Search
  • Follow NativePlanet
Share
» » ಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರು

ಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರು

ಗುರು ರಾಘವೇಂದ್ರ ಸ್ವಾಮಿಯ ಲೀಲೆ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ರಾಘವೇಂದ್ರ ಸ್ವಾಮಿಯನ್ನು ಭಕ್ತಿಯಿಂದ ರಾಯರು ಎನ್ನುತ್ತಾರೆ. ಬಹಳಷ್ಟು ಮಂದಿ ರಾಯರ ಮಠಕ್ಕೆ ಹೋಗಿ ರಾಯರ ದರ್ಶನ ಪಡೆಯುತ್ತಾರೆ. ರಾಯರ ಕೃಪೆಗೆ ಪಾತ್ರರಾದರೆ ನಿಮ್ಮ ಕಷ್ಟಗಳೆಲ್ಲಾ ಕರಗಿ ಹೋಗುತ್ತದೆ ಎನ್ನುತ್ತಾರೆ. ಅದಕ್ಕಾಗಿ ಮಂತ್ರಾಲಯದ ಬಾಗಿಲಿಗೆ ಹೋಗುತ್ತಾರೆ. ಗುರು ರಾಯರ ಮಹಿಮೆ ಅಪಾರ. ಅಂತಹ ಗುರುರಾಯರ ಮಠದ ಬಗ್ಗೆ ಕೆಲವು ವಿಷಯಗಳನ್ನು ನಿಮಗೆ ತಿಳಿಸಲಿದ್ದೇವೆ.

ಎಲ್ಲಿದೆ ಮಂತ್ರಾಲಯ

ಎಲ್ಲಿದೆ ಮಂತ್ರಾಲಯ

PC: Vedamurthy J

ಮಂತ್ರಾಲಯಂ / ಮಂತ್ರಾಲಯವು ಭಾರತದ ಆಂಧ್ರಪ್ರದೇಶದ ಕರ್ನೂಲ್
ಜಿಲ್ಲೆಯಲ್ಲಿರುವ ಒಂದು ಯಾತ್ರಾ ಹಳ್ಳಿಯಾಗಿದೆ. ಇದು ತುಂಗಭದ್ರ ನದಿಯ ದಂಡೆಯ ಮೇಲಿರುವ ಕರ್ನಾಟಕ ರಾಜ್ಯದ ಗಡಿಯಲ್ಲಿದೆ. ಈ ಗ್ರಾಮವು ರಾಘವೇಂದ್ರ ಸ್ವಾಮಿಯ ವೃಂದಾವನಕ್ಕೆ ಪ್ರಸಿದ್ಧಿಯಾಗಿದೆ.

ಮೈಸೂರು ದಸರಾಕ್ಕೆ ಹೋಗುವವರು ಇದನ್ನ ನೆನಪಿಟ್ಟುಕೊಳ್ಳಲೇ ಬೇಕುಮೈಸೂರು ದಸರಾಕ್ಕೆ ಹೋಗುವವರು ಇದನ್ನ ನೆನಪಿಟ್ಟುಕೊಳ್ಳಲೇ ಬೇಕು

 ಬೃಂದಾವನ

ಬೃಂದಾವನ

PC: Dr Murali Mohan Gurram

ರಾಘವೇಂದ್ರ ಗುರುಸಾರ್ವಭೌಮರು ತಮಿಳುನಾಡಿನ ಭುವನಗಿರಿಯಲ್ಲಿ ೧೫೯೫ರಲ್ಲಿ ಮನ್ಮಥ ಸಂವತ್ಸರದಲ್ಲಿ ಜನಿಸಿ, ಮಧ್ವಮತ ಸಂಪ್ರದಾಯವನ್ನು ಅವಲಂಬಿಸಿ ಸಶರೀರರಾಗಿ ಇಲ್ಲಿ ಬೃಂದಾವನಸ್ಥರಾದರು ಎನ್ನಲಾಗಿದೆ.

ಮಂಚಾಲೆಯೇ ಮಂತ್ರಾಲಯ

ಮಂಚಾಲೆಯೇ ಮಂತ್ರಾಲಯ

PC: Nsmohan

ತೀರ್ಥಾಟನೆಯ ಸಮಯದಲ್ಲಿ ರಾಯರು ಆದವಾನಿಗೂ ಭೇಟಿ ನೀಡಿದರು. ನವಾಬ ರಾಯರ ತಪಃ ಶಕ್ತಿಗೆ ಮಾರುಹೋಗಿ ಅವರು ಕೇಳಿದ ಸ್ಥಳವನ್ನು ಜಹಗೀರು ಕೊಡುವುದಾಗಿ ವಚನವಿತ್ತ. ಆಗ ರಾಯರು ಮಂಜಾಲೆಯನ್ನು ದಾನರೂಪವಾಗಿ ಕೊಡುವಂತೆ ನವಾಬನನ್ನು ಕೇಳಿದರು.

ಟಿಪ್ಪುವಿಗಿತ್ತಂತೆ ಇಲ್ಲಿಯ ಶ್ರೀಕಂಠನ ಮೇಲೆ ಅಪಾರ ನಂಬಿಕೆ !ಟಿಪ್ಪುವಿಗಿತ್ತಂತೆ ಇಲ್ಲಿಯ ಶ್ರೀಕಂಠನ ಮೇಲೆ ಅಪಾರ ನಂಬಿಕೆ !

ಪರಿಮಳ ಪ್ರಸಾದ

ಪರಿಮಳ ಪ್ರಸಾದ

ರಾಯರು ಪರಿಮಳ ಎನ್ನುವ ಗ್ರಂಥವನ್ನು ಬರೆದಿದ್ದಾರೆ. ಈ ಗ್ರಂಥದ ವಿಶ್ವದಲ್ಲೆಡೆ ಪ್ರಸರಿಸಲಿ ಎನ್ನುವ ಕಾರಣದಿಂದ ಇಲ್ಲಿನ ಮಠದ ಪ್ರಸಾದಕ್ಕೆ ಪರಿಮಳ ಪ್ರಸಾದ ಎನ್ನುವ ಹೆಸರನ್ನಿಡಲಾಗಿದೆ. ಈ ಪ್ರಸಾದ ನೋಡಲೂ ಸುಂದರವಾಗಿದೆ. ರುಚಿಕರವೂ ಆಗಿದೆ.

ತುಂಗಭದ್ರಾ ನದಿಯಲ್ಲಿ ಸ್ನಾನ

ತುಂಗಭದ್ರಾ ನದಿಯಲ್ಲಿ ಸ್ನಾನ

ಇಲ್ಲಿಗೆ ಬರುವ ಭಕ್ತಾದಿಗಳು ತುಂಗಭದ್ರಾ ನದಿಯಲ್ಲಿ ಮಿಂದು ರಾಯರ ಸೇವೆಯನ್ನು ಮಾಡುತ್ತಾರೆ. ಈ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪಡೆಯುತ್ತಾರೆ.

ಪ್ರದಕ್ಷಿಣೆ

ಪ್ರದಕ್ಷಿಣೆ

PC: Nsmohan

ಇಲ್ಲಿ ಪ್ರದಕ್ಷಿಣೆಗಿದೆ ಬಹಳ ಮಹತ್ವ. ಇಲ್ಲಿ ಬರುವ ಪ್ರತಿಯೊಬ್ಬ ಭಕ್ತರು ಪ್ರದಕ್ಷಿಣೆ ಹಾಕುತ್ತಾರೆ. ಕೆಲವರು ಉರುಳು ಸೇವೆ ಮಾಡುತ್ತಾರೆ. ಹೆಜ್ಜೆ ಸೇವೆ ಮಾಡುತ್ತಾರೆ. ಇಲ್ಲಿಗೆ ಬರುವ ಭಕ್ತರಿಗೆ ಪ್ರತಿನಿತ್ಯವು ಅನ್ನದಾಸೋಹ ನಡೆಯುತ್ತದೆ.

ಬೆಂಗಳೂರಿನ ಈ ಮಿಲಿಟರಿ ಹೋಟೆಲ್‌ಗಳಲ್ಲಿ ತಲೆಮಾಂಸ, ಖೀಮಾ ಸವಿಯಲೇ ಬೇಕು<br /> ಬೆಂಗಳೂರಿನ ಈ ಮಿಲಿಟರಿ ಹೋಟೆಲ್‌ಗಳಲ್ಲಿ ತಲೆಮಾಂಸ, ಖೀಮಾ ಸವಿಯಲೇ ಬೇಕು

ವಸತಿ ಸೌಕರ್ಯ

ವಸತಿ ಸೌಕರ್ಯ

PC: Ravikiranr

ಇಲ್ಲಿ ಉಳಿದುಕೊಳ್ಳಲು ಸಾಕಷ್ಟು ವ್ಯವಸ್ಥೆಗಳಿವೆ. ಮಠದವರು ಅನೇಕ ವಸತಿ ಗೃಹಗಳನ್ನು ನಿರ್ಮಿಸಿದ್ದಾರೆ. ೧೦೦ ರೂ.ಯಿಂದ ೫೦೦ ರೂ.ಗೆ ಇಲ್ಲಿ ರೂಮ್‌ಗಳು ಲಭ್ಯವಿದೆ. ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಬೇಕಾದ ರೂಮ್‌ಗಳಲ್ಲಿ ತಂಗಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Dr Murali Mohan Gurram

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಸಾಕಷ್ಟು ಬಸ್ ವ್ಯವಸ್ಥೆಗಳಿವೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಇಲ್ಲಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಹೈದರಾಬಾದ್ ವಿಮಾನ ನಿಲ್ದಾಣ ಇದು ಮಂತ್ರಾಲಯಕ್ಕೆ ಸುಮಾರು ೨೮೮ ಕಿ.ಮೀ ದೂರದಲ್ಲಿದೆ.
ಸಮೀಪದಲ್ಲಿರುವ ರೈಲು ನಿಲ್ದಾಣವೆಂದರೆ ಮಂತ್ರಾಲಯ ರೈಲು ನಿಲ್ದಾಣ ಇದು ಮಠದಿಂಸ ಸುಮಾರು ೧೨ ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X