Search
  • Follow NativePlanet
Share
» »ತಮಿಳುನಾಡಿನ ನಿಗೂಢ ಹಾಗೂ ಆಕರ್ಷಕ ಸ್ಥಳ

ತಮಿಳುನಾಡಿನ ನಿಗೂಢ ಹಾಗೂ ಆಕರ್ಷಕ ಸ್ಥಳ

ರಾಮಾಯಣದ ಹಿನ್ನಿಲೆ ಹೊಂದಿದ್ದು, ರಾಮನ ಹಲವಾರು ದೇವಸ್ಥಾನಗಳನ್ನು ಹೊಂದಿದ್ದು, ರೈಲು ನಿಲ್ದಾಣ ಹಾಗೂ ಬಸ್ಸು ನಿಲ್ದಾಣಗಳನ್ನು ಹೊಂದಿದ್ದು, ಪ್ರಸ್ತುತ ಅವೆಲ್ಲವೂ ಪಾಳು ಬಿದ್ದು, ಅಕ್ಷರಶಃ ಸರ್ವನಾಶವಾಗಿ, ಇತಿಹಾಸದ ಪುಟಕ್ಕೆ ಸೇರುತ್ತಿದ್ದ ಗ್ರಾಮವೊಂದು ಇತ್ತೀಚಿನ ಕೆಲ ವರ್ಷಗಳಿಂದ ತನ್ನ ಅಸ್ತಿತ್ವವನ್ನು ಮರಳಿ ಪಡೆದುಕೊಳ್ಳುವಲ್ಲಿ ಯಶಸ್ವಿ ಪ್ರಯತ್ನ ಪಡುತ್ತಿದೆ.

ಆ ಸ್ಥಳ ಇಂದು ಪ್ರವಾಸಿ ಆಕರ್ಷಣೆಯಾಗಿ ಏನಿಲ್ಲವೆಂದರೂ ಪ್ರತಿನಿತ್ಯ 500 ರ ಆಸು ಪಾಸಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಹಾಗೂ ಈ ಸಂಖ್ಯೆಯು ಇನ್ನೂ ಹೆಚ್ಚುವ ಸೂಚನೆಯನ್ನು ನೀಡುತ್ತಿದೆ. ಈ ಸ್ಥಳಕ್ಕೆ ತೆರಳಲು ಅಧಿಕೃತ ಬಸ್ಸುಗಳಾಗಲಿ, ರೈಲಾಗಲಿ ಇಲ್ಲವೆ ಇಲ್ಲ. ಕೇವಲ ಖಾಸಿ ಜೀಪಿನಂತಹ ವಾಹನಗಳನ್ನು ಬಾಡಿಗೆಗೆ ಪಡೆದು ತಲುಪಬೇಕು. ಇಲ್ಲದಿದ್ದರೆ ಆಳವಿರದ ಸಮುದ್ರ ನೀರಿನಲ್ಲಿ ದಿಬ್ಬ ದಿಣ್ಣೆಗಳನ್ನು ಏರುತ್ತ ಇಳಿಯುತ್ತ ಕಾಲ್ನಡಿಗೆಯಲ್ಲೆ ಸಾಗಿ ತಲುಪಬೇಕು.

ಹೌದು... ಈ ಲೇಖನದಲ್ಲಿ ತಮಿಳುನಾಡಿನ ರಾಮೇಶ್ವರಂ ನಿಂದ ಸುಮಾರು 18 ಕಿ.ಮೀ ಗಳಷ್ಟು ದೂರವಿರುವ ಧನುಷ್ಕೋಡಿಯ ಕುರಿತು ತಿಳಿಸಲಾಗಿದೆ. ಒಂದೊಂದೆ ಸ್ಲೈಡುಗಳನ್ನು ನೋಡುತ್ತ ಸ್ಥಳದ ಹಿನ್ನಿಲೆಯ ಕುರಿತು ರೋಚಕ ಹಾಗೂ ಅಷ್ಟೆ ಮನ ಕಲುಕುವ ವಿಷಯಗಳನ್ನು ತಿಳಿಯಿರಿ.

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ತಮಿಳುನಾಡು ರಾಜ್ಯದ ರಾಮೇಶ್ವರಂ ದ್ವೀಪದ ಬಳಿಯಿರುವ ದಕ್ಷಿಣದ ತುತ್ತತುದಿಯಲ್ಲಿರುವ ಒಂದು ಗ್ರಾಮವಾಗಿದ್ದು, ಭಾರತದ ತಮಿಳುನಾಡುರಾಜ್ಯದ ಪೂರ್ವ ತೀರದಲ್ಲಿದೆ. ರಾಮೇಶ್ವರಂನ ಪಂಬನ್ ಸೇತುವೆಯ ನೈರುತ್ಯ ದಿಕ್ಕಿನಲ್ಲಿರುವ ಧನುಷ್ಕೋಡಿಯು ಶ್ರೀಲಂಕಾ ದೇಶದ ತಲೈಮನ್ನಾರ್ ಎಂಬ ಸ್ಥಳದ ಪಶ್ಚಿಮಕ್ಕೆ ಕೇವಲ 18 ಮೈಲಿಗಳ ಅಂತರದಲ್ಲಿ ನೆಲೆಸಿರುವ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Nataraja

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ಎಂಬ ಕೌತುಕ:

ಕಾಶಿಗೆ ಹೋಗಿಬಂದ ತೀರ್ಥಯಾತ್ರೆಯ ಫಲವು ಸಂಪೂರ್ಣವಾಗಿ ಸಿದ್ಧಿಸಬೇಕಾದರೆ ರಾಮೇಶ್ವರದಲ್ಲಿ ಪೂಜೆ ಹಾಗೂ ಧನುಷ್ಕೋಡಿಯಲ್ಲಿ ಮಹೋದಧಿ (ಬಂಗಾಳ ಕೊಲ್ಲಿ), ಮತ್ತು ರತ್ನಾಕರ (ಹಿಂದೂ ಮಹಾಸಾಗರ)ಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡಬೇಕು ಎಂಬ ಪ್ರತೀತಿ ಇದೆ. ಇಲ್ಲಿ ರಾಮನ ಹಲವಾರು ದೇವಸ್ಥಾನಗಳಿವೆ.

ಚಿತ್ರಕೃಪೆ: Bobinson K B

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ಎಂಬ ಕೌತುಕ:

ಈ ಹಳ್ಳಿಯು ಸುತ್ತಲೂ ನೀರಿನಿಂದ ಆವೃತವಾಗಿದ್ದು ಒಂದು ವಿಶಿಷ್ಟ ರೀತಿಯ ಅನುಭವ ನೀಡುತ್ತದೆ. ಕೆಲವರಿಗೆ ನಿರ್ಜನ ವಾತಾವರಣ ಕಂಡು ಭಯವಾದರೂ ಅಚ್ಚರಿ ಪಡಬೇಕಾಗಿಲ್ಲ. ಅಂತೆಯೆ ಸಾಕಷ್ಟು ಪ್ರವಾಸಿಗರು ಗುಂಪು ಗುಂಪಾಗಿ ಬೆಳಗ್ಗೆ ಬಂದು ಸೂರ್ಯ ಮುಳುಗುವ ಮುನ್ನ ರಾಮೇಶ್ವರಂಗೆ ಮರಳಿ ಬಿಡುತ್ತಾರೆ.

ಚಿತ್ರಕೃಪೆ: M.Mutta

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ಎಂಬ ಕೌತುಕ:

ಡಿಸೆಂಬರ್ 22, 1964 ರ ದಿನದ ರಾತ್ರಿ ಸಮಯ. 653 ಸಂಖ್ಯೆಯ ಪ್ರಯಾಣಿಕ ರೈಲೊಂದು ಧನುಷ್ಕೋಡಿಯಿಂದ ಪಂಬನ್ ಗೆ ಹೊರಟಿತ್ತು. ಆ ಸಂದರ್ಭದಲ್ಲುಂಟಾದ ಅತ್ಯಂತ ಬಿರುಸಾದ ಚಂಡಮಾರುತವೊಂದು ಸಮುದ್ರದಲೆಗಳನ್ನು ರೌದ್ರಾವತಾರದಲ್ಲಿ ಉಕ್ಕುವಂತೆ ಮಾಡಿ ಸಂಪೂರ್ಣ ರೈಲನ್ನೆ ಜಲಸಮಾಧಿಯನ್ನಾಗಿಸಿತು. ಆ ಘಟನೆಯ ನಂತರ ಇದನ್ನು ದೆವ್ವದ ಭೂಮಿ ಎಂದು ಪರಿಗಣಿಸಲಾಯಿತು. ನಾಶಗೊಂಡ ರೈಲು ಮಾರ್ಗ.

ಚಿತ್ರಕೃಪೆ: Nsmohan

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ಎಂಬ ಕೌತುಕ:

ಆದರೂ ಇಲ್ಲಿಯ ನಿಗೂಢತೆಯು ಒಂದು ರೀತಿಯಲ್ಲಿ ಕುತೂಹಲವನ್ನುಂಟು ಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಪ್ರವಾಸೋದ್ಯಮವು ಅಭಿವೃದ್ಧಿಯಾಗುತ್ತಿದ್ದು ಪ್ರವಾಸಿಗರ ಅನುಕೂಲಕ್ಕಾಗಿ ಸಾಕಷ್ಟು ಪ್ರಮಾಣದ ಪೊಲೀಸ್ ಪಡೆಯನ್ನು ಇಲ್ಲಿ ನಿಯಮಿಸಲಾಗಿದೆ. ಭಾರತಕ್ಕೆ ಸಂಬಂಧಿಸಿದ ಸಮುದ್ರ ಪ್ರದೇಶವನ್ನು ಕಾಯಲು ನಿರೀಕ್ಷಣಾ ಪಹರೆಯೊಂದನ್ನು ಭಾರತೀಯ ನೌಕಾಪಡೆಯು ಸ್ಥಾಪಿಸಿದೆ.

ಚಿತ್ರಕೃಪೆ: Nsmohan

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿಯ ವಿಶೇಷತೆ ಎಂದರೆ ಹಿಂದೂ ಮಹಾಸಾಗರದ ರಭಸದ ನೀರು ಆಳವಿಲ್ಲದ ಹಾಗೂ ಶಾಂತಮಯವಾದ ಬಂಗಾಳಕೊಲ್ಲಿಯ ಜಲವನ್ನು ಸೇರುವುದನ್ನು ಕಾಣಬಹುದು. ಇಲ್ಲಿ ಸಮುದ್ರದ ಆಳವು ಕಡಿಮೆ ಇರುವುದರಿಂದ ಈ ಸ್ಥಳದಲ್ಲಿ ಇಳಿದು ನಡೆದು ವರ್ಣಭರಿತವಾದ ಹವಳಗಳು, ಮೀನುಗಳು, ಸಮುದ್ರಸಸ್ಯಗಳುಮ ನಕ್ಷತ್ರಮೀನುಗಳು, ಸಾಗರ ಸೌತೆ, ಇತ್ಯಾದಿಗಳನ್ನು ಕಾಣಬಹುದು.

ಚಿತ್ರಕೃಪೆ: Armstrongvimal

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ಎಂಬ ಕೌತುಕ:

ಹಿಂದೂ ಪುರಾಣಗ್ರಂಥಗಳು ಹೇಳುವುದೇನೆಂದರೆ; ರಾವಣನ ತಮ್ಮನೂ, ರಾಮನ ಪಕ್ಷಪಾತಿಯೂ ಆದ ವಿಭೀಷಣನ ಕೋರಿಕೆಯನ್ನು ಮನ್ನಿಸಿ, ತನ್ನ ಬಿಲ್ಲಿನ ಒಂದು ತುದಿಯಿಂದ ರಾಮನು ಈ ಸೇತುವೆಯನ್ನು ಮುರಿದುದರಿಂದ ಈ ಸ್ಥಳಕ್ಕೆ ಧನುಷ್ಕೋಡಿ ಧನುಷ್ ಎಂದರೆ ಬಿಲ್ಲು, ಕೋಡಿ ಎಂದರೆ ತುದಿ ಎಂಬ ಹೆಸರು ಬಂದಿತು.

ಚಿತ್ರಕೃಪೆ: Shubham Gupta

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ಎಂಬ ಕೌತುಕ:

ರಾಮನು ಈ ಸ್ಥಳವನ್ನು ಸೇತುವೆಯ ನಿರ್ಮಾಣಕ್ಕೆ ಸೂಕ್ತವಾದ ಜಾಗವೆಂದು ತನ್ನ ಕೀರ್ತಿವೆತ್ತ ಬಿಲ್ಲಿನ ತುದಿಯಿಂದ ಗುರುತು ಹಾಕಿದನು ಎಂಬ ವಾದವೂ ಇದೆ. ಸಾಮಾನ್ಯವಾಗಿ ರಾಮೇಶ್ವರಕ್ಕೆ ಬರುವ ಯಾತ್ರಿಗಳು ಎರಡು ಸಮುದ್ರಗಳು ಸೇರುವ ಈ ಸ್ಥಳದಲ್ಲಿ ಸ್ನಾನ ಮಾಡುವುದು ಚಾಲ್ತಿಯಲ್ಲಿದೆ. ಒಂದೇ ಸರಳರೇಖೆಯಲ್ಲಿರುವ ಹಲವಾರು ಬಂಡೆಗಳು ಮತ್ತು ಪುಟ್ಟ ದ್ವೀಪಗಳ ಸಾಲ್ಲಗಿರುವುದನ್ನು ಇಲ್ಲಿ ಗಮನಿಸಬಹುದಾಗಿದ್ದು ಇದನ್ನೆ ಹಲವರು ರಾಮ ಸೇತು ಎಂದು ನಂಬುತ್ತಾರೆ.

ಚಿತ್ರಕೃಪೆ: Chandra

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ಎಂಬ ಕೌತುಕ:

ರಾಮೇಶ್ವರಂನಿಂದ ಧನುಷ್ಕೋಡಿಗೆ ತಲುಪಲು ಯಾವುದೆ ರೈಲು ಅಥವಾ ಬಸ್ಸುಗಳ ವ್ಯ್ವಸ್ಥೆಯಿಲ್ಲ. ಆದರೂ ಧನುಷ್ಕೋಡಿಯನ್ನು ತಲುಪಬೇಕಾದರೆ ಸಮುದ್ರತೀರದ ಗುಂಟ ಮರಳಿನ ದಿಬ್ಬಗಳ ಮೇಲೆಯೆ ಕಾಲ್ನಡಿಗೆಯಲ್ಲಿ ಸಾಗಬೇಕು ಅಥವಾ ಬೆಸ್ತರು ಹೊಂದಿರುವ ಜೀಪ್ ಮತ್ತು ಟೆಂಪೋಗಳನ್ನು ಅವಲಂಬಿಸಬೇಕು. ಒಟ್ಟು ದೂರ ಸುಮಾರು 18 ಕಿ.ಮೀ ಗಳು.

ಚಿತ್ರಕೃಪೆ: Nsmohan

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ಎಂಬ ಕೌತುಕ:

ಪ್ರಸ್ತುತದಲ್ಲಿ ಪ್ರತಿದಿನವೂ ಸುಮಾರು 500 ಯಾತ್ರಿಕರು ಧನುಷ್ಕೋಡಿಗೆ ಭೇಟಿ ನೀಡುತ್ತಿದ್ದು, ಹಬ್ಬ, ಹರಿದಿನಗಳು, ಹಾಗೂ ಹುಣ್ಣಿಮೆ ಹಾಗೂ ಅಮಾವಾಸ್ಯೆಯಂತಹ ದಿನಗಳಂದು ಸಾವಿರಾರು ಯಾತ್ರಿಕರು ಇಲ್ಲಿಗೆ ಆಗಮಿಸುತ್ತಾರೆ. ಧನುಷ್ಕೋಡಿಯಲ್ಲಿ ಧಾರ್ಮಿಕ ವಿಧಿಗಳನ್ನು ಆಚರಿಸಲು ಇಚ್ಛಿಸುವ ಹಲವಾರು ಯಾತ್ರಿಕರು ಖಾಸಗಿ ವ್ಯಾನ್ ಗಳನ್ನು ಅವಲಂಬಿಸಬೇಕಾಗಿದೆ.

ಚಿತ್ರಕೃಪೆ: Chandra

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ಎಂಬ ಕೌತುಕ:

2003 ರಲ್ಲಿ ಜನರ ಅಪಾರ ಬೇಡಿಕೆಯ ಮೆರೆಗೆ ದಕ್ಷಿಣ ರೈಲು ವಿಭಾಗವು ಧನುಷ್ಕೋಡಿಯಿಂದ ರಾಮೇಶ್ವರಂಗೆ ರೈಲಿನ ಮರುಸ್ಥಾಪನೆಯ ಕರಡನ್ನು ಕೇಂದ್ರಕ್ಕೆ ಸಲ್ಲಿಸಿದ್ದು ಆ ಕುರಿತು ಇಲ್ಲಿಯ ವರೆಗೆ ಯಾವುದೆ ಪ್ರಯತ್ನಗಳು ಜಾರಿಗೊಂಡಿಲ್ಲ.

ಚಿತ್ರಕೃಪೆ: Nsmohan

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ಎಂಬ ಕೌತುಕ:

ಪಾಳು ಬಿದ್ದ ಧನುಷ್ಕೋಡಿಯ ರೈಲು ನಿಲ್ದಾಣ.

ಚಿತ್ರಕೃಪೆ: Nsmohan

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ಎಂಬ ಕೌತುಕ:

ಇಲ್ಲಿ ಈಗಲೂ ವಾಸಿಸುತ್ತಿರುವ ಕೆಲವೆ ಕೆಲವು ಬೆಸ್ತರು ಮೀನು ಹಿಡಿಯುವ ಕಾಯಕದಿಒಂದಲೆ ಜೀವನ ನಡೆಸುತ್ತಿದ್ದಾರೆ. ಪ್ರತಿ ದಿನ ಭೇಟಿ ನೀಡುವ ಪ್ರವಾಸಿಗರಿಗೆ ತಾಜಾ ಮೀನುಗಳ ಸ್ಥಳೀಯ ಊಟ ದೊರೆಯುತ್ತದೆ.

ಚಿತ್ರಕೃಪೆ: Nsmohan

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿ ಎಂಬ ಕೌತುಕ:

ಧನುಷ್ಕೋಡಿಯಲ್ಲಿರುವ ಒಂದು ಸ್ಥಳಿಯ ಚರ್ಚ್.

ಚಿತ್ರಕೃಪೆ: Nsmohan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X