Search
  • Follow NativePlanet
Share
» »ಹೃದಯವನ್ನೆ ಕದಿಯಬಲ್ಲ ಸಾಮರ್ಥ್ಯದ ಪೂವಾರ್

ಹೃದಯವನ್ನೆ ಕದಿಯಬಲ್ಲ ಸಾಮರ್ಥ್ಯದ ಪೂವಾರ್

By Vijay

ನಿಜ ಹೇಳಬೇಕೆಂದರೆ ಕೇರಳ ಮತ್ತು ಪ್ರವಾಸೊದ್ಯಮ ಈ ಎರಡು ಪದಗಳು ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿವೆ. ಪ್ರಶಾಂತಮಯ ಹಸಿರಿನ ವಾತಾವರಣ, ಎಲ್ಲೆಲ್ಲೂ ತೆಂಗಿನ ಮರಗಳು ಮತ್ತು ಆಕರ್ಷಕ ಕಡಲ ತೀರಗಳು, ಪ್ರಸನ್ನತೆಯ ಭಾವ ಮೂಡಿಸುವ ಹಿನ್ನೀರು ಮತ್ತು ಅದರ ಮೇಲೆ ತೇಲುತ್ತಿರುವ ದೋಣಿ ಮನೆಗಳು, ಬಹುಸಂಖ್ಯೆಯಲ್ಲಿರುವ ದೇವಸ್ಥಾನಗಳು, ಆಯುರ್ವೇದದ ಲಭ್ಯತೆ, ಮಂದ ಸರೋವರಗಳು ಮತ್ತು ಕೃತಕ ಕೊಳಗಳು, ಕಾಲುವೆಗಳು, ದ್ವೀಪಗಳು.....ಹೀಗೆ ನಿಲ್ಲಲಾರದ ಪಟ್ಟಿಯನ್ನು ಈ ಪ್ರದೇಶಕ್ಕೆ ಬರೆಯಬಹುದಾಗಿದೆ.

ವ್ಯಾಲಂಟೈನ್ ಕೊಡುಗೆ : ಹೋಟೆಲ್ ಬುಕ್ಕಿಂಗ್ ಮೇಲ 25% ರಷ್ಟು ರಿಯಾಯಿತಿ

ನ್ಯಾಷ್ನಲ್ ಜಿಯೋಗ್ರಾಫಿಕ್ ಅವರ 'ಟ್ರಾವ್ಲರ್' ನಿಯತಕಾಲಿಕ ಮತ್ತು 'ಟ್ರವೆಲ್ + ಲೈಸರ್' ಪ್ರಕಾರ 'ಜಗತ್ತಿನಲ್ಲಿನ ಹತ್ತು ಸ್ವರ್ಗಗಳು' ಮತ್ತು 'ಜೀವಮಾನದಲ್ಲಿ ನೋಡಲೇ ಬೇಕಾದ 50 ಸ್ಥಳಗಳು' ಮತ್ತು '21ನೇ ಶತಮಾನದಲ್ಲಿ ಪ್ರವಾಸಮಾಡಲು 100 ಅದ್ವಿತೀಯ ಸ್ಥಳಗಳಲ್ಲಿ ಒಂದು' ಎಂಬೆಲ್ಲ ಹೆಗ್ಗಳಿಕೆಯನ್ನು ಗಳಿಸಿಕೊಂಡಿರುವ ಈ ರಾಜ್ಯವು ಖಂಡಿತವಾಗಿಯು ಒಂದು ಅದ್ಭುತ ತಾಣವೆ ಸರಿ. ಇಲ್ಲಿರುವ ಪ್ರತಿಯೊಂದು ನಗರ, ಪಟ್ಟಣ ಮತ್ತು ದೂರದ ಹಳ್ಳಿಗಳು 'ಗಾಡ್ಸ್ ಒವ್ನ್ ಕಂಟ್ರಿ' ಅಥವಾ 'ದೇವರ ಸ್ವಂತ ದೇಶ' ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ತಮ್ಮದೆ ಆದ ರೋಚಕ ಕಥೆಗಳು ಮತ್ತು ಸದ್ದಿಲ್ಲದ ಆಹ್ವಾನಗಳಿಂದ ಸದಭಿರುಚಿಯ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ.

ವಿಶೇಷ ಲೇಖನ : ಸುಂದರ ಪ್ರವಾಸಿ ನಗರ ತಿರುವನಂತಪುರಂ

ಪ್ರಸ್ತುತ ಲೇಖನದ ಮೂಲಕ ಈ ರಾಜ್ಯದಲ್ಲಿರುವ ಒಂದು ಸುಂದರ ಕಡಲ ಗ್ರಾಮವಾದ ಪೂವಾರ್ ಕುರಿತು ತಿಳಿಯಿರಿ. ಕೇರಳ ರಾಜ್ಯದ ಬಹುತೇಕ ದಕ್ಷಿಣದ ತುದಿಯಲ್ಲಿ ನೆಲೆಸಿರುವ ಈ ಸುಂದರ ಕರಾವಳಿ ಹಳ್ಳಿಯು ರಾಜಧಾನಿ ನಗರವಾದ ತಿರುವನಂತಪುರಂ ಜಿಲ್ಲೆಯಲ್ಲಿದೆ.

ವಿಶೇಷ ಲೇಖನ : ಎಲ್ಲೂ ನೋಡಿದರೂ ನೀರು, ಇದು ಕುಮರಕಮ್ ವಿಶೇಷ

ಪೂವಾರ್ ಸುಂದರ ಕರಾವಳಿ ಹಳ್ಳಿ:

ಪೂವಾರ್ ಸುಂದರ ಕರಾವಳಿ ಹಳ್ಳಿ:

ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ಕಡಲತಡಿಯಲ್ಲಿರುವ ಚಿಕ್ಕ ಹಳ್ಳಿ ಪೂವಾರ್. ಪೂವಾರ್ ಗ್ರಾಮ ಕೇರಳದ ಗಡಿಪ್ರದೇಶಗಳಲ್ಲಿ ಒಂದಾದ ಭಾಗ. ಈ ಗ್ರಾಮ ನೈಸರ್ಗಿಕ ಬಂದರಾದ ವಿಳಿನಮ್ ಗೆ ಅತ್ಯಂತ ಹತ್ತಿರದಲ್ಲಿದೆ.

ಚಿತ್ರಕೃಪೆ: Nagesh Jayaraman

ಪೂವಾರ್ ಸುಂದರ ಕರಾವಳಿ ಹಳ್ಳಿ:

ಪೂವಾರ್ ಸುಂದರ ಕರಾವಳಿ ಹಳ್ಳಿ:

ಪೂವಾರ್ ಹಳ್ಳಿಯಲ್ಲಿಯೇ ನೆಯ್ಯಾರ್ ನದಿಯು ಸಮುದ್ರವನ್ನು ಸೇರುವ ಅಳಿವೆ ಭಾಗವಿದೆ. ಇದು ಪುರಾತನ ಕಾಲದಲ್ಲಿ ಮರಮುಟ್ಟು ಸಾಮಾಗ್ರಿ, ಸಾಂಬಾರು ಪದಾರ್ಥ, ಶ್ರೀಗಂಧ ಮತ್ತು ಆನೆಯ ದಂತದ ಪ್ರಮುಖ ಮಾರಾಟ ಕೇಂದ್ರವಾಗಿತ್ತು.

ಚಿತ್ರಕೃಪೆ: Anirban Roy

ಪೂವಾರ್ ಸುಂದರ ಕರಾವಳಿ ಹಳ್ಳಿ:

ಪೂವಾರ್ ಸುಂದರ ಕರಾವಳಿ ಹಳ್ಳಿ:

ಇಲ್ಲಿರುವ ಸಮುದ್ರ ದಂಡೆ ಪ್ರಶಾಂತ ಸ್ಥಳವಾಗಿದ್ದು ನಗರ ಜೀವನದ ಗೌಜು ಗದ್ದಲಗಳಿಂದ, ಹಲವಾರು ಪ್ರವಾಸಿ ತಾಣಗಳಲ್ಲಿರುವಂತಹ ಗಲಾಟೆಗಳಿಂದ ಮರೆಯಾಗಿ ದೂರದಲ್ಲಿದ್ದು ಶಾಂತವಾಗಿದೆ. ಪೂವಾರ್ ಹಳ್ಳಿ ಅತ್ಯಂತ ಸಣ್ಣ ಊರಾದ ಕಾರಣ ಇಲ್ಲಿ ವಾಸಿಸುವವರ ಸಂಖ್ಯೆಯೂ ಕಡಿಮೆ. ಇದು ನಗರದಿಂದ ಪ್ರತ್ಯೇಕವಾಗಿರುವ ಕಾರಣದಿಂದ ಪೂವಾರ್ ಬೀಚ್ ಏಕಾಂತ ಮತ್ತು ಪ್ರಶಾಂತತೆಯ ಅಧ್ಬುತವಾದ ತಾಣ.

ಚಿತ್ರಕೃಪೆ: Nagesh Jayaraman

ಪೂವಾರ್ ಸುಂದರ ಕರಾವಳಿ ಹಳ್ಳಿ:

ಪೂವಾರ್ ಸುಂದರ ಕರಾವಳಿ ಹಳ್ಳಿ:

ಹಿನ್ನೀರಿನಲ್ಲಿರುವ ಉತ್ತಮ ರೆಸಾರ್ಟ್ ಗಳು ಮತ್ತು ಚಿಕ್ಕೆ ಜೋಪಡಿಗಳು ಸೂರ್ಯೋದಯ, ಸೂರ್ಯಾಸ್ತ ಮತ್ತು ಮನಕ್ಕೆ ಮುದ ನೀಡುವ ವಾತಾವರಣದ ದರ್ಶನೀಯ ಅನುಭವವನ್ನು ಕಟ್ಟಿಕೊಡುತ್ತವೆ. ಬಂಗಾರದ ಬಣ್ಣದ ಮರಳಿಗೆ ಮುತ್ತಿಕ್ಕುವ ಸೂರ್ಯ, ಎರಡೂ ಬದಿಯಲ್ಲಿ ಆಳೆತ್ತರಕ್ಕೆ ನಿಂತಿರುವ ಹಚ್ಚ ಹಸಿರು ತೆಂಗು ಮತ್ತು ಪಾಮ್ ಮರಗಳು ಮಾಯಾಜಾಲವನ್ನೇ ಸ್ರಷ್ಟಿಸಿ ಮರೆಯಲಾರದ ಅನುಭೂತಿ ನೀಡುತ್ತವೆ.

ಚಿತ್ರಕೃಪೆ: Anirban Roy

ಪೂವಾರ್ ಸುಂದರ ಕರಾವಳಿ ಹಳ್ಳಿ:

ಪೂವಾರ್ ಸುಂದರ ಕರಾವಳಿ ಹಳ್ಳಿ:

ಪೂವಾರ್ ನ ಹಿನ್ನೀರಿನಲ್ಲಿ ನೌಕೆಯೊಂದನ್ನು ನೀವು ಆಸ್ವಾದಿಸಬಹುದು. ಭಾರತದ ಅತಿ ಪುರಾತನ ಮುಸ್ಲಿಂ ವಸಾಹತು ಇಲ್ಲಿತ್ತು ಎಂಬುದು ಪೂವಾರ್ ನ ಹೆಮ್ಮೆ. ಇಲ್ಲಿನ ಮುಸ್ಲಿಂ ವಸಾಹತು ಏನಿಲ್ಲವೆಂದರೂ 1,400 ವರ್ಷಗಳಷ್ಟು ಹಳೆಯದು.

ಚಿತ್ರಕೃಪೆ: Anirban Roy

ಪೂವಾರ್ ಸುಂದರ ಕರಾವಳಿ ಹಳ್ಳಿ:

ಪೂವಾರ್ ಸುಂದರ ಕರಾವಳಿ ಹಳ್ಳಿ:

ನೆಯ್ಯಾರ್ ನದಿ ಹಿನ್ನೀರು ನಿಧಾನವಾಗಿ ತೆಂಗಿನ ಮರಗಳ ಮಧ್ಯದಲ್ಲಿ ಹರಿಯುತ್ತ ಕೊನೆಗೆ ತನ್ನ ವಿಧಿಯಾದ ಅರಬ್ಬಿ ಸಮುದ್ರದಲ್ಲಿ ಸೇರಲು ಹಂಬಲಿಸುತ್ತಿರುವ ರೀತಿಯನ್ನು ಗಮನಿಸಿದಾಗ ಸೃಷ್ಟಿ ಕರ್ತನ ಅದ್ಭುತ ನಿಪುಣತೆಯು ಮನದಲ್ಲಿ ಗೋಚರಿಸತೊಡಗುತ್ತದೆ.

ಚಿತ್ರಕೃಪೆ: Nagesh Jayaraman

ಪೂವಾರ್ ಸುಂದರ ಕರಾವಳಿ ಹಳ್ಳಿ:

ಪೂವಾರ್ ಸುಂದರ ಕರಾವಳಿ ಹಳ್ಳಿ:

ಪೂವಾರ್ ಬಳಿಯಿರುವ ಪೊಳಿಕ್ಕಾರಾ ಕಡಲ ತೀರ. ತೀರದ ಪಕ್ಕದಲ್ಲಿರುವ ಕಟ್ಟಡವನ್ನು ಕಲಾರಿಪಾಯಟ್ಟು ಕ್ರೀಡೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನಿರ್ಮಿಸಲಾಯಿತಾದರೂ ಪ್ರಸ್ತುತ ಕರಾವಳಿ ಪೊಲೀಸ್ ಕಟ್ಟಡವಾಗಿ ಬಳಸಲು ಯೋಜಿಸಲಾಗಿದೆ.

ಚಿತ್ರಕೃಪೆ: John Mathew

ಪೂವಾರ್ ಸುಂದರ ಕರಾವಳಿ ಹಳ್ಳಿ:

ಪೂವಾರ್ ಸುಂದರ ಕರಾವಳಿ ಹಳ್ಳಿ:

ದಟ್ಟ ಹಸಿರು ಸಂಪತ್ತಿನ ಮಧ್ಯೆ ಸುಂದರವಾಗಿ ಗೋಚರಿಸುತ್ತ, "ನನ್ನನ್ನು ಮತ್ತಷ್ಟು ಅನ್ವೇಷಿಸು" ಎಂಬ ಘೋಷ ವಾಕ್ಯದೊಂದಿಗೆ ಪ್ರವಾಸಿಗರನ್ನು ಸ್ವಾಗತಿಸುವ ಪೂವಾರ್ ಸ್ಥಳದ ಸುತ್ತಮುತ್ತಲಿನ ಪರಿಸರ.

ಚಿತ್ರಕೃಪೆ: Nagesh Jayaraman

ಪೂವಾರ್ ಸುಂದರ ಕರಾವಳಿ ಹಳ್ಳಿ:

ಪೂವಾರ್ ಸುಂದರ ಕರಾವಳಿ ಹಳ್ಳಿ:

ಸುಂದರ ಕಡಲ ತೀರ, ಮನಸೆಳೆವ ಹಿನ್ನೀರು, ಮಾದಕಮಯ ಹಸಿರು ಸಂಪತ್ತಿನಿಂದ ಕಂಗೊಳಿಸುವ ಪೂವಾರ್ ಗ್ರಾಮವು ಪ್ರವಾಸಿಗರ ನೆಚ್ಚಿನ ತಾಣ. ಅಂತೆಯೆ ಸಾಕಷ್ಟು ರಿಸಾರ್ಟುಗಳನ್ನು ಇಲ್ಲಿ ಕಾಣಬಹುದು. ಕ್ಲಬ್ ಮಹೀಂದ್ರಾರವರ ಅಂತಹ ಒಂದು ರಿಸಾರ್ಟಿನಲ್ಲಿರುವ ತೇಲುವ ಕುಟಿರಗಳು.

ಚಿತ್ರಕೃಪೆ: Amit Rawat

ಪೂವಾರ್ ಸುಂದರ ಕರಾವಳಿ ಹಳ್ಳಿ:

ಪೂವಾರ್ ಸುಂದರ ಕರಾವಳಿ ಹಳ್ಳಿ:

ಪೂವಾರ್ ಗೆ ಭೇಟಿ ನೀಡಲು ಚಳಿಗಾಲ ಉತ್ತಮ ಸಮಯ. ಚಳಿಗಾಲದಲ್ಲಿ ಪೂವಾರ್ ಗೆ ಭೇಟಿ ನೀಡಿ. ರೈಲು, ಬಸ್ ಅಥವಾ ಹತ್ತಿರದ ವಿಮಾನನಿಲ್ದಾಣದ ಮೂಲಕ ಪೂವಾರ್ ಗೆ ಬನ್ನಿ ಹಾಗು ಸರಳವಾಗಿ ಮರೆಯಲಾಗದಂತಹ ಒಂದು ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

ಚಿತ್ರಕೃಪೆ: Nagesh Jayaraman

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X