Search
  • Follow NativePlanet
Share
» » ಹುತ್ತದಲ್ಲಿದಲ್ಲಿರುವ ಈ ಭಗವತಿ ಕ್ಷೇತ್ರಕ್ಕೆ ಮಹಿಳೆಯರು ಇರುಮುಡಿ ಹೊತ್ತು ತರುತ್ತಾರೆ

ಹುತ್ತದಲ್ಲಿದಲ್ಲಿರುವ ಈ ಭಗವತಿ ಕ್ಷೇತ್ರಕ್ಕೆ ಮಹಿಳೆಯರು ಇರುಮುಡಿ ಹೊತ್ತು ತರುತ್ತಾರೆ

ಮಂಡೈಕಾಡುವು ಐತಿಹಾಸಿಕ ಸ್ಥಳ ಕುಲಾಚಲ್ತೊರೈನಿಂದ 2 ಕಿ.ಮೀ ದೂರದಲ್ಲಿದೆ. ಇದು ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಕರಾವಳಿ ಪಟ್ಟಣವಾಗಿದೆ.

ಇಲ್ಲಿ ಹುತ್ತವನ್ನು ದೇವಿಯೆಂದು ಪೂಜಿಸುತ್ತಾ. ಮಹಿಳೆಯರು ಇರುಮುಡಿ ಹೊತ್ತುಕೊಂಡು ಇಲ್ಲಿಗೆ ಬರುತ್ತಾರಂತೆ. ಅಂತಹದ್ದೊಂದು ವಿಶೇಷ ದೇವಾಲಯ ತಮಿಳುನಾಡಿನಲ್ಲಿದೆ. ಹಾಗಾದರೆ ಬನ್ನಿ ಆ ದೇವಾಲಯವ ಯಾವುದು, ಅದರ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ಎಲ್ಲಿದೆ ಈ ಅಮ್ಮನ್ ದೇವಸ್ಥಾನ

ಎಲ್ಲಿದೆ ಈ ಅಮ್ಮನ್ ದೇವಸ್ಥಾನ

ಮಂಡೈಕಾಡುವು ಐತಿಹಾಸಿಕ ಸ್ಥಳ ಕುಲಾಚಲ್ತೊರೈನಿಂದ 2 ಕಿ.ಮೀ ದೂರದಲ್ಲಿದೆ. ಇದು ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಕರಾವಳಿ ಪಟ್ಟಣವಾಗಿದೆ. ಪ್ರಪಂಚದ ಪ್ರಸಿದ್ಧ ಅರುಲ್ಮಿಗು ಭಗವತಿ ಅಮ್ಮನ್ ದೇವಾಲಯ ಇಲ್ಲಿದೆ. ಇಲ್ಲಿನ ದೇವರನ್ನು ಸ್ವಯಂಭೂ ಎನ್ನಲಾಗುತ್ತದೆ.

ಪಾರ್ವತಿ, ಭಗವತಿ

ಪಾರ್ವತಿ, ಭಗವತಿ


ಮಂಡೈಕಾಡುನಲ್ಲಿನ ನಾಗರಕೊಯಿಲ್ - ಕೊಲಚೆಲ್ ಸ್ಟೇಟ್ ಹೆದ್ದಾರಿಯ ಸಮೀಪದಲ್ಲಿರುವ ಪಾರ್ವತಿ ದೇವಿಗೆ ಸಮರ್ಪಿತವಾದ ದೇವಾಲಯ ಇದಾಗಿದೆ. ಈ ದೇವಿಯನ್ನು ಭಗವತಿ ಎಂದೂ ಕರೆಯುತ್ತಾರೆ. ಕೇರಳದ ಸಂಪ್ರದಾಯದಲ್ಲಿ ಸರಳವಾದ ಶೈಲಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ.

ರೋಗಕ್ಕೆ ತುತ್ತಾದ ಊರು

ರೋಗಕ್ಕೆ ತುತ್ತಾದ ಊರು

ಮಂಡೈ ಕಾಡಿನಲ್ಲಿ ಸಾಂಕ್ರಾಮಿಕ ರೋಗ ಹರಡಿರುತ್ತದೆ. ಜನರು ಸಾವನ್ನಪ್ಪುತ್ತಿರುತ್ತಾರೆ. ಅದಕ್ಕೆ ಹೆದರಿ ಊರಿನ ಜನರು ಊರು ಬಿಟ್ಟು ಹೋಗುತ್ತಿರುತ್ತಾರೆ. ಆಗ ಸಾಧುವೊಬ್ಬರು ಆ ಊರಿಗೆ ಆಗಮಿಸಿ ಧ್ಯಾನ ಮಾಡಿ ಆ ರೋಗ ಉಪಶಮನ ಮಾಡುವ ಔಷಧವನ್ನು ಕಂಡು ಹಿಡಿಯುತ್ತಾರೆ. ಅದನ್ನು ಜನರಿಗೆ ನೀಡಿ ಜೀವ ಕಾಪಾಡುತ್ತಾರೆ.

ಸಮಾಧಿ ಪಡೆದ ಸಾಧು

ಸಮಾಧಿ ಪಡೆದ ಸಾಧು

ಸಾಧುವೊಬ್ಬರು ಇಲ್ಲಿ ಕೇರಳದ ಶಿಷ್ಯರೊಂದಿಗೆ ಒಂದು ದಿನ ಶ್ರೀಚಕ್ರ ಪೂಜೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಪೂಜೆ ಮುಗಿದ ನಂತರ ಚಕ್ರವು ಮಾಯವಾಗುತ್ತದೆ. ಆ ಸಾಧು ಅದೇ ಜಾಗದಲ್ಲಿ ಧ್ಯಾನದಲ್ಲಿ ಮಗ್ನರಾಗುತ್ತಾರೆ. ಚಕ್ರವಿದ್ದ ಜಾಗದಲ್ಲಿ ಹುತ್ತ ಬೆಳೆಯುತ್ತದೆ. ತರುವಾಯ ಆ ಸಾಧು ಅಲ್ಲೇ 'ಸಮಾಧಿ' ಹೊಂದುತ್ತಾರೆ.

ಕೇರಳ ಶೈಲಿಯ ವಾಸ್ತುಶಿಲ್ಪ

ಕೇರಳ ಶೈಲಿಯ ವಾಸ್ತುಶಿಲ್ಪ

PC: Vaikoovery
ಸುಂದರವಾದ ಸಮುದ್ರ ತೀರದ ಸ್ಥಳದೊಂದಿಗೆ ದೇವಾಲಯದೊಂದಿಗೆ ಸಂಬಂಧಿಸಿದ ಹಲವಾರು ದಂತಕಥೆಗಳು ಈ ದೇವಸ್ಥಾನದ ಪವಿತ್ರತೆಯನ್ನು ಹೆಚ್ಚಿಸುತ್ತವೆ. ಇದು ಕೇರಳ ಮತ್ತು ತಮಿಳುನಾಡಿನ ಜನರಿಗೆ ಯಾತ್ರಾ ಕೇಂದ್ರವಾಗಿದೆ. ಸರಳ ಕೇರಳ ಶೈಲಿಯ ವಾಸ್ತುಶಿಲ್ಪ ಮತ್ತು ಪ್ರಖ್ಯಾತ ದೇವತೆಯ ಮಣ್ಣಿನ ಮೂರ್ತಿಯು ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ.

ಪ್ರತಿ ವರ್ಷ ಹುತ್ತ ಬೆಳೆಯುತ್ತದೆ

ಪ್ರತಿ ವರ್ಷ ಹುತ್ತ ಬೆಳೆಯುತ್ತದೆ

ಮಂಡೈಕಾಡು ಈ ಪ್ರದೇಶವು ಹಿಂದೆ ಒಂದು ದೊಡ್ಡ ಕಾಡಾಗಿತ್ತು. ಜನರು ಆಡು, ಕುಡಿಗಳನ್ನು ಮೇಯಿಸಲು ಇಲ್ಲಿಗೆ ಬರುತ್ತಿದ್ದರು. ಒಮ್ಮೆ ಆ ಹುತ್ತವಿದ್ದ ಸ್ಥಳದಲ್ಲಿ ಆಡನ್ನು ಮೇಯಿಸುತ್ತಿದ್ದಾಗ ಆ ಹುತ್ತಕ್ಕೆ ತಗುಲುತ್ತದೆ. ಹುತ್ತದಿಂದ ರಕ್ತ ಸುರಿಯತೊಡಗುತ್ತದೆ. ಇದನ್ನು ಕಂಡ ಅಲ್ಲಿನ ಜನರು ಈ ಹುತ್ತದಲ್ಲಿ ದೇವರಿದ್ದಾರೆ ಎಂದು ತಿಳಿದು ಅಲ್ಲೇ ಒಂದು ಗುಡಿ ಕಟ್ಟಿಸುತ್ತಾರೆ. ಈ ಹುತ್ತವು ಪ್ರತೀ ವರ್ಷ ಬೆಳೆಯುತ್ತಾ ಇರುತ್ತದಂತೆ. ಈ ಹುತ್ತದಲ್ಲಿ ಪಾರ್ವತಿ ದೇವಿ ಇದ್ದಾಳೆ ಎಂದು ನಂಬಲಾಗುತ್ತದೆ. ಸುಮಾರು ೧೫ ಅಡಿಗಳಷ್ಟು ಎತ್ತರದ ಹುತ್ತ ಇದಾಗಿದೆ.

ದಿನಕ್ಕೆ ನಾಲ್ಕು ಬಾರಿ ಪೂಜೆ

ದಿನಕ್ಕೆ ನಾಲ್ಕು ಬಾರಿ ಪೂಜೆ


PC:Vinayaraj
ಈ ದೇವಸ್ಥಾನವು ಪವಿತ್ರ ಅಶ್ವಥ ಮರ ಹಾಗೂ ಬೇವಿನ ಮರಗಳನ್ನು ಹೊಂದಿದೆ. ದೇವಸ್ಥಾನದಲ್ಲಿ ಪ್ರತಿದಿನವೂ ನಾಲ್ಕು ಬಾರಿ ಪೂಜೆ ನಡೆಯುತ್ತದೆ. ದೇವಸ್ಥಾನವನ್ನು ಮಹಿಳೆಯರ ಶಬರಿಮಲೆ ಎಂದೂ ಕರೆಯಲಾಗುತ್ತದೆ. ವಿಶೇಷವಾಗಿ ಮಹಿಳೆಯರು ಈ ದೇವಸ್ಥಾನಕ್ಕೆ 'ಇರುಮುಡಿ'ಯೊಂದಿಗೆ ಬರುತ್ತಾರೆ. ಕೊಡೈ ಉತ್ಸವವು ದೇವಸ್ಥಾನದಲ್ಲಿ ನಡೆಯುವ ದೊಡ್ಡ ಆಚರಣೆಯಾಗಿದೆ.

ಕೊಡೈ ವಿಝಾ

ಕೊಡೈ ವಿಝಾ

PC: Ranjithsiji

ಬಹಳ ವರ್ಷ ಜನರು ಮಾಸಿ ತಿಂಗಳಲ್ಲಿ "ಕೊಡೈ ವಿಝಾ" ಹಬ್ಬವನ್ನು ಆಚರಿಸುತ್ತಿದ್ದಾರೆ. ಕೇರಳಿಗರು 41 ದಿನಗಳು ಉಪವಾಸ ಮಾಡಿ ಕಾಲ್ನಡಿಗೆಯಲ್ಲಿ ಈ ದೇವಾಲಯ ಹೋಗುತ್ತಾರೆ. ಮಾಸಿ ಕೊನೆಯ ಮಂಗಳವಾರ, ಕೊಡೈ ವಿಝಾ ಆಚರಿಸಲಾಗುತ್ತದೆ. ಈ ದಿನ, "ಒಡುಕು ಪೂಜಾ" ಎಂದು ಕರೆಯಲಾಗುವ ರಾತ್ರಿಯಲ್ಲಿ ವಿಶೇಷ ಪೂಜೆಯನ್ನು ಸಹ ನಡೆಸಲಾಗುತ್ತದೆ.

ಮಹಿಳೆಯರು ಇರುಮುಡಿ ತರುತ್ತಾರೆ

ಮಹಿಳೆಯರು ಇರುಮುಡಿ ತರುತ್ತಾರೆ

ಈ ದೇವಾಲಯವನ್ನು ತಮಿಳುನಾಡು ಹಾಗೂ ಕೇರಳ ಭಾಗದ ಮಹಿಳೆಯರು ಹೆಚ್ಚಾಗಿ ನಂಬುತ್ತಾರೆ. ಮಂಡಾಯಕಾಡು ಭಗವತಿ ಅಮ್ಮನ್ ದೇವಾಲಯವನ್ನು ಮಹಿಳೆಯರಿಗೆ ಶಬರಿಮಲೆ ಎಂದು ಕರೆಯಲಾಗುತ್ತದೆ. 15 ಅಡಿ ಎತ್ತರದ ಹುತ್ತದ ಭಗವತಿ ಅಮ್ಮನ್. ಪುರುಷರು ಶಬರಿಮಲಕ್ಕೆ ಹೋದಂತೆ ಇರುಮುಡಿ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X