Search
  • Follow NativePlanet
Share
» »ಭತ್ತದ ಗದ್ದೆಯಿಂದ ಕೂಡಿರುವ ಮಣಿಪುರದ ಈ ಪುಟ್ಟ ಜಿಲ್ಲೆ ಟ್ರಕ್ಕಿಂಗ್‌ಗೂ ಸೂಕ್ತ

ಭತ್ತದ ಗದ್ದೆಯಿಂದ ಕೂಡಿರುವ ಮಣಿಪುರದ ಈ ಪುಟ್ಟ ಜಿಲ್ಲೆ ಟ್ರಕ್ಕಿಂಗ್‌ಗೂ ಸೂಕ್ತ

ತೌಬಲ್ ನಗರದ ಹೊರವಲಯದಲ್ಲಿ ಪಿಕ್ನಿಕ್ ಹಾಗೂ ವಾಯುವಿಹಾರಕ್ಕೆ ಸೂಕ್ತವಾದ ಬಯಲು ಪ್ರದೇಶಗಳಿವೆ. ಇಲ್ಲಿರುವ ಬೆಟ್ಟ ಪ್ರದೇಶವು ಟ್ರೆಕ್ಕಿಂಗ್ ಗೂ ಸೂಕ್ತ.

ಮಣಿಪುರದ ತೌಬಲ್ ಜಿಲ್ಲೆಯ ಜಿಲ್ಲಾ ಕೇಂದ್ರವಾದ ತೌಬಲ್, ಅಭಿವೃದ್ದಿ ಹೊಂದಿದ ನಗರವಾಗಿದೆ. ತೌಬಲ್ ಜಿಲ್ಲೆಯ ಮೂಲಕ ಎರಡು ನದಿಗಳು ಹರಿಯುತ್ತವೆ, ಅವುಗಳೆಂದರೆ ಇಂಫಾಲ್ ನದಿ ಮತ್ತು ತೌಬಲ್ ನದಿ. ತೌಬಲ್ ಪಟ್ಟಣದ ಹೆಚ್ಚಿನ ಭಾಗವು ತೌಬಲ್ ನದಿಯ ತೀರದಲ್ಲಿದೆ.

ಇತರ ಜಿಲ್ಲೆಗಳು

ಇತರ ಜಿಲ್ಲೆಗಳು

PC: Herojit th
ತೌಬಲ್ ಜಿಲ್ಲೆಯ ಸುತ್ತಲಿರುವ ಮಣಿಪುರದ ಇತರ ಜಿಲ್ಲೆಗಳೆಂದರೆ ಪೂರ್ವದಲ್ಲಿ ಉಖ್ರಲ್ ಮತ್ತು ಚಂಡೆಲ್, ಉತ್ತರದಲ್ಲಿ ಸೇನಾಪತಿ, ಪಶ್ಚಿಮದಲ್ಲಿ ಪೂರ್ವ ಇಂಫಾಲ್ ಮತ್ತು ಪಶ್ಚಿಮ ಇಂಫಾಲ್ ಹಾಗೂ ದಕ್ಷಿಣದಲ್ಲಿ ಚುರಾಚಂದ್ಪುರ್ ಮತ್ತು ಬಿಷ್ಣುಪುರ್.

 ತೌಬಲ್ ನ ಆಕರ್ಷಣೆಗಳು

ತೌಬಲ್ ನ ಆಕರ್ಷಣೆಗಳು

PC: Herojit th
ತೌಬಲ್ ನಗರವು ಬೆಟ್ಟ ಗುಡ್ಡಗಳಿಂದ ಸುತ್ತುವರೆಯಲ್ಪಟ್ಟ ಒಂದು ಸುಂದರ ತಾಣವಾಗಿದೆ. ಪನ್ತೊಇಬೀ ದೇವಸ್ಥಾನ, ಚಿಂಗ ಲೈರೆನ್ಭಿ ದೇವಸ್ಥಾನ, ತೊಂಜಿಂಗ್ ಚಿಂಗ್ ಮತ್ತು ಮಣಿಪುರ್ ಸಾಹಿತ್ಯ ಸಮಿತಿ ಇದು ಜಿಲ್ಲೆಯ ಪ್ರಮುಖ ಆಕರ್ಷಣೆಗಳು. ಶಾಪಿಂಗ್ ಪ್ರಿಯರು ಇಲ್ಲಿಂದ ಕೈಮಗ್ಗ ಹಾಗೂ ಕರಕುಶಲ ವಸ್ತುಗಳನ್ನು ಸ್ಮರಣಿಕೆ ರೂಪದಲ್ಲಿ ಕೊಂಡೊಯ್ಯಬಹುದು.

ಟ್ರೆಕ್ಕಿಂಗ್‌ಗೆ ಸೂಕ್ತ

ಟ್ರೆಕ್ಕಿಂಗ್‌ಗೆ ಸೂಕ್ತ

PC: Herojit th
ತೌಬಲ್ ನಗರದ ಹೊರವಲಯದಲ್ಲಿ ಪಿಕ್ನಿಕ್ ಹಾಗೂ ವಾಯುವಿಹಾರಕ್ಕೆ ಸೂಕ್ತವಾದ ಬಯಲು ಪ್ರದೇಶಗಳಿವೆ. ಇಲ್ಲಿರುವ ಬೆಟ್ಟ ಪ್ರದೇಶವು ಟ್ರೆಕ್ಕಿಂಗ್ ಗೂ ಸೂಕ್ತ. ಜಲಾಶಯ ಮತ್ತು ನದಿಗಳಿಂದ ಕೂಡಿದ ಈ ಜಾಗದಲ್ಲಿ ಹೊರಾಂಗಣ ಚಟುವಟಿಕೆಗಳಿಗೂ ಅವಕಾಶವಿದೆ.

ಭತ್ತದ ಹೊಲಗಳು

ಭತ್ತದ ಹೊಲಗಳು

PC: Herojit th
ಹಚ್ಚ ಹಸುರಿನಿಂದ ಕೂಡಿದ ಭತ್ತದ ಹೊಲಗಳು ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಿ ಪ್ರವಾಸಿಗರ ಮನಸ್ಸಿಗೆ ಮುದವನ್ನೀಯುತ್ತದೆ. ತೌಬಲ್ ಒಂದು ಕೃಷಿಪ್ರದೇಶವಾಗಿದ್ದು, ಇಲ್ಲಿ ಭತ್ತ, ಸಾಸಿವೆ, ಬಟಾಟೆ, ಹಣ್ಣುಗಳು ಮತ್ತು ಇತರ ತರಕಾರಿಗಳನ್ನು ಬೆಳೆಸಲಾಗುತ್ತದೆ. ಇದನ್ನು ಹೊರತುಪಡಿಸಿ, ಇಲ್ಲಿನ ಜನ ಪ್ರಾಣಿಸಾಕಣೆ, ರೇಷ್ಮೆ ತಯಾರಿ ಮುಂತಾದ ಕೆಲಸಗಳಲ್ಲೂ ತೊಡಗಿದ್ದಾರೆ. ತೌಬಲ್ ಅಭಿವೃದ್ದಿ ಹೊಂದಿದ ನಗರವಾಗಿದ್ದು, ಇಲ್ಲಿ ಪರಂಪರಾಗತ ಹಾಗೂ ಆಧುನಿಕತೆಯನ್ನು ಎಲ್ಲಾ ಕ್ಷೇತ್ರಗಳಲ್ಲೂ ಕಾಣಬಹುದು.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Herojit th
ತೌಬಲ್, ಒಟ್ಟಾರೆಯಾಗಿ ಆಹ್ಲಾದಕರ ವಾತಾವರಣವನ್ನು ಹೊಂದಿದೆ. ಮಳೆಗಾಲದ ಸಮಯದಲ್ಲಿ ಆಗಾಗ್ಗೆ ಪ್ರವಾಹಕ್ಕೆ ಕಾರಣವಾಗುತ್ತದೆ. ಮಾರ್ಚ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಥೌಬಲ್‌ಗೆ ಭೇಟಿ ನೀಡಲು ಅತ್ಯುತ್ತಮ ಸಮಯವಾಗಿದೆ.
ಚಳಿಗಾಲವು ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಇರುತ್ತದೆ. ಬೇಸಿಗೆ ತುಂಬಾ ಸೆಕೆ ಇರುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Herojit th

ತೌಬಲ್ ನಿಂದ ಹತ್ತಿರದ ರೈಲು ನಿಲ್ದಾಣವೆಂದರೆ ದಿಮಾಪುರ್ ರೈಲು ನಿಲ್ದಾಣ. ಹತ್ತಿರದ ವಿಮಾನನಿಲ್ದಾಣ ಇಂಫಾಲ್ ವಿಮಾನ ನಿಲ್ದಾಣವಾಗಿದೆ. ಹತ್ತಿರದ ಇನ್ನೊಂದು ವಿಮಾನ ನಿಲ್ದಾಣವೆಂದರೆ ದಿಮಾಪುರ್, ಥೌಬಲ್‌ನಿಂದ 150 ಕಿ.ಮೀ ದೂರದಲ್ಲಿದೆ. ಏರ್ ಇಂಡಿಯಾ ದೆಹಲಿಯಿಂದ ದಿಮಾಪುರ್‌ಗೆ ಹಾರಾಟ ಮಾಡುತ್ತದೆ. ವಿಮಾನ ನಿಲ್ದಾಣದಿಂದ ತೌಬಲ್‌ಗೆ ಹೋಗಲು ನೀವು ಟ್ಯಾಕ್ಸಿ ಬಾಡಿಗೆಗೆ ತೆಗೆದುಕೊಳ್ಳಬಹುದು. ಈ ಮಾರ್ಗದಲ್ಲಿ ಆಗಾಗ್ಗೆ ಕಾರ್ಯನಿರ್ವಹಿಸುವ ಬಸ್ ಮೂಲಕ ನೀವು ತೌಬಲ್‌ನ್ನು ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X