Search
  • Follow NativePlanet
Share
» »ತಾಶಿ ವ್ಯೂ ಪಾಯಿಂಟ್ ನಿಂದ ಕಾಂಚನಜುಂಗದ ಸೌಂದರ್ಯ ನೋಡಿ

ತಾಶಿ ವ್ಯೂ ಪಾಯಿಂಟ್ ನಿಂದ ಕಾಂಚನಜುಂಗದ ಸೌಂದರ್ಯ ನೋಡಿ

ತಾಶಿ ವ್ಯೂ ಪಾಯಿಂಟ್‌ನಿಂದ ಕಾಂಜನಜುಂಗಾ ಬೆಟ್ಟದ ಮನಮೋಹಕ ಸೌಂದರ್ಯವನ್ನು ವೀಕ್ಷಿಸಬಹುದು.

ತಾಶಿ ವ್ಯೂ ಪಾಯಿಂಟ್ ಗ್ಯಾಂಗ್ಟಾಕ್ ನ ಸುಂದರ ತಾಣವಾಗಿದೆ. ಈ ವ್ಯೂ ಪಾಯಿಂಟ್‌ನಿಂದ ಕಾಂಜನಜುಂಗಾ ಬೆಟ್ಟದ ಮನಮೋಹಕ ಸೌಂದರ್ಯವನ್ನು ವೀಕ್ಷಿಸಬಹುದು. ಕಾಂಚನಜುಂಗಾದ ಸೌಂದರ್ಯವನ್ನು ಹೊರತುಪಡಿಸಿ ಗ್ಯಾಂಗ್ಟಾಕ್ ಗೆ ನಿಕಟವಾಗಿರುವ ಪೊಡೊಂಗ್ ಮತ್ತು ಲಬ್ರಾಂಗ್ ಮಠಗಳನ್ನು ನೋಡಬಹುದಾಗಿದೆ.

ಕೆಫೆಟೇರಿಯಾ

ಕೆಫೆಟೇರಿಯಾ

PC:Sankar Narayan Banerjee
ಪ್ರವಾಸಿಗಳು ವಿಶ್ರಾಂತಿ ಪಡೆಯಲು ಮತ್ತು ಖುಷಿಯಿಂದ ಕಾಲಕಳೆಯಲು ಇಲ್ಲಿ ಒಂದು ಕೆಫೆಟೇರಿಯಾ ಮತ್ತು ವೀಕ್ಷಣಾ ಗೋಪುರವನ್ನು ಸ್ಥಾಪಿಸಲಾಗಿದೆ. ನಿಮ್ಮ ಭೇಟಿ ಸ್ಮರಣೀಯವಾಗಿಸಿಕೊಳ್ಳಲು ಬಯಸುವುದಾದರೆ ಇಲ್ಲಿಗೆ ಮುಂಜಾನೆ ವೇಳೆ ಭೇಟಿ ನೀಡಿ. ವ್ಯೂ ಪಾಯಿಂಟ್ ನಿಂದ ಸ್ವಲ್ಪ ಮುಂದಕ್ಕೆ ಪಾರ್ಕ್ ಇದ್ದು, ಅಲ್ಲಿಗೆ ಹೋಗಿ ವಿಶ್ರಾಂತಿ ಪಡೆದು ಚಾ, ಕಾಫಿ, ತಿಂಡಿ ತಿಂದು ಆನಂದಿಸಿ.

ತಾಶಿ ನಂಗ್ಯಾಲ್ ರಾಜ ನಿರ್ಮಿಸಿದ

ತಾಶಿ ನಂಗ್ಯಾಲ್ ರಾಜ ನಿರ್ಮಿಸಿದ

PC:Ashinpt
ತಾಶಿ ವೀಕ್ಷಣಾ ಸ್ಥಳವು 1914 ಮತ್ತು 1963 ರ ನಡುವೆ ಸಿಕ್ಕಿಂ ಅನ್ನು ಆಳಿದ ತಾಶಿ ನಂಗ್ಯಾಲ್ ರಾಜನಿಂದ ನಿರ್ಮಿಸಲ್ಪಟ್ಟಿತ್ತು. ಇಡೀ ಪ್ರದೇಶದ 360-ಡಿಗ್ರಿ ದೃಷ್ಟಿಕೋನವನ್ನು ಸಂದರ್ಶಕರು ವೀಕ್ಷಿಸುವ ಸಲುವಾಗಿ ವೃತ್ತಾಕಾರದ ಆಕಾರದ ವೇದಿಕೆ ನಿರ್ಮಿಸಲಾಗಿದೆ. ಇದನ್ನು ಪ್ರವಾಸೋದ್ಯಮ ಇಲಾಖೆಯು ಅಭಿವೃದ್ಧಿಪಡಿಸಿದ್ದು, ನಿರ್ವಹಿಸುತ್ತಿದೆ.

ಉತ್ತಮ ಸೂರ್ಯಾಸ್ತದ ತಾಣ

ಉತ್ತಮ ಸೂರ್ಯಾಸ್ತದ ತಾಣ

PC:Fir0002
ಈ ಸ್ಥಳವು ಅತ್ಯುತ್ತಮ ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆಗೆ ಹೆಸರುವಾಸಿಯಾಗಿದೆ. ಹಾಗಾಗಿ ಬೆಳಗ್ಗೆ ಹಾಗೂ ಸಂಜೆಯ ಹೊತ್ತಿನಲ್ಲಿ ಹೆಚ್ಚಿನ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಇದು ಗ್ಯಾಂಗ್ಟಾಕ್ನ ದೃಶ್ಯಾವಳಿಗಾಗಿ ಒಂದು ಪರಿಪೂರ್ಣ ಸ್ಥಳವಾಗಿದೆ.

ತಾಶಿ ವ್ಯೂ ಪಾಯಿಂಟ್

ತಾಶಿ ವ್ಯೂ ಪಾಯಿಂಟ್

PC: Subhrajyoti07
ತಾಶಿ ವ್ಯೂ ಪಾಯಿಂಟ್ ಸಹ ಪ್ರಕೃತಿ ಪ್ರೇಮಿಗಳಿಗೆ ಒಂದು ಗಮನಾರ್ಹವಾದ ಸ್ಥಳವಾಗಿದೆ. ಗಲಭೆಯಿಂದ ದೂರ ಶಾಂತಿಯುತ ಸಮಯವನ್ನು ಕಳೆಯಲು ಒಂದು ಉತ್ತಮ ಅವಕಾಶವಾಗಿದೆ. ಈ ವೀಕ್ಷಣ ತಾಣವನ್ನು ತಲುಪಲು ಕೆಲವು ಮೆಟ್ಟಿಲುಗಳನ್ನು ಏರುವ ಅಗತ್ಯವಿದೆ. ಒಮ್ಮೆಗೆ 15 ರಿಂದ 20 ಜನರು ಇಲ್ಲಿ ದೃಶ್ಯ ವೀಕ್ಷಣೆಯನ್ನು ಮಾಡಬಹುದು.

ಟೆಲಿಸ್ಕೋಪ್‌

ಟೆಲಿಸ್ಕೋಪ್‌

PC: File Upload Bot
ವ್ಯೂ ಪಾಯಿಂಟ್‌ನಲ್ಲಿ ಟೆಲಿಸ್ಕೋಪ್‌ ನ್ನು ಅಲ್ಲಿ ಅಳವಡಿಸಲಾಗಿದೆ. ಇದರ ಮೂಲಕ ಸುತ್ತಮುತ್ತಲ ತಾಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳ ಬಹುದು. ಟೆಲಿಸ್ಕೋಪ್‌ನಲ್ಲಿ ದೃಶ್ಯ ವೀಕ್ಷಣೆ ಮಾಡಲು 10 ರೂ. ಶುಲ್ಕ ನೀಡಬೇಕು. ಇಲ್ಲಿನ ಕ್ಯಾಫಿಟೇರಿಯಾದಲ್ಲಿ ಟೀ, ಕಾಫಿ, ಸ್ನ್ಯಾಕ್ಸ್ ದೊರೆಯುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Bernard Gagnon
ಈ ಆಕರ್ಷಣೆಗೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಮಾರ್ಚ್ ನಿಂದ ಜೂನ್ ವರೆಗೆ. ಈ ಸಮಯದಲ್ಲಿ ಹವಾಮಾನವು ಆಹ್ಲಾದಕರ ಮತ್ತು ಬೆಚ್ಚಗಿನ ವಾತಾವರಣದಲ್ಲಿರುತ್ತದೆ. ತಾಶಿ ವ್ಯೂ ಪಾಯಿಂಟ್ ಗ್ಯಾಂಗ್ಟಾಕ್ ಪಟ್ಟಣದ ಮತ್ತು ಬಕ್ಥಾಂಗ್ ಜಲಪಾತದ ಬಳಿ ಸುಮಾರು 8 ಕಿ.ಮೀ. ದೂರದಲ್ಲಿದೆ. ನೀವು ಟ್ಯಾಕ್ಸಿ ಮೂಲಕ ತಾಶಿ ವ್ಯೂ ಪಾಯಿಂಟ್ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X