Search
  • Follow NativePlanet
Share
» »ಒರಾವಕಲ್ಲು ಬಂಡೆ ಉದ್ಯಾನವನ್ನೊಮ್ಮೆ ಕಣ್ತುಂಬಿಸಿ

ಒರಾವಕಲ್ಲು ಬಂಡೆ ಉದ್ಯಾನವನ್ನೊಮ್ಮೆ ಕಣ್ತುಂಬಿಸಿ

ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಕರ್ನೂಲ್‌ಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಆಗ ಹವಾಮಾನವು ಅತ್ಯಂತ ಆಹ್ಲಾದಕರವಾಗಿರುತ್ತದೆ.

ಕರ್ನೂಲ್‌ನಲ್ಲಿ ನೋಡಬೇಕಾದಂತಹ ಸಾಕಷ್ಟು ಸ್ಥಳಗಳಿವೆ ಅವುಗಳಲ್ಲಿ ಪ್ರಮುಖ ಆಕರ್ಷಣೆಯೆಂದರೆ ಅಗ್ನಿಶಿಲೆಗಳಿರುವ ಉದ್ಯಾನವನ. ಇದನ್ನು ಒರಾವಕಲ್ಲು ಬಂಡೆ ಉದ್ಯಾನ ಎಂದು ಕರೆಯುತ್ತಾರೆ. ಸಣ್ಣ ಕೊಳಗಳು, ಬೋಟಿಂಗ್ ಸೌಲಭ್ಯಗಳು ಮತ್ತು ಗುಹೆ ವಸ್ತುಸಂಗ್ರಹಾಲಯಗಳನ್ನೂ ಇಲ್ಲಿ ಕಾಣಬಹುದು. ಒರಾವಕಲ್ಲು ಬಂಡೆ ಉದ್ಯಾನ ಕರ್ನೂಲ್‌ನಲ್ಲಿ ಭೇಟಿ ನೀಡಲೇಬೇಕಾದ ಪ್ರದೇಶವಾಗಿದೆ.

 ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ಇದು ಮಾರ್ಚ್‌ನಿಂದ ಮೇ ವರೆಗೆ ತುಂಬಾ ಬಿಸಿಯಾಗಿರುತ್ತದೆ. ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಕರ್ನೂಲ್‌ಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಆಗ ಹವಾಮಾನವು ಅತ್ಯಂತ ಆಹ್ಲಾದಕರವಾಗಿರುತ್ತದೆ. ಕೆಲವು ಪ್ರವಾಸಿಗರು ಜುಲೈನಿಂದ ಸೆಪ್ಟೆಂಬರ್ ವರೆಗೆ ಮುಂಗಾರು ಪ್ರಾರಂಭವಾಗುತ್ತಿದ್ದಂತೆಯೇ ಕರ್ನೂಲ್‌ಗೆ ಭೇಟಿ ನೀಡಲು ಬಯಸುತ್ತಾರೆ. ಮಳೆ ಬೀಳುವ ದೃಶ್ಯಗಳನ್ನು ನೋಡುವುದೇ ಒಂದು ಆಹ್ಲಾದಕರವಾಗಿರುತ್ತದೆ. ಶ್ರೀ ಆಂಜನೇಯಸ್ವಾಮಿಗೆ ಸಮರ್ಪಣೆಯಾಗಿ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಸಿದ್ಧ ಕಾರು ಉತ್ಸವವು ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಸುಂದರವಾದ ಪ್ರವಾಸಿ ತಾಣ

ಸುಂದರವಾದ ಪ್ರವಾಸಿ ತಾಣ

PC: Balamurugan Natarajan
ಒರಾವಕಲ್ಲುನಲ್ಲಿ ಹೆಚ್ಚಿನದೇನೂ ಇಲ್ಲ ಹಾಗಾಗಿ ದಿನವಿಡೀ ನಿಮ್ಮನ್ನು ಕಾರ್ಯನಿರತವಾಗಿಸುವ ಚಟುವಟಿಕೆಗಳನ್ನು ನಿರೀಕ್ಷಿಸಬೇಡಿ. ಇದು ಸುಂದರವಾದ ಪ್ರವಾಸಿ ತಾಣವಾಗಿದೆ, ನೀವು ಕುಳಿತು ಉದ್ಯಾನದ ಪ್ರಶಾಂತತೆಯನ್ನು ಆನಂದಿಸಬಹುದು, ಇದು ನಗರದಿಂದ ದೂರದಲ್ಲಿರುವ ಸುಂದರವಾದ ಪಿಕ್ನಿಕ್ ತಾಣವಾಗಿದ್ದು, ಮಾರ್ಗದರ್ಶಿಯನ್ನು ನೇಮಿಸಿಕೊಳ್ಳುವುದು ಅಥವಾ ಟ್ರಾವೆಲ್ ಗೈಡನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗುವುದು ಉತ್ತಮ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube
ವಿಮಾನದ ಮೂಲಕ : ನಗರದಿಂದ 214 ಕಿ.ಮೀ ದೂರದಲ್ಲಿರುವ ಹೈದರಾಬಾದ್ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಟ್ಯಾಕ್ಸಿಗಳು ಮತ್ತು ಬಸ್ಸುಗಳು ಲಭ್ಯವಿದೆ. ಪ್ರಯಾಣವನ್ನು ಪೂರ್ಣಗೊಳಿಸಲು ಸುಮಾರು 4-5 ಗಂಟೆಗಳ ಸಮಯ ತೆಗೆದುಕೊಳ್ಳುತ್ತವೆ.
ರೈಲಿನ ಮೂಲಕ: ಕರ್ನೂಲ್ ನಗರವು ರೈಲ್ವೆ ನಿಲ್ದಾಣವನ್ನು ಹೊಂದಿದ್ದು, ಇದು ಸಹ ನಗರಗಳು ಮತ್ತು ದೇಶದ ಪ್ರಮುಖ ರೈಲ್ವೆ ಜಂಕ್ಷನ್‌ಗಳಿಗೆ ಉತ್ತಮ ಸಂಪರ್ಕ ಹೊಂದಿದೆ.
ರಸ್ತೆ ಮೂಲಕ: ಕರ್ನೂಲ್ ಹೈದರಾಬಾದ್‌ನಿಂದ 214 ಕಿ.ಮೀ, ಚಿತ್ತೂರಿನಿಂದ 359 ಕಿ.ಮೀ ಮತ್ತು ಅನಂತಪುರದಿಂದ 147 ಕಿ.ಮೀ ದೂರದಲ್ಲಿದೆ. ರಸ್ತೆಗಳು ಉತ್ತಮವಾಗಿ ನಿರ್ವಹಿಸಲ್ಪಟ್ಟಿವೆ ಮತ್ತು ರಾಜ್ಯ ಪ್ರವಾಸೋದ್ಯಮ ಮತ್ತು ಸಾರಿಗೆ ನಿಗಮವು ನಡೆಸುವ ನಿಯಮಿತ ಬಸ್ಸುಗಳು ಇದನ್ನು ವಿವಿಧ ನಗರಗಳಿಗೆ ಸಂಪರ್ಕಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X