟುಕೊಂಡಿದ್ದಾರೆ.

ಚಿತ್ರಕೃಪೆ: Balaji.B

ವೇಡಂತಾಂಗಳ್:

ವೇಡಂತಾಂಗಳ್:

ಚೆನ್ನೈಯಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ವೇಡಂತಾಂಗಳ್ 74 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಹರಡಿಕೊಂಡಿರುವ ಬೃಹತ್ ಪಕ್ಷಿಧಾಮ. ಚೆನ್ನೈನಿಂದ ರಸ್ತೆ ಮಾರ್ಗವಾಗಿ ಒಂದುವರೆ ಘಂಟೆಯಲ್ಲಿ ಈ ಪಕ್ಷಿಧಾಮವನ್ನು ತಲುಪಬಹುದು.

ಚಿತ್ರಕೃಪೆ: Vinoth Chandar

ವೇಡಂತಾಂಗಳ್:

ವೇಡಂತಾಂಗಳ್:

ಇಲ್ಲಿನ ಇತಿಹಾಸವನ್ನು ಕೆದಕಿದಾಗ ಈ ಬೃಹತ್ ಪ್ರದೇಶದಲ್ಲಿ ಸ್ಥಳೀಯ ರಾಜರು ಮತ್ತು ಭೂಮಾಲಿಕರು ಬೇಟೆಯಾಡುತ್ತಿದ್ದರಂತೆ. ಅದಕ್ಕಾಗಿಯೇ ಈ ಪ್ರದೇಶಕ್ಕೆ ವೇಡಂತಾಂಗಳ್ ಅಂದರೆ ಬೇಟೆಗಾರನ ಹೆಲ್ಮೆಟ್ ಎನ್ನುವ ಹೆಸರು ಬಂದಿದೆ.

ಚಿತ್ರಕೃಪೆ: Vinoth Chandar

ವೇಡಂತಾಂಗಳ್:

ವೇಡಂತಾಂಗಳ್:

ವೇಡಂತಾಂಗಳ್ ಪಕ್ಷಿಧಾಮವಾದರೂ ಕೂಡ ಈ ಪ್ರದೇಶಕ್ಕೆ ಮೆರಗು ಬಂದಿರುವುದು ಇಲ್ಲಿರುವ ಸಣ್ಣಪುಟ್ಟ ಕೆರೆಗಳು. ಈ ಕೆರೆಗಳಿಂದಾಗಿಯೇ ದೇಶವಿದೇಶಗಳಿಂದ ಪಕ್ಷಿಗಳು ವಲಸೆ ಬಂದು ಇಲ್ಲಿ ತಮ್ಮ ಸಂತತಿ ರೂಪಿಸುತ್ತದೆ.

ಚಿತ್ರಕೃಪೆ: Phoenix bangalore

ವೇಡಂತಾಂಗಳ್:

ವೇಡಂತಾಂಗಳ್:

ವೇಡಂತಾಂಗಳ್ ಅನ್ನು ಬ್ರಿಟಿಷರೇ ಪಕ್ಷಿಧಾಮವೆಂದು ಘೋಷಿಸಿದ್ದರು. 90ರ ದಶಕದ ಮಧ್ಯಭಾಗದಲ್ಲಿ ಸರ್ಕಾರ ಕೂಡ ಅಧಿಕೃತವಾಗಿ ಪಕ್ಷಿಧಾಮವೆಂದು ಘೋಷಿಸಿದ ಬಳಿಕ ಇದು ಪ್ರವಾಸಿ ತಾಣವಾಗಿ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿತು.

ಚಿತ್ರಕೃಪೆ: Johnjeevinth

ವೇಡಂತಾಂಗಳ್:

ವೇಡಂತಾಂಗಳ್:

ಈ ಪಕ್ಷಿಧಾಮವು ಬಹಳಷ್ಟು ಪಕ್ಷಿಗಳಿಗೆ ವಾಸಸ್ಥಾನವಾಗಿರುವುದು ಮಾತ್ರವಲ್ಲದೆ ಷವಲರ್, ನೀಲಿರೆಕ್ಕೆಯ ಟೀಲ್, ಬೂದು ಸಿಪಿಲೆ ಮತ್ತು ಗದ್ದೆಗೊರವ ಮೊದಲಾದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತದೆ.

ಚಿತ್ರಕೃಪೆ: Amit Kumar

ವೇಡಂತಾಂಗಳ್:

ವೇಡಂತಾಂಗಳ್:

ವೇಡಂತಾಂಗಳ್ ಪಕ್ಷಿಧಾಮವನ್ನು ವೀಕ್ಷಿಸಿದ ಬಳಿಕ 9 ಕಿ.ಮೀ. ಪ್ರಯಾಣಿಸಿದರೆ ಮತ್ತೊಂದು ಪಕ್ಷಿಧಾಮ ಕಾರ್ಕಿಲಿಯನ್ನು ಕೂಡ ನೋಡಬಹುದು. ಈ ಎರಡೂ ಪಕ್ಷಿಧಾಮಳಿಗೆ ಒಂದೇ ದಿನದಲ್ಲಿ ಭೇಟಿ ನೀಡಬಹುದಾಗಿದೆ.

ಚಿತ್ರಕೃಪೆ: Sudharsun Jayaraj

ವೇಡಂತಾಂಗಳ್:

ವೇಡಂತಾಂಗಳ್:

ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿರುವ ಅತ್ಯಂತ ಹಳೆಯ ಪಕ್ಷಿಧಾಮ ಮತ್ತು ಸ್ಥಳೀಯರ ಉಸ್ತುವಾರಿಯಲ್ಲಿಯೇ ಇದು ಇನ್ನೂ ಇರುವುದರಿಂದ ವೇಡಂತಾಂಗಳ್ ಪಕ್ಷಿಧಾಮವು ರಾಷ್ಟ್ರದೆಲ್ಲೆಡೆಯಿಂದ ಪಕ್ಷಿವೀಕ್ಷಕರು ಹಾಗೂ ಪಕ್ಷಿಶಾಸ್ತ್ರಜ್ಞರನ್ನು ಸೆಳೆಯಲು ಎರಡು ಪ್ರಮುಖ ಕಾರಣಗಳಾಗಿವೆ.

ಚಿತ್ರಕೃಪೆ: Thangaraj Kumaravel

ವೇಡಂತಾಂಗಳ್:

ವೇಡಂತಾಂಗಳ್:

ಒಂದೊಂದು ಋತುವಿನಲ್ಲಿ ಕಾಣಿಸಿಕೊಳ್ಳುವ ವಿವಿಧ ಜಾತಿಯ ವಲಸೆ ಪಕ್ಷಿಗಳು ಇಲ್ಲಿಗೆ ಬರುವ ಪಕ್ಷಿಪ್ರಿಯರು ಹಾಗೂ ಪಕ್ಷಿ ವೀಕ್ಷಕರನ್ನು ಆಯಸ್ಕಾಂತದಂತೆ ಸೆಳೆಯುತ್ತದೆ. ಟೀಲ್ ಗಳು, ಆಸ್ಟ್ರೇಲಿಯಾದ ಗ್ರೇ ಪೆಲಿಕನ್, ಶ್ರೀಲಂಕಾದ ಸ್ನೇಕ್ ಬರ್ಡ್, ಬೂದು ಬಕ, ತೆರೆದ ಕೊಕ್ಕಿನ ಕೊಕ್ಕರೆ, ಸೈಬೀರಿಯನ್ ಕೊಕ್ಕರೆ ಮತ್ತು ಸ್ಪಾಟ್ ಬಿಲ್ ಡಕ್ ಅನ್ನು ಇಲ್ಲಿನ ಪಕ್ಷಿಧಾಮದಲ್ಲಿ ಕಾಣಬಹುದು.

ಚಿತ್ರಕೃಪೆ: Thangaraj Kumaravel

ವೇಡಂತಾಂಗಳ್:

ವೇಡಂತಾಂಗಳ್:

ವೇಡಂತಾಂಗಳ್ ನಲ್ಲಿ ಕಂಡುಬರುವ ಡಾರ್ಟರ್ ಹಕ್ಕಿ ಅಥವಾ ಹಾವಿನ ಹಕ್ಕಿ.

ಚಿತ್ರಕೃಪೆ: K. V. Ragunath

ವೇಡಂತಾಂಗಳ್:

ವೇಡಂತಾಂಗಳ್:

ವೇಡಂತಾಂಗಳ್ ನಲ್ಲಿ ಕಂಡುಬರುವ ಹಕ್ಕಿಗಳ ವಿವಿಧ ಭಂಗಿಗಳಲ್ಲಿರುವ ಚಿತ್ರಗಳನ್ನು ಸವಿಯಿರಿ.

ಚಿತ್ರಕೃಪೆ: Srikaanth Sekar

ವೇಡಂತಾಂಗಳ್:

ವೇಡಂತಾಂಗಳ್:

ವೇಡಂತಾಂಗಳ್ ನಲ್ಲಿ ಕಂಡುಬರುವ ಹಕ್ಕಿಗಳ ವಿವಿಧ ಭಂಗಿಗಳಲ್ಲಿರುವ ಚಿತ್ರಗಳನ್ನು ಸವಿಯಿರಿ.

ಚಿತ್ರಕೃಪೆ: Prasannavathani.D

ವೇಡಂತಾಂಗಳ್:

ವೇಡಂತಾಂಗಳ್:

ವೇಡಂತಾಂಗಳ್ ನಲ್ಲಿ ಕಂಡುಬರುವ ಹಕ್ಕಿಗಳ ವಿವಿಧ ಭಂಗಿಗಳಲ್ಲಿರುವ ಚಿತ್ರಗಳನ್ನು ಸವಿಯಿರಿ.

ಚಿತ್ರಕೃಪೆ: GnanaskandanK

ವೇಡಂತಾಂಗಳ್:

ವೇಡಂತಾಂಗಳ್:

ವೇಡಂತಾಂಗಳ್ ಪಕ್ಷಿಧಾಮದಿಂದ ಕೇವಲ 9 ಕಿ.ಮೀ ಗಳಷ್ಟು ದೂರದಲ್ಲಿರುವ ಕರ್ಕಿಲಿ ಧಾಮದ ಅದ್ಭುತ ಪರಿಸರ.

ಚಿತ್ರಕೃಪೆ: Sriram Jagannathan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X