Search
  • Follow NativePlanet
Share
» »ರಾಮ ನಾಮ ಜಪಕ್ಕೆ ರಾಮೇಶ್ವರ

ರಾಮ ನಾಮ ಜಪಕ್ಕೆ ರಾಮೇಶ್ವರ

By Divya

ತಮಿಳು ನಾಡಿನಲ್ಲಿ ಹಲವಾರು ಪವಿತ್ರ ತೀರ್ಥಕ್ಷೇತ್ರಗಳನ್ನು ನೋಡಬಹುದು. ಅವುಗಳಲ್ಲಿ ರಾಮೇಶ್ವರವೂ ಒಂದು. ಸಂಸ್ಕೃತಿ, ಪರಂಪರೆಗೆ ಹೆಸರಾದ ಈ ಊರಿಗೆ ರಾಮ ದೇವರಿಂದ ರಾಮೇಶ್ವರ ಎನ್ನುವ ಹೆಸರು ಬಂತು. ಆ ಕಾಲದಲ್ಲಿ ರಾಮ ತನ್ನ ಪತ್ನಿ ಸೀತೆಯನ್ನು ಹುಡುಕಲು ಇಲ್ಲಿಂದಲೇ ಲಂಕೆಗೆ ಸೇತುವೆಯನ್ನು ನಿರ್ಮಿಸಿದ್ದ, ಇದರ ಇತಿಹಾಸದಿಂದ ರಾಮೇಶ್ವರ ಎನ್ನುವ ಹೆಸರಿದೆ ಎನ್ನಲಾಗುತ್ತದೆ. ರಾಮೇಶ್ವರಂ - ದೇವತೆಗಳ ಭೂಲೋಕ ಸ್ವರ್ಗ/ಭೂಕೈಲಾಸ

ಇಲ್ಲಿಯ ಒಂದು ಆಕರ್ಷಣೆ ಚಾರ್ ದಾಮ್ ಯಾತ್ರಾ. ಇದೇ ರೀತಿ ಅನೇಕ ದೇಗುಲಗಳನ್ನು ಇಲ್ಲಿ ನೋಡಬಹುದು. ಅವು ಯಾವವು ಎಂಬುದನ್ನು ತಿಳಿಯೋಣ ಬನ್ನಿ. ರಾಮೇಶ್ವರಂ ಚಿತ್ರಗಳು

 Rameswaram

PC: Vishnukiran L.S

ಶ್ರೀ ರಾಮೇಶ್ವರ ಜ್ಯೋತಿರ್ಲಿಂಗ
12ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇಗುಲಕ್ಕೆ ರಾಮನಾಥ ಸ್ವಾಮಿ ದೇಗುಲ ಎಂದೂ ಕರೆಯುತ್ತಾರೆ. ಈ ದೇವಾಲಯ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಶಿವನನ್ನೇ ಇಲ್ಲಿ ರಾಮನಾಥೇಶ್ವರನಾಗಿ ಪೂಜಿಸಲಾಗುತ್ತದೆ. ಈ ದೇವಾಲಯವನ್ನು ಪಾಂಡ್ಯ ಜನರು ನಿರ್ಮಿಸಿದ್ದರು. ಭಾರತದ ಅತಿದೊಡ್ಡ ದೇಗುಲ ಎಂಬ ಖ್ಯಾತಿ ಪಡೆದಿರುವ ಈ ದೇಗುಲದ ಹೊರಗಡೆ ಸಾವಿರ ಕಂಬಗಳಿವೆ. ಪ್ರತಿಯೊಂದು ಕಂಬವೂ ಅಪೂರ್ವ ಕೆತ್ತನೆಯಿಂದ ಕೂಡಿದೆ.

Rameswaram


PC: Ryan

ಪಂಚಮುಖದ ಹನುಮಂತ ದೇವಾಲಯ
ರಾಮೇಶ್ವರದ ಇನ್ನೊಂದು ಆಕರ್ಷಣೀಯ ದೇಗುವಲವೆಂದರೆ ಪಂಚಮುಖದ ಆಂಜನೇಯ ದೇವಸ್ಥಾನ. ಇದು ಭಾರತದ ಪುಣ್ಯ ತೀರ್ಥಕೇತ್ರದ ದೇವಸ್ಥಾನದಲ್ಲಿ ಒಂದು. ಕಷ್ಟಗಳ ಬಗ್ಗೆ ಈ ದೇವರಲ್ಲಿ ಹೇಳಿಕೊಂಡರೆ ನಿವಾರಣೆಯಾಗುತ್ತದೆ ಎನ್ನುವ ಪ್ರತೀತಿ ಇದೆ.

ಕೋದಂಡರಾಮ ದೇಗುಲ
ಕೋದಂಡರಾಮ ದೇಗುಲವನ್ನು ಕೋದಂಡರಾಮಸ್ವಾಮಿ ಎಂದು ಕರೆಯುತ್ತಾರೆ. ರಾಮೇಶ್ವರದಲ್ಲಿ ನೋಡಲೇ ಬೇಕಾದ ಇನ್ನೊಂದು ದೇಗುಲ ಇದು. ಸಾವಿರ ವರ್ಷದ ಇತಿಹಾಸ ಹೊಂದಿರುವ ಈ ದೇಗುಲದಲ್ಲಿ ರಾಮನನ್ನು ಆರಾಧಿಸಲಾಗುತ್ತದೆ. ಈ ದೇಗುಲ ಸಮುದ್ರದ ದಡದಲ್ಲಿ ಇರುವುದರಿಂದ ಪ್ರವಾಸಿಗರಿಗೊಂದು ಆಕರ್ಷಕ ಪವಿತ್ರ ಕ್ಷೇತ್ರ.

ನಂಬು ನಾಯಕಿ ಅಮ್ಮನ ದೇಗುಲ
ಈ ದೇವಾಲಯದಲ್ಲಿ ನಂಬು ನಾಯಕಿ ದೇವರನ್ನು ಆರಾಧಿಸಲಾಗುತ್ತದೆ. ಮೊದಲು ಈ ದೇವಾಲಯ ಧನುಷ್ಕೋಡಿ ಎಂಬಲ್ಲಿ ಇತ್ತು. 1964ರ ಚಂಡಮಾರುತದಿಂದಾಗಿ ಈ ದೇವಾಲಯವನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು. ಇದನ್ನು ಹೆಚ್ಚು ಶಕ್ತಿ ಇರುವ ದೇವರು ಎನ್ನಲಾಗುತ್ತದೆ. ಜನರು ತಮ್ಮ ಕಷ್ಟಗಳನ್ನು ದೇವರ ಮುಂದಿಟ್ಟು ಪರಿಹಾರ ಕೇಳಿಕೊಂಡರೆ ಬೇಗ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ.

Read more about: tamil nadu rameshwaram
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X