Search
  • Follow NativePlanet
Share
» »ಸಾವನದುರ್ಗದಿಂದ ದೊಡ್ಡ ಆಲದಮರ

ಸಾವನದುರ್ಗದಿಂದ ದೊಡ್ಡ ಆಲದಮರ

By Vijay

ಬೆಟ್ಟ ಹತ್ತುವಂತಹ ಸಾಹಸಮಯ, ರೋಮಾಂಚನಭರಿತ ಚಟುವಟಿಕೆ ಮಾಡುವುದೆಂದರೆ ಯುವ ಪೀಳಿಗೆಗೆ ಎಲ್ಲಿಲ್ಲದ ಸಂತಸ ಉಂಟಾಗುತ್ತದೆ. ಅದರಲ್ಲೂ ಶಿಲಾ ಬೆಟ್ಟವನ್ನು ಕೊಂಚ ಕಷ್ಟಪಟ್ಟು, ನಿಮ್ಮ ಧೈರ್ಯ, ಸಾಮರ್ಥ್ಯಕ್ಕನುಸಾರವಾಗಿ ಹತ್ತುವುದೆಂದರೆ ಒಂದು ಸವಾಲೆ ಹೌದು. ಅಂತಹ ಒಂದು ಅವಕಾಶಕ್ಕೆ ಎಡೆಮಾಡಿಕೊಡುತ್ತದೆ ಸಾವನದುರ್ಗ ಎಂಬ ಅದ್ಭುತ ಬೆಟ್ಟ.

ಒಂದು ದಿನ ಸಮಯವಿದ್ದರೆ ಸಾಕು ಬೆಂಗಳೂರಿನಿಂದ ಒಂದು ಅದ್ಭುತ ಶೀಘ್ರ ಪ್ರವಾಸ ಮಾಡಬಹುದು. ಒಂದು ಏರುವ ಮಜ ಕೊಟ್ಟರೆ ಇನ್ನೊಂದು ಪ್ರಕೃತಿಯ ವಿಸ್ಮಯವನ್ನು ಅನಾವರಣಗೊಳಿಸುತ್ತದೆ. ಹೌದು ಸಾವನದುರ್ಗದಿಂದ ದೊಡ್ಡ ಆಲದಮರದ ವರೆಗಿನ ಒಂದು ಪ್ರವಾಸ ನಿಮ್ಮೆಲ್ಲ ಒತ್ತಡಗಳನ್ನು ಒಂದು ಕ್ಷಣದಲ್ಲಿ ಕರಗಿಸಿಬಿಡುತ್ತದೆ.

ಸಾವನದುರ್ಗ ಬೆಂಗಳೂರಿನಿಂದ ಸುಮಾರು 60 ಕಿ.ಮೀ ಗಳಷ್ಟು ದೂರವಿದೆ. ಹೋಗಲು ಎರಡು ಆಯ್ಕೆಗಳಿವೆ. ಒಂದು ಮಾಗಡಿ ಮೂಲಕವಾಗಿದ್ದರೆ ಇನ್ನೊಂದು ಮೈಸೂರು ರಸ್ತೆಯ ಮೂಲಕವಾಗಿದೆ. ಆದರೆ ನೀವು ಯಾವ ಸ್ಥಳ ಮೊದಲು ಭೇಟಿ ಮಾಡಲು ಇಷ್ಟ ಪಡುವಿರೊ ಆಯ್ಕೆ ಅದರ ಮೇಲೆ ಅವಲಂಬಿತವಾಗಿದೆ. ಏಕೆಂದರೆ ಬೆಟ್ಟ ಹತ್ತಲು ಬೆಳಗಿನ ಸಮಯ ಪ್ರಶಸ್ತವಾಗಿರುವುದರಿಂದ ಮೊದಲು ಸಾವನದುರ್ಗಕ್ಕೆ ಭೇಟಿ ನೀಡುವುದು ಉತ್ತಮ.

ಬೆಂಗಳೂರಿನಿಂದ ಮಾಗಡಿ ಹಾಗೂ ನಾಯಕನಪಾಳ್ಯದ ಮೂಲಕ ಸಾವನದುರ್ಗ ತಲುಪಬಹುದು. ಬಸ್ಸಿನಲ್ಲಿ ತೆರಳಲು ಬಯಸಿದ್ದರೆ ಕೆ.ಆರ್ ಮಾರುಕಟ್ಟೆಯಿಂದ ಮಾಗಡಿಗೆ ದೊರೆಯುವ ಬಸ್ಸನ್ನು ಹತ್ತಿ ಮಾಗಡಿಯ ಮುಂಚೆ ಬರುವ ರಾಮನಗರಂ ರಸ್ತೆ ನಿಲ್ದಾಣದಲ್ಲಿ ಇಳಿಯಬೇಕು. ಇಲ್ಲಿಂದ ರಾಮನಗರಂಗೆ ಹೊರಡುವ ಬಸ್ಸುನ್ನೇರಿ ನಾಯಕನಪಾಳ್ಯ ನಿಲ್ದಾಣದಲ್ಲಿ ಇಳಿಯಬೇಕು. ಸಾವನದುರ್ಗ ಇಲ್ಲಿಂದ ಕೇವಲ ನಾಲ್ಕು ಕಿ.ಮೀ ದೂರ. ಬೇಕಿದ್ದರೆ ನಡೆಯಬಹುದು ಇಲ್ಲವೆ ಆಟೊಗಳನ್ನೂ ಸಹ ಪಡೆಯಬಹುದು.

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ನಿಮ್ಮ ಸ್ವಂತ ವಾಹನ ಇಲ್ಲವೆ ಬಾಡಿಗೆಗೆ ಪಡೆದ ವಾಹನವಿದ್ದರೆ ಬೆಳಿಗ್ಗೆ ಬೇಗನೆಯೆ ಬೆಂಗಳೂರನ್ನು ಬಿಟ್ಟು ಆದಷ್ಟು ಎಂಟು ಘಂಟೆಯ ಮುಂಚೆಯೆ ಸಾವನದುರ್ಗದಲ್ಲಿರುವ ಹಾಗೆ ನೋಡಿಕೊಂಡರೆ ಒಳಿತು. ಏಕೆಂದರೆ ಈ ಸಮಯದಲ್ಲಿ ಸೂರ್ಯ ಕಿರಣಗಳು ತಿಳಿಯಾಗಿರುವುದಲ್ಲದೆ, ತಾಪಮಾನವು ಹಿತಕರವಾಗಿರುತ್ತದೆ. ಆದ್ದರಿಂದ ಬೆಟ್ಟ ಹತ್ತಲು ಸಾಕಷ್ಟು ಆಯಾಸ ಪಡಬೇಕಾಗಿಲ್ಲ.

ಚಿತ್ರಕೃಪೆ: PlaneMad

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಇನ್ನೂ ಬೆಟ್ಟ ಹತ್ತುವಾಗ ಸಾಕಷ್ಟು ಜಾಗರೂಕತೆವಹಿಸುವುದು ಅವಶ್ಯ. ಏಕೆಂದರೆ ಕೆಲವು ಕಡೆಗಳಲ್ಲಿ ಬೆಟ್ಟವು ಹೆಚ್ಚಿಗೆ ಲಂಬವಾಗಿರುವುದರಿಂದ ಏರುವುದು ಕಷ್ಟವಾಗಬಹುದು. ಒಳ್ಳೆಯ ಹಿಡಿತ (ಗ್ರಿಪ್) ವಿರುವ ಬೂಟು ಧರಿಸಿದ್ದರೆ ಉತ್ತಮ.

ಚಿತ್ರಕೃಪೆ: Dhruvaraj S

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಸಾಗುವಾಗ ಅಲ್ಲಲ್ಲಿ ಬೆಟ್ಟದ ಬಂಡೆಗಳ ಮೇಲೆ ಸಾಗುವ ದಿಕ್ಕುಗಳನ್ನು ಕೊರೆಯಲಾಗಿದೆ ಹಾಗೂ ಬರೆಯಲಾಗಿದೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಏರಬೇಕು. ಎಲ್ಲೆಂದರಲ್ಲಿ ಏರಲು ಅವಕಾಶವಿಲ್ಲ. ಏಕೆಂದರೆ ಕೆಲವು ಕಡೆಗಳಲ್ಲಂತೂ ಬೆಟ್ಟವು ಬಹುತೇಕ ಲಂಬವಾಗಿರುವುದೆ ಇದಕ್ಕೆ ಕಾರಣ.

ಚಿತ್ರಕೃಪೆ: Chris Conway, Hilleary Osheroff

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ನಿಧಾನವಾಗಿ ಏರುತ್ತ ಅಲ್ಲಲ್ಲಿ ಆಯಾಸಗೊಂಡಾಗ ಕುಳಿತು ಶೀಘ್ರ ವಿಶ್ರಾಂತಿ ಪಡೆಯಬಹುದಾಗಿದೆ. ಇನ್ನೊಂದು ವಿಷಯವೆಂದರೆ ಮಳೆಗಾಲದಲ್ಲಿ ಅದರಲ್ಲೂ ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಈ ಬೆಟ್ಟ ಏರುವುದು ಅತಿ ಅಪಾಯಕಾರಿ. ಜಾರುವಿಕೆ ತೀಕ್ಷ್ಣವಾಗಿರುತ್ತದೆ. ಸಾವನದುರ್ಗ ಬೆಟ್ಟವನ್ನು ಬಹುತೇಕವಾಗಿ ಕ್ರಮಿಸಿದಾಗ ಒಂದು ಚಿಕ್ಕ ಕೊಳವು ಕಾಣಸಿಗುತ್ತದೆ. ಈ ದೃಶ್ಯ ಅಹ್ಲಾದಕರ ಅನುಭವವನ್ನುಂಟು ಮಾಡುತ್ತದೆ.

ಚಿತ್ರಕೃಪೆ: lohit v

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಮೇಲೆ ಸಾಗುವಾಗ ಅಲ್ಲಲ್ಲಿ ಚಿಕ್ಕ ಪುಟ್ಟ ನೆರಳಿರುವ ಸ್ಥಳಗಳು ಕಂಡುಬರುತ್ತವೆ. ಇಲ್ಲಿ ವಿಶ್ರಾಂತಿ ಪಡೆಯಬಹುದು. ಮತ್ತೊಂದು ವಿಷಯವೆಂದರೆ ಇಂತಹ ಸ್ಥಳಗಳಲ್ಲಿ ಸ್ಥಳೀಯವಾಗಿ ದೊರಕುವ ಲಘು ಆಹಾರಗಳು/ಪಾನೀಯಗಳು ದೊರೆಯುತ್ತವೆ.

ಚಿತ್ರಕೃಪೆ: Manish Chauhan

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಚಿಕ್ಕ ಪುಟ್ಟ ಹುಡುಗರು ಪರ್ವತಾರೋಹಿಗಳಿಗೆಂದೆ ಆಗುವ ಆಯಾಸ ಪರಿಹಾರದ ಉದ್ದೇಶದಿಂದ ಪಾನೀಯಗಳನ್ನು, ಲಘು ಕುರುಕಲು ತಿಂಡಿ ತಿನಿಸುಗಳನ್ನು ಮಾರುತ್ತಿರುತ್ತಾರೆ. ಹಣ ಸ್ವಲ್ಪ ಜಾಸ್ತಿ ಹೇಳುತ್ತಾರಾದರೂ ಅಂತಹ ಸಂದರ್ಭದಲ್ಲಿ ದೊರಕಿದ ತಂಪು ಪಾನೀಯ ಮತ್ತು ಮಾರುವವರೂ ಕೂಡ ಮೇಲೆರಿ ಸೇವೆ ಒದಗಿಸುವುದರಿಂದ ಬೆಲೆ ಯೋಗ್ಯವೆನಿಸಬಹುದು.

ಚಿತ್ರಕೃಪೆ: PlaneMad

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಪ್ರಮುಖವಾಗಿ ಸಾವನದುರ್ಗ ಬೆಟ್ಟವು ಮೇಲಿರುವ ಪುಟ್ಟ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ ಅಲ್ಲದೆ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟಗಳ ಪೈಕಿ ಇದೂ ಒಂದಾಗಿದೆ. ಸ್ಥಳೀಯವಾಗಿ ಸಾವನದುರ್ಗವು ಕರಿಗುಡ್ಡ (ಕಪ್ಪು ಬೆಟ್ಟ) ಮತ್ತು ಬಿಳಿಗುಡ್ಡ (ಬಿಳಿ ಬೆಟ್ಟ) ಎಂಬ ಹೆಸರು ಹೊಂದಿರುವ ಎರಡು ಬೆಟ್ಟಗಳಿಂದ ಕೂಡಿದೆ.

ಚಿತ್ರಕೃಪೆ: Sudarshana

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಪ್ರಥಮವಾಗಿ ಈ ಬೆಟ್ಟದ ಹೆಸರು ಸಾವಂಡಿ ಎಂದಾಗಿತ್ತು. ಇದು ಕ್ರಿ.ಶ. 1340 ರಲ್ಲಿ ಮಾಡಬಲುವಿನ ಮೂರನೇಯ ಹೊಯ್ಸಳ ಬಲ್ಲಾಳ ಅವಧಿಯಲ್ಲಿ ದಾಖಲಾಗಿದ್. ಮುಂದೆ ಇದರ ಹೆಸರು ಅಚ್ಯುತರಾಯನ ಅಧೀನದ ಮಾಗಡಿಯ ಗವರ್ನರ್ ಸಾಮಂತರಾಯ ನಿಗೆ ಸೇರಿದ್ದೆಂದು ಹೇಳಲಾದ ಸಾಮಂತದುರ್ಗದಿಂದ ಹುಟ್ಟಿಕೊಂಡಿದೆಯೆಂದು ಮತ್ತೊಂದು ಅವಲೋಕನವು ಸೂಚಿಸುತ್ತದೆ. ಆದರೆ ಇದನ್ನು ದೃಢಪಡಿಸುವ ಯಾವುದೇ ಲಿಖಿತ ದಾಖಲೆಗಳು ದೊರೆತಿಲ್ಲ.

ಚಿತ್ರಕೃಪೆ: PlaneMad

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಈ ಪ್ರದೇಶದಲ್ಲಿ ಬೃಹತ್ ಶಿಲೆಯ ಸಮಾಧಿಗಳು ಕಂಡುಬಂದಿವೆ. ಸಂಸ್ಕೃತದಲ್ಲಿ ಸಾವಣವೆಂದರೆ ಮೂರು ಬಾರಿ ಮಾಡುವ ವಿಧಿವಿಹಿತ ಕ್ರಮವೆಂದು ಅರ್ಥ. ಸಾವನದುರ್ಗ ಬೆಟ್ಟಕ್ಕೆ ಮಳೆಗಾಲ ಹೊರತುಪಡಿಸಿ ಪ್ರವಾಸಿಗರು ಯಾವಾಗಲೂ ಭೇಟಿ ನೀಡುತ್ತಿರುತ್ತಾರೆ.

ಚಿತ್ರಕೃಪೆ: Dhruvaraj S

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಬೆಟ್ಟದ ಹೊರತಾಗಿ ಸಾವನದುರ್ಗವು ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇವಸ್ಥಾನಗಳಿಗೆ ಹೆಸರುವಾಸಿಯಾಗಿದೆ. ವಿಹಾರ ಪ್ರವಾಸಿಗಳು ದೇವರ ದರುಶನ ಕೋರಿ, ಬೆಟ್ಟದ ಮೇಲಿರುವ ನಿರ್ಮಲವಾದ ಪ್ರಶಾಂತ ಪರಿಸರದಲ್ಲಿ ಸಮಯ ಕಳೆಯಲು ಬರುತ್ತಿರುತ್ತಾರೆ. ಅಲ್ಲದೆ ಶಿಲಾ ಆರೋಹಿಗಳು, ಗುಹೆ ಅನ್ವೇಷಕರು ಮತ್ತು ಸಾಹಸಿಗಳು ಈ ಸ್ಥಳಕ್ಕೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.

ಚಿತ್ರಕೃಪೆ: lohit v

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಒಂದು ಚಿಕ್ಕ ಸಂಗತಿಯೆಂದರೆ, ಮಾಗಡಿ (ಸಾವನದುರ್ಗಕ್ಕೆ ತಲುಪಲು ಮಾಗಡಿಗಿಂತ ಮುಂಚೆಯೆ ನಾಯಕನಪಾಳ್ಯಕ್ಕೆ ತೆರಳಬೇಕಾಗಿರುತ್ತದೆ) ಮೂಲಕ ಸಾವನದುರ್ಗಕ್ಕೆ ಸಾಗುವಾಗ ಮಾಗಡಿಯ ಪ್ರಖ್ಯಾತ ರಂಗನಾಥ ಸ್ವಾಮಿಯ ದೇಗುಲ ನೋಡುವುದನ್ನು ಮರೆಯದಿರಿ. ಚೋಳರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ ಇಂದಿಗೂ ಭಕ್ತಾದಿಗಳನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Dineshkannambadi

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಮುಖ್ಯ ದೇವಾಲಯವಲ್ಲದೆ ಹಲವು ಇತರೆ ದೇಗುಲಗಳನ್ನು ಇಲ್ಲಿ ಕಾಣಬಹುದಾಗಿದೆ. ಮಾಗಡಿಯ ಸೋಮೇಶ್ವರ ದೇವಾಲಯ.

ಚಿತ್ರಕೃಪೆ: Dineshkannambadi

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಇತ್ತ, ಸಾವನದುರ್ಗ ಬೆಟ್ಟ ಏರಿ ಹೆಮ್ಮೆ ಪಟ್ಟು, ಕುಣಿದು ಕುಪ್ಪಳಿಸಿದ ನಂತರ ನಿಧಾನವಾಗಿ ಕೆಳಗಿಳಿಯುತ್ತ ಸುತ್ತಮುತ್ತಲಿನ ಸುಂದರ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಬಹುದು. ಮೇಲಿನಿಂದ ಕಂಡುಬರುವ ಮಂಚನಬೆಲೆ ಜಲಾಶಯದ ನೋಟ ರೋಮಾಂಚನವನ್ನುಂಟು ಮಾಡುವುದರಲ್ಲಿ ಸಂಶಯವಿಲ್ಲ.

ಚಿತ್ರಕೃಪೆ: Chris Conway, Hilleary Osheroff

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಇಳಿದ ಮೇಲೆ ತುಸು ಹೊತ್ತು ವಿಶ್ರಾಂತಿ ಪಡೆದು ಬಂದ ರಸ್ತೆಗೆ ವಿರುದ್ಧವಾಗಿ ನಾಯಕನಪಾಳ್ಯದ ಮುಂದೆ ಎಡ ತಿರುವು ಪಡೆದು ಸಾವನದುರ್ಗ - ಮಂಚನಬೆಲೆ ರಸ್ತೆಯ ಮೇಲೆ ಸಾಗುತ್ತ ಚಿಕ್ಕನಹಳ್ಳಿಯವರೆಗೂ ಚಲಿಸಬೇಕು. ಇಲ್ಲಿಂದ ಮುಂದೆ ಬ್ಯಾಲಾಳು - ರಾಮೋಹಳ್ಳಿ ರಸ್ತೆಯ ಮೂಲಕ ಸಾಗುತ್ತ ದೊಡ್ಡ ಆಲದಮರಕ್ಕೆ ತಲುಪಬಹುದು. ಸಾವನದುರ್ಗದಿಂದ ದೊಡ್ಡ ಆಲದ ಮರಕ್ಕೆ ಒಟ್ಟು ದೂರ ಕೇವಲ 23 ಕಿ.ಮೀ ಗಳಷ್ಟು ಮಾತ್ರ.

ಚಿತ್ರಕೃಪೆ: Earth-Bound Misfit, I

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಕೇತೋಹಳ್ಳಿ ಎಂಬ ಗ್ರಾಮಕ್ಕೆ ಒಳಪಡುವ ಈ ದೊಡ್ಡ ಆಲದ ಮರವು ಸುಮಾರು 400 ವರ್ಷಗಳಷ್ಟು ಹಳೆಯದಾದುದು ಎಂದು ಹೇಳಲಾಗಿದೆ. ಈ ಒಂದು ಏಕೈಕ ಮರವು ಸುಮಾರು ಮೂರು ಎಕರೆಗಳಷ್ಟು ಪ್ರದೇಶವನ್ನು ಬಾಚಿಕೊಂಡಿದೆ.

ಚಿತ್ರಕೃಪೆ: Sreejithk2000

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಎಲ್ಲ ರೆಂಬೆ ಕೊಂಬೆಗಳನ್ನು ಗಣನೆಗೆ ತೆಗೆದುಕೊಂಡು ಅಳೆದಾಗ ಇದರ ಒಟ್ಟಾರೆ ಸುತ್ತಳತೆ 250 ಮೀ ಗಳಷ್ಟಿದೆ ಹಾಗೂ ಸಾವಿರಕ್ಕಿಂತ ಹೆಚ್ಚು ತೆರೆದ ಬೇರುಗಳನ್ನು ಈ ಬೃಹತ್ ವೃಕ್ಷ ಹೊಂದಿದೆ. 2000 ರಲ್ಲಿ ಮರದ ಮುಖ್ಯ ಬೇರು ನೈಸರ್ಗಿಕ ರೋಗ ಪೀಡಿತವಾಗಿ ನಾಶಗೊಂಡಿತು. ಆದ್ದರಿಂದ ಪ್ರಸ್ತುತ ಮರವು ಕೇವಲ ಒಂದು ಮರವಲ್ಲದೆ ಹಲವಾರು ಮರಗಳಿವೆ ಎಂಬಂತೆ ಗೋಚರಿಸುತ್ತದೆ.

ಚಿತ್ರಕೃಪೆ: Kiran Gopi

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಈ ವಿಶಾಲವಾದ ಮರದ ಸುತ್ತುಮುತ್ತು ಸಾಕಷ್ಟು ಉಪಹಾರ ಗೃಹಗಳು, ಇತರೆ ಅಂಗಡಿ ಮುಗ್ಗಟ್ಟುಗಳಿವೆ. ಅಲ್ಲದೆ ರಸ್ತೆ ಬದಿಯ ತಿಂಡಿ ತಿನ್ನಬೇಕೆನಿಸಿದರೆ ಅದೂ ಕೂಡ ಲಭ್ಯವಿರುತ್ತದೆ.

ಚಿತ್ರಕೃಪೆ: BostonMA

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಮರದ ಉದ್ಯಾನದಲ್ಲಿ ನಿಮಗೆ ಬೇಕೆನಿಸಿದಷ್ಟು ಸಮಯ ಕಳೆದು ಮತ್ತೆ ಬೆಂಗಳೂರಿಗೆ ಹೊರಡಲು ಸಿದ್ಧರಾಗಿ. ಕೇತೋಹಳ್ಳಿಯಿಂದ ರಾಮೋಹಳ್ಳಿ ಮಾರ್ಗವಾಗಿ ಚಲಿಸುತ್ತ ಮುಂದೆ ಬೆಂಗಳೂರು - ಮೈಸೂರು ಮುಖ್ಯ ರಸ್ತೆಯನ್ನು ರಾಜರಾಜೇಶ್ವರಿ ನರ್ಸಿಂಗ್ ಕಾಲೇಜು ಬಳಿ ಸಂಪರ್ಕಿಸಬಹುದು. ಇಲ್ಲಿಂದ (ದೊಡ್ಡ ಆಲದ ಮರ) ಬೆಂಗಳೂರಿಗೆ ಒಟ್ಟು ದೂರ ಸುಮಾರು 30 ಕಿ.ಮೀ.

ಚಿತ್ರಕೃಪೆ: ไปไหนมา

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ದೊಡ್ಡ ಆಲದ ಮರ, ಕೇತೋಹಳ್ಳಿ.

ಚಿತ್ರಕೃಪೆ: Sreejithk2000

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ದೊಡ್ಡ ಆಲದ ಮರ, ಕೇತೋಹಳ್ಳಿ.

ಚಿತ್ರಕೃಪೆ: Sreejithk2000

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ, ಕರ್ನಾಟಕ

ಚಿತ್ರಕೃಪೆ: L. Shyamal

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ, ಕರ್ನಾಟಕ

ಚಿತ್ರಕೃಪೆ: Palash Ray

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ, ಕರ್ನಾಟಕ

ಚಿತ್ರಕೃಪೆ: Pavithrah

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ, ಕರ್ನಾಟಕ

ಚಿತ್ರಕೃಪೆ: L. Shyamal

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ, ಕರ್ನಾಟಕ

ಚಿತ್ರಕೃಪೆ: Mayur Panchamia

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ, ಕರ್ನಾಟಕ

ಚಿತ್ರಕೃಪೆ: Shyamal

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ - ದೊಡ್ಡ ಆಲದ ಮರ:

ಸಾವನದುರ್ಗ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ, ಕರ್ನಾಟಕ

ಚಿತ್ರಕೃಪೆ: Shashanktr

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X