Search
  • Follow NativePlanet
Share
» »ಪಂಜಾಬಿನ ಬಟಿಂಡಾ ಕಿಲಾ ಮುಬಾರಕ್‌ನ ಸೌಂದರ್ಯ ನೋಡಿ

ಪಂಜಾಬಿನ ಬಟಿಂಡಾ ಕಿಲಾ ಮುಬಾರಕ್‌ನ ಸೌಂದರ್ಯ ನೋಡಿ

ಬಟಿಂಡಾದ ಸುತ್ತ- ಮುತ್ತ ಇರುವ ಪ್ರವಾಸಿ ಆಕರ್ಷಣೆಗಳು ಬಟಿಂಡಾದಲ್ಲಿ ಹಲವಾರು ದೇವಾಲಯಗಳು ಮತ್ತು ಗುರುದ್ವಾರಗಳಿದ್ದು, ಈ ಊರನ್ನು ಧಾರ್ಮಿಕ ದೃಷ್ಟಿಯಿಂದ ಒಂದು ಪ್ರಮುಖ ಕೇಂದ್ರವಾಗಿ ಮಾಡಿದೆ.

ಬಟಿಂಡಾವು ಪಂಜಾಬಿನಲ್ಲಿರುವ ಒಂದು ಪ್ರಸಿದ್ಧವಾದ ಪ್ರಾಚೀನ ನಗರವಾಗಿದೆ. ಇದು ಮಾಳ್ವ ಪ್ರಾಂತ್ಯದ ಹೃದಯಭಾಗದಲ್ಲಿದೆ. ಆರನೆಯ ಶತಮಾನದಲ್ಲಿ ಈ ನಗರವನ್ನು ಆಳಿದ ಭಾಟಿ ರಜಪೂತರಿಂದಾಗಿ ಈ ಹೆಸರು ಬಂದಿದೆ. ತನ್ನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯಿಂದಾಗಿ ಈ ಊರು ದೇಶ - ವಿದೇಶಗಳಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

 ಕಿಲಾ ಮುಬಾರಕ್

ಕಿಲಾ ಮುಬಾರಕ್

PC: Nitin544
ಬಟಿಂಡಾದ ಸುತ್ತ- ಮುತ್ತ ಇರುವ ಪ್ರವಾಸಿ ಆಕರ್ಷಣೆಗಳು ಬಟಿಂಡಾದಲ್ಲಿ ಹಲವಾರು ದೇವಾಲಯಗಳು ಮತ್ತು ಗುರುದ್ವಾರಗಳಿದ್ದು, ಈ ಊರನ್ನು ಧಾರ್ಮಿಕ ದೃಷ್ಟಿಯಿಂದ ಒಂದು ಪ್ರಮುಖ ಕೇಂದ್ರವಾಗಿ ಮಾಡಿದೆ. ಇವುಗಳಲ್ಲಿ ಅತ್ಯಂತ ಪ್ರಮುಖವಾದುದು ಕಿಲಾ ಮುಬಾರಕ್. ಚಿಕ್ಕ ಚಿಕ್ಕ ಇಟ್ಟಿಗೆಗಳಿಂದ ನಿರ್ಮಾಣಗೊಂಡ ಈ ಕೋಟೆಯು ತನ್ನ ವಾಸ್ತುಶಿಲ್ಪದ ದೃಷ್ಟಿಯಿಂದ ಅತ್ಯಂತ ಪ್ರಮುಖ ಸ್ಮಾರಕವಾಗಿ ಗುರುತಿಸಿಕೊಂಡಿದೆ.

ಇನ್ನಿತರ ಪ್ರವಾಸಿ ತಾಣಗಳು

ಇನ್ನಿತರ ಪ್ರವಾಸಿ ತಾಣಗಳು

PC: pindisidhu
ಗುರುದ್ವಾರ ಲಖಿ ಜಂಗಲ್ ಸಾಹಿಬ್ ದೇಶದಲ್ಲಿ ನೆಲೆಗೊಂಡಿರುವ ಸಿಖ್ಖರ ಪಾಲಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಕಾಡಿನ ನಡುವೆ ನೆಲೆಗೊಂಡಿರುವ ಈ ಗುರುದ್ವಾರವು ಬಟಿಂಡಾದ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಚೇತಕ್ ಪಾರ್ಕ್, ಡಂಡಮ ಸಾಹಿಬ್, ಬಟಿಂಡಾ ಕೆರೆ, ಮೈಸೆರ್ ಖಾನಾ, ಪ್ರಾಣಿ ಸಂಗ್ರಹಾಲಯ, ದೋಬಿ ಬಜಾರ್ ಮತ್ತು ಪೀರ್ ಹಾಜಿ ರಟ್ಟನ್‍ರವರ ಮಝಾರ್ ಇಲ್ಲಿ ನೆಲೆಗೊಂಡಿರುವ ಇನ್ನಿತರ ಪ್ರವಾಸಿ ತಾಣಗಳಾಗಿವೆ.

ವಸತಿ ವ್ಯವಸ್ಥೆ

ವಸತಿ ವ್ಯವಸ್ಥೆ

PC: Guneeta
ಪ್ರವಾಸಿಗರು ಉಳಿದುಕೊಳ್ಳಲು ಐಶಾರಾಮಿ ವಸತಿಯನ್ನು ಬಯಸುವಂತಿದ್ದಲ್ಲಿ, ಅವರು ಬಟಿಂಡಾ ಕೋಟೆಗೆ ಭೇಟಿ ನೀಡಬಹುದು. 1930ರಲ್ಲಿ ನಿರ್ಮಾಣಗೊಂಡ ಈ ಕೋಟೆಯನ್ನು ಪಟಿಯಾಲ ಎಸ್ಟೇಟಿನ ಮಹಾರಾಜ ಭೂಪಿಂದರ್ ಸಿಂಗ್‍ರವರ ಸೇನೆಯ ವಸತಿಯನ್ನಾಗಿ ಬಳಸಲಾಗುತ್ತಿತ್ತು. ಇದನ್ನು ಇಂದು ಚತುರ್ತಾರ ಹೋಟೆಲ್ ಆಗಿ ಪರಿವರ್ತಿಸಲಾಗಿದೆ.

ಬಟಿಂಡಾಗೆ ತಲುಪುವುದು ಹೇಗೆ?

ಬಟಿಂಡಾಗೆ ತಲುಪುವುದು ಹೇಗೆ?

PC: pindisidhu
ದೆಹಲಿಯಿಂದ 326 ಕಿ.ಮೀ ದೂರದಲ್ಲಿರುವ ಬಟಿಂಡಾಗೆ ರಸ್ತೆಯ ಮೂಲಕ 6 ಗಂಟೆಗಳ ಪ್ರಯಾಣವಧಿ ತಗುಲುತ್ತದೆ. ಪಂಜಾಬಿನ ಪ್ರಮುಖ ನಗರಗಳಿಂದ ಬಟಿಂಡಾಗೆ ಬಸ್, ಕ್ಯಾಬ್ ಮತ್ತು ಟ್ಯಾಕ್ಸಿಗಳ ಮೂಲಕ ತಲುಪಬಹುದು. ದೇಶದ ಪ್ರಮುಖ ನಗರಗಳಿಂದ ಬಟಿಂಡಾಗೆ ರೈಲುಗಳ ಸಂಪರ್ಕವಿದೆ. ಪ್ರವಾಸಿಗರು ಲೂಧಿಯಾನಗೆ ವಿಮಾನದ ಮೂಲಕ ತಲುಪಿ ಅಲ್ಲಿಂದ ಬಟಿಂಡಾಗೆ ಬಸ್ ಅಥವಾ ಟ್ಯಾಕ್ಸಿಯಲ್ಲಿ ತೆರಳಬಹುದು. ಬಟಿಂಡಾಗೆ ಭೇಟಿ ನೀಡಲು ಅತ್ಯುತ್ತಮ ಕಾಲ ಬಟಿಂಡಾಗೆ ಭೇಟಿ ನೀಡಬೇಕೆಂದಾದದಲ್ಲಿ ಅಕ್ಟೋಬರ್ ನಿಂದ ಮಾರ್ಚ್ ನಡುವಿನ ಅವಧಿಯಲ್ಲಿ ಭೇಟಿ ನೀಡುವುದು ಉತ್ತಮ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X