Search
  • Follow NativePlanet
Share
» »ಕರ್ಜಾತ್ ದಟ್ಟ ಹಸಿರಿನಲ್ಲಿ ಅಪ್ಪಟ ಸಾಹಸ

ಕರ್ಜಾತ್ ದಟ್ಟ ಹಸಿರಿನಲ್ಲಿ ಅಪ್ಪಟ ಸಾಹಸ

By Vijay

ಮಹಾರಾಷ್ಟ್ರ ರಾಜ್ಯವು ಪ್ರವಾಸಿ ದೃಷ್ಟಿಯಿಂದ ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿದ್ದು ಒಬ್ಬ ಪ್ರವಾಸಿಗನಿಗೆ ಎಲ್ಲ ರೀತಿಯ ಆಯ್ಕೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಗಿರಿಧಾಮಗಳಿರಲಿ, ಧಾರ್ಮಿಕ ಕ್ಷೇತ್ರಗಳಿರಲಿ, ಸಾಹಸಮಯ ತಾಣಗಳಿರಲಿ, ಕಾಡು ಪ್ರದೇಶಗಳಿರಲಿ, ಗುಹಾ ರಚನೆಗಳಿರಲಿ ಇಲ್ಲವೆ ಸಮುದ್ರ ತಟಗಳಿರಲಿ ಎಲ್ಲವೂ ಇಲ್ಲಿ ಲಭ್ಯ.

ವಿಶೇಷ ಲೇಖನ : ಜೆಜುರಿಯ ಖಂಡೋಬನ ದೇವಸ್ಥಾನ

ದಿನ ವಿಶೇಷ : ಹೋಟೆಲ್ ಬುಕಿಂಗ್ ಮೇಲೆ 50% ರಷ್ಟು ಕಡಿತ, ತ್ವರೆ ಮಾಡಿ!

ಕರ್ಜಾತ್ ದಟ್ಟ ಹಸಿರಿನಲ್ಲಿ ಅಪ್ಪಟ ಸಾಹಸ

ಚಿತ್ರಕೃಪೆ: Ramnath Bhat

ಪ್ರಸ್ತುತ ಲೇಖನದ ಮೂಲಕ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿರುವ ಕರ್ಜಾತ್ ಎಂಬ ನಗರದ ಕುರಿತು ತಿಳಿಯೋಣ. ಕರ್ಜಾತ್ ಒಂದು ಸಣ್ಣ ನಗರ ಪ್ರದೇಶವಾಗಿದ್ದು ನಿತ್ಯ ಹರಿದ್ವರ್ಣದ ಹಿನ್ನಿಲೆಯಲ್ಲಿ ಕಂಗೊಳಿಸುತ್ತಿರುವ ಪ್ರವಾಸಿ ತಾಣವಾಗಿದೆ. ಮುಖ್ಯವಾಗಿ ಈ ಪುಟ್ಟ ಗಿರಿಧಾಮ ಪ್ರದೇಶವು ಸಾಹಸಮಯ ಚಟುವಟಿಕೆಯಾದ ಟ್ರೆಕ್ಕಿಂಗ್ ಹಾಗೂ ಚಿತ್ರೀಕರಣಕ್ಕೆ ಪ್ರಸಿದ್ಧಿ ಪಡೆದಿದೆ.

ಭೋರ್ ಘಾಟ್, ಸಹ್ಯಾದ್ರಿ ಪರ್ವತ ಶ್ರೇಣಿ, ಪಶ್ಚಿಮ ಘಟ್ಟ ಹಾಗೂ ಕೊಂಕಣ ಪ್ರದೇಶದಲ್ಲಿ ಈ ಸ್ಥಳ ನೆಲೆಸಿರುವುದರಿಂದ ಇಲ್ಲಿ ಕಂಡುಬರುವ ಹಸಿರು ನಿಜಕ್ಕೂ ನೋಡುಗರನ್ನ್ ಮೂಕವಿಸ್ಮಿತರನ್ನಾಗಿಸುತ್ತದೆ. ಅಷ್ಟವಿನಾಯಕ ಪ್ರದೇಶದಲ್ಲಿರುವ ಈ ತಾಣವು ಉಲ್ಹಾಸ್ ನದಿ ದಂಡೆಯ ಮೇಲೆ ಸ್ಥಿತವಿದೆ.

ವಿಶೇಷ ಲೇಖನ : ಮಹಾರಾಷ್ಟ್ರದ ಅದ್ಭುತ ಚಾರಣ ಮಾರ್ಗಗಳು

ಕರ್ಜಾತ್ ದಟ್ಟ ಹಸಿರಿನಲ್ಲಿ ಅಪ್ಪಟ ಸಾಹಸ

ಕರ್ಜಾತ್ - ಕೊಪೋಲಿ ಮಾರ್ಗದಲ್ಲಿರುವ ಪಾಲಸ್ದಾರಿ ಜಲಪಾತ
ಚಿತ್ರಕೃಪೆ: Shivashree

ಮುಂಬೈ ಮಹಾನಗರದಿಂದ ಕೇವಲ 60 ಕಿ.ಮೀ ಗಳಷ್ಟು ದೂರವಿರುವ ಕರ್ಜಾತ್ ವಾರಾಂತ್ಯ ರಜೆಗಳ ಸಮಯದಲ್ಲಿ ಭೇಟಿ ನೀಡಬಹುದಾದ ಸ್ಥಳಕ್ಕೆ ಯಶಸ್ವಿ ಆಯ್ಕೆಯಾಗಿದೆ. ಪರ್ವತಾರೋಹಣ, ಟ್ರೆಕ್ಕಿಂಗ್ ಇಲ್ಲವೆ ನೀರಿನಲ್ಲಿ ರಾಫ್ಟಿಂಗ್ ಮಾಡಬಹುದಾದ ಸಾಹಸಮಯ ಚಟುವಟಿಕೆಗಳಿಗೆ ಈ ಸ್ಥಳ ಯೋಗ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ಕರ್ಜಾತ್ ಸುಂದರವಾಗಿ ಸಿಂಗರಿಸಲ್ಪಟ್ಟಿರುತ್ತದೆ.

ಕರ್ಜಾತ್ ದಟ್ಟ ಹಸಿರಿನಲ್ಲಿ ಅಪ್ಪಟ ಸಾಹಸ

ಕರ್ಜಾತ್ ನಲ್ಲಿ ಪರ್ವತಾರೋಹಣ
ಚಿತ್ರಕೃಪೆ: American Center Mumbai

ಕರ್ಜಾತ್ ನಲ್ಲಿ ಸಾಕಷ್ಟು ಫಾರಂ ಮನೆಗಳು, ರಿಸಾರ್ಟುಗಳು, ವಸತಿ ಗೃಹಗಳಿದ್ದು ಮುಂಬೈ, ಪುಣೆಯಂತಹ ನಗರಗಳಲ್ಲಿ ವಾಸಿಸುವ ಸಾಕಷ್ಟು ಜನರು ಇಲ್ಲಿ ತಮ್ಮ ಎರಡನೇಯ ಮನೆ ಅಥವಾ ರಜಾ ಸಮಯದ ಮನೆಗಳನ್ನು ಹೊಂದಿದ್ದಾರೆ. ಹೀಗಾಗಿ ಹೊಸ ವರ್ಷಾಚರಣೆ, ಉತ್ಸವಗಳು ಹಾಗೂ ಹಬ್ಬಹರಿದಿನಗಳನ್ನು ಇಲ್ಲಿಗೆ ಬಂದು ಸಕುಟುಂಬ ಪರಿವಾರ ಸಮೇತವಾಗಿ ಆಚರಿಸುತ್ತ ಆನಂದವಾಗಿ ಕಾಲ ಕಳೆಯುತ್ತಾರೆ.

ವಿಶೇಷ ಲೇಖನ : ಲೋನಾವಲಾ ಹೇಗಿದೆ ಗೊತ್ತಾ?

ಕರ್ಜಾತ್ ದಟ್ಟ ಹಸಿರಿನಲ್ಲಿ ಅಪ್ಪಟ ಸಾಹಸ

ಕರ್ಜಾತ್ ನಲ್ಲಿ ಟ್ರೆಕ್ಕಿಂಗ್
ಚಿತ್ರಕೃಪೆ: Don Bosco Karjat

ಇಲ್ಲಿರುವ ಎನ್ ಡಿ ಸ್ಟುಡಿಯೋ ಚಲನಚಿತ್ರ ನಿರ್ಮಾಪಕ, ನಿರ್ದೇಶಕರ ನೆಚ್ಚಿನ ಚಿತ್ರೀಕರಣದ ತಾಣವಾಗಿದ್ದು ಸಾಕಷ್ಟು ಜನರನ್ನು ಆಕರ್ಷಿಸುತ್ತದೆ. ಅಲ್ಲದೆ ಕೆಲವು ಪ್ರಮುಖ ಹಾಲಿವುಡ್ ಚಿತ್ರ ನಿರ್ಮಾಣ ಸಂಸ್ಥೆಗಳೂ ಕೂಡ ಕರ್ಜಾತ್ ನಲ್ಲಿ ಸ್ಟುಡಿಯೋಗಳನ್ನು ಈಗಾಗಲೆ ನಿರ್ಮಿಸುತ್ತಿವೆ. ಈ ರೀತಿಯಾಗಿ ಕರ್ಜಾತ್ ಮಹಾರಾಷ್ಟ್ರ ರಾಜ್ಯದ ಪ್ರವಾಸೋದ್ಯಮಕ್ಕೆ ತನ್ನದೆ ಆದ ಕೊಡುಗೆ ನೀಡುತ್ತಿದೆ.

ಕರ್ಜಾತ್ ದಟ್ಟ ಹಸಿರಿನಲ್ಲಿ ಅಪ್ಪಟ ಸಾಹಸ

ಕೊಂಡನ ಬೌದ್ಧ ಗುಹೆಗಳು
ಚಿತ್ರಕೃಪೆ: Rudolph.A.furtado

ಇಲ್ಲಿರುವ ಉಲ್ಹಾಸ ಕಣಿವೆಯು ಅದ್ಭುತವಾದ ಪ್ರದೇಶವಾಗಿದ್ದು ಸ್ವಚ್ಛಂದವಾಗಿ ಉಲ್ಹಾಸ ನದಿಯ ಹರಿವಿನ ಸುಂದರ ನೋಟವನ್ನು ಕರುಣಿಸುತ್ತದೆ. ಭೋರ್ ಘಾಟ್ ಐತಿಹಾಸಿಕ ಮಹತ್ವವುಳ್ಳ ಪ್ರದೇಶವಾಗಿದ್ದು ಹಿಂದೆ ಚೌಲ್, ರೇವ್ಡಂಡಾ, ಪನ್ವೇಲ್ ಬಂದರುಗಳನ್ನು ಸಂಪರ್ಕಿಸಲು ಬಳಸಲ್ಪಡುತ್ತಿತ್ತು. ಇನ್ನು ಇಲ್ಲಿರುವ ಕೊಂಡನ ಗುಹೆಗಳು ಬೌದ್ಧ ಶೈಲಿಯ ಗುಹಾ ರಚನೆಗಳಾಗಿದ್ದು ಪ್ರವಾಸಿ ಆಕರ್ಷಣೆಗಳಾಗಿವೆ.

ಕರ್ಜಾತ್ ಮುಂಬೈ, ಲೋಣಾವ್ಲಾ, ಮಾಥೇರಾನ್ ಗಳಿಗೆ ಹತ್ತಿರವಿರುವುದರಿಂದ ಸಾಕಷ್ಟು ರೈಲುಗಳು ಇಲ್ಲಿಗೆ ತಲುಪಲು ಮುಂಬೈ ಹಾಗೂ ಪುಣೆಗಳಿಂದ ಲಭ್ಯವಿದೆ. ಮುಂಬೈನಿಂದ ರಸ್ತೆಯ ಮುಖಾಂತರ ಹೊರಡಲು ಬಯಸಿದ್ದರೆ ವಾಶಿ, ಪನ್ವೇಲ್ ಮೂಲಕ ಸಾಗಿ ಮುಂಬೈ - ಪುಣೆ ಎಕ್ಸ್ ಪ್ರೆಸ್ ಹೆದ್ದಾರಿ ಹಿಡಿದು ಅದರ ಪ್ರಥಮ ಎಡ ತಿರುವಿನಲ್ಲಿರುವ ಎಕ್ಸಿಟ್ ಮೂಲಕ (ಶೇದುಂಗ್ ಕೊಪೋಲಿ ಎಕ್ಸಿಟ್) ಸಾಗಿ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X