Search
  • Follow NativePlanet
Share
» »ಶಿವನನ್ನು ಇಲ್ಲಿ ಸುಂದರೇಶ್ವರ ಎಂದು ಪೂಜಿಸಲಾಗುತ್ತಿದೆ

ಶಿವನನ್ನು ಇಲ್ಲಿ ಸುಂದರೇಶ್ವರ ಎಂದು ಪೂಜಿಸಲಾಗುತ್ತಿದೆ

ಕಣ್ಣೂರಿನಿಂದ ಕೇವಲ 2 ಕಿ.ಮೀ. ದೂರದಲ್ಲಿರುವ ಸುಂದರೇಶ್ವರ ದೇವಸ್ಥಾನವು ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರವಾಗಿದೆ.

ಶಿವನನ್ನು ಸುಂದರೇಶ್ವರ ಎಂದು ಪೂಜಿಸುವ ಈ ವಿಶೇಷ ದೇವಾಲಯವು ಕೇರಳದ ಕಣ್ಣೂರಿನಲ್ಲಿದೆ. ಸಾಮಾಜಿಕ ಸುಧಾರಣೆಗಳ ಹರಿಕಾರ ಎಂದೇ ಕರೆಯಲಾಗುವ ನಾರಾಯಣ ಗುರುಗಳು ಸ್ಥಾಪಿಸಿದ ಈ ದೇವಸ್ಥಾನದ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

PC:Facebook
ಕಣ್ಣೂರಿನಿಂದ ಕೇವಲ 2 ಕಿ.ಮೀ. ದೂರದಲ್ಲಿರುವ ಸುಂದರೇಶ್ವರ ದೇವಸ್ಥಾನವು ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರವಾಗಿದೆ. ಕೇರಳಾದ ಹೆಸರಾಂತ ಧಾರ್ಮಿಕ ನಾಯಕರಾದ ಶ್ರೀ ನಾರಾಯಣ ಗುರು 1916 ರಲ್ಲಿ ಈ ಆರಾಧನಾ ಸ್ಥಳವನ್ನು ಗುರುತಿಸಿದ್ದಾರೆ.

 ಸುಂದರೇಶ್ವರ ದೇವಸ್ಥಾನ

ಸುಂದರೇಶ್ವರ ದೇವಸ್ಥಾನ

PC:Facebook

ದಕ್ಷಿಣದ ಅತ್ಯಂತ ಜನಪ್ರಿಯ ಮತ್ತು ಹೆಚ್ಚಿನ ಜನರು ಭೇಟಿ ನೀಡುವಂತಹ ದೇವಸ್ಥಾನವೆಂದರೆ ಕಣ್ಣೂರಿನ ಸುಂದರೇಶ್ವರ ದೇವಸ್ಥಾನ. ಎಲ್ಲಾ ಶಿವ ಭಕ್ತರಿಗೆ ಇದು ಸ್ವರ್ಗೀಯ ಸ್ಥಳವಾಗಿದೆ. ಇಲ್ಲಿ ಶಿವನನ್ನು ಸುಂದರೇಶ್ವರ ಎಂದು ಪೂಜಿಸಲಾಗುತ್ತದೆ. ಸುಂದರೇಶ್ವರ ಎಂದರೆ 'ಸೌಂದರ್ಯದ ದೇವರು' ಎಂದರ್ಥ.
ಕಣ್ಣೂರಿನ ಅತೀ ದೊಡ್ಡ ದೇವಾಲಯ

ಕಣ್ಣೂರಿನ ಅತೀ ದೊಡ್ಡ ದೇವಾಲಯ

PC:Facebook
ಕಣ್ಣೂರು ಜಿಲ್ಲೆಯ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿರುವ ಈ ದೇವಾಲಯವು 1916 ರಲ್ಲಿ ನಿರ್ಮಿಸಲ್ಪಟ್ಟಿದೆ. ಅದರ ಭವ್ಯತೆಯನ್ನು ಕೇವಲ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಈ ಭವ್ಯವಾದ ದೇವಸ್ಥಾನದ ಒಳಾಂಗಣವನ್ನು ಪ್ರಖ್ಯಾತ ಕಲಾವಿದ ಮತ್ತು ಉತ್ಕಟ ಶಿವ ಭಕ್ತ, ಶ್ರೀ ಚೈತನ್ಯಾಲ್ ಸ್ವಾಮಿ ವಿನ್ಯಾಸಗೊಳಿಸಿದ್ದಾರೆ.

ಇತಿಹಾಸದ ಪ್ರಕಾರ

ಇತಿಹಾಸದ ಪ್ರಕಾರ

PC:Facebook

ಇತಿಹಾಸ ಹೇಳುವ ಪ್ರಕಾರ ಶ್ರೀ ನಾರಾಯಣ ಗುರು ಪ್ರತಿಷ್ಠಾಪಿಸಿದ ನಾಲ್ಕು ದೇವಾಲಯಗಳಲ್ಲಿ ಸುಂದರೇಶ್ವರ ದೇವಸ್ಥಾನ ಅತ್ಯಂತ ಹೆಸರುವಾಸಿಯಾದದ್ದು. ಸುಂದರೇಶ್ವರನ ರೂಪದಲ್ಲಿ ಇಲ್ಲಿ ಶಿವ ಕಂಡು ಬಂದಿದ್ದು ಆತನನ್ನು ಸೌಂದರ್ಯ ದೇವತೆಯನ್ನಾಗಿ ಆರಾಧಿಸಲಾಗುತ್ತದೆ. ಸುಂದರೇಶ್ವರ ದೇವಸ್ಥಾನ ಎಲ್ಲಾ ಜಾತಿ ಹಾಗೂ ಭಾಷೆಯ ಜನರಿಗೆ ತೆರೆದಿದ್ದು ಇಡೀ ದಕ್ಷಿಣ ಭಾರತದಲ್ಲೇ ಇದು ವಿಶೇಷವಾಗಿ ಕಂಗೊಳಿಸುತ್ತದೆ.

ನಾರಾಯಣ ಗುರು ಸ್ಥಾಪಿಸಿದ್ದು

ನಾರಾಯಣ ಗುರು ಸ್ಥಾಪಿಸಿದ್ದು

PC:Facebook

ನಾರಾಯಣ ಗುರು ಈ ದೇವಾಲಯವನ್ನು ನಿರ್ಮಿಸಲು ಅಡಿಪಾಯ ಹಾಕಿದವರು. ತಮ್ಮನ್ನು ತಾವು ಸಾಮಾಜಿಕ ಸುಧಾರಣೆಗಳಲ್ಲಿ ತೊಡಗಿಸಿಕೊಂಡಿದ್ದ ನಾರಾಯಣ ಗುರುಗಳು ಹಿಂದುಳಿದ ವರ್ಗಗಳ ಜನರು ದೇವಸ್ಥಾನಗಳಿಗೆ ಪ್ರವೇಶಿಸಬೇಕು, ಪ್ರಾಣಿ ಬಲಿ ಹಾಗೂ ಇನ್ನಿತರ ವಿವೇಚನಾರಹಿತ ಮೂಢನಂಬಿಕೆಗಳನ್ನು ತೊಡೆದುಹಾಕುವ ಉದ್ದೇಶದಿಂದ ಈ ಸುಂದರೇಶ್ವರ ದೇವಸ್ಥಾನವನ್ನು ನಿರ್ಮಿಸಿದರು.
ಪ್ರಮುಖ ಉತ್ಸವ

ಪ್ರಮುಖ ಉತ್ಸವ

PC:Facebook

ಪ್ರತೀ ವರ್ಷ ಏಪ್ರಿಲ್ - ಮೇ ತಿಂಗಳಲ್ಲಿ ದೇವಸ್ಥಾನದಲ್ಲಿ ಪ್ರಮುಖ ಉತ್ಸವ ನಡೆಯುತ್ತದೆ. ಸುಮಾರು 8 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆ ಹಾಗೂ ಪಟಾಕಿ ಹೊಡೆಯುವುದು ವಿಶೇಷ ಆಕರ್ಷಣೆಯಾಗಿರುತ್ತದೆ. ಉತ್ಸವದ ಕೊನೆಯ ದಿನ ಅರಟ್ಟು ಎನ್ನುವ ಪವಿತ್ರ ಸ್ನಾನ ನಡೆಯುತ್ತದೆ. ಇದು ಶಿವನ ಭಕ್ತರು ಪಯ್ಯಾಂಬಲ ಬೀಚ್‌ನಲ್ಲಿ ಸ್ನಾನ ಮಾಡುತ್ತಾರೆ. ಕೊನೆಗೆ ಈ ಉತ್ಸವವು ಆನೆ ಸವಾರಿ ಹಾಗೂ ಪಟಾಕಿ ಹೊಡೆಯುವ ಮೂಲಕ ಸಂಭ್ರಮಿಸಲಾಗುತ್ತದೆ. ಬೇಸಿಗೆಯಲ್ಲಿ ನಡೆಯುವ ಈ ಉತ್ಸವ ಎಲ್ಲರಿಗೂ ಬಲು ಪ್ರಿಯವಾದದ್ದು, ವರ್ಷದ ಯಾವುದೇ ಸಮಯದಲ್ಲಾದರೂ ಈ ದೇವಸ್ಥಾನಕ್ಕೆ ಭೇಟಿ ನೀಡಬಹುದು.

ತಲುಪವುದು ಹೇಗೆ?

ತಲುಪವುದು ಹೇಗೆ?

ಕಣ್ಣೂರು ನಗರ ಕೇಂದ್ರದಿಂದ ಕೇವಲ 3 ಕಿ.ಮೀ ದೂರದಲ್ಲಿರುವ ಸುಂದರೇಶ್ವರ ದೇವಸ್ಥಾನವನ್ನು ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ಮೂಲಕ ಸುಲಭವಾಗಿ ತಲುಪಬಹುದು. ಕಣ್ಣೂರು ಬಸ್ ನಿಲ್ದಾಣವು ಒಂದೇ ರಸ್ತೆಯ ಮೂಲಕ 1.3 ಕಿಮೀ ದೂರದಲ್ಲಿದೆ. ಕೆಎಸ್ಆರ್‌ಟಿಸಿ ನಗರದ ಸುತ್ತಲೂ ಅನೇಕ ಬಸ್ಸುಗಳನ್ನು ಹೊಂದಿದೆ. ಇಲ್ಲಿಂದ, ನೀವು ದೇವಸ್ಥಾನಕ್ಕೆ ಕ್ಯಾಬ್ ಅಥವಾ ಆಟೋವನ್ನು ಬಾಡಿಗೆಗೆ ಪಡೆದುಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X