Search
  • Follow NativePlanet
Share
» »ಕೃಷ್ಣಾ ಅಭಯಾರಣ್ಯ ದ.ಭಾರತದ ಆಸ್ತಿ

ಕೃಷ್ಣಾ ಅಭಯಾರಣ್ಯ ದ.ಭಾರತದ ಆಸ್ತಿ

By Vijay

ಹೌದು, ಕೃಷ್ಣಾ ಅಭಯಾರಣ್ಯವು ಅನೇಕ ಪರಿಸರ ಸಂರಕ್ಷಣಾವಾದಿಗಳ ಪ್ರಕಾರ, ದಕ್ಷಿಣ ಭಾರತದಲ್ಲೆ ದಟ್ಟನೆಯ ಮ್ಯಾಂಗ್ರೋವ್ ಕಾಡುಗಳನ್ನು ಹೊಂದಿರುವ ಏಕೈಕ ಅಭಯಾರಣ್ಯವಾಗಿದೆ. ಅಲ್ಲದೆ ಇದೊಂದು ಅಪರೂಪದ ಜೈವಿಕ ಪರಿಸರದ ತಾಣವೂ ಸಹ ಆಗಿದೆ. ಆಂಧ್ರ ಪ್ರದೇಶ ರಾಜ್ಯದ ಕೃಷ್ಣಾ ನದಿ ಮುಖಜ ಭೂಮಿಯಲ್ಲಿ ಕಂಡುಬರುವ ಈ ಅಭಯಾರಣ್ಯವು ಆಂಧ್ರದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣಂ ನಗರಕ್ಕೆ ಹತ್ತಿರದಲ್ಲಿದೆ.

ವಿಶೇಷ ಲೇಖನ : ನಾಗರಹೊಳೆ ಅಭಯಾರಣ್ಯ

ಕೃಷ್ಣಾ ಅಭಯಾರಣ್ಯ ದ.ಭಾರತದ ಆಸ್ತಿ

ಈ ಒಂದು ಅದ್ಭುತ ಅಭಯಾರಣ್ಯದಲ್ಲಿ ಸೊರ್ಲಗೊಂಡಿ ಮೀಸಲು ಅರಣ್ಯ, ಅದಾವುಲದಿವಿ ಮೀಸಲು ಅರಣ್ಯ, ಲಂಕಿವನಿದಿಬ್ಬ ಹೀಗೆ ಅನೇಕ ಮೀಸಲು ಅರಣ್ಯಗಳನ್ನು ಕಾಣಬಹುದು. ಈ ಮೀಸಲು ಕಾಡುಗಳು ಕೃಷ್ಣಾ ನದಿ ಮುಖಜ ಭೂಮಿಯ ಸಣ್ಣ ಪುಟ್ಟ ನಡುಗಡ್ಡೆಗಳಲ್ಲಿ ಅವ್ಯಾಹತವಾಗಿ ಹರಡಿವೆ. ಈ ಪ್ರದೇಶದ ನದಿಗಳ ದಂಡೆಯ ಗುಂಟ ಮ್ಯಾಂಗ್ರೋವ್ ಕಾಡುಗಳನ್ನು ಕಾಣಬಹುದಾಗಿದೆ.

ವಿಶೇಷ ಲೇಖನ : ಸುಂದರಬನ್ಸ್ ಮ್ಯಾಂಗ್ರೋವ್ ಕಾಡು

ಕೃಷ್ಣಾ ಅಭಯಾರಣ್ಯ ದ.ಭಾರತದ ಆಸ್ತಿ

ಚಿತ್ರಕೃಪೆ: J.M.Garg

ಕೃಷ್ಣಾ ನದಿಯ ನದಿ ಮುಖವು ಈ ಪ್ರದೇಶದಿಂದ ಹಾದು ಹೋಗಿದ್ದು ಇದರ ತುಂಬ ಮ್ಯಾಂಗ್ರೋವ್ ಕಾಡುಗಳನ್ನು ನೋಡಬಹುದು. ಒಂದು ಮೂಲದಂತೆ ಈ ಒಂದು ನಿರ್ದಿಷ್ಟ ಭಾಗದಲ್ಲಿ ಅಪಾರವಾದ ಸಂಖ್ಯೆಯಲ್ಲಿ ಮೀನು ಹಿಡಿಯುವ ಬೆಕ್ಕುಗಳನ್ನು ಕಾಣಬಹುದಾಗಿದೆಯಂತೆ. ಆದರೆ ಇದಕ್ಕೆ ನಿರ್ದಿಷ್ಟ ಪುರಾವೆಗಳಿಲ್ಲ. ಏಕೆಂದರೆ ಈ ರೀತಿಯ ಬೆಕ್ಕುಗಳು ಕಂಡುಬರುವುದು ಬಲು ಅಪರೂಪ.

ಕೃಷ್ಣಾ ಅಭಯಾರಣ್ಯ ದ.ಭಾರತದ ಆಸ್ತಿ

ಚಿತ್ರಕೃಪೆ: J.M.Garg

ಅಲ್ಲದೆ ಈ ಅಭಯಾರಣ್ಯದ ತುಂಬ ವಿವಿಧ ಬಗೆಯ ಸಸ್ಯಗಳು ಹಾಗೂ ಪಕ್ಷಿಗಳನ್ನು ಕಾಣಬಹುದಾಗಿದೆ. ಅಷ್ಟೆ ಅಲ್ಲ ಆಟರ್, ನರಿ, ಕರಡಿ ಹಾಗೂ ಹೈನಾದಂತಹ ಪ್ರಾಣಿಗಳನ್ನೂ ಸಹ ಈ ಅಭಯಾರಣ್ಯದಲ್ಲಿ ಕಾಣಬಹುದಾಗಿದೆ. ಇದು ಆಂಧ್ರದ ಕೃಷ್ಣಾ ಹಾಗೂ ಗುಂಟೂರು ಪ್ರದೇಶಗಳಲ್ಲಿ ಆವರಿಸಿದೆ. ವಿಜಯವಾಡಾದಿಂದ ಸುಮಾರು 80 ಕಿ.ಮೀ ಗಳಷ್ಟು ದೂರದಲ್ಲಿದೆ ಈ ಅಭಯಾರಣ್ಯ.

ವಿಶೇಷ ಲೇಖನ : ಭದ್ರಾ ಜಲಾಶಯ ಕಡು

ಕೃಷ್ಣಾ ಅಭಯಾರಣ್ಯ ದ.ಭಾರತದ ಆಸ್ತಿ

ಚಿತ್ರಕೃಪೆ: J.M.Garg

http://commons.wikimedia.org/wiki/File:Excoecaria_agallocha_(Blind_Your_Eye)_W_IMG_6949.jpg

ಇಲ್ಲಿಗೆ ತಲುಪಲು ವಿಜಯವಾಡಾ ಅತಿ ಹತ್ತಿರದಲ್ಲಿರುವ ರೈಲು ನಿಲ್ದಾಣ. ವಿಜಯವಾಡಾ ದೇಶದ ಪ್ರಮುಖ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕ ಹೊಂದಿದೆ. ಹಾಗಾಗಿ ಈ ಅಭಯಾರಣ್ಯಕ್ಕೆ ಬರುವುದು ಅಷ್ಟೊಂದು ಕಷ್ಟಕರವಾಗೇನಿಲ್ಲ. ಇನ್ನು ತಂಗಲು ಅರಣ್ಯ ಇಲಾಖೆಯ ಅತಿಥಿ ಗೃಹವಿದ್ದು ಅದು ಇದಕ್ಕೆ ಹತ್ತಿರದಲ್ಲಿರುವ ಮಚಲಿಪಟ್ಟಣ ನಗರದಲ್ಲಿ ಲಭ್ಯವಿದೆ.

ಕೃಷ್ಣಾ ಅಭಯಾರಣ್ಯ ದ.ಭಾರತದ ಆಸ್ತಿ

ಚಿತ್ರಕೃಪೆ: J.M.Garg

ಈ ಅಭಯಾರಣ್ಯಕ್ಕೆ ತೆರಳಲು ಅಕ್ಟೋಬರ್ ನಿಂದ ಹಿಡಿದು ಫೆಬ್ರುವರಿಯವರೆಗೂ ಉತ್ತಮ ಸಮಯವಾಗಿದೆ. ನಮಗೆ ಅಪರೂಪ ಎನ್ನಬಹುದಾದ ಮ್ಯಾಂಗ್ರೋವ್ ಕಾಡುಗಳು ಹಾಗೂ ಅತಿ ಅಪರೂಪ ಮತ್ತು ಅಳಿವಿನಂಚಿನಲ್ಲಿರುವ ಮೀನು ಹಿಡಿಯುವ ಬೆಕ್ಕುಗಳನ್ನು ನೋಡುವ ಬಯಕೆಯಿದ್ದರೆ ಕೃಷ್ಣಾ ಅಭಯಾರಣ್ಯವು ನಿಮ್ಮನ್ನು ಕೈಬಿಸಿ ಕರೆಯುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X