Search
  • Follow NativePlanet
Share
» »ಯೋಗ್ಯ ಆಕರ್ಷಣೆಗಳ ಅರಸೀಕೆರೆ ಹಾಗೂ ಸುತ್ತಮುತ್ತಲು

ಯೋಗ್ಯ ಆಕರ್ಷಣೆಗಳ ಅರಸೀಕೆರೆ ಹಾಗೂ ಸುತ್ತಮುತ್ತಲು

By Vijay

ಶ್ರೀಮಂತ ಇತಿಹಾಸವನ್ನು ಹೊಂದಿರುವ ಕರ್ನಾಟಕ ರಾಜ್ಯವು ಸಾಕಷ್ಟು ವಿವಿಧ ರಾಜಮನೆತನದವರ ಆಡಳಿತ ಕಂಡಿದೆ. ಚಾಲುಕ್ಯರಿರಬಹುದು, ಹೊಯ್ಸಳರಿರಬಹುದು ಇಲ್ಲವೆ ಚೋಳರಿರಬಹುದು ಹೀಗೆ ಹಲವಾರು ಸಾಮ್ರಾಜ್ಯಗಳು ಕಾಲದ ವಿವಿಧ ಸ್ತರಗಳಲ್ಲಿ ಇಲ್ಲಿ ರಾಜ್ಯಭಾರ ಮಾಡಿದ್ದು ತಮ್ಮ ವೈಭವದ ಸಂಕೇತಗಳಾಗಿ ಅನೇಕ ಗುರುತುಗಳನ್ನು ಬಿಟ್ಟು ಹೋಗಿದ್ದಾರೆನ್ನಬಹುದು.

ಇಂತಹ ಗುರುತುಗಳನ್ನು ಅವಲೋಕಿಸಿದಾಗ ಪ್ರಧಾನವಾಗಿ ಕಂಡುಬರುವುದು ದೇವಾಲಯ ನಿರ್ಮಾಣಗಳು ಹಾಗೂ ಸುಂದರವಾದ ಶಿಲ್ಪಗಳ ಕೆತ್ತನೆಗಳು. ಸಾಮಾನ್ಯವಾಗಿ ಕರ್ನಾಟಕದಲ್ಲಿ ಶಿಲ್ಪ ಕಲೆಗಳಿಗಾಗಿ ಪ್ರಸಿದ್ಧಿ ಪಡೆದ ಅನೇಕ ದೇವಾಲಯಗಳಿದ್ದು ಅವು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಹ ಖ್ಯಾತಿಗಳಿಸಿವೆ.

ನಿಮಗಿಷ್ಟವಾಗಬಹುದಾದ : ಸಕ್ಕರೆನಾಡು ಮಂಡ್ಯದ ಸಿಹಿಯಾದ ಆಕರ್ಷಣೆಗಳು

ಉದಾಹರಣೆಯಾಗಿ ಬಳ್ಳಾರಿ ಜಿಲ್ಲೆಯ ಹಂಪಿ, ಹಾಸನ ಜಿಲ್ಲೆಯ ಬೆಲೂರು ಹಾಗು ಹಳೇಬೀಡು, ಮೈಸೂರು ಬಳಿಯ ಸೋಮನಾಥಪುರ ಹೀಗೆ ಅನೇಕ ಪ್ರವಾಸಿ ಆಕರ್ಷಣೆಯ ತಾಣಗಳು ಕಾಣಸಿಗುತ್ತವೆ. ಇವುಗಳಲ್ಲದೆಯೂ ಸಹ ರಾಜ್ಯದಾದ್ಯಂತ ಅಲ್ಲಲ್ಲಿರುವ ಕೆಲ ಪಟ್ಟಣಗಳಾಗಲಿ, ಹಳ್ಳಿಗಳಾಗಲಿ ವಿಶಿಷ್ಟ ದೇವಾಲಯಗಳಿಂದ ಕೂಡಿರುವುದು ವಿಶೇಷ. ಅಂತಹ ಒಂದು ಪಟ್ಟಣದ ಕುರಿತು ಈ ಲೇಖನದಲ್ಲಿ ತಿಳಿಯಿರಿ.

ಹೊಯ್ಸಳರ ಒಬ್ಬ ರಾಣಿಯು ನಿರ್ಮಿಸಿದ ಒಂದು ಕೆರೆಯಿಂದ ಈ ಪಟ್ಟಣಕ್ಕೆ ಹೆಸರು ಬಂದಿದೆ. ಇದೆ ಅರಸೀಕೆರೆ. ಅರಸಿ ಎಂದರೆ ಕನ್ನಡದಲ್ಲಿ ರಾಣಿ ಎಂಬರ್ಥವಿದ್ದು ಇವಳಿಂದ ನಿರ್ಮಿತವಾದ ಕೆರೆಯೆ ಕಾಲಕ್ರಮೇಣ ಅರಸೀಕೆರೆ ಎಂಬ ಹೆಸರು ಪಡೆದಿದೆ.

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಅರಸೀಕೆರೆ ಒಂದು ತಾಲೂಕು ಕೇಂದ್ರ. ಭಾರತೀಯ ರೈಲಿನ ನೈರುತ್ಯ ವಲಯದ ಮುಖ್ಯ ಜಂಕ್ಷನ್ ರೈಲು ನಿಲ್ದಾಣವಾಗಿರುವ ಅರಸೀಕೆರೆ ತೆಂಗಿನ ಕಾಯಿಯ ಬೆಳೆ ಹಾಗೂ ಮಾರಾಟಕ್ಕೆ ಹೆಸರುವಾಸಿ.

ಚಿತ್ರಕೃಪೆ: Karsolene

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಹಾಸನದಲ್ಲಿ ವಿಶ್ವ ವಿಖ್ಯಾತಿ ಪಡೆದ ಬೇಲೂರು, ಹಳೆಬೀಡು, ಶ್ರವಣಬೆಳಗೋಳಕ್ಕೆ ಭೇಟಿ ನೀಡಬಯಸುವ ಪ್ರವಾಸಿಗರಿಗೂ ಅನುಕೂಲಕರವಾಗಿದೆ ಅರಸೀಕೆರೆ. ಹೊಯ್ಸಳ ರಾಣಿ ಅಥವಾ ಅರಸಿಯೊಬ್ಬಳು ನಿರ್ಮಿಸಿದ ಕೆರೆಯಿಂದಾಗಿ ಈ ಸ್ಥಳ ಅರಸಿಯ ಕೆರೆಯಾಗಿ ನಂತರ ಕಾಳ ಉರುಳಿದಂತೆ ಅರಸೀಕೆರೆಯಾಗಿ ಗುರುತಿಸಲ್ಪಟ್ಟಿದೆ.

ಚಿತ್ರಕೃಪೆ: Dineshkannambadi

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಬೆಂಗಳೂರಿನಿಂದ 166 ಕಿ.ಮೀ ಹಾಗೂ ಹಾಸನ ನಗರ ಕೇಂದ್ರದಿಂದ 44 ಕಿ.ಮೀ ಗಳಷ್ಟು ದೂರದಲ್ಲಿರುವ ಅರಸೀಕೆರೆಯ ಸುತ್ತಮುತ್ತ ಹಲವು ಆಕರ್ಷಕ ಸ್ಥಳಗಳನ್ನು ನೋಡಬಹುದಾಗಿದೆ.

ಚಿತ್ರಕೃಪೆ: Shivaprakash

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಮಾಲೆಕಲ್ಲು ತಿರುಪತಿ ಅರಸೀಕೆರೆಯಿಂದ ಎರಡಿ ಕಿ.ಮೀ ದೂರದಲ್ಲಿರುವ ಒಂದು ಪ್ರಶಿದ್ಧ ಧಾರ್ಮಿಕ ಕ್ಷೇತ್ರ. ಇದು ಚಿಕ್ಕ ತಿರುಪತಿ ಎಂದೆ ಪ್ರಸಿದ್ಧವಾಗಿದೆ (ಇದು ಕೋಲಾರದ ಮಾಲೂರಿನಲ್ಲಿರುವ ಚಿಕ್ಕತಿರುಪತಿಯಲ್ಲ). ಸಾವಿರಾರು ಮೆಟ್ಟಿಲುಗಳಿರುವ ದೊಡ್ಡ ಬೆಟ್ಟವೊಂದರ ಮೇಲೆ ವೆಂಕಟೇಶ್ವವ ಸ್ವಾಮಿ & ತಾಯಿ ಲಕ್ಷ್ಮೀ ದೇವಿಯವರ ದೇವಾಲಯಗಳಿರುವುದನ್ನು ಕಾಣಬಹುದು.

ಚಿತ್ರಕೃಪೆ: Karsolene

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಕಲಮೇಶ್ವರ ದೇವಾಲಯ : ಶಿವನಿಗೆ ಮುಡಿಪಾದ ಹಾಗು ಹೊಯ್ಸಳ ವಾಸ್ತು ಶೈಲಿ ಹೊಂದಿರುವ ಈ ದೇವಾಲಯವನ್ನು ಕಟ್ಟಮೇಶ್ವರ ಅಥವಾ ಚಂದ್ರಮೌಳೀಶ್ವರ ದೇವಾಲಯ ಎಂತಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Dineshkannambadi

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಬಸ್ಸು ನಿಲ್ದಾಣದಿಂದ ಕೆಲವೆ ಮೀಟರುಗಳಷ್ಟು ದೂರದಲ್ಲಿ ಮಹಾಗಣಪತಿಯ ದೇವಾಲಯವಿದೆ. ಇಲ್ಲಿರುವ ಬಲಮುರಿಗಣಪತಿ ಎಂದೆ ಪ್ರಸಿದ್ಧಿ ಪಡೆದಿದ್ದು ಸಂಕಷ್ಟ ಹರಣನಾಗಿದ್ದಾನೆ. ಅಂತೆಯೆ ಈ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ದಿನೆ ದಿನೆ ಏರುತ್ತಿದೆ ಎನ್ನಲಾಗುತ್ತದೆ. ಚಿತ್ರದಲ್ಲಿರುವುದು ಕಲಮೇಶ್ವರ ದೇವಾಲಯ.

ಚಿತ್ರಕೃಪೆ: Dineshkannambadi

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಜೇನುಕಲ್ಲು ಸಿದ್ಧೇಶ್ವರಸ್ವಾಮಿ ಬೆಟ್ಟ : ಅರಸೀಕೆರೆಯಿಂದ ಸುಮಾರು ಎಂಟು ಕಿ.ಮೀ ದೂರದಲ್ಲಿರುವ ಯಾದಾಪುರ ಎಂಬ ಗ್ರಾಮದಲ್ಲಿರುವ ಬೆಟ್ಟವೊಂದರ ಮೇಲೆ ಸಿದ್ಧೇಶ್ವರಸ್ವಾಮಿಯ ದೇಗುಲವಿದೆ. ಪ್ರತಿ ಹುಣ್ಣಿಮೆಯ ದಿನದಂದು ಸುತ್ತ ಮುತ್ತಲಿನ ಸ್ಥಳಗಲಿಂದ ಭಕ್ತಾದಿಗಳು ಬೆಟ್ಟ ಏರಿ ಈ ದೇವಾಲಯಕ್ಕೆ ಬರುತ್ತಾರೆ. ಇಲ್ಲಿ ಪ್ರತಿದಿನ ಭಕ್ತಾದಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಇರುತ್ತದೆ.

ಚಿತ್ರಕೃಪೆ: Karsolene

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಶಿಲ್ಪಕಲೆಗೆ ಹೆಸರಾದ ಹಾಗೂ ಶ್ರೀಮಂತ ಐತಿಹಾಸಿಕ ಹಿನ್ನಿಲೆಯುಳ್ಳ ಹಳೇಬೀಡು ಅರಸೀಕೆರೆಯಿಂದ ಕೇವಲ 45 ಕಿ.ಮೀ ಗಳಷ್ಟು ದೂರದಲ್ಲಿದ್ದು ಭೇಟಿ ಯೋಗ್ಯ ಸ್ಥಳವಾಗಿದೆ. ಈ ಊರು ಒಂದೊಮ್ಮೆ ಹೊಯ್ಸಳ ವಂಶದ ರಾಜಧಾನಿಯಾಗಿತ್ತು.

ಚಿತ್ರಕೃಪೆ: Dineshkannambadi

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಸುಮಾರು ಒಂಬತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರ ದೊರೆ "ದೋರ" ಎಂಬುವವನು ಈ ಊರಿನಲ್ಲಿ ದೊಡ್ಡಕೆರೆಯೊಂದನ್ನು ಕಟ್ಟಿಸಿದ್ದ ಎಂದು ಶಾಸನಗಳಿಂದ ತಿಳಿದುಬರುತ್ತದೆ. ಇಮ್ದಿನ ಯಗಚಿ ಅಥವಾ ಹಿಂದೆ ಕರೆಯಲಾಗುತ್ತಿದ್ದ ಸೋಮವತಿ ನದಿಯು ಇದಕ್ಕೆ ನೀರುಣಿಸುವ ಮೂಲವಾಗಿತ್ತು. ಈ ಕೆರೆಯು ತುಂಬಿಕೊಂಡಾಗ ಸಮುದ್ರದಂತೆಯೆ ವಿಶಾಲವಾಗಿ ಗೋಚರಿಸುತ್ತಿತ್ತು. ಅಂತೆಯೆ ಇದಕ್ಕೆ ದೋರಸಮುದ್ರ ಅಥವಾ ದ್ವಾರಸಮುದ್ರ ಎಂದು ಕರೆಯಲಾಗುತ್ತಿತ್ತು. ಯಗಚಿ ನದಿ.

ಚಿತ್ರಕೃಪೆ: Harijibhv

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಇಲ್ಲಿ ಪ್ರಮುಖವಾಗಿ ನೋಡಬಹುದಾದ ತಾಣವೆಂದರೆ ಹೋಯ್ಸಳೇಶ್ವರ ದೇವಾಲಯ, ಕೇದಾರೇಶ್ವರ ದೇವಾಯ, ಹುಲಿಕೆರೆ ಕಲ್ಯಾಣಿ, ಜೈನ ಬಸದಿಗಳು. ಶಿವನಿಗೆ ಮುಡಿಪಾದ ದೇವಾಲಯ ಇದಾಗಿದ್ದು ಹೊಯ್ಸಳ ರಾಜ ವಿಷ್ಣುವರ್ಧನನ ದಂಡನಾಯಕ ಕೇತಮಲ್ಲ 1121 ರಲ್ಲಿ ಇದರ ನಿರ್ಮಾಣ ಮಾಡಿದನೆಂದು ಇಲ್ಲಿ ದೊರೆತಿರುವ ಶಾಸನವನ್ನು ಆಧರಿಸಿ ಹೇಳಬಹುದಾಗಿದೆ. ಕೇದಾರೇಶ್ವರ ದೇವಾಲಯ.

ಚಿತ್ರಕೃಪೆ: Ankush Manuja

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ರೋಚಕದ ಸಂಗತಿಯೆಂದರೆ ಹೊಯ್ಸಳೇಶ್ವರ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು ಶಿಲ್ಪಿಗಳು/ಕಾರ್ಮಿಕರು ಕೈ ಜೋಡಿಸಿದ್ದರೆಂದು ಅಧ್ಯಯನಗಳಿಂದ ತಿಳಿದುಬಂದಿದೆ. ಕಲ್ಲು ಹುಡುಕುವವರಿಂದ ಹಿಡಿದು ಅದನ್ನು ಸುಂದರವಾಗಿ ಕೆತ್ತಿ ನಿರ್ದಿಷ್ಟ ಜಾಗದಲ್ಲಿ ಜೋಡಿಸುವವರವರೆಗೂ ಸಾಕಷ್ಟು ಜನರು ಪಾಲ್ಗೊಂಡಿದ್ದರೆನ್ನಲಾಗಿದೆ.

ಚಿತ್ರಕೃಪೆ: Purbadri Mukhopadhyay

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಹೊಯ್ಸಳ ಶೈಲಿಯ ವಾಸ್ತು ಕಲೆಯಿಂದ ಕೂಡಿರುವ ದೇವಾಲಯವು ದ್ರಾವಿಡ ಹಾಗೂ ಆರ್ಯ ಶೈಲಿಯ ಗುಣಲಕ್ಷಣಗಳನ್ನು ಒಳಗೊಂಡಿದೆ. ಬೇಲೂರು ಒಳನೋಡು ಹಳೇಬೀಡನ್ನು ಹೊರನೋಡು ಎಂಬ ನಾಣ್ಣುಡಿಯಂತೆ ಹಳೇಬೀಡಿನ ದೇವಾಲಯವು ಹೊರನೋಟಕ್ಕೆ ಹೆಚ್ಚು ಪ್ರಸಿಧ್ಧಿಯಾಗಿದೆ. ದೇವಾಲಯದ ಪ್ರದಕ್ಷಿಣಾಪಥದಲ್ಲಿ ೧೫ ಸಾವಿರಕ್ಕೂ ಹೆಚ್ಚಿನ ಶಿಲ್ಪಗಳಿರುವುದು ವಿಶೇಷ.

ಚಿತ್ರಕೃಪೆ: Dineshkannambadi

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆಯಿಂದ 45 ಕಿ.ಮೀ ದೂರದಲ್ಲಿರುವ ಹಳೇಬೀಡನ್ನು ಹರನಹಳ್ಳಿ, ಜಾವಗಲ್ ಮೂಲಕವಾಗಿಯೂ ಇಲ್ಲವೆ ಬಾಣಾವರ ಹಾಗೂ ಜಾವಗಲ್ ಮೂಲಕವಾಗಿಯೂ ಸುಲಭವಾಗಿ ತಲುಪಬಹುದು. ಬಾಣಾವರ ಜಾವಗಲ್ ಮೂಲಕ ಎರಡು ಮೂರು ಕಿ.ಮೀ ಹೆಚ್ಚು ಕ್ರಮಿಸಬೇಕಾಗಿದ್ದರೂ ಸಹ ರಸ್ತೆಯು ಸುಲಲಿತವಾಗಿದೆ.

ಚಿತ್ರಕೃಪೆ: Anks.manuja

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಹಳೇಬೀಡಿನಿಂದ ಬೇಲೂರು ಕೇವಲ 27 ಕಿ.ಮೀ ಗಳಷ್ಟು ದೂರದಲ್ಲಿದ್ದು ಸುಲಭವಾಗಿ ತಲುಪಲು ವ್ಯವಸ್ಥೆಯಿದೆ. ಕನ್ನಡ ನಾಡಿನ ಶಿಲ್ಪಕಲೆಯ ತವರಾಗಿರುವ ಹಾಸನ ಜಿಲ್ಲೆಯ ಬೇಲೂರು-ಹಳೇಬೀಡು ಅವಳಿ ತಾಣಗಳು ಅಂತಾರಾಷ್ಟ್ರೀಯ ವಲಯದಲ್ಲೂ ಸಹ ಖ್ಯಾತಿಗಳಿಸಿವೆ. ಬೇಲೂರಿನ ಶಿಲ್ಪಕಲೆಯಂತೂ ಸಂಕೀರ್ಣತೆ ಹಾಗೂ ಚಿಕ್ಕ ಚಿಕ್ಕ ವಿವರತೆಗಲಿಂದ ಕೂಡಿದ್ದು ಅತ್ಯಂತ ಆಕರ್ಷಕವಾಗಿ ಕಂಡುಬರುತ್ತವೆ. ಚೆನ್ನಕೇಶವನ ದೇವಾಲಯ ಸಂಕೀರ್ಣ ಚುಂಬಕದಂತೆ ಪ್ರವಾಸಿಗರನ್ನು ಸೆಳೆಯುತ್ತದೆ. ಬೇಲೂರು ಪಟ್ಟಣ.

ಚಿತ್ರಕೃಪೆ: PP Yoonus

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾಗಿರುವ ಬೇಲೂರು ಶಿಲಾ ಬಾಲಿಕೆಯರ ಊರು ಎಂದೆ ಪ್ರಸಿದ್ಧವಾಗಿದೆ. ಪ್ರತಿ ವರ್ಷವೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ದೇಶ ವಿದೇಶಗಳಿಂದ ಬೆಲೂರಿಗೆ ಶಿಲ್ಪಕಲೆಯ ಆನಂದವನ್ನು ಸವಿಯಲು ಬರುತ್ತಾರೆ.

ಚಿತ್ರಕೃಪೆ: Praveen.renuk

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಯಗಚಿ ನದಿಯ ತಟದಲ್ಲಿರುವ ಬೇಲೂರನ್ನು ಹಿಂದೆ ವೇಲಾಪುರಿ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು ಎಂದು ಇಲ್ಲಿ ದೊರೆತಿರುವ ಶಾಸನಗಳಿಂದ ತಿಳಿದುಬರುತ್ತದೆ. ಬೇಲೂರಿನಲ್ಲಿ ಚೆನ್ನಕೇಶವಸ್ವಾಮಿಯ ದೇವಸ್ಥಾನ ಮತ್ತು ದೇವಸ್ಥಾನದ ಆವರಣವೇ ಅತಿ ಮುಖ್ಯ ಪ್ರವಾಸಿ ಆಕರ್ಷಣೆ ಎಂದು ಹೇಳಬಹುದು.

ಚಿತ್ರಕೃಪೆ: Mashalti

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಚೆನ್ನಕೇಶವಸ್ವಾಮಿ ದೇವಸ್ಥಾನದ ಹೊರತಾಗಿ ಸುಂದರ ಶಿಲ್ಪಕಲೆಗಳಿಗೆ ಅದ್ಭುತ ನಿದರ್ಶನಗಳಾಗಿರುವ ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ, ರಂಗನಾಯಕಿ ಅಮ್ಮನವರ ದೇವಸ್ಥಾನ ಮತ್ತು ಕಪ್ಪೆಚೆನ್ನಿಗರಾಯನ ದೇವಸ್ಥಾನಗಳನ್ನೂ ಸಹ ನೋಡಬಹುದು.

ಚಿತ್ರಕೃಪೆ: Gagan.G.C

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಕಪ್ಪೆ ಚೆನ್ನಿಗರಾಯ ದೇವಸ್ಥಾನದ ಎಡಪಾರ್ಶ್ವದಲ್ಲಿ ರಂಗನಾಯಕಿ ಅಮ್ಮನವರ ದೇವಸ್ಥಾನವಿದೆ. ಚತುರ್ಭುಜಾಧಾರಿಯಾಗಿ ನೆಲೆಸಿರುವ ಸೌಮ್ಯನಾಯಕಿ ಅಮ್ಮನವರು ಚೆನ್ನಕೇಶವನ ಮೆಚ್ಚಿನ ಪತ್ನಿಯೆಂದು ಹೇಳುತ್ತಾರೆ. ಕಪ್ಪೆಚೆನ್ನಿಗರಾಯನ ದೇವಸ್ಥಾನ.

ಚಿತ್ರಕೃಪೆ: Holenarasipura

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಸೌಮ್ಯನಾಯಕಿ ಅಮ್ಮನವರ ದೇವಾಲಯದ ನಂತರ ಮುಂದೆ ಕ್ರಮಿಸಿದರೆ ಸಿಗುವುದೇ ಕಲ್ಯಾಣ ಮಂಟಪ. ಇಲ್ಲಿ ಚೆನ್ನಕೇಶವ ಸ್ವಾಮಿಗೂ ಸೌಮ್ಯನಾಯಕಿ ಅಮ್ಮನವರಿಗೂ ಕಲ್ಯಾಣೋತ್ಸವವನ್ನು ಮಾಡಲಾಗುತ್ತದೆ. ಜಾತ್ರೆಯ ಸಂದರ್ಭದಲ್ಲಿ ಹೋಮಯಾಗಾದಿಗಳು ಈ ಕಲ್ಯಾಣ ಮಂಟಪದಲ್ಲಿ ನಡೆಯುತ್ತವೆ. ರಂಗನಾಯಕಿ ದೇವಸ್ಥಾನ.

ಚಿತ್ರಕೃಪೆ: Avinash Krishnamurthy

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಕಲ್ಯಾಣ ಮಂಟಪದ ಒಳ ಭಾಗದಲ್ಲಿ ವೀರನಾರಾಯಣನ ದೇವಾಲಯ ಸ್ಥಿತವಿದೆ. ಈ ದೇವಸ್ಥಾನದಲ್ಲಿರುವ ಮೂಲ ವಿಗ್ರಹವು ಅತಿ ವಿಭಿನ್ನವಾಗಿರುವುದರಿಂದ ಬಾಗಿಲುಗಳನ್ನು ಸದಾ ಮುಚ್ಚಿರಲಾಗಿರುತ್ತದೆ.

ಚಿತ್ರಕೃಪೆ: Dineshkannambadi

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ವೀರನಾರಾಯಣ ದೇವಸ್ಥಾನದ ನಂತರ ಸಿಗುವುದೆ ರಂಗನಾಯಕಿ ದೇವಸ್ಥಾನ. ರಂಗನಾಯಕಿ ಅಮ್ಮನವರನ್ನು ಚೆನ್ನಕೇಶವಸ್ವಾಮಿಯ ಜೇಷ್ಠ ಪತ್ನಿ ಎಂದು ಹೇಳುತ್ತಾರೆ ಹಾಗು ಕಾರಣಾಂತರಗಳಿಂದ ರಂಗನಾಯಕಿ ಅಮ್ಮನವರಿಗೆ ಆಭರಣಗಳನ್ನು ತೊಡಿಸಲಾಗುವುದಿಲ್ಲವೆಂದು ಹೇಳಲಾಗುತ್ತದೆ.

ಚಿತ್ರಕೃಪೆ: Bhardwaj.ashish

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಪ್ರಮುಖ ದೇವಸ್ಥಾನಗಳಲ್ಲದೆ ಇಲ್ಲಿ ದೀಪಾಲೆ ಕಂಬ, ಆನೆ ಬಾಗಿಲು, ಮಂಟಪದ ಸಾಲು, ಪಾಕ ಶಾಲೆ ಮತ್ತು ಯಾಗ ಶಾಲೆ, ಶ್ರೀ ರಾಮದೇವರ ದೇವಸ್ಥಾನ ಮತ್ತು ವಾಹನ ಮಂಟಪ, ಗಜಾ ಗುಂಡ ಹೀಗೆ ಹಲವಾರು ಆಕರ್ಷಣೆಗಳನ್ನು ಇಲ್ಲಿ ಕಾಣಬಹುದು. ಪ್ರತಿ ಆಕರ್ಷಣೆಗಳು ಅದ್ಭುತವಾದ ಕೆತ್ತನೆಗಳಿಂದ ಕೂಡಿದೆ.

ಚಿತ್ರಕೃಪೆ: Vinayaraj

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಬೇಲೂರಿನ ಭೇಟಿಯ ನಂತರ ನಿಮ್ಮ ಪ್ರಯಾಣವನ್ನು ಮುಂದುವರೆಸುತ್ತ ಸುಮಾರು ನೂರು ಕಿ.ಮೀ ದೂರದಲ್ಲಿರುವ ಶ್ರವಣಬೆಳಗೋಳಕ್ಕೆ ಭೇಟಿ ನೀಡಬಹುದು. ಶ್ರವಣಬೆಳಗೊಳವು ಹಾಸನ ಜಿಲ್ಲೆಯಲ್ಲಿರುವ ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಪ್ರಮುಖವಾಗಿರುವ ಪ್ರವಾಸಿ ತಾಣವಾಗಿದ್ದು 58'8" ಅಡಿಗಳಷ್ಟು ಎತ್ತರದ ಬಾಹುಬಲಿಯ ಮೂರ್ತಿಯಿಂದ ಪ್ರಖ್ಯಾತಿಗಳುಸಿದೆ. ಜೈನರ ಪ್ರಮುಖ ಧಾರ್ಮಿಕ ಕೇಂದ್ರವೂ ಆಗಿರುವ ಶ್ರವಣಬೆಳಗೊಳಕೆ, ಇತರೆ ಸಮುದಾಯದವರೂ ಭೇಟಿ ನೀಡಬಹುದು.

ಚಿತ್ರಕೃಪೆ: romana klee

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಶ್ರವಣ ಬೆಳಗೊಳದಲ್ಲಿರುವ ವಿಂಧ್ಯಗಿರಿ ಎಂಬ ಬೆಟ್ಟದ ಮೇಲೆ ಗೊಮ್ಮಟನ ಈ ಪ್ರತಿಮೆಯನ್ನು ಗ್ರಾನೈಟು ಕಲ್ಲಿನಲ್ಲಿ ಕಡೆಯಲಾಗಿದ್ದು ನೋಡಲು ಆಕರ್ಷಕವಾಗಿದೆ. ಕೆತ್ತನೆಯ ಸೂಕ್ಷ್ಮತೆಯು ನೋಡುಗರನ್ನು ವಿಸ್ಮಯಗೊಳಿಸುತ್ತದೆ. ಕ್ರಿ.ಶ.973 ರಲ್ಲಿ ಚಾವುಂಡರಾಯನು ಅರಿಷ್ಟ ನೇಮಿ ಎಂಬ ಶಿಲ್ಪಿಯಿಂದ ಈ ಪ್ರತಿಮೆಯ ನಿರ್ಮಾಣ ಮಾಡಿದನೆನ್ನುತ್ತದೆ ಇತಿಹಾಸ.

ಚಿತ್ರಕೃಪೆ: Sissssou

ಅರಸೀಕೆರೆ ಹಾಗೂ ಸುತ್ತಮುತ್ತ:

ಅರಸೀಕೆರೆ ಹಾಗೂ ಸುತ್ತಮುತ್ತ:

ಈ ಪ್ರತಿಮೆಯಿರುವ ವಿಂಧ್ಯಗಿರಿ ಬೆಟ್ಟ ತಲುಪಲು ಸುಮಾರು 700 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ವಿಶೇಷವೆಂದರೆ ಹತ್ತಲಾಗದವರಿಗೆ ಡೋಲಿ ಅಥವಾ ಪಲ್ಲಕ್ಕಿ ವ್ಯವಸ್ಥೆಯೂ ಲಭ್ಯವಿದೆ. ವಿಂಧ್ಯಗಿರಿಯ ಎದುರಿನಲ್ಲೇ ಚಿಕ್ಕಬೆಟ್ಟ ಅಥವಾ ಚಂದ್ರಗಿರಿ ಬೆಟ್ಟವಿದ್ದು ಇಲ್ಲೂ ಸಹ ಪ್ರಾಚೀನ ಬಸದಿಗಳಿರುವುದನ್ನು ಕಾಣಬಹುದು.

ಚಿತ್ರಕೃಪೆ: cotaro70s

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X