Search
  • Follow NativePlanet
Share
» »ಬೆಂಗಳೂರಿಂದ ಶಿರಡಿಗೆ ರಸ್ತೆ ಪ್ರಯಾಣ

ಬೆಂಗಳೂರಿಂದ ಶಿರಡಿಗೆ ರಸ್ತೆ ಪ್ರಯಾಣ

By Vijay

ಇತ್ತೀಚಿನ ಕೆಲ ವರ್ಷಗಳಿಂದ ಸಾಯಿ ನೆಲೆಸಿದ ಕ್ಷೇತ್ರವೆಂಬ ಖ್ಯಾತಿಗೆ ಪಾತ್ರವಾದ ಶಿರಡಿಯು ಅಪಾರವಾಗಿ ಜನಮನ್ನಣೆಗಳಿಸುತ್ತಿದೆ. ಭಕ್ತರ ನಂಬಿಕೆಯಂತೆ ಇಂದಿಗೂ ಸಾಯಿಯ ಪ್ರಭಾವವಿರುವ ಈ ಕ್ಷೇತ್ರಕ್ಕೆ ಸಾಯಿ ಬಾಬಾರ ಸಮಾಧಿಯ ದರುಶನ ಕೋರಿ ನಿತ್ಯವೂ ಸಾವಿರ ಗಟ್ಟಲೆ ಭಕ್ತಾದಿಗಳು ದೇಶದ ಉದ್ದಗಲಗಳಿಂದಲೂ ಇಲ್ಲಿಗೆ ಬರುತ್ತಾರೆ.

ವಿಶೇಷ ಲೇಖನ : ಶಿರಡಿ ಶ್ರೀಕ್ಷೇತ್ರ

ಇದಕ್ಕೆ ಬೆಂಗಳೂರು ಸಹ ಹೊರತಾಗಿಲ್ಲ. ಬೆಂಗಳೂರಿನಿಂದ ಸಾಕಷ್ಟು ಜನ ಶಿರಡಿ ಕ್ಷೇತ್ರಕ್ಕೆ ತೆರಳುತ್ತಾರೆ. ಶಿರಡಿಗೆ ತೆರಳಲು ಬೆಂಗಳೂರಿನಿಂದ ರೈಲು ಲಭ್ಯವಿದ್ದರೂ ಸಹ ಹಲವು ತಿಂಗಳುಗಳ ಮುಂಚೆಯೆ ಸೀಟನ್ನು ಕಾಯ್ದಿರಿಸಬೇಕಾಗಿರುವುದು ಅವಶ್ಯವಾಗಿದೆ. ಅಂದರೆ ಸಾಕಷ್ಟು ಸಮಯ ಮುಂಚಿತವಾಗಿಯೆ ಇಲ್ಲಿಗೆ ತೆರಳುವ ಯೋಜನೆ ಮಾಡಬೇಕು.

ವಿಶೇಷ ಲೇಖನ : ಬೆಂಗಳೂರಿನಿಂದ ವರ್ಕಲಾಗೆ

ಆದರೆ ಶೀಘ್ರವಾಗಿ ತೆರಳಿ ದರುಶನ ಪಡೆದುಕೊಂಡು ಬರಬೇಕೆಂಬುವವರಿಗೇನೂ ಕಮ್ಮಿ ಇಲ್ಲ. ಇಂತಹ ಒಂದು ಸಂದಿಗ್ಧ ಪರಿಸ್ಥಿತಿ ಎದುರಾದರೆ ಚಿಂತಿಸಬೇಕಿಲ್ಲ. ಬೆಂಗಳೂರಿನಿಂದ ಶಿರಡಿಗೆ ಸರ್ಕಾರಿ ಬಸ್ಸು ಲಭ್ಯವಿದೆ. ಆದರೆ ಪ್ರಯಾಣಾವಧಿ ಮಾತ್ರ ಅಧಿಕವಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ಇದು ಅಷ್ಟೊಂದು ಕಷ್ಟಕರವಂತೂ ಅಲ್ಲ. ಸಾಕಷ್ಟು ವಿಶ್ರಾಂತಿಯೂ ಸಹ ಬಸ್ಸಿನ ಮೂಲಕ ತೆರಳುವಾಗ ಪಡೆಯಬಹುದು.

ನಿಮ್ಮ ಅನುಕೂಲಕ್ಕೆ : ಶಿರಡಿಯಲ್ಲಿರುವ ಹೋಟೆಲುಗಳು ಹಾಗೂ ಅವುಗಳ ವಿಳಾಸ

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಹಾಗಾದರೆ ಬನ್ನಿ ರಸ್ತೆಯ ಮುಖಾಂತರ, ನಿಮ್ಮ ಸ್ವಂತ ವಾಹನವೋ, ಇಲ್ಲವೆ ಬಾಡಿಗೆ ಕಾರೋ ಅಥವಾ ಬಸ್ಸಿನ ಮೂಲಕ ತೆರಳುವಾಗ ಯಾವೇಲ್ಲ ಸ್ಥಳಗಳ ಮೂಲಕ ಹೇಗೆ ಸಾಗಬೇಕೆಂಬುದರ ಕುರಿತು ತಿಳಿಯಿರಿ. ಶಿರಡಿಯು ಬೆಂಗಳೂರಿನಿಂದ 1000 ಕಿ.ಮೀ ಗಳಷ್ಟು ದೂರದಲ್ಲಿ ಸ್ಥಿತವಿದೆ.

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಮೊದಲಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ಅನ್ನು ಹಿಡಿದು ತುಮಕೂರಿನತ್ತ ಪ್ರಯಾಣ ಬೆಳೆಸಿ. ತುಮಕೂರು ಬೆಂಗಳೂರಿನಿಂದ ಸುಮಾರು 75 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ತುಮಕೂರಿನ ಎಂಜಿ ರಸ್ತೆ.

ಚಿತ್ರಕೃಪೆ: Subramanya Prasad

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ತುಮಕೂರಿನಿಂದ ಅದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದೆ ಸಾಗುತ್ತ ಚಿತ್ರದುರಗದೆಡೆ ಪ್ರಯಾಣ ಬೆಳೆಸಬೇಕು. ತುಮಕೂರಿನಿಂದ ಚಿತ್ರದುರ್ಗವು ಸುಮಾರು 135 ಕಿ.ಮೀ ಗಳಷ್ಟು ದೂರದಲ್ಲಿದೆ. ಅಲ್ಲದೆ ಚಿತ್ರದುರ್ಗವು ತನ್ನ ಏಳು ಸುತ್ತಿನ ಕೋಟೆಯಿಂದ ಹೆಚ್ಚು ಜನಪ್ರೀಯತೆ ಪಡೆದಿದೆ.

ಚಿತ್ರಕೃಪೆ: Nagarjun Kandukuru

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಚಿತ್ರದುರ್ಗದಲ್ಲಿರುವ ರಾಷ್ಟ್ರೀಯ ಮಹತ್ವ ಪಡೆದ ಸ್ಮಾರಕವಾದ ದುರ್ಗದ ಕೋಟೆ. ದುರ್ಗದ ಕೋಟೆ ಏನೀದೆ ಸಾಟಿ?

ಚಿತ್ರಕೃಪೆ: ZeHawk

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಚಿತ್ರದುರ್ಗದ ನಂತರ ರಾಷ್ಟ್ರೀಯ ಹೆದ್ದಾರಿ ನಲ್ಕರ ಮೂಲಕ ಪ್ರಯಾಣ ಮುಂದುವರೆಸುತ್ತ ನೇರವಾಗಿ ದಾವಣಗೆರೆಯನ್ನು ತಲುಪಬೇಕು. ದಾವಣಗೆರೆಯು ಒಂದು ಜಿಲ್ಲಾ ಕೇಂದ್ರವಾಗಿದ್ದು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿದೆ. ಚಿತ್ರದುರ್ಗದಿಂದ ದಾವಣಗೆರೆಯು 60 ಕಿ.ಮೀ ಗಳಷ್ಟು ಅಂತರದಲ್ಲಿ ನೆಲೆಸಿದೆ.

ಚಿತ್ರಕೃಪೆ: Kiran Kollepalli

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ದಾವಣಗೆರೆಯ ನಂತರ ಅದೆ ಹೆದ್ದಾರಿಯಲ್ಲಿ ಪ್ರಯಾಣ ಮುಂದುವರೆಸುತ್ತ ನೇರವಾಗಿ ಹಾವೇರಿ ತಲುಪಿ. ಹಾವೇರಿಯು ದಾವಣಗೆರೆಯಿಂದ 75 ಕಿ.ಮೀ ಗಳಷ್ಟು ದೂರದಲ್ಲಿದೆ. ನಿಮ್ಮ ಪ್ರಯಾಣ ಹಾವೇರಿಯಿಂದ ನೇರವಾಗಿ ಮುಂದುವರೆಯುತ್ತದಾದರೂ ಹಾವೇರಿಯ ಕುರಿತು ಕೆಲ ಸಂಗತಿಗಳು ನಿಮಗೆ ತಿಳಿದಿರಲಿ. ಮುಖ್ಯವಾಗಿ ಈ ಜಿಲ್ಲೆಯು ಪ್ರಾಚೀನ ಐತಿಹಾಸಿಕ ದೇವಾಲಯಗಳಿಗಾಗಿ ಖ್ಯಾತಿ ಪಡೆದಿದೆ. ನಗರ ವ್ಯಾಪ್ತಿಯಲ್ಲೆ ಪುರಾತನ ಸಿದ್ಧೇಶ್ವರ ದೇವಸ್ಥಾನ ಕಾಣಬಹುದು. ಶಿವನಿಗೆ ಮುಡಿಪಾದ ಸಿದ್ದೇಶ್ವರ ದೇವಸ್ಥಾನವು 12 ನೇಯ ಶತಮಾನದ ದೇವಾಲಯವಾಗಿದೆ. ಈ ದೇವಾಲಯದ ವಿಶೇಷತೆಯೆಂದರೆ ಇತರೆ ಸಾಮಾನ್ಯ ದೇವಾಲಯಗಳು ಪೂರ್ವಕ್ಕೆ ಮುಖ ಮಾಡಿರುವ ಹಾಗೆ ಇರದೆ ಪಶ್ಚಿಮಕ್ಕೆ ಮುಖ ಮಾಡಿ ನಿರ್ಮಿಸಲಾಗಿದೆ.

ಚಿತ್ರಕೃಪೆ: Dineshkannambadi

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಮುಕ್ತೇಶ್ವರ ದೇವಸ್ಥಾನ, ಚೌಡಯ್ಯದನಪುರ: ಹಾವೇರಿ ಜಿಲ್ಲೆಯಲ್ಲಿರುವ ಹಾವೇರಿ ತಾಲೂಕಿನ ಚೌಡಯ್ಯದನಪುರ ಒಂದು ಪುಟ್ಟ ಹಳ್ಳಿ. ಜಕಣಾಚಾರಿ ಶೈಲಿಯಲ್ಲಿ ನಿರ್ಮಿತವಾಗಿರುವ 11-12 ನೇಯ ಶತಮಾನದ ಈ ದೇವಾಲಯ ಅಂದಿನ ಕಾಲದ ಮಟ್ಟಿಗೆ ವಾಸ್ತುಶಿಲ್ಪದ ರತ್ನವಾಗಿತ್ತು. ಮುಕ್ತೇಶ್ವರನಾಗಿ ಪೂಜಿಸಲಾಗುವ ಇಲ್ಲಿನ ಶಿವಲಿಂಗವು ಒಂದು ಉದ್ಭವ ಲಿಂಗವಾಗಿದೆ.

ಚಿತ್ರಕೃಪೆ: Manjunath Doddamani

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಗಳಗೇಶ್ವರ ದೇವಾಲಯ, ಗಳಗನಾಥ: ಹಾವೇರಿ ಜಿಲ್ಲೆಯಲ್ಲಿರುವ ಗಳಗನಾಥ ಎಂಬುದು ಒಂದು ಚಿಕ್ಕ ಹಳ್ಳಿ. ಇಲ್ಲಿ ಕಂಡುಬರುವ ತುಂಗಭದ್ರಾ ನದಿ ತಟದ ಗಳಗೇಶ್ವರ ಶಿವನ ದೇವಾಲಯವು ಚಾಲುಕ್ಯ ವಾಸ್ತು ಶೈಲಿಯ ಸುಂದರ ದೇವಾಲಯವಾಗಿದೆ.

ಚಿತ್ರಕೃಪೆ: Manjunath Doddamani

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಹಾವೇರಿ ಪಟ್ಟಣದಿಂದ ವಾಯವ್ಯ ದಿಕ್ಕಿಗೆ 30 ಕಿ.ಮೀ ಚಲಿಸಿದರೆ ಸಿಗುವ ಪಟ್ಟಣ ಶಿಗ್ಗಾಂವ್. ಇಲ್ಲಿಂದ ಮತ್ತೆ ವಾಯವ್ಯ ದಿಕ್ಕಿಗೆ ಸುಮಾರು 10 ಕಿ.ಮೀ ಕ್ರಮಿಸಿದರೆ ಗೊಟಗೋಡಿ ಎಂಬ ಹಳ್ಳಿಯ ಸರಹದ್ದಿನಲ್ಲಿರುವ ಉತ್ಸವ ರಾಕ್ ಗಾರ್ಡನ್ ಸಿಗುತ್ತದೆ. ಹಳ್ಳಿಯ ಸಮಗ್ರ ಜೀವನದ ಚಿತ್ರಣವನ್ನು ಮಾದರಿ ಪ್ರತಿಮೆಗಳ ಮೂಲಕ ಸುಂದರವಾಗಿ ಇಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಸುಂದರವಾದ ಉದ್ಯಾನವನವನ್ನೂ ಸಹ ಇಲ್ಲಿ ಕಾಣಬಹುದು. ಹುಬ್ಬಳ್ಳಿ ಹಾಗೂ ಹಾವೇರಿಗಳಿಂದ ಗೊಟಗೋಡಿಯವರೆಗೆ ಬಸ್ಸುಗಳು ಸುಲಭವಾಗಿ ದೊರೆಯುತ್ತವೆ. [ಹೆಚ್ಚಿನ ವಿವರಗಳು]

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಹಾವೇರಿಯಿಂದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಪ್ರಯಾಣ ಮುಂದುವರೆಸುತ್ತ ಹುಬ್ಬಳ್ಳಿಗೆ ತಲುಪಿ. ಹುಬ್ಬಳ್ಳಿಯು ಹಾವೇರಿಯಿಂದ 77 ಕಿ.ಮೀ ಗಳಷ್ಟು ದೂರದಲ್ಲಿದೆ. ಹುಬ್ಬಳ್ಳಿಯು ಉತ್ತರ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ನಗರವಾಗಿದ್ದು ಉಣಕಲ್ ಕೆರೆ ಹಾಗೂ ಉದ್ಯಾನ, ಚಂದ್ರಮೌಳೀಶ್ವರ ನಂತಹ ಪುರಾತನ ದೇವಾಲಯಗಳನ್ನು ಒಳಗೊಂಡಿದೆ. ಉಣಕಲ್ ಕೆರೆ ಮಧ್ಯದಲ್ಲಿರುವ ವಿವೇಕಾನಂದ ಪ್ರತಿಮೆ.

ಚಿತ್ರಕೃಪೆ: Ramashray

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಹುಬ್ಬಳ್ಳಿಯಿಂದ 18 ಕಿ.ಮೀ ದೂರದಲ್ಲಿರುವ ಧಾರವಾಡ ಪಟ್ಟಣಕ್ಕೆ ತೆರಳಿ ಅಲ್ಲಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೂಲಕ ಕಿತ್ತೂರಿನ ಮೇಲಿಂದ ಬೆಳಗಾವಿಗೆ ತಲುಪಿ. ಕುಂದಾ ನಗರ ಎಂದು ಪ್ರಸಿದ್ಧಿ ಪಡೆದಿರುವ ಬೆಳಗಾವಿಯು ಉತ್ತರ ಕರ್ನಾಟಕದ ಮಲೆನಾಡು ಎಂದೆ ಜನಜನಿತ. ಬೆಳಗಾವಿಯು ಕಿಲ್ಲಾ ಕೆರೆ, ಕೋಟೆ ಹಾಗೂ ಪುರಾತನ ಜೈನ ಬಸದಿಗಳಿಗೆ ಹೆಸರುವಾಸಿಯಾಗಿದೆ. ಬೆಳಗಾವಿಯ ಒಂದು ಜೈನ ಬಸದಿ.

ಚಿತ್ರಕೃಪೆ: N.v.petkar

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಬೆಳಗಾವಿ ತೊರೆದ ನಂತರ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಪ್ರಯಾಣ ಮುಂದುವರೆಸುತ್ತ ಸುಮಾರು 110 ಕಿ.ಮೀ ಗಳಷ್ಟು ಕ್ರಮಿಸಿ ಮಹಾರಾಷ್ಟ್ರದ ಕೊಲ್ಹಾಪುರ ಪಟ್ಟಣಕ್ಕೆ ತಲುಪಬೇಕು. ಕೊಲ್ಹಾಪುರವು ಲಕ್ಷ್ಮಿ ದೇವಿಯ ದೇವಾಲಯಕ್ಕೆ ಪ್ರಖ್ಯಾತವಾಗಿದ್ದು, ಅಷ್ಟ ಶಕ್ತಿ ಪೀಠಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: kolhapurtourism

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಭವಾನಿ ಮಂಟಪ ಕೊಲ್ಲಾಪುರ ನಗರದಲ್ಲಿರುವ, ನೋಡಬಹುದಾದ ಮತ್ತೊಂದು ಪುರಾತನ ಆಕರ್ಷಣೆ. ಈ ಮಂಟಪವು ಶಿವಾಜಿ ಮಹಾರಾಜನಿಂದ ನಿರ್ಮಿಸಲ್ಪಟ್ಟಿದ್ದು ಅವನ ಕುಟುಂಬದವರು ಇಲ್ಲಿ ವಾಸಿಸುತ್ತಿದ್ದರು. ಇಲ್ಲಿ ತುಳಜಾ ಭವಾನಿ ದೇವಿಯ ಮೂರ್ತಿಯನ್ನು ಕಾಣಬಹುದು. ದಂತಕಥೆಯ ಪ್ರಕಾರ, ತುಳಜಾ ಭವಾನಿಯು ಕೊಲ್ಲಾಪುರ ಮಹಾಲಕ್ಷ್ಮಿಯ ಸಹೋದರಿಯಾಗಿದ್ದು ಈ ನಗರದಲ್ಲಿ ಅತಿಥಿಯಾಗಿದ್ದಾಳೆ. ಈ ಮಂಟಪವು ಮಹಾಲಕ್ಷ್ಮಿ ದೇವಸ್ಥಾನದ ಹಿಂಬದಿಯಲ್ಲೆ ನೆಲೆಸಿದೆ.

ಚಿತ್ರಕೃಪೆ: Ankur P

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಕೊಲ್ಹಾಪುರವನ್ನು ತೊರೆದ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣ ಮುಂದುವರೆಸಿ ಸತಾರಾ ಪಟ್ಟಣವನ್ನು ತಲುಪಿ. ಕೊಲ್ಹಾಪುರದಿಂದ ಸತಾರಾವು 126 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಸತಾರಾವು ಪ್ರಾಚೀನ ಶ್ರೀಮಂತ ಪರಂಪರೆಯನ್ನು ತುಂಬಿಕೊಂಡಿರುವ ಅದೃಷ್ಟವಂತ ನಗರ. ಇದು, ಕೋಟೆ ಕೊತ್ತಲಗಳನ್ನು ತೋರಿಸುತ್ತಾ ರಾಜ ಮಹಾರಾಜರ ರೋಚಕ ಕಥೆಗಳನ್ನು ಹೇಳುತ್ತದೆ, ಪ್ರಕೃತಿಯೊಳಗೆ ಕೈಹಿಡಿದು ನಡೆಸುತ್ತದೆ ಅಲ್ಲದೆ ವನ್ಯಜೀವಿ ಅಭಯಾರಣ್ಯಗಳಲ್ಲಿ ಪ್ರತ್ಯಕ್ಷವಾಗಿ - ಪರೋಕ್ಷವಾಗಿ ನಮ್ಮಿಂದಲೆ ಅಳಿವಿನ ಅಂಚಿನಲ್ಲಿರುವ ಪ್ರಾಣಿ ಪಕ್ಷಿಗಳನ್ನು ಭೇಟಿಮಾಡಿಸುತ್ತದೆ. ಸತಾರಾ ಆಕರ್ಷಣೆಗಳು

ಚಿತ್ರಕೃಪೆ: hyper7pro

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಸತಾರಾ ಪಟ್ಟಣದಿಂದ ಮಹಾರಾಷ್ಟ್ರ ರಾಜ್ಯ ಹೆದ್ದಾರಿ ಸಂಖ್ಯೆ61 ರ ಮೂಲಕ 78 ಕಿ.ಮೀ ಕ್ರಮಿಸಿ ಮೋರ್ಗಾಂವ್ ತಲುಪಿ. ಮೋರ್ಗಾಂವ್ ಮೂಲತಃ ಮಹಾರಾಷ್ಟ್ರ ಸುಪ್ರಸಿದ್ಧ ಅಷ್ಟ ವಿನಾಯಕರ ಪೈಕಿ ಒಂದಾದ ಗಣೇಶನ ದೇವಸ್ಥಾನಕ್ಕೆ ಖ್ಯಾತಿ ಪಡೆದಿದೆ. [ವರ ಕರುಣಿಸುವ ಅಷ್ಟ ವಿನಾಯಕರು]

ಚಿತ್ರಕೃಪೆ: Palaviprabhu

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಮಹಾರಾಷ್ಟ್ರ ರಾಜ್ಯ ಹೆದ್ದಾರಿ ಸಂಖ್ಯೆ 10 ರ ಮೂಲಕ ಮೋರ್ಗಾಂವ್ ನಿಂದ ಸುಮಾರು 122 ಕಿ.ಮೀ ಪ್ರಯಾಣ ಬೆಳೆಸಿ ಅಹ್ಮದ್ ನಗರವನ್ನು ತಲುಪಬೇಕು. ಸಿನಾ ನದಿಯ ಪಶ್ಚಿಮ ದಂಡೆಯ ಮೇಲಿರುವ ಈ ಪ್ರದೇಶವು ಸ್ವತಃ ಮಹಾರಾಷ್ಟ್ರದ ಅತಿದೊಡ್ಡ ಜಿಲ್ಲೆಯಾಗಿದೆ. ಅಹ್ಮದ್ನಗರವು ಸುಮಾರು ಅರ್ಧ ಸಹಸ್ರಮಾನಕ್ಕಿಂತಲೂ ಹೆಚ್ಚಿನ ಅಮೂಲ್ಯ ಐತಿಹಾಸಿಕ ದಾಖಲೆಗಳನ್ನು ಹೊಂದಿದ್ದು ಇದರ ಇತಿಹಾಸ 1490 ಕ್ಕಿಂತಲೂ ಮೊದಲಿನಿಂದಲೇ ಪ್ರಾರಂಭವಾಗುತ್ತದೆ.

ಬೆಂಗಳೂರಿನಿಂದ ಶಿರಡಿಗೆ:

ಬೆಂಗಳೂರಿನಿಂದ ಶಿರಡಿಗೆ:

ಮಹಾರಾಷ್ಟ್ರ ರಾಜ್ಯ ಹೆದ್ದಾರಿ ಸಂಖ್ಯೆ 10 ರ ಮೂಲಕ 85 ಕಿ.ಮೀ ಕ್ರಮಿಸಿದರೆ ಸಾಕು ಶಿರಡಿಯನ್ನು ತಲುಪಬಹುದು. [ಶಿರಡಿ ಕ್ಷೇತ್ರದ ಕುರಿತು ತಿಳಿಯಿರಿ]

ಚಿತ್ರಕೃಪೆ: Cott12

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X