Search
  • Follow NativePlanet
Share
» »ಸೋಲಾಪುರದ ಸುಂದರ ಸಿದ್ಧೇಶ್ವರ ದೇವಾಲಯ

ಸೋಲಾಪುರದ ಸುಂದರ ಸಿದ್ಧೇಶ್ವರ ದೇವಾಲಯ

By Vijay

ಸೊಲ್ಲಾಪುರ ಎಂತಲೂ ಸಹ ಕರೆಯಲ್ಪಡುವ ಸೋಲಾಪುರವು ಕರ್ನಾಟಕದ ವಿಜಯಪುರ ಜಿಲ್ಲೆಗೆ ಹೊಂದಿಕೊಂಡಂತೆ ಮಹಾರಾಷ್ಟ್ರ ರಾಜ್ಯದಲ್ಲಿದೆ. ಹಿಂದೆ ಸೊನ್ನಲಿಗೆ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿದ್ದ ಈ ಸ್ಥಳ ಸಿದ್ಧರಾಮೇಶ್ವರರ ಕರ್ಮಭೂಮಿಯಾಗಿದೆ.

ಇಲ್ಲಿ ಮರಾಠಿ ಅಧಿಕೃತ ಭಾಷೆಯಾಗಿದ್ದರೂ ಗಣನೀಯ ಪ್ರಮಾಣದಲ್ಲಿ ಕನ್ನಡ ಮಾತನಾಡುವವರಿದ್ದಾರೆ. ಭಾರತದ ಸಿಗರೇಟ್ ಎಮ್ದು ಕರೆಯಲಾಗುವ ಬೀಡಿ ಉತ್ಪಾದನೆಯಲ್ಲಿ ಸೋಲಾಪುರವು ಭಾರತದಲ್ಲಿಯೆ ಮಂಚೂಣಿ ಸ್ಥಾನದಲ್ಲಿದೆ. ಅಲ್ಲದೆ ಹೆಚ್ಚಿನ ಸಂಖ್ಯೆ ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ನಗರವಾಗಿದೆ ಸೋಲಾಪುರ.

ನಿಮಗಿಷ್ಟವಾಗಬಹುದಾದ : ಸೋಲಾಪುರ ಹಾಗೂ ಸುತ್ತಲಿನ ಪ್ರಭಾವಿ ಸ್ಥಳಗಳು

ಔದ್ಯೋಗಿಕವಾಗಿಯೂ ಅಭಿವೃದ್ಧಿಯಾಗಿರುವ ಸೋಲಾಪೂರವು ತನ್ನಲ್ಲಿ ದೊರಕುವ ವಿಶಿಷ್ಟ ಬಗೆಯ ಚಾದರುಗಳಿಗೆ ಹೆಸರುವಾಸಿ. ಈ ಚಾದರುಗಳು ಸೋಲಾಪುರ ಚಾದರುಗಳೆಂದೆ ಪ್ರಸಿದ್ಧ. ಕರ್ನಾಟಕದಲ್ಲಿ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಸೋಲಾಪುರ ಚಾದರುಗಳು ಲಭ್ಯವಿದೆ.

ದಕ್ಷಿಣ ಹಾಗೂ ಉತ್ತರ ಭಾರತವನ್ನು ಬೆಸೆಯುವ ರೈಲು ಮಾರ್ಗಗಳಲ್ಲಿ ಜಂಕ್ಷನ್ ರೈಲು ನಿಲ್ದಾಣ ಹೊಂದಿರುವ ಸೋಲಾಪುರದ ಊರದೇವತೆ ಶ್ರೀ ಶಿವಯೋಗಿ ಸಿದ್ಧೇಶ್ವರ. ಸಿದ್ಧೇಶ್ವರ ಸ್ವಾಮಿಗೆ ಮುಡಿಪಾಗಿರುವ ದೇವಾಲಯ ಸೋಲಾಪುರಿನ ಪ್ರಮುಖ ಧಾರ್ಮಿಕ ಆಕರ್ಷಣೆ. ಪ್ರಸ್ತುತ ಲೇಖನದ ಮೂಲಕ ದೇವಾಲಯದ ಕುರಿತು ಸಂಪೂರ್ಣ ಮಾಹಿತಿ ತಿಳಿಯಿರಿ. ಸೋಲಾಪುರವು ಜಂಕ್ಷನ್ ರೈಲು ನಿಲ್ದಾಣ ಹೊಂದಿದ್ದು ಭಾರತದ ಬೆಂಗಳೂರು ಸೇರಿದಂತೆ ಎಲ್ಲ ಪ್ರಮುಖ ನಗರಗಳಿಂದಲೂ ಉತ್ತಮ ಸಂಪರ್ಕ ಹೊಂದಿದೆ.

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಸಿದ್ದರಾಮ ಅಥವಾ ಸಿದ್ಧರಾಮೇಶ್ವರರು ಲಿಂಗಾಯತ ಸಮುದಾಯದ ಪಂಚ ಪ್ರಮುಖ ಆಚಾರ್ಯರ ಪೈಕಿ ಒಬ್ಬರಾಗಿದ್ದಾರೆ. ಬಸವಣ್ಣನವರ ಕ್ರಾಂತಿಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ ಕನ್ನಡ ವಚನ ಹಾಗೂ ತ್ರಿಪದಿಗಳ ಕವಿ ಸಿದ್ಧರಾಮರು.

ಚಿತ್ರಕೃಪೆ: Uddhavghodake

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಇವರು ಮೂಲತಃ ಮುದ್ದಣ್ಣ ಹಾಗೂ ಸುಗಳಾದೇವಿಯ ಪುತ್ರ. ಮುಂದೆ ಬೆಳೆದಂತೆ ಸಾಮಾಜಿಕ ಕಾಳಜಿ ಬೆಳೆಸಿಕೊಂಡ ಇವರು ಸಾಮಾಜಿಕ ಹಾಗೂ ಸಮಬಾಳ್ವೆಗೆ ಒತ್ತು ಕೊಟ್ಟವರು. ಅಂತರ್ಜಾತಿಯ ವಿವಾಹಗಳನ್ನು ಪ್ರೋತ್ಸಾಹಿಸಿದವರು. ಇವರ ತವರು ನೆಲೆ ಸೊನ್ನಾಲೆ ಅಂದರೆ ಇಂದಿನ ಸೋಲಾಪೂರ.

ಚಿತ್ರಕೃಪೆ: Uddhavghodake

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಇವರೊಬ್ಬ ಕರ್ಮಯೋಗಿಗಳು. ಜನರ ಸೇವೆಯಲ್ಲಿ ಸಂತೃಪ್ತಿ ಕೊಂಡುಕೊಳುತ್ತಿದ್ದವರು. ಬಸವೇಶ್ವರರ ಭೋದನೆಗಳನ್ನು ಪ್ರಸರಿಸುತ್ತಿದ್ದವರು. ಕೊನೆಗೆ ದೈವಾಂಶ ಸಂಭೂತರಾಗಿ ಐಕ್ಯರಾದವರು. ಇವರೊಮ್ಮೆ ಭೋದನೆ ಮಾಡುತ್ತಿದ್ದಾಗ ಅವರ ಹಿತವಚನಗಳಿಂದ ಪ್ರಸನ್ನಳಾದ ಕನ್ಯೆಯೊಬ್ಬಳು ಅವಳನ್ನು ವರಿಸಬೇಕಾಗಿ ಕೇಳಿಕೊಳ್ಳುತ್ತಾಳೆ. ಅದಕ್ಕವರು ಅದು ಸಾಧ್ಯವಿಲ್ಲವೆಂದು ಆದರೆ ತಮ್ಮ ಯೋಗ ದಂಡದೊಂದಿಗೆ ವಿವಾಹವಾಗಬಹುದೆಂದು ಹೇಳುತ್ತಾರೆ.

ಚಿತ್ರಕೃಪೆ: Onlyfact

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಅಂತೆಯೆ ಇಂದಿಗೂ ಸಿದ್ಧೇಶ್ವರ ದೇವಾಲಯದಲ್ಲಿ ಮಕರ ಸಂಕಾಂತಿಯ ಸಂದರ್ಭದಲ್ಲಿ ಆ ಕನ್ಯೆಯ ಇವರ ಯೋಗ ದಂಡದೊಂದಿಗಿನ ವಿವಾಹ ಸಮಾರಂಭವಾನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಮೂರು ದಿನಗಳ ಕಾಲ ನಡೆಯುವ ಈ ವಿವಾಹ ಕಾರ್ಯಕ್ರಮದಲ್ಲಿ ನಂದಿ ಧ್ವಜಗಳನ್ನು ವರ ಹಾಗೂ ಕನ್ಯೆಗಳಾಗಿ ಸಂಕೇತಿಕವಾಗಿ ಬಳಸಲಾಗುತ್ತದೆ. ನಂತರ 15 ದಿನಗಳ ಕಾಲ ಗಡ್ಡಾ ಯಾತ್ರೆ ನಡೆಯುತ್ತದೆ.

ಚಿತ್ರಕೃಪೆ: Ameyaket

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಈ ಸಮಯದಲ್ಲಿ ಮಹಾರಾಷ್ಟ್ರವಲ್ಲದೆ, ಪಕ್ಕದ ಉತ್ತರ ಕರ್ನಾಟಕ ಹಾಗೂ ಆಂಧ್ರಗಳಿಂದಲೂ ಸಹ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಸೋಲಾಪೂರಿನ ಈ ಪ್ರಸಿದ್ಧ ಸಿದ್ಧರಾಮೇಶ್ವರನ ದೇವಾಲಯಕ್ಕೆ ಭೆಟಿ ನೀಡುತ್ತಾರೆ.

ಚಿತ್ರಕೃಪೆ: Dharmadhyaksha

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಇವರ ಬಾಳಲ್ಲಿ ನಡೆದ ಕಥೆಯ ಪ್ರಕಾರ, ಒಮ್ಮೆ ಶಿವನು ಇವರ ಸೇವೆಗೆ ಮೆಚ್ಚಿ ಸಿದ್ಧರಾಮರ ಮುಂದೆ ಬಂದು ತಾನು ಶ್ರೀಶೈಲಂನಿಂದ ಬಂದ ಮಲ್ಲಿನಾಥನೆಂದು ಪರಿಚಯಿಸಿಕೊಂಡ. ಇವರಿಬ್ಬರು ಭೇಟಿಯಾಗಿದ್ದ ಸ್ಥಳವನ್ನು ಗುರುಭೇಟ್ ಎಂದು ಕರೆಯುತ್ತಾರೆ ಹಾಗೂ ಈ ಸ್ಥಳವು ಇಂದಿಗೂ ಸೋಲಾಪೂರಿನ ಕಲೆಕ್ಟರ್ ಬಂಗಲೆಯ ಎದುರಿನಲ್ಲಿದೆ.

ಚಿತ್ರಕೃಪೆ: Uddhavghodake

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಹೀಗೆ ಮಲ್ಲಿನಾಥನೆಂಬ ಜಂಗಮನ ರೂಪದಲ್ಲಿ ಸಿದ್ಧರಾಮರನ್ನು ಭೇಟಿಯಾದ ಶಿವ, ಸಿದ್ಧರಾಮರನ್ನು ಕುರಿತು ತನಗೆ ಹುರಿದ ಸೀತನಿ (ಎಳೆ ಜೋಳ) ಉಪ್ಪಿಟ್ಟನ್ನು ತಿನ್ನಬೇಕೆಂದು ಕೇಳಿದ. ಅದರ ನಂತರ ಮೊಸರನ್ನ ಬೇಡಿದ.

ಚಿತ್ರಕೃಪೆ: Dharmadhyaksha

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಮೊದಲೆ ಪರಮ ಶಿವಭಕ್ತನಾಗಿದ್ದ ಸಿದ್ಧರಾಮ ಶ್ರೀಶೈಲಂನ ಮಲ್ಲಿನಾಥನ ಸೇವೆ ಮಾಡುತ್ತ ಪ್ರಸನ್ನರಾಗಿದ್ದರು ಹಾಗೂ ಅವನ ಬೇಡಿಕೆಯಂತೆ ಮೊಸರನ್ನ ತರಲು ಮನೆಗೆ ತೆರಳಿದರು. ಇತ್ತ ಮೊಸರನ್ನ ತೆಗೆದುಕೊಂಡು ಬಂದು ಎಲ್ಲಿ ಹುಡುಕಿದರೂ ಮಲ್ಲಿನಾಥ ಸಿಗಲಿಲ್ಲ. ಮಲ್ಲಯ್ಯ ಮಲ್ಲಯ್ಯ ಎಂದು ಕೂಗುತ್ತ ಅಲ್ಲಿ ಯಾತ್ರೆಗೆ ತೆರಳುತ್ತಿದ್ದ ಇತರೆ ಜಂಗಮರನ್ನು ವಿಚಾರಿಸಿದ.

ಚಿತ್ರಕೃಪೆ: Coolgama

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಅವರು ಮಲ್ಲಿನಾಥನನ್ನು ತೋರಿಸುವುದಾಗಿಯೂ ಅದಕ್ಕಾಗಿ ಸಿದ್ದರಾಮ ಅವರೊಂದಿಗೆ ಶ್ರೀಶೈಲಂಗೆ ತೆರಳಬೇಕೆಂದು ಹೇಳಿದರು. ಮಲ್ಲಿನಾಥರೊಂದಿಗೆ ಅನುಬಂಧ ಹೊಂದಿದ್ದ ಸಿದ್ಧರಾಮ ಹಿಂದೂ ಮುಂದೂ ನೋಡದೆ ಶ್ರೀಶೈಲಂಗೆ ತೆರಳಿದರು. ಅಲ್ಲಿ ಶಿವಲಿಂಗನನ್ನು ನೋಡಿದರಾದರೂ ಸಮಾಧಾನವಾಗಲಿಲ್ಲ. ಶ್ರೀಶೈಲಂನ ಮಲ್ಲೇಲತೀರ್ಥ.

ಚಿತ್ರಕೃಪೆ: Ylnr123

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಕೊನೆಗೆ ಎಲ್ಲೆಡೆ ಹುಡುಕಿ, ಬೇಸರಗೊಂಡು ದುಖಿಸುತ್ತ ಒಂದು ಪ್ರಪಾತದ ಬಳಿ ತೆರಳಿ ಕೆಳಗೆ ಇಣುಕಿ ಇನ್ನೇನೂ ಬೀಳುತ್ತಿದ್ದ ಸಂದರ್ಭದಲ್ಲಿ ಮಲ್ಲಿನಾಥ ಪ್ರತ್ಯಕ್ಷನಾಗಿ ತನ್ನ ನಿಜ ಸ್ವರೂಪ ತೋರಿಸಿ, ತನ್ನ ಆಶೀರ್ವಾದ ಯಾವಾಗಲೂ ಇರುತ್ತದೆಂದೂ ಇನ್ನೂ ಹೆಚ್ಚಿನ ಒಳ್ಳೆಯ ಕಾರ್ಯಗಳು ಅವನಿಂದಾಗಿಬೇಕಾಗಿರುವುದರಿಂದ ಮತ್ತೆ ಸೋಲಾಪೂರಿಗೆ ಮರಳಲು ಸೂಚಿಸಿದ. ಶ್ರೀಶೈಲಂನ ನಲ್ಲಮಲ್ಲ ಕಾಡುಗಳ ಪ್ರಪಾತ.

ಚಿತ್ರಕೃಪೆ: Rajib Ghosh

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಹೀಗೆ ಪ್ರತ್ಯಕ್ಷನಾದ ಶಿವ ಸಿದ್ಧರಾಮರಿಗೆ ವಜ್ರಕುಂಡಲ ಹಾಗೂ ಯೋಗದಂಡವನ್ನು ಕೊಟ್ಟು ಇವು ನಿನ್ನೆಲ್ಲ ಆಸೆಗಳನ್ನು ಪೂರೈಸುತ್ತದೆಂದು ಹೇಳಿ ಕಳುಹಿಸಿದ. ಇದರಿಂದ ಸಂತಸಗೊಂಡ ಸಿದ್ಧರಾಮ ಮತ್ತೆ ಸೋಲಾಪೂರಿಗೆ ಮರಳಿದ.

ಚಿತ್ರಕೃಪೆ: Ameyaket

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಈ ನಡುವೆ ಸೋಲಾಪೂರವನ್ನಾಳುತ್ತಿದ್ದ ನನ್ನಪ್ಪ ಹಾಗೂ ಚಮಲಾದೇವಿಯರಿಗೆ ಕನಸಿನಲ್ಲಿ ಶಿವನ ದರ್ಶನವಾಗಿ ಒಂದು ಕೆಲಸವನ್ನು ಹೇಳಿದ್ದ. ಅದರಂತೆ ಆ ರಾಜ ರಾಣಿಯರು ಸಿದ್ಧರಾಮರನ್ನು ಅತೀವ ಆದರ ಅಭಿಮಾನಗಳಿಂದ ಬರಮಾಡಿಕೊಂಡು ಐದು ಕೋಸುಗಳಷ್ಟು ಭೂಮಿಯನ್ನು ದಾನವಾಗಿ ನೀಡಿದರು.

ಚಿತ್ರಕೃಪೆ: Dharmadhyaksha

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ತದನಂತರ ಸಿದ್ಧರಾಮರಿಗೆ ಶಿವಯೋಗಿ ಸಿದ್ಧರಾಮ ಎಂಬ ಬಿರುದು ಬಂದು ತಮಗೆ ದೊರಕಿದ ಭೂಮಿಯಲ್ಲಿ 68 ಶಿವಲಿಂಗಗಳನ್ನು ಸ್ಥಾಪಿಸಿ ಜಗದ್ಗುರು ಕಪಿಲಸಿದ್ಧ ಪಂಡಿತಾರಾಧ್ಯರಿಂದ ಪ್ರತಿಷ್ಠಾಪ್ನಗೊಳಿಸಿ ಇದನ್ನು ಒಂದು ಶ್ರೀ ಕ್ಷೇತ್ರವನ್ನಾಗಿ ಮಾಡಿದ.

ಚಿತ್ರಕೃಪೆ: Dharmadhyaksha

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ನಂತರ ಸೋಲಾಪೂರು ಹಾಗೂ ಸುತ್ತಮುತ್ತಲು ಜನರು ಪಡುತ್ತಿದ ನೀರಿನ ಸಮಸ್ಯೆಯನ್ನು ನಿವಾರಿಸಲು ಸಾಕಷ್ಟು ಶ್ರಮವಹಿಸಿದರು ಹಾಗೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು.

ಚಿತ್ರಕೃಪೆ: Dharmadhyaksha

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಈ ಸಮಯದಲ್ಲಿ ಅಲ್ಲಮಪ್ರಭುಗಳಿಗೆ ಸಿದ್ಧರಾಮರು ಇಷ್ಟಲಿಂಗ ಸ್ವೀಕರಿಸಬೇಕೆಂದು ಅನಿಸಿ ಅವರನ್ನು ಕರೆದುಕೊಂಡು ಕಲ್ಯಾಣಕ್ಕೆ ತೆರಳಿದರು. ಅದು ಬಸವಣ್ಣನವರ ನೆಲೆಯಾಗಿತ್ತು ಹಾಗೂ ಇಷ್ಟಲಿಂಗ ಪೂಜಿಸಲ್ಪಡುವ ಸ್ಥಳವಾಗಿತ್ತು.

ಚಿತ್ರಕೃಪೆ: Dharmadhyaksha

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಅಲ್ಲಿನ ಅನುಭವಮಂಟಪದಲ್ಲಿ ಇಷ್ಟಲಿಂಗದ ಅವಶ್ಯಕತೆಯಿರುವುದರ ಕುರಿತು ಸಿದ್ಧರಾಮ, ಅಲ್ಲಮಪ್ರಭು, ಚೆನ್ನಬಸವಣ್ಣ ಹಾಗೂ ಬಸವಣ್ಣನವರ ಮಧ್ಯೆ ದೀರ್ಘ ಸಮಾಲೋಚನೆ ನಡೆಯಿತು. ಇಂದಿನ ಬಸವಕಲ್ಯಾಣದಲ್ಲಿ ಅನುಭವ ಮಂಟಪವಿದೆ.

ಚಿತ್ರಕೃಪೆ: Sscheral

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಕೊನೆಗೆ ಸಿದ್ಧರಾಮರು ಚೆನ್ನಬಸವಣ್ಣನವರನ್ನು ಗುರುವಾಗಿ ಸ್ವೀಕರಿಸಿದರು ಹಾಗೂ ಚೆನ್ನಬಸವಣ್ಣನವರಿ ಸಿದ್ದರಾಮನಿಗೆ ಇಷ್ಟಲಿಂಗದ ದೀಕ್ಷೆ ನೀಡಿದರು. ಇದರ ನಂತರ ಶಿವಯೋಗ ಪಥದಲ್ಲಿ ನಡೆದ ಸಿದ್ಧರಾಮರು ಅಪಾರವಾಗಿ ಬೆಳೆದರು, ಮನ್ನಣೆ, ನಂಬಿಕೆಗಳಿಸಿ ಕೊನೆಗೆ ಚೆನ್ನಬಸವಣ್ಣನವರ ಗುರುಪೀಠವನ್ನು ಸ್ವೀಕರಿಸಿದರು.

ಚಿತ್ರಕೃಪೆ: Mohan3012

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಕೊನೆಗೆ ಸೋಲಾಪೂರಿಗೆ ಹಿಂತಿರುಗಿದ ಸಿದ್ಧರಾಮರು ಅನೇಕ ಜನೋಪಯೋಗಿ ಕಾರ್ಯಗಳನ್ನು ಮಾಡಿದರು ಮತ್ತು ಅಂತ್ಯದಲ್ಲಿ ಹಾವಿನಹಾಳಾ ಕಲ್ಲಯ್ಯನನ್ನು ಆಯ್ಕೆ ಮಾಡಿ ತಮ್ಮ ಕಾರ್ಯಗಳನ್ನು ಮುಂದುವರೆಸಲು ಸೂಚಿಸಿದರು. ಸೋಲಾಪುರಿನಲ್ಲಿರುವ ಕಂಬರ್ ತಲಾಬ್.

ಚಿತ್ರಕೃಪೆ: Dharmadhyaksha

ಸೋಲಾಪೂರಿನ ಸಿದ್ಧೇಶ್ವರ:

ಸೋಲಾಪೂರಿನ ಸಿದ್ಧೇಶ್ವರ:

ಕಲ್ಲಯ್ಯನು ಕೆರೆಯ ಮಧ್ಯದಲ್ಲೊಂದು ಗುಹಾರಚನೆಯೊಂದನ್ನು ನಿರ್ಮಿಸಿದರು. ಈ ಗುಹೆಯಲ್ಲಿ ಸಿದ್ಧರಾಮರು ಶಿವ ಯೋಗವನ್ನು ಪಾಲಿಸುತ್ತ ಐಕ್ಯ ಹೊಂದಿದರು. ಈ ರೀತಿಯಾಗಿ ಸೋಲಾಪೂರಿನಲ್ಲಿ ಇಂದು ಶಿವನನ್ನು ಸಿದ್ಧೇಶ್ವರನ ರುಪದಲ್ಲಿ ಪೂಜಿಸಲಾಗುತ್ತದೆ. ಸೋಲಾಪುರ ನಗರ ಪ್ರದೇಶ.

ಚಿತ್ರಕೃಪೆ: Coolgama

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X