Search
  • Follow NativePlanet
Share
» »ಹೊಗೇನಕ್ಕಲ್ ಜಲಪಾತ : ಕಲ್ಲುಗಳು ಹೊಗೆಯಾಡಿದಾಗ

ಹೊಗೇನಕ್ಕಲ್ ಜಲಪಾತ : ಕಲ್ಲುಗಳು ಹೊಗೆಯಾಡಿದಾಗ

By Vijay

ಸಾಮಾನ್ಯವಾಗಿ ಜಲಪಾತಗಳು ಖುಷಿ ಕೊಡುವ ತಾಣಗಳು. ಕುಟುಂಬದವರೆ ಆಗಲಿ, ಸ್ನೇಹಿತರೆ ಆಗಲಿ ಎಲ್ಲರೊಂದಿಗೂ ಕಲೆತು ಭೇಟಿ ನೀಡಬಹುದಾದಂತಹ ಪ್ರವಾಸಿ ಆಕರ್ಷಣೆ ಈ ಜಲಪಾತಗಳು. ಪ್ರಖ್ಯಾತ ಜೋಗ ಜಲಪಾತದಿಂದ ಹಿಡಿದು ಅದೇಷ್ಟೊ ಜಲಪಾತ ಕೇಂದ್ರಗಳನ್ನು ನಮ್ಮ ನಾಡಲ್ಲಿ ಕಾಣಬಹುದು.

ಕೆಲವು ಜಲಪಾತಗಳು ಸದಾ ನೀರಿನಿಂದ ಕೂಡಿದ್ದರೆ ಇನ್ನೂ ಕೆಲ ಜಲಪಾತಗಳು, ಮಳೆ ನೀರ ಬಡೆದು ಕಪ್ಪೆಗಳು ಹೊರ ಬರುವ ಹಾಗೆ ಮಳೆಗಾಲದ ಸಮಯದಲ್ಲಿ ತಮ್ಮ ಪ್ರಭಾವ ಬೀರುತ್ತ ಗಮನಸೆಳೆಯಲಾರಂಭಿಸುತ್ತವೆ. ಅದೇನೆ ಇರಲಿ, ಮಳೆಗಾಲದ ಪ್ರಮುಖ ಆಕರ್ಷಣೆ ಜಲಪಾತ ತಾಣಗಳು.

ಪ್ರಸ್ತುತ ಲೇಖನವು ಬೆಂಗಳೂರಿನಿಂದ ಕೇವಲ 150 ಕಿ.ಮೀ ದೂರದಲ್ಲಿರುವ ಹೊಗೇನಕ್ಕಲ್ ಜಲಪಾತ ತಾಣದ ಕುರಿತು ತಿಳಿಯಪಡಿಸುತ್ತದೆ.

ಇದನ್ನೂ ಓದಿ : ಚುಂಚನಕಟ್ಟೆ ಜಲಪಾತ

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ಗಡಿಯಲ್ಲಿ ನೆಲೆಸಿದ್ದು, ಕರ್ನಾಟಕದ ಜೀವ ನದಿ ಎಂದೆ ಗುರುತಿಸಲ್ಪಟ್ಟ ಕಾವೇರಿಯಿಂದ ರೂಪಗೊಂಡಿದೆ.

ಚಿತ್ರಕೃಪೆ: Gowthampavithra

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯಲ್ಲಿ ಬರುವ ಈ ಜಲಪಾತ ಕೇಂದ್ರವು ಕನ್ನಡದ ಪದದಿಂದ ತನ್ನ ಹೆಸರನ್ನು ಪಡೆದಿದೆ. ಅಂದರೆ ಕನ್ನಡ ಹೊಗೆ ಹಾಗೂ ಕಲ್ಲು ಎಂಬ ಎರಡು ಪದಗಳು ಸಂಗಮಗೊಂಡು ಇದು ಹೊಗೇನಕ್ಕಲ್ ಎಂಬ ಹೆಸರು ಪಡೆದಿದೆ.

ಚಿತ್ರಕೃಪೆ: Mithun Kundu

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಈ ರೀತಿಯಾಗಿ ಹೆಸರು ಬರಲು ಇದಕ್ಕೆ ಕಾರಣವಿದೆ. ಅಂದರೆ ಕಾವೇರಿ ನದಿಯು ಹಲವು ಕವಲುಗಳಲ್ಲಿ ಇಲ್ಲಿ ದೊಡ್ಡ ದೊಡ್ಡ ಬಂಡೆಗಳಿಂದ ಧರೆಗುರುಳಿದಾಗ ಅಕ್ಷರಶಃ ವಾತಾವರಣವು ಹ್ಗೆಯಿಂದ ಕೂಡಿರುವ ರೀತಿಯಲ್ಲಿ ಗೋಚರಿಸುತ್ತದೆ. ಜಲಪಾತದ ನೀರು ಕಾಣದೆ ಬಂಡೆಗಳಿಂದಲೆ ಹೊಗೆಯಾಡಿದ ಹಾಗಿರುತ್ತದೆ. ಆದ್ದರಿಂದಲೆ ಇದಕ್ಕೆ ಹೊಗೇನಕ್ಕಲ್ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Ezhuttukari

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಧರ್ಮಪುರಿಯಲ್ಲಿ ಕಾವೇರಿ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಜಲಪಾತವು ಪಟ್ಟಣದಿಂದ ಕೇವಲ 40 ಕಿ.ಮೀ ಗಳಷ್ಟು ದೂರದಲ್ಲಿದ್ದು ಬೆಂಗಳೂರಿನಿಂದ ಸುಮಾರು 150 ಕಿ.ಮೀ ಗಳಷ್ಟು ದೂರದಲ್ಲಿದೆ. ಇಲ್ಲಿಗೆ ತೆರಳಲು ಸೂಕ್ತವಾದ ಮಾರ್ಗವೆಂದರೆ ಬೆಂಗಳೂರಿನಿಂದ ಹೊಸೂರು, ಕೃಷ್ಣಗಿರಿ, ಧರ್ಮಪುರಿ ಮಾರ್ಗವಾಗಿ ಹೊಗೇನಕ್ಕಲ್ ತಲುಪುವುದು. ಬಾಡಿಗೆ ಅಥವಾ ಸ್ವಂತ ವಾಹನಗಳಿದ್ದರೆ ಅನುಕೂಲ ಇಲ್ಲವೆಂದರೆ ಧರ್ಮಪುರಿಯಿಂದ ಸ್ಥಳೀಯ ವಾಹನಗಳು ದೊರೆಯುತ್ತವೆ. ಬೆಂಗಳೂರಿನಿಂದ ಹೊಸೂರು ಹಾಗೂ ಧರ್ಮಪುರಿಗಳಿಗೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: jeet_sen

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

"ಭಾರತದ ನಯಾಗ್ರಾ" ಎಂದು ಕರೆಯಲ್ಪಡುವ ಹೊಗೇನಕ್ಕಲ್ ಜಲಪಾತವು ತನ್ನ ಔಷಧಿ ಮೌಲ್ಯವುಳ್ಳ ನೀರಿಗೂ ಹೆಸರುವಾಸಿಯಾಗಿದೆ. ಕಾವೇರಿ ನದಿಯು ಈ ತಾಣಕ್ಕೆ ಬರುವ ಮೊದಲು ಔಷಧಿಯ ಮೌಲ್ಯಗಳುಳ್ಳ ಸಸ್ಯ ಗಳ ಕಾಡು ಪ್ರದೇಶಗಳಿಂದ ಹರಿದು ಬರುವುದರಿಂದ ಇಲ್ಲಿನೆ ನೀರಿನಲ್ಲಿ ವಿಶೇಷವಾದ ಶಕ್ತಿಯಿದೆ ಎಂದು ಸ್ಥಳೀಯರಿಂದ ನಂಬಲಾಗುತ್ತದೆ.

ಚಿತ್ರಕೃಪೆ: Sankara Subramanian

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಮಳೆಗಾಲ ಹಾಗೂ ನಂತರದ ಸಮಯ ಈ ಜಲಪಾತ ತಾಣಕ್ಕೆ ಭೇಟಿ ನೀಡಲು ಯೋಗ್ಯವಾಗಿದೆ. ಈ ಸಂದರ್ಭದಲ್ಲಿ ಕಾವೇರಿ ನದಿಯು ನೀರಿನಿಂದ ತುಂಬಿ ಹರಿಯುವ ದೃಶ್ಯ ಎಂಥವರನ್ನೂ ರೋಮಾಂಚನಗೊಳಿಸುತ್ತದೆ. ಉಸಿರು ಬಿಗೆ ಹಿಡಿದು ನೋಡುವಂತೆ ಮಾಡುತ್ತದೆ.

ಚಿತ್ರಕೃಪೆ: Sankara Subramanian

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಆದರೆ ಕೇವಲ ಮಳೆಗಾಲವಲ್ಲದೆ ಎಲ್ಲ ಸಮಯದಲ್ಲೂ ಈ ತಾಣಕ್ಕೆ ಭೇಟಿ ನೀಡಬಹುದಾಗಿದೆ. ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ನೀರಿನಲ್ಲಿ ಹೆಚ್ಚು ಪ್ರಭಾವಶಾಲಿ ಅಳೆಗಳಿಲ್ಲದಿರುವ ಕಾರಣ ತೆಪ್ಪ ಸವಾರಿಯ ಆನಂದ ಅನುಭವಿಸಬಹುದು. ಇದು ಸಾಮಾನ್ಯವಾಗಿ ಮಳೆಗಾಲದಲ್ಲಿ ಲಭ್ಯವಿರುವುದಿಲ್ಲ.

ಚಿತ್ರಕೃಪೆ: Ashwin Kumar

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಇನ್ನೂ ಎರಡು ವಿಶೇಷ ಸಂಗತಿಗಳನ್ನು ಈ ಜಲಪಾತ ಕೇಂದ್ರದಲ್ಲಿ ಕಾಣಬಹುದು. ಒಂದು, ಇಲ್ಲಿ ಸ್ಥಳೀಯ ಕೆಲ ಯುವ ಈಜುಗಾರರು ಹಲವು ಎತ್ತರದ ಬಂಡೆಗಳಿಂದ ನೀರಿನಲ್ಲಿ ನಿರಾಯಾಸವಾಗಿ, ಯಾವುದೆ ರೀತಿಯ ಭಯವಿಲ್ಲದೆ ಧುಮುಕುವುದನ್ನು ಗಮನಿಸಬಹುದು. ಪ್ರವಾಸಿಗರು ಖುಷಿಯಿಂದ ನೀಡುವ ಅಲ್ಪ ಹಣಕ್ಕೆ ಈ ತರುಣರು ಲೀಲಾಜಾಲವಾಗಿ ತಮ್ಮ ಡೈವಿಂಗ್ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ.

ಚಿತ್ರಕೃಪೆ: Praveen

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಮತ್ತೊಂದು ಸಂಗತಿಯೆಂದರೆ, ಮೀನು ಖಾದ್ಯಗಳನ್ನು ಇಷ್ಟಪಡುವವರು ಈ ತಾಣದಲ್ಲಿ ಆಗ ತಾನೆ ಹಿಡಿದ ತಾಜಾ ಮೀನುಗಳಿಂದ ಕ್ಷಣಾರ್ಧದಲ್ಲೆ ತಯಾರಿಸಲಾದ ಪಕ್ವಾನಗಳನ್ನು ಸವಿಯಬಹುದು. ಇಲ್ಲದಿದ್ದರೆ ನಿಮಗಿಷ್ಟವಾದ ತಾಜಾ ಮೀನುಗಳನ್ನು ಮನೆಗಳಿಗೆ ಕೊಂಡೊಯ್ಯಬಹುದು.

ಚಿತ್ರಕೃಪೆ: Praveen

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಮಳೆಗಾಲದ ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ಹರಿಯುವ ನದಿಗಳಿಂದುಂಟಾದ ಜಲಪಾತಗಳನ್ನು ನೋಡುವ ಆನಂದವೇ ಬೇರೆ. ಇಂತಹ ಆನಂದ ನಿಮ್ಮದಾಗಬೇಕಿದ್ದರೆ ಒಮ್ಮೆ ಹೊಗೇನಕ್ಕಲ್ ಜಲಪಾತಕ್ಕೆ ಭೇಟಿ ನೀಡಿ ಹಾಗೂ ಕಾವೇರಿಯ ರುದ್ರ ನರ್ತನವನ್ನು ನಿಮ್ಮ ಕಣ್ಣಾರೆ ಸವಿದು ಆನಂದ ಪಡೆಯಿರಿ. ಮುಡಿನ ಸ್ಲೈಡುಗಳಲ್ಲಿ ಜಲಪಾತದ ವಿವಿಧ ದೃಶ್ಯಗಳು ನಿಮಗಾಗಿ. ನೋಡಲು ಮರೆಯದಿರಿ.

ಚಿತ್ರಕೃಪೆ: Sankara Subramanian

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: M.arunprasad

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: Mithun Kundu

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: Ashwin Kumar

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: Ashwin Kumar

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: Ashwin Kumar

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: Ashwin Kumar

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: Soham Banerjee

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: Praveen

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: Praveen

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: Praveen

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: Sankara Subramanian

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: Praveen

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: Xtraordinarykid

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: Sharat Chandra

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ:

ಹೊಗೇನಕ್ಕಲ್ ಜಲಪಾತ....ಕಾವೇರಿಯ ಮಾದಕತೆ.

ಚಿತ್ರಕೃಪೆ: ezhuttukari

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X