Search
  • Follow NativePlanet
Share
» »ಸುಭದ್ರ ಪ್ರಕೃತಿ ಸೌಂದರ್ಯದ ಭದ್ರಾ ಜಲಾಶಯ ಕಾಡು

ಸುಭದ್ರ ಪ್ರಕೃತಿ ಸೌಂದರ್ಯದ ಭದ್ರಾ ಜಲಾಶಯ ಕಾಡು

By Vijay

ನಗರದಿಂದ ಬಲು ದೂರದಲ್ಲೊಂದು ಕಾಡು, ಕಾಡಿನಲ್ಲರಳಿದ ವಿವಿಧ ಸಸ್ಯ ರಾಶಿಗಳು, ಮನ ಪುಳಕಗೊಳಿಸುವ ಹಕ್ಕಿಗಳ ಕಲರವ, ಸಮುದ್ರದಂತೆ ರಪ ರಪ ಎಂದು ಅಬ್ಬರ ಮಾಡದ ಆದರೂ ಕಣ್ಣು ಚಾಚಿದಷ್ಟು ವಿಶಾಲವಾಗಿ ವ್ಯಾಪಿಸಿರುವ ಪ್ರಶಾಂತಮಯ ಜಲರಾಶಿ, ಈ ಜಲರಾಶಿಯಲ್ಲಿ ಅಲ್ಲಲ್ಲಿ ದೋಣಿಗಳ ಚಲನವಲನ, ಮನವನ್ನು ಪ್ರಫುಲ್ಲಗೊಳಿಸುವ ವಾತಾವರಣ...ಈ ಎಲ್ಲ ಅಂಶಗಳು ಭದ್ರಾ ಜಲಾಶಯ ತಾಣವನ್ನು ವ್ಯಾಖ್ಯಾನಿಸುತ್ತವೆ.

ಹೌದು ಭದ್ರಾ ನದಿ ಜಲಾಶಯ ತಾಣವು ಒಂದು ಅದ್ಭುತವಾದ ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿ ತಂಗಲು ರಿಸಾರ್ಟುಗಳಿದ್ದು ಪ್ರಕೃತಿಯ ನೈಜತೆಯನ್ನು ಕಣ್ಣಾರೆ ಸವಿಯಬಹುದು. ಇನ್ನು ಇಲ್ಲಿಗೆ ತೆರಳುವುದು ಕೂಡ ಅಷ್ಟೊಂದು ಕಷ್ಟಕರವಾಗೇನಿಲ್ಲ. ರಸ್ತೆ ಮೂಲಕ ಸಾಗಬೇಕೆಂದಿದ್ದರೆ ಬೆಂಗಳೂರಿನಿಂದ ತಿಪಟೂರು, ಅರಸಿಕೆರೆ, ತರಿಕೆರೆ ಹಾಗೂ ಲಕ್ಕವಳ್ಳಿ ಮೂಲಕ ಭದ್ರಾ ವನ್ಯ ಜೀವಿ ಧಾಮವನ್ನು ತಲುಪಬಹುದು.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುವ ಕೆಎಸ್‍ಆರ್‌‌‌‌‌ಟಿಸಿ ಬಸ್ಸುಗಳ ಮೂಲಕ ತರಿಕೆರೆವರೆಗೂ ಸಾಗಬಹುದಾಗಿದ್ದು ಮುಂದೆ ತರಿಕೆರೆಯಿಂದ ಖಾಸಗಿ ಬಸ್ಸುಗಳಲ್ಲಿ ಪ್ರಯಾಣ ಮುಂದುವರೆಸಬಹುದು.

ಭದ್ರಾಗೆ ಹತ್ತಿರದಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಗಳು:

ಚಿಕ್ಕಮಗಳೂರು ಶೃಂಗೇರಿ ಕೊಡಚಾದ್ರಿ ಕುದುರೆಮುಖ

ಚಿತ್ರಕೃಪೆ: Sunil MS

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ನದಿಯಿಂದ ರೂಪಿತವಾಗಿರುವ ಭದ್ರಾ ಜಲಾಶಯವು ಭೇಟಿ ನೀಡುವವರಿಗೆ ಅಪಾರ ರೋಮಾಂಚನವನ್ನುಂಟು ಮಾಡುತ್ತದೆ. ಇದಕ್ಕೆ ಹೊಂದಿಕೊಂಡಂತೆ ಇರುವ ಭದ್ರಾ ಅಭಯಾರಣ್ಯವೂ ಸಹ ವನ್ಯ ಸಂಪತ್ತಿನಿಂದ ಕಂಗೊಳಿಸುತ್ತ ಪ್ರವಾಸಿಗರನ್ನು ಚುಂಬಕದಂತೆ ತನ್ನೆಡೆ ಸೆಳೆಯುತ್ತದೆ.

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ತುಂಗಭದ್ರಾ ನದಿಯ ಉಪನದಿಯಾಗಿರುವ ಭದ್ರಾ ನದಿ ಕರ್ನಾಟಕದ ಪ್ರಮುಖ ನದಿಗಳಲ್ಲೊಂದಾಗಿದೆ. ಮೂಲವಾಗಿ ಕುದುರೆಮುಖದ ಬಳಿಯ ಗಂಗಾಮೂಲದಿಂದ ಉದ್ಭವವಾಗುವ ಭದ್ರಾ ನದಿಯು ದಕ್ಷಿಣ ಡೆಕ್ಕನ್ ಪ್ರಸ್ಥಭೂಮಿಯ ಪೂರ್ವ ಭಾಗದಗುಂಟ ಹರಿಯುತ್ತದೆ.

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ವನ್ಯಜೀವಿ ಧಾಮವು ಹಲವು ಜೀವ ರಾಶಿಗಳಿಂದ ಸಂಪದ್ಭರಿತವಾಗಿದೆ. ಈ ಅರಣ್ಯ ಭಾಗದಲ್ಲಿರುವ ಹೆಬ್ಬೆ ಗಿರಿಯು ಪ್ರದೇಶದ ಅತಿ ಎತ್ತರದ ಶಿಖರವಾಗಿದೆ.

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ವನ್ಯಜೀವಿ ಧಾಮವು ಪ್ರಾಥಮಿಕವಾಗಿ ಎರಡು ಭಾಗಗಳಲ್ಲಿ ವಿಂಗಡನೆಗೊಂಡಿದೆ. ಒಂದು ಪಶ್ಚಿಮ ಭಾಗದ ಲಕ್ಕವಳ್ಳಿ-ಮುತ್ತೊಡಿ ವಿಭಾಗವಾಗಿದ್ದರೆ ಇನ್ನೊಂದು ಪೂರ್ವ ವಲಯದ ಬಾಬಾ ಬುಡನ್‍ಗಿರಿ ವಿಭಾಗವಾಗಿದೆ.

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

1951ರಲ್ಲಿ ಮೈಸೂರು ಸರ್ಕಾರವು ಪ್ರದೇಶದ 77.45 ಚ.ಕಿ.ಮೀ ಪ್ರದೇಶವನ್ನು ಪರಿಗಣಿಸಿ ಇದನ್ನು "ಜಾಗರ ಕಣಿವೆ ಅಭಯಾರಣ್ಯ" ಎಂದು ಘೋಷಿಸಿತ್ತು. ನಂತರ ಪ್ರದೇಶದಲ್ಲಿರುವ ಸಸ್ಯ ಹಾಗೂ ಪ್ರಾಣಿ ಸಂಪತ್ತುಗಳ ಕುರಿತು ಶಿಸ್ತು ಬದ್ಧ ಅಧ್ಯಯನ ನಡೆಸಿ ಈ ಅಭಯಾರಣ್ಯವನ್ನು ಇನ್ನಷ್ಟು ವಿಸ್ತರಿಸಿ ಸದ್ಯದ ಪರಿಸ್ಥಿತಿಯಲ್ಲಿ 1974 ರಲ್ಲಿ ತಂದು ಇದಕ್ಕೆ ಭದ್ರಾ ವನ್ಯಜೀವಿ ಧಾಮ ಎಂದು ಮರುನಾಮಕರಣ ಮಾಡಲಾಯಿತು.

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಹುಲಿಗಳ ವಾಸದಿಂದಲೂ ಸಹ ಪ್ರಸಿದ್ಧಿ ಪಡೆದಿರುವ ಭದ್ರಾ ಅಭಯಾರಣ್ಯವನ್ನು 1998 ರಲ್ಲಿ ಹುಲಿ ಮೀಸಲು ಪ್ರದೇಶವನ್ನಾಗಿ ಘೋಷಿಸಲಾಗಿದೆ.

ಚಿತ್ರಕೃಪೆ: Dineshkannambadi

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಪ್ರದೇಶವು ವಿವಿಧ ಮಟ್ಟದ ಎತ್ತರಗಳ ಪ್ರದೇಶ ಹೊಂದಿರುವುದರಿಂದ ಜೈವಿಕವಾಗಿಯೂ ಕ್ರಿಯಾಶೀಲವಾಗಿದೆ. ಎಲೆ ಉದುರುವ ಕಾಡುಗಳಿಂದ ಹಿಡಿದು ಉಪ ನಿತ್ಯ ಹರಿದ್ವರ್ಣದ ಕಾಡುಗಳವರೆಗೆ ಗಿಡ ಮರಗಳನ್ನು ಇಲ್ಲಿ ಕಾಣಬಹುದಾಗಿದೆ.

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಅಂತೆಯೆ ಇಲ್ಲಿ ಸಾಕಷ್ಟು ವೈವಿಧ್ಯಮಯ ಹಾಗೂ ಬಗೆಬಗೆಯ ಪ್ರಾಣಿ-ಪಕ್ಷಿಗಳು ಹಾಗೂ ಕೀಟ ಜಗತ್ತನ್ನು ಕಾಣಬಹುದು.

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

120 ಕ್ಕೂ ಅಧಿಕ ಬಗೆಯ ಸಸ್ಯ ಜಾತಿಗಳನ್ನು ಭದ್ರಾ ಪ್ರದೇಶದಲ್ಲಿ ಗುರುತಿಸಲಾಗಿದೆ. ತೇಗ(ಟೀಕ್) ಹಾಗೂ ಬೀಟೆ(ರೋಸ್ ವುಡ್) ಮರಗಳ ಇಲ್ಲಿ ಹೇರಳ ಪ್ರಮಾಣದಲ್ಲಿವೆ.

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಚಿತ್ರಕೃಪೆ: Dineshkannambadi

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಚಿತ್ರಕೃಪೆ: Dineshkannambadi

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಚಿತ್ರಕೃಪೆ: Dineshkannambadi

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಚಿತ್ರಕೃಪೆ: Dineshkannambadi

ಅಂದ ಚೆಂದಗಳ ಭದ್ರಾ

ಅಂದ ಚೆಂದಗಳ ಭದ್ರಾ

ಭದ್ರಾ ಜಲಾಶಯದ ಸುತ್ತ ಮುತ್ತ....

ಚಿತ್ರಕೃಪೆ: Dineshkannambadi

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X