Search
  • Follow NativePlanet
Share
» »ಚೆಂಬ್ರಾ ಪೀಕ್ : ಸಖತ್ ಕಿಕ್

ಚೆಂಬ್ರಾ ಪೀಕ್ : ಸಖತ್ ಕಿಕ್

By Vijay

ಸಾಮಾನ್ಯವಾಗಿ ಚಳಿಗಾಲದ ಸಮಯ ಆನಂದಮಯ, ಪ್ರವಾಸ ಹೊರಡಲು ಹಿತಮಯ. ಬಹುತೇಕ ಸ್ಥಳಗಳಿಗೆ ಪ್ರವಾಸ ಹೊರಡಲು ಚಳಿಗಾಲ ಸುಸಂದರ್ಭ. ಜಲಪಾತ ತಾಣಗಳಾಗಲಿ, ಉಷ್ಣ ಪ್ರದೇಶಗಳಾಗಲಿ ಈ ಸಮಯದಲ್ಲಿ ಸಾಕಷ್ಟು ಹಿತಕರವಾದ ವಾತಾವರಣವನ್ನು ಹೊಂದಿರುತ್ತವೆ. ಇನ್ನು ಬೆಟ್ಟ ಪ್ರದೇಶಗಳಿಗೆ ಟ್ರೆಕ್ಕಿಂಗ್ ಹೋಗುವುದೆಂದರೆ ಎಲ್ಲಿಲ್ಲದ ಉತ್ಸಾಹ ಮನದಲ್ಲಿ ಮೂಡುವುದು ಖಂಡಿತ.

ದಕ್ಷಿಣ ಭಾರತವು ದೇಶದ ಅದೃಷ್ಟಶಾಲಿ ಭಾಗವೆಂದೆ ಹೇಳಬಹುದು. ಏಕೆಂದರೆ ಇಲ್ಲಿ ನೈಸರ್ಗಿಕ ಸಂಪತ್ತಿಗೇನೂ ಬರವಿಲ್ಲ. ಪಶ್ಚಿಮ ಘಟ್ಟಗಳಂತೂ ಸದಾ ಹಸಿರಿನಿಂದ ಕಂಗೊಳಿಸುವ ದಟ್ಟ ಅರಣ್ಯಗಳಿಂದ ಕೂಡಿದ್ದು, ಅಪ್ರತಿಮವಾದ ಭೂದೃಶ್ಯಾವಳಿಗಳನ್ನು ನೋಡುಗರಿಗೆ ಒದಗಿಸುತ್ತದೆ. ಎತ್ತರ ಹಾಗೂ ತಗ್ಗು ಪ್ರದೇಶಗಳು, ಕೆರೆ ತೊರೆ ಹಳ್ಳಗಳು, ನದಿಗಳು, ಜಲಪಾತಗಳು, ಶ್ರೀಮಂತ ಹಾಗೂ ವೈವಿಧ್ಯಮಯ ಜೀವ ಸಂಪತ್ತು ಹೀಗೆ ಪಟ್ಟಿ ಮುಂದುವರೆಯುತ್ತದೆ.

ವಿಶೇಷ ಲೇಖನ : ಭಾರತದಲ್ಲಿರುವ ಅತಿ ಎತ್ತರದ ಶಿಖರಗಳು

ಚೆಂಬ್ರಾ ಪೀಕ್ : ಸಖತ್ ಕಿಕ್

ಚಿತ್ರಕೃಪೆ: Aneesh Jose

ಕೇರಳ ರಾಜ್ಯದ ಪ್ರವಾಸಿ ಪ್ರಖ್ಯಾತಿಯ ವಯನಾಡ್ ಜಿಲ್ಲೆಯಲ್ಲೂ ಸಹ ಒಂದು ಚುಂಬಕದಂತೆ ಸೆಳೆಯುವ ಗಿರಿ ಶಿಖರವಿದೆ. ಅನೇಕ ಪ್ರವಾಸಿಗರು ಅದರಲ್ಲೂ ವಿಶೇಷವಾಹಿ ಹದಿಹರೆಯದವರಿಗೆ ಈ ಶಿಖರಕ್ಕೆ ಟ್ರೆಕ್ಕಿಂಗ್ ಹೊರಡುವುದೆಂದರೆ ಎಲ್ಲಿಲ್ಲದ ಸಂತಸ ಕೊಡುತ್ತದೆ. ಈ ಲೇಖನವು ಚೆಂಬ್ರಾ ಗಿರಿ ಶಿಖರದ ಕುರಿತು ತಿಳಿಸುತ್ತದೆ. ಸಮಯಾವಕಾಶ ಲಭಿಸಿದರೆ ನೀವು ಒಮ್ಮೆ ಹೊರಡಿ.

ವಿಶೇಷ ಲೇಖನ : ಕೆಲ ಸುಂದರ ಚಾರಣ ಮಾರ್ಗಗಳು

ವಯನಾಡ್ ಜಿಲ್ಲೆಯಲ್ಲೆ ಕಂಡು ಬರುವ ಅತಿ ಎತ್ತರದ ಶಿಖರ ಶೃಂಗ ಚೆಂಬ್ರಾ. ಮೆಪ್ಪಾಡು ಬಳಿಯಿರುವ ಈ ಶಿಖರ ಶೃಂಗ ಕಲ್ಪೆಟ್ಟಾಗೆ ಬಹು ಹತ್ತಿರದಲ್ಲಿದೆ. ನೀವು ಇಲ್ಲಿಗೆ ಟ್ರೆಕ್ಕಿಂಗ್ ಹೋಗಲು ಬಯಸಿದ್ದರೆ ಮೊದಲಿಗೆ ಕಲ್ಪೆಟ್ಟಾಗೆ ತಲುಪಿ ಅಲ್ಲಿಂದ ಮೆಪ್ಪಾಡಿಗೆ ತೆರಳಬೇಕು. ಕಲ್ಪೆಟ್ಟಾದಿಂದ ಮೆಪ್ಪಾಡಿಗೆ ತೆರಳಲು ಸ್ಥಳೀಯವಾಗಿ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ನಂತರ ಮೆಪ್ಪಾಡಿಯಿಂದ ಕಾಲ್ನಡಿಗೆಯ ಮೂಲಕವೆ ಚೆಂಬ್ರಾ ಶೃಂಗಕ್ಕೆ ತಲುಪಬಹುದು. ಇದೊಂದು ಅದ್ಭುತವಾದ ಟ್ರೆಕ್ಕಿಂಗ್ ಅನುಭವವನ್ನು ನೀಡುತ್ತದೆ.

ಚೆಂಬ್ರಾ ಪೀಕ್ : ಸಖತ್ ಕಿಕ್

ಚಿತ್ರಕ್ರುಪೆ: Sarath Kuchi

ಇನ್ನು ಇಲ್ಲಿಗೆ ಹಾಗೆ ಸುಮ್ಮನೆ ಪ್ರವಾಸ ಮಾಡಲೆಂದು ಬಂದು ಅಕಸ್ಮಾತಾಗಿ ಟ್ರೆಕ್ಕಿಂಗ್ ಹೋಗುವ ಬಯಕೆ ಉಂಟಾದರೆ ಚಿಂತಿಸದಿರಿ. ಸ್ಥಳೀಯವಾಗಿ ಟ್ರೆಕ್ಕಿಂಗ್ ಗೆ ಬೇಕಾದ ಎಲ್ಲ ಉಪಕರಣ, ಸಾಮಾನು ಸರಂಜಾಮುಗಳನ್ನು ಸ್ಥಳೀಯ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಬಾಡಿಗೆಗೆ ಪಡೆದು ನಿರಾತಂಕವಾಗಿ ಟ್ರೆಕ್ಕಿಂಗ್ ಅನುಭವದ ಸವಿ ಪಡೆಯಬಹುದು. ಅಷ್ಟೆ ಏಕೆ ನಿಮ್ಮ ಟ್ರೆಕ್ಕಿಂಗ್ ಯಾವುದೆ ಗೊಂದಲಗಳಿಲ್ಲದೆ ಸಮಯೋಚಿತವಾಗಿ ನಡೆಯಲು ಸ್ಥಳೀಯ ಮಾರ್ಗದರ್ಶಿಗಳ ಸೇವೆಯನ್ನೂ ಸಹ ಪಡೆಯಬಹುದು.

ಚೆಂಬ್ರಾ ಪೀಕ್ : ಸಖತ್ ಕಿಕ್

ಚಿತ್ರಕೃಪೆ: Sankara Subramanian

ಮತ್ತೊಂದು ಮುಖ್ಯ ವಿಚಾರವೆಂದರೆ ಟ್ರೆಕ್ಕಿಂಗ್ ಮಾಡಲು ಸ್ಥಳೀಯ ವಲಯ ಅರಣ್ಯಾಧಿಕಾರಿಯಿಂದ ಮುಂಚಿತವಾಗಿ ಅನುಮತಿ ಪಡೆಯಬೇಕಾಗಿರುವುದು ಅವಶ್ಯ. ಟ್ರೆಕ್ಕಿಂಗ್ ಮಾಡುವುದೆ ಒಂದು ವಿಶೇಷ ಆಕರ್ಷಕ ಚಟುವಟಿಕೆಯಾಗಿದ್ದರೂ ಕೂಡ ಇಲ್ಲಿ ಅಂದರೆ ಚೆಂಬ್ರಾ ಶಿಖರಕ್ಕೆ ಟ್ರೆಕ್ ಮಾಡುವುದಕ್ಕೆ ಒಂದು ವಿಶೇಷ ಕಾರಣವೂ ಸಹ ಇದೆ. ಅದೆ ಹಾರ್ಟ್ ಕೆರೆ. ಅಂದರೆ ಹೃದಯದ ಆಕಾರದಲ್ಲಿ ರೂಪಗೊಂಡಿರುವ ಕೆರೆ. ಇದು ಎಂದಿಗೂ ಬತ್ತಿಲ್ಲ ಎಂದು ಹೇಳಲಾಗಿದೆ. ಚೆಂಬ್ರಾ ಶೃಂಗ ತಲುಪುವ ಮುಂಚೆಯೆ ಇದು ಚಾರಣಿಗರನ್ನು ಸ್ವಾಗತಿಸುತ್ತದೆ.

ಚೆಂಬ್ರಾ ಪೀಕ್ : ಸಖತ್ ಕಿಕ್

ಚಿತ್ರಕೃಪೆ: Tanuja R Y

ಇಲ್ಲಿಗೆ ತಲುಪಿ ಒಂದಿಷ್ಟು ಸಮಯ ಕಳೆದು ನಂತರ ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಮಧ್ಯದಲ್ಲಿ ಮುಂದೆ ಸಾಗುತ್ತ ಶೃಂಗವನ್ನು ತಲುಪಬಹುದಾಗಿದೆ. ಒಂದೊಮ್ಮೆ ಶಿಖರ ಶೃಂಗವನ್ನು ತಲುಪಿದಾಗ ಅಲ್ಲಿ ಕಂಡು ಬರುವ ಅದ್ಭುತ ಹಾಗೂ ವಿಹಂಗಮವಾದ ನೋಟವು ನಿಮಗಾದ ಆಯಾಸವು ಒಂದೆ ಕ್ಷಣದಲ್ಲಿ ಓಡಿ ಹೋಗುವಂತೆ ಮಾಡುತ್ತದೆ ಅಂದರೆ ತಪ್ಪಾಗಲಿಕ್ಕಿಲ್ಲ.

ಚೆಂಬ್ರಾ ಪೀಕ್ : ಸಖತ್ ಕಿಕ್

ಚಿತ್ರಕೃಪೆ: Sarath Kuchi

ತೆರಳುವ ಬಗೆ :

ಬೆಂಗಳೂರು, ಕೊಚಿ ಸೇರಿದಂತೆ ಸಾಕಷ್ಟು ಬಸ್ಸುಗಳು ಕಲ್ಪೆಟ್ಟಾದವರೆಗೆ ಲಭ್ಯವಿದೆ. ಮೊದಲಿಗೆ ಕಲ್ಪೆಟ್ಟಾಗೆ ತೆರಳಿ ಅಲ್ಲಿಂದ ಮೆಪ್ಪಾಡಿಗೆ ಹೊರಡಬೇಕು. ಕಲ್ಪೆಟ್ಟಾದಿಂದ ಮೆಪ್ಪಾಡಿಗೆ ಬಸ್ಸುಗಳು ದೊರೆಯುತ್ತವೆ ಹಾಗೂ ಇವುಗಳ ಮಧ್ಯದ ದೂರ ಕೇವಲ 14 ಕಿ.ಮೀ ಗಳು ಮಾತ್ರ. ನಂತರ ಮೆಪ್ಪಾಡಿಯಲ್ಲಿ ವಲಯ ಅರಣ್ಯಾಧಿಕಾರಿ ಕಚೇರಿಗೆ ತೆರಳಿ ಚಾರಣಕ್ಕೆ ಅನುಮತಿ ಪಡೆಯಬಹುದು. ಒಂದೊಮ್ಮೆ ಅನುಮತಿ ದೊರೆತ ನಂತರ ಸ್ಥಳೀಯ ಮಾರ್ಗದರ್ಶಿಗಳ ಸಹಾಯದಿಂದ ನಿಮ್ಮೆ ಚೆಂಬ್ರಾ ಟ್ರೆಕ್ಕಿಂಗ್ ಆರಂಭಿಸಬಹುದು.

ವಿಶೇಷ ವಯನಾಡ್ ಚಿತ್ರಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X