Search
  • Follow NativePlanet
Share
» »ಮರ್ಕಟ ಮನಕೆ ತಂಪೆರೆವ ವರ್ಕಲಾ

ಮರ್ಕಟ ಮನಕೆ ತಂಪೆರೆವ ವರ್ಕಲಾ

By Vijay

ಕೇರಳ ರಾಜ್ಯದ ತಿರುವನಂತಪುರ ಜಿಲ್ಲೆಯಲ್ಲಿರುವ ಒಂದು ಸುಂದರ ಹಾಗೂ ಚಿಕ್ಕದಾದ ಕರಾವಳಿ ಹಳ್ಳಿಯೆ ವರ್ಕಲಾ. ವರ್ಕಲಾ, ಅದೆ ಹೆಸರಿನ ಕಡಲ ತೀರದಿಂದ ಇಂದು ಪ್ರಸಿದ್ಧಿಯ ಉತ್ತುಂಗಕ್ಕೇರಿದೆ. ಕೇರಳದ ರಾಜಧಾನಿ ತಿರುವನಂತಪುರಂ ನಗರದ ಉಪನಗರ ಪಟ್ಟಣವಾಗಿ ಕಂಗೊಳಿಸುತ್ತದೆ ವರ್ಕಲಾ. ಅಲ್ಲದೆ ವಿದೇಶಿ ಪ್ರವಾಸಿಗರಿಗೂ ಕೂಡ ವರ್ಕಲಾ ಅಚ್ಚು ಮೆಚ್ಚು.

ತಿರುವನಂತಪುರಂನಿಂದ 50 ಕಿ.ಮೀ ಹಾಗೂ ಪ್ರಖ್ಯಾತ ಕೊಲ್ಲಂನಿಂದ 37 ಕಿ.ಮೀ ದೂರದಲ್ಲಿರುವ ವರ್ಕಲಾಗೆ ತೆರಳುವುದು ಕಷ್ಟಕರವೇನಾಗಿಲ್ಲ. ಕೊಲ್ಲಂ ಹಾಗೂ ತಿರುವನಂತಪುರಂನಿಂದ ಸಾಕಷ್ಟು ಬಸ್ಸುಗಳು ವರ್ಕಲಾಗೆ ತೆರಳಲು ದೊರೆಯುತ್ತವೆ. ಅಲ್ಲದೆ ವರ್ಕಲಾ ತನ್ನದೆ ಆದ ರೈಲು ನಿಲ್ದಾಣವನ್ನೂ ಸಹ ಹೊಂದಿದ್ದು ಕೊಲ್ಲಂ ಹಾಗೂ ತಿರುವನಂತಪುರಂನ ಮಧ್ಯದಲ್ಲಿ ಸಂಚರಿಸುವ ರೈಲು ವರ್ಕಲಾ ಮೂಲಕವಾಗಿ ಸಾಗುತ್ತದೆ.

ವರ್ಕಲಾ ಸುಂದರ ಕಡಲ ಕಿನಾರೆಯ ಜೊತೆಗೆ ಇತರೆ ಹಲವು ಪ್ರವಾಸಿ ಆಕರ್ಷಣೆಗಳನ್ನೂ ಸಹ ಹೊಂದಿದೆ. ಹಾಗಾದರೆ ಬನ್ನಿ ಯಾವೇಲ್ಲ ಗುರುತರವಾದ ಆಕರ್ಷಣೆಗಳನ್ನು ನಾವು ವರ್ಕಲಾಗೆ ಭೇಟಿ ನೀಡಿದಾಗ ಆನಂದಿಸಬಹುದೆಂದು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ವರ್ಕಲಾದಲ್ಲಿರುವ ಹೋಟೆಲುಗಳ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ವರ್ಕಲಾ:

ವರ್ಕಲಾ:

ದಕ್ಷಿಣ ಕೇರಳ ರಾಜ್ಯದಲ್ಲಿ ವರ್ಕಲಾ ಕಡಲ ತೀರದಲ್ಲೊಂದರಲ್ಲೆ ಮಾತ್ರವೆ ಮೊನಚಾದ ಬೆಟ್ಟ ಗುಡ್ಡಗಳು ಅರಬ್ಬಿ ಸಮುದ್ರದ ಪಕ್ಕದಲ್ಲೆ ಇರುವುದನ್ನು ಕಾಣಬಹುದಾಗಿದೆ. ಕೇರಳ ಕರಾವಳಿಯು ಬಹುತೇಕ ಸಮತಟ್ಟಾಗಿರುವುದರಿಂದ ಇದನ್ನು ಅನನ್ಯವೆಂದೆ ಹೇಳಬಹುದಾಗಿದೆ. ಭೂವಿಜ್ಞಾನಿಗಳು ಇದನ್ನು "ವರ್ಕಲಾ ಫಾರ್ಮೇಷನ್" ಎಂತಲೆ ಕರೆಯುತ್ತಾರೆ.

ಚಿತ್ರಕೃಪೆ: Thejas Panarkandy

ವರ್ಕಲಾ:

ವರ್ಕಲಾ:

ವರ್ಕಲಾ ಕಡಲ ತೀರದ ಬೆಟ್ಟ ಗುಡ್ಡಗಳ ಯೋಗ್ಯ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಸಂತುಷ್ಟಪಡಿಸುವ ಸಾಕಷ್ಟು ಸ್ಪಾಗಳು ಇರುವುದಲ್ಲದೆ, ಚಿಕ್ಕ ಪುಟ್ಟ ನೀರಿನ ತೊರೆಗಳು ಇರುವುದನ್ನು ಸಹ ಗಮನಿಸಬಹುದಾಗಿದೆ.

ಚಿತ್ರಕೃಪೆ: Andreas Eldh

ವರ್ಕಲಾ:

ವರ್ಕಲಾ:

ವೈಷ್ಣವ ಪಂಥದವರು ನಡೆದುಕೊಳ್ಳುವ ಜನಾರ್ಧನ ಸ್ವಾಮಿಯ ದೇಗುಲ ವರ್ಕಲಾ ಪ್ರದೇಶದಲ್ಲಿದ್ದು, ಪ್ರಖ್ಯಾತಿ ಪಡೆದಿದೆ. ಜನಾರ್ಧನ ಸ್ವಾಮಿ ದೇವಾಲಯ ವಿಷ್ಣು ದೇವರಿಗೆ ಮುಡಿಪಾಗಿದ್ದು ಸಾಕಷ್ಟು ಭಕ್ತಾದಿಗಳು ದೇವರ ದರುಶನ ಕೋರಿ ಇಲ್ಲಿಗೆ ಬರುತ್ತಿರುತ್ತಾರೆ.

ಚಿತ್ರಕೃಪೆ: Binoyjsdk

ವರ್ಕಲಾ:

ವರ್ಕಲಾ:

ಅಲ್ಲದೆ, ಇಲ್ಲಿರುವ ಜನಾರ್ಧನ ಸ್ವಾಮಿಯ ದೇವಾಲಯವು ಸುಮಾರು 2000 ವರ್ಷಗಳಷ್ಟು ಪುರಾತನವಾಗಿದ್ದು, ಭಾರತದಲ್ಲೆ ವಿಷ್ಣುವಿನ ಪ್ರಮುಖ ದೇವಾಲಯಗಳ ಪೈಕಿ ಒಂದಾಗಿ ಖ್ಯಾತಿ ಪಡೆದಿದೆ. ಅಲ್ಲದೆ ಈ ದೇವಸ್ಥಾನವನ್ನು "ದಕ್ಷಿಣದ ಕಾಶಿ" ಎಂದೂ ಕೂಡ ಸಂಭೋದಿಸಲಾಗುತ್ತದೆ.

ಚಿತ್ರಕೃಪೆ: Binoyjsdk

ವರ್ಕಲಾ:

ವರ್ಕಲಾ:

ಜನಾರ್ಧನ ಸ್ವಾಮಿ ದೇವಸ್ಥಾನವು ವರ್ಕಲಾದ ಪ್ರಸಿದ್ಧ ಕಡಲ ತೀರವಾದ ಪಾಪನಾಶಂ ಬೀಚ್ (ವರ್ಕಲಾ ಕಡಲ ತೀರ) ಬಳಿಯಿದೆ. ಈ ಕಡಲ ತೀರದ ನೀರಿನಲ್ಲಿ ಮಿಂದುವುದರಿಂದ ಸಕಲ ಪಾಪಗಳು ನಿವಾರಣೆಯಾಗುತ್ತವೆ ಎನ್ನುವ ನಂಬಿಕೆಯಿರುವುದರಿಂದ ಈ ಕಡಲ ತೀರಕ್ಕೆ ಪಾಪನಾಶಂ ಕಡಲ ತೀರ ಎಂಬ ಹೆಸರು ಬಂದಿದೆ. ಅಲ್ಲದೆ ಈ ಕಡಲ ತೀರದ ಬಳಿ ಆಯುರ್ವೇದದ ಚಿಕಿತ್ಸಾ ಕೇಂದ್ರವು ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರಕೃಪೆ: Prashanth dotcompals

ವರ್ಕಲಾ:

ವರ್ಕಲಾ:

ವರ್ಕಲಾ ಪಟ್ಟಣದ ಮತ್ತೊಂದು ಗುರುತರವಾದ ಆಕರ್ಷಣೆಯೆಂದರೆ ಶಿವಗಿರಿ ಮಠ. ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಎಂಬುವವರಿಂದ ಈ ಮಠವು ಸ್ಥಾಪಿಸಲ್ಪಟ್ಟಿದೆ. ಇಲ್ಲಿನೆ ಬೆಟ್ಟದ ಮೇಲಿರುವ ನಾರಾಯಣ ಗುರು ಅವರ ಸ್ಮಾರಕವು ಕೇರಳದ ಪ್ರಸಿದ್ಧ ಸ್ಮಾರಕಗಳ ಪೈಕಿ ಒಂದಾಗಿದೆ.

ವರ್ಕಲಾ:

ವರ್ಕಲಾ:

ಇನ್ನು ವರ್ಕಲಾಗೆ 'ವರ್ಕಲಾ' ಎಂಬ ಹೆಸರು ಬರಲು ಒಂದು ರೋಚಕ ಕಥೆಯಿದೆ. ಕಥೆಯ ಪ್ರಕಾರ, ಒಮ್ಮೆ ಯಾತ್ರಾರ್ಥಿಗಳು ನಾರದ ಮುನಿಯನ್ನು ಭೇಟಿ ಮಾಡಿ ತಾವು ಮಾಡಿದ ಪಾಪಗಳನ್ನು ನಿವಾರಿಸುವಂತೆ ಬೇಡಿಕೊಂಡರು. ಆಗ ನಾರದರು ವಲ್ಕಲಂ (ಸಿಂಹದ ಚರ್ಮದಿಂದ ಮಾಡಲಾದ ಬಟ್ಟೆ) ಅನ್ನು ಒಂದು ದಿಕ್ಕಿನಲ್ಲಿ ಬಿಸಿದರು. ಆ ವಲ್ಕಲಂ ಈ ಪ್ರದೇಶದಲ್ಲಿ ಬಿದ್ದು, ಕ್ರಮೇಣ ಇದಕ್ಕೆ ವರ್ಕಲಾ ಎಂಬ ಹೆಸರು ಬಂದಿತು.

ಚಿತ್ರಕೃಪೆ: Henrik Jagels

ವರ್ಕಲಾ:

ವರ್ಕಲಾ:

ವರ್ಕಲಾಗೆ ಹತ್ತಿರದಲ್ಲಿರುವ ಸುಂದರ ಪ್ರವಾಸಿ ಆಕರ್ಷಣೆ ಎಂದರೆ ಪರವೂರು. ಇದು ಹಿನ್ನೀರುಗಳ ಭುವಿ ಎಂದೆ ಪ್ರಸಿದ್ಧವಾಗಿದೆ. ಪರವೂರು ಸಾಕಷ್ಟು ಕೆರೆಗಳು, ಸುಂದರ ವಾತಾವರಣ ಹಾಗೂ ಅಗಾಧ ಆನಂದ ಕರುಣಿಸುವ ಹಿನ್ನೀರಿಗಾಗಿ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Arunvrparavur

ವರ್ಕಲಾ:

ವರ್ಕಲಾ:

ಕಾಪ್ಪಿಲ್ ಕೆರೆ, ಉತ್ತರ ವರ್ಕಲಾದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ರೋಮಾಂಚಕ ಪ್ರವಾಸಿ ಆಕರ್ಷಣೆ. ಹಿನ್ನೀರು ನಿಧಾನವಾಗಿ ಸಮುದ್ರ ಸೇರುವ ಮುಂಚೆ ಪ್ರಶಾಂತವಾಗಿ ಹರಿಯುವುದನ್ನು ಸೇತುವೆಯ ಮೂಲಕ ನೋಡಿ ಆನಂದಿಸಬಹುದು. ದೋಣಿ ವಿಹಾರ ಮತ್ತೊಂದು ಆಕರ್ಷಕ ಆಯ್ಕೆ.

ಚಿತ್ರಕೃಪೆ: Vipin.bl

ವರ್ಕಲಾ:

ವರ್ಕಲಾ:

ಎಡವಾ -ನಡಯಾರಾ ಕೆರೆ, ವರ್ಕಲಾದ ಬಳಿಯಿರುವ ಮತ್ತೊಂದು ಸೊಗಸಾದ ಕೆರೆ. ಎಡವಾ ಒಂದು ಕರಾವಳಿ ಹಳ್ಳಿಯಾಗಿದ್ದು, ವರ್ಕಲಾದ ಹತ್ತಿರದಲ್ಲಿದೆ. ವರ್ಕಲಾಗೆ ಭೇಟಿ ನೀಡಿದಾಗ ಈ ಸುಂದರವಾದ ಕರಾವಳಿ ಹಳ್ಳಿಗೂ ಸಹ ಭೇಟಿ ನೀಡಬಹುದು.

ವರ್ಕಲಾ:

ವರ್ಕಲಾ:

ಅಂಜೆಂಗೊ ಕೋಟೆ, ವರ್ಕಲಾದ ಬಳಿರುವ ಐತಿಹಾಸಿಕ ಮಹತ್ವವುಳ್ಳ ಪ್ರವಾಸಿ ಆಕರ್ಷಣೆಯಾಗಿದೆ. ಅಂಜು ತೆಂಗು (ಐದು ತೆಂಗು) ಎಂಬ ಶಬ್ದದಿಂದ ಹೆಸರು ಪಡೆದಿರುವ ಅಂಜೆಂಗೊ ಹಳ್ಳಿಯು ಆಕರ್ಷಕ ಕಡಲ ತೀರವನ್ನೂ ಸಹ ಹೊಂದಿದೆ.

ಚಿತ್ರಕೃಪೆ: Prasanthvembayam

ವರ್ಕಲಾ:

ವರ್ಕಲಾ:

ಅಂಜೆಂಗೊ ಕಡಲ ತೀರದ ಸುಂದರ ನೋಟ.

ಚಿತ್ರಕೃಪೆ: Emmanuel DYAN

ವರ್ಕಲಾ:

ವರ್ಕಲಾ:

ವರ್ಕಲಾದ ಕೆಲವು ಸುಂದರ ಹಾಗೂ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Koen

ವರ್ಕಲಾ:

ವರ್ಕಲಾ:

ವರ್ಕಲಾದ ಕೆಲವು ಸುಂದರ ಹಾಗೂ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Aleksandr Zykov

ವರ್ಕಲಾ:

ವರ್ಕಲಾ:

ವರ್ಕಲಾದ ಕೆಲವು ಸುಂದರ ಹಾಗೂ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Aleksandr Zykov

ವರ್ಕಲಾ:

ವರ್ಕಲಾ:

ವರ್ಕಲಾದ ಕೆಲವು ಸುಂದರ ಹಾಗೂ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Saad Faruque

ವರ್ಕಲಾ:

ವರ್ಕಲಾ:

ವರ್ಕಲಾದ ಕೆಲವು ಸುಂದರ ಹಾಗೂ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Emmanuel DYAN

ವರ್ಕಲಾ:

ವರ್ಕಲಾ:

ವರ್ಕಲಾದ ಕೆಲವು ಸುಂದರ ಹಾಗೂ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Koen

ವರ್ಕಲಾ:

ವರ್ಕಲಾ:

ವರ್ಕಲಾದ ಕೆಲವು ಸುಂದರ ಹಾಗೂ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Thierry Leclerc

ವರ್ಕಲಾ:

ವರ್ಕಲಾ:

ವರ್ಕಲಾದ ಕೆಲವು ಸುಂದರ ಹಾಗೂ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Koshy Koshy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X