Search
  • Follow NativePlanet
Share
» »ಶಿರಡಿ ಶನಿಶಿಂಗ್ನಾಪುರ ಹಾಗೂ ತ್ರಿಂಬಕೇಶ್ವರ ಪ್ರವಾಸ

ಶಿರಡಿ ಶನಿಶಿಂಗ್ನಾಪುರ ಹಾಗೂ ತ್ರಿಂಬಕೇಶ್ವರ ಪ್ರವಾಸ

By Vijay

ಸಾಯಿ ಬಾಬಾ ನೆಲೆಸಿರುವ ಮಹಾರಾಷ್ಟ್ರ ರಾಜ್ಯದ ಪ್ರಖ್ಯಾತ ಪುಣ್ಯ ಕ್ಷೇತ್ರವೆ ಶಿರಡಿ. ಈ ಕ್ಷೇತ್ರಕ್ಕೆ ವರ್ಷದ ಎಲ್ಲ ಸಮಯದಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಪ್ರವಾಸಿಗರು ದೇಶದ ಮೂಲೆ ಮೂಲೆಗಳಿಂದ ಭೇಟಿ ನೀಡುತ್ತಲೆ ಇರುತ್ತಾರೆ. ಹೀಗೊಂದು ಶಿರಡಿಗೆ ಹೋಗುವ ಅವಕಾಶ ಲಭಿಸಿದರೆ ಅದನ್ನು ಮತ್ತಷ್ಟು ಸಾರ್ಥಕಗೊಳಿಸಿಕೊಳ್ಳುವುದು ಯಾವುದೆ ಪ್ರವಾಸಿಗನ ಉತ್ತಮ ಆಯ್ಕೆಯೆ ಎನ್ನಬಹುದು.

ಈ ನಿಟ್ಟಿನಲ್ಲಿ, ಸುತ್ತಮುತ್ತಲಿನ ಕೆಲವು ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಶಿರಡಿ ಒಂದು ಆದರ್ಶಮಯವಾದ ಆಧಾರ ಸ್ಥಳವಾಗಿ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಏಕೆಂದರೆ ಶಿರಡಿಗೆ ದೇಶದ ಎಲ್ಲ ಮೂಲೆಗಳಿಂದಲೂ ಸುಲಭವಾಗಿ ತೆರಳಬಹುದಾಗಿದ್ದು ತಂಗಲು ಸಾಕಷ್ಟು ಹೋಟೆಲುಗಳೂ ಸಹ ಇಲ್ಲಿ ದೊರೆಯುವುದಾಗಿದೆ.

ನಿಮಗಿಷ್ಟವಾಗಬಹುದಾದ : ದಕ್ಷಿಣ ಭಾರತದ ಪ್ರಸಿದ್ಧ ತೀರ್ಥ ಯಾತ್ರೆಗಳು

ಇನ್ನೂ ಶಿರಡಿಗೆ ಭೇಟಿ ನೀಡಿ ಅದರ ಸುತ್ತಮುತ್ತಲಿನಲ್ಲಿರುವ ಶನಿ ಶಿಂಗ್ನಾಪುರ, ನಾಶಿಕ್, ತ್ರಿಂಬಕೇಶ್ವರ ಹಾಗೂ ಬ್ರಹ್ಮಗಿರಿ ಬೆಟ್ಟ ದರ್ಶಿಸಿ ಬರಬಹುದು. ಈ ಒಂದು ಪ್ರವಾಸವು ನೀವೂ ಎಂದಿಗೂ ಮರೆಯಲಾಗದ ಅದ್ಭುತ ಅನುಭವ ಕರುಣಿಸುತ್ತದೆ. ಈ ಪ್ರವಾಸಕ್ಕೆ ಚಳಿಗಾಲ ಆದರ್ಶಮಯ ಸಮಯವಾದರೂ ಬೇಸಿಗೆಯಲ್ಲಿ ದಟ್ಟ ಜನಸಂದಣಿಯಿರದ ಕಾರಣ ಕೆಲವರು ಈ ಸಮಯದಲ್ಲೂ ಇಲ್ಲಿಗೆ ಭೇಟಿ ಮಾಡಬಯಸುತ್ತಾರೆ.

ಪ್ರಸ್ತುತ ಲೇಖನದ ಮೂಲಕ ಶಿರಡಿಯಲ್ಲಿ ತಂಗಿ ಯಾವ ರೀತಿಯಾಗಿ ಒಂದು ಅವಿಸ್ಮರಣೀಯವಾದ ಪ್ರವಾಸವನ್ನು ಮಾಡಬಹುದೆಂಬುದರ ಕುರಿತು ತಿಳಿಯಿರಿ. ಮುಂದಿನ ಸಮದಲ್ಲಿ ನಿಮಗೆ ಭೆಟಿ ನೀಡುವ ಅವಕಾಶ ದೊರೆತರೆ ಈ ಪ್ರವಾಸವನ್ನು ಒಮ್ಮೆಯಾದರೂ ಮಾಡಿ ನೋಡಿ, ಮೋಡಿ ಮಾಡುವುದು ಖಂಡಿತ.

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಶಿರಡಿಯು ದೇಶದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುತ್ತದೆ. ಅಲ್ಲದೆ ಭಾರತದಲ್ಲಿರುವ ಶ್ರೀಮಂತ ದೇವಸ್ಥಾನಗಳ ಪೈಕಿಯೂ ಶಿರಡಿಯ ಸಾಯಿ ದೇವಸ್ಥಾನವು ಒಂದಾಗಿದೆ.

ಚಿತ್ರಕೃಪೆ: ~Beekeeper~

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿ ಪಟ್ಟಣದ ಹೃದಯ ಭಾಗದಲ್ಲಿ ಸಾಯಿಯ ದೇವಸ್ಥಾನ ಸಂಕೀರ್ಣವು ಸ್ಥಿತವಿದೆ. ಈ ದೇವಸ್ಥಾನ ಆವರಣದಲ್ಲಿ ಸಾಯಿಯ ದೇವಾಲಯವಲ್ಲದೆ ಇತರೆ ಕೆಲವು ಪ್ರಮುಖ ದೇಗುಲಗಳಿವೆ. ಸಾಯಿ ದೇವಸ್ಥಾನಕ್ಕೆ ಭೇಟಿ ನೀಡುವವರು ಈ ಎಲ್ಲ ದೇಗುಲಗಳಿಗೂ ಸಾಮಾನ್ಯವಾಗಿ ಭೇಟಿ ನೀಡುತ್ತಾರೆ.

ಚಿತ್ರಕೃಪೆ: ~Beekeeper~

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಧರ್ಮಸ್ಥಳ, ಏಳು ಬೆಟ್ಟಗಳ ಒಡೆಯ ನೆಲೆಸಿರುವ ತಿರುಪತಿ ತಿರುಮಲ ಮುಂತಾದ ಕ್ಷೇತ್ರಗಳಲ್ಲಿ ಕಂಡುಬರುವಂತೆ ಇಲ್ಲಿಯೂ ಸಹ ಜನದಟ್ಟನೆಯು ಅಧಿಕವಾಗಿರುತ್ತದೆ. ಸರತಿಯಲ್ಲಿ ನಿಂತು ಸಾಯಿಯ ದರುಶನ ಪಡೆಯಬೇಕಾಗುತ್ತದೆ.

ಚಿತ್ರಕೃಪೆ: Kiran Koduru

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯ ಆಗ್ನೇಯಕ್ಕೆ ಸುಮಾರು 75 ಕಿ.ಮೀ ದೂರದಲ್ಲಿ ಶನಿ ಶಿಂಗ್ನಾಪುರ ಎಂಬ ಪ್ರಖ್ಯಾತ ಪುಣ್ಯ ಸ್ಥಳವಿದೆ. ಶನಿ ದೇವರಿಗೆ ಮುಡಿಪಾದ ಸುಪ್ರಸಿದ್ಧ ದೇವಾಲಯದಿಂದಾಗಿ ಈ ಗ್ರಾಮವು ದೇಶದಲ್ಲೆ ಹೆಸರುವಾಸಿಯಾಗಿದೆ. ಶಿರಡಿಯಿಂದ ಇಲ್ಲಿಗೆ ತಲುಪಲು ಸಾಕಷ್ಟು ಖಾಸಗಿ ಬಸ್ಸುಗಳು ಸುಲಭವಾಗಿ ದೊರೆಯುತ್ತವೆ.

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಹಿಂದು ಸಂಪ್ರದಾಯದಲ್ಲಿ ಶನಿ ದೇವರಿಗೆ ವಿಶೇಷವಾದ ಸ್ಥಾನಮಾನಗಳಿದ್ದು ಬಲು ಭಯ, ಭಕ್ತಿ ಹಾಗೂ ಶೃದ್ದೆಗಳಿಂದ ನಡೆದುಕೊಳ್ಳುತ್ತಾರೆ. ಅಂತೆಯೆ ಸಾಕ್ಷಾತ್ ಶನಿ ದೇವರೆ ನೆಲೆಸಿರುವ ಈ ಸ್ಥಳಕ್ಕೆ ಪ್ರತಿ ದಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ.

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಇಲ್ಲಿನ ಇನ್ನೊಂದು ರೋಚಕ ವಿಷಯವೆಂದರೆ ಶನಿ ದೇವರಿರುವ ಮಂದಿರದ ಎರಡು ಮೂರು ಕಿ.ಮೀ ಆಸು ಪಾಸಿನ ಸ್ಥಳಗಳಲ್ಲಿ ಸಾಕಷ್ಟು ಸಂಖ್ಯೆಯ ಮನೆಗಳು ಹಾಗೂ ಅಂಗಡಿ ಮುಗ್ಗಟ್ಟುಗಳಿಗೆ ಬಾಗಿಲುಗಳಿಲ್ಲದಿರುವುದನ್ನು ಕಾಣಬಹುದು. ಏಕೆಂದರೆ ಯಾರಾದರೂ ಇಲ್ಲಿ ಕಳ್ಳತನ, ಸುಲಿಗೆ ಮಾಡಿದರೆ ಅವರು ಶನಿ ದೇವರ ಪ್ರಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಬಲವಾದ ನಂಬಿಕೆಯಿದೆ.

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ದಂತ ಕಥೆಯ ಪ್ರಕಾರ, ಹಿಂದೆ ಈ ಸ್ಥಳದಲ್ಲಿ ಕುರಿಗಾಹಿ ಯುವಕನೊಬ್ಬ ಅನನ್ಯವಾದ ಕಪ್ಪು ಬಣ್ಣದ ವಿಶಿಷ್ಟ ಶಿಲೆಯೊಂದನ್ನು ಇಲ್ಲಿ ನೋಡಿ, ಕುತೂಹಲ ತಾಳಲಾರದೆ ತನ್ನ ಕಟ್ಟಿಗೆಯಿಂದ ಆ ಕಲ್ಲನ್ನು ತಿವಿದ. ಆಗ ಅದರಿಂದ ರಕ್ತ ಹರಿಯುವುದನ್ನು ಕಂಡು ಅವಾಕ್ಕಾದ. ನಂತರ ಸಾಕಷ್ಟು ಜನರು ಇಲ್ಲಿ ಸೇರಿ ಆ ದೃಶ್ಯ ವಿಕ್ಷೀಸಿದರು.

ಚಿತ್ರಕೃಪೆ: Rashmitha

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಆ ದಿನ ರಾತ್ರಿ ಕುರಿಗಾಹಿಗಳ ಆ ತಂಡದಲ್ಲಿ ಭಕ್ತಿ ಇರುವ ಒಬ್ಬ ಹಿರೀಯನ ಕನಸಿನಲ್ಲಿ ಶನಿ ದೇವರು ಪ್ರತ್ಯಕ್ಷರಾಗಿ ತಾನು ಅಲ್ಲಿ ನೆಲೆಸಿರುವದಾಗಿಯೂ, ಪ್ರತಿ ದಿನ ಪೂಜೆ ಹಾಗೂ ಪ್ರತಿ ಶನಿವಾರದಂದು ತೈಲಾಭಿಷೇಕ ಮಾಡಬೇಕೆಂದು ಹೇಳಿದ ಹಾಗೂ ಇನ್ನು ಮುಂದೆ ಈ ಸ್ಥಳವು ಕಳ್ಳ ಕಾಕರ, ಡಕಾಯಿತರ ಭಯದಿಂದ ಮುಕ್ತವಾಗಲಿದೆ ಎಂದು ಆಶೀರ್ವದಿಸಿದ.

ಚಿತ್ರಕೃಪೆ: Vithu.123

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಅಂದಿನಿಂದ ನಿರಂತರವಾಗಿ ಶನಿ ಮಹಾತ್ಮನಿಗೆ ಇಲ್ಲಿ ತೈಲಾಭಿಷೇಕ ಹಾಗೂ ಪೂಜೆಗಳು ಸಾಂಗೋಪವಾಗಿ ಜರುಗುತ್ತವೆ. ವಿಶಿಷ್ಟವಾದ ಕಪ್ಪು ಕಲ್ಲು ಶನಿ ದೇವ ಸಂಕೇತವಾಗಿದ್ದು ಇದಕ್ಕೆ ಯಾವುದೆ ಗೋಪುರ ಅಥವಾ ಛಾವಣಿ ಇಲ್ಲದಿರುವುದು ವಿಶೇಷ.

ಚಿತ್ರಕೃಪೆ: Booradleyp1

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಈ ಪ್ರವಾಸ ಮಾಡುವಾಗ ನೀವು ಶಿರಡಿಯಲ್ಲಿ ತಂಗಿದ್ದರೆ ಒಳಿತು. ಏಕೆಂದರೆ ಸಾಕಷ್ಟು ವಸತಿ ಗೃಹಗಳು ಇಲ್ಲಿ ದೊರೆಯುತ್ತವೆ ಅಲ್ಲದೆ, ಶನಿ ಶಿಂಗ್ನಾಪುರದ ನಂತರ ಮತ್ತೆ ಶಿರಡಿಗೆ ಮರಳಿ ಅಲ್ಲಿಂದ ನಾಶಿಕ್ ಕಡೆಗೆ ಪ್ರಯಾಣ ಬೆಳೆಸಬಹುದು. ಪಶ್ಚಿಮ ಘಟ್ಟಗಳ ಬುಡದಲ್ಲಿ ಹಾಗೂ ಗೋದಾವರಿ ನದಿ ತಟದ ಮೇಲೆ ನೆಲೆಸಿರುವ ನಾಶಿಕ್ ಶಿರಡಿಯಿಂದ ಸುಮಾರು 88 ಕಿ.ಮೀ ಗಳಷ್ಟು ದೂರದಲ್ಲಿದ್ದು ಪಥಾರೆ ಸಿನ್ನಾರ್ ಮೂಲಕ ಸುಲಭವಾಗಿ ತಲುಪಬಹುದು.

ಚಿತ್ರಕೃಪೆ: Ashurockstarboy

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಪಂಚವಟಿ ನಾಶಿಕ್ ನಲ್ಲಿ ಭೇಟಿ ನೀಡಬಹುದಾದ ಆಕರ್ಷಕ ಧಾರ್ಮಿಕ ಆಕರ್ಷಣೆಯಾಗಿದೆ. ಐದು ವಟ ವೃಕ್ಷಗಳು ಇರುವ ಪ್ರದೇಶ ಎಂಬ ಅರ್ಥ ಹೊಂದಿರುವ ಪಂಚವಟಿಯಲ್ಲಿ ಕುಂಬ ಮೇಳ ಜರುಗುವ ಕುಂಡ, ರಾಮಚಂದ್ರನ ದೇವಾಲಯ ಹಾಗೂ ತಪೋವನಗಳನ್ನು ನೋಡಬಹುದಾಗಿದೆ.

ಚಿತ್ರಕೃಪೆ: Prabirghose

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಇಲ್ಲಿರುವ ರಾಮಚಂದ್ರ ದೇವರಿಗೆ ಮುಡಿಪಾದ ದೇವಾಲಯವನ್ನು ಕಾಲಾರಾಮ ದೇವಸ್ಥಾನ ಎಂದು ಕರೆಯುತ್ತಾರೆ. ಕಾರಣ ಎಲ್ಲೆಡೆ ರಾಮನ ಶ್ವೇತ ವರ್ಣದ ವಿಗ್ರಹ ಕಂಡುಬಂದರೆ ಇಲ್ಲಿ ರಾಮಚಂದ್ರನು ಸೀತಾ, ಲಕ್ಷ್ಮಣ ಸಮೇತನಾಗಿ ಕಪ್ಪು ಬಣ್ಣದ ಶಿಲೆಯ ರೂಪದಲ್ಲಿ ನೆಲೆಸಿದ್ದಾನೆ.

ಚಿತ್ರಕೃಪೆ: Ekabhishek

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ರಾಮಕುಂಡ, ಪಂಚವಟಿಯಲ್ಲಿರುವ ಮತ್ತೊಂದು ಧಾರ್ಮಿಕ ಆಕರ್ಷಣೆಯಾಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ಜರುಗುವ ಜಗದ್ವಿಖ್ಯಾತ ಮಹಾಕುಂಭ ಮೇಳದ ಹಲವು ತಾಣಗಳ ಪೈಕಿ ನಾಶಿಕ್ ಸಹ ಒಂದಾಗಿದ್ದು ಇಲ್ಲಿನ ರಾಮಕುಂಡದಲ್ಲಿ ಪವಿತ್ರ ಸ್ನಾನ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ನಾಶಿಕ್ ನ ರಾಮಕುಂಡಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Prabirghose

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ನಾಶಿಕ್ ಪಟ್ಟಣದ ಮತ್ತೊಂದು ಹೆಗ್ಗಳಿಕೆಯೆಂದರೆ ಇದು ಭಾರತದ "ವೈನ್ ಕ್ಯಾಪಿಟಲ್" ಭಾರತದ ಒಟ್ಟಾರೆ ವೈನ್ ಉತ್ಪಾದಿಸುವ ಘಟಕಗಳ ಪೈಕಿ ಸುಮಾರು ಅರ್ಧದಷ್ಟು ಘಟಕಗಳು ನಾಶಿಕ್ ನಲ್ಲಿವೆ. ವಾರ್ಷಿಕ 10,000 ಟನ್ ಗಿಂತಲೂ ಹೆಚ್ಚು ಪ್ರಮಾಣದ ದ್ರಾಕ್ಷಿಯನ್ನು ನಾಶಿಕ್ ನಲ್ಲಿ ಬೆಳೆಯಲಾಗುತ್ತದೆ. ಸುಳಾ ದ್ರಾಕ್ಷಾ ರಸ ಪ್ರಸಿದ್ಧವಾಗಿದ್ದು ಸುಳಾ ಉತ್ಸವ ಕೂಡ ಇಲ್ಲಿ ಜರುಗುತ್ತದೆ.

ಚಿತ್ರಕೃಪೆ: Marco Zanferrari

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ನಾಶಿಕ್ ನಿಂದ ಸುಮಾರು ಕೇವಲ 30 ಕಿ.ಮೀ ದೂರದಲ್ಲಿ ತ್ರಿಂಬಕೇಶ್ವರವಿದ್ದು ಸುಲಭವಾಗಿ ತಲುಪಬಹುದು. ತ್ರಿಂಬಕೇಶ್ವರ ಪವಿತ್ರ 12 ಜ್ಯೋತಿರ್ಲಿಂಗ ತಾಣಗಳ ಪೈಕಿ ಒಂದಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Niraj Suryawanshi

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ತ್ರಿಂಬಕೇಶ್ವರ ದೇವಸ್ಥಾನದ ವಿಶೇಷವೆಂದರೆ ಇಲ್ಲಿರುವ ಶಿವಲಿಂಗವು ಮೂರು ಮುಖಗಳದ್ದಾಗಿದ್ದು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನನ್ನು ಸಂಕೇತಿಸುತ್ತದೆ.

ಚಿತ್ರಕೃಪೆ: Subodh98271

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಈ ದೇವಾಲಯದ ಸಂಕೀರ್ಣದಲ್ಲಿ ಕುಸವರ್ತಾ ಎಂಬ ನೀರಿನ ಕುಂಡವೊಂದಿದ್ದು ಇದನ್ನು ದಕ್ಷಿಣ ಭಾರತದ ಪ್ರಮುಖ ಹಾಗೂ ಪವಿತ್ರ ನದಿಗಳ ಪೈಕಿ ಒಂದಾಗಿರುವ ಗೋದಾವರಿ ನದಿಯ ಉಗಮ ಸ್ಥಾನವೆಂದು ಪರಿಗಣಿಸಲಾಗುತ್ತದೆ.

ಚಿತ್ರಕೃಪೆ: Demorphica

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ತ್ರಿಂಬಕೇಶ್ವರ ದೇವಸ್ಥಾನದಿಂದ ಒಂದೆರಡು ಕಿ.ಮೀ ದೂರದಲ್ಲಿ ಬ್ರಹ್ಮದೇವರಿಗೆ ಮುಡಿಪಾದ ಗಿರಿ ಶಿಖರವೊಂದಿದ್ದು ಅದನ್ನು ಬ್ರಹ್ಮಗಿರಿ ಎಂದು ಕರೆಯುತ್ತಾರೆ. ಇನ್ನೊಂದು ಮೂಲದ ಪ್ರಕಾರ, ಗೊದಾವರಿ ನದಿಯು ಇಲ್ಲಿಯೆ ಉಗಮಗೊಂಡು ತ್ರಿಂಬಕೇಶ್ವರ ಪ್ರವೇಶಿಸುತ್ತಾಳೆ ಎನ್ನಲಾಗಿದೆ. ಅಲ್ಲದೆ ಇನ್ನೆರಡು ನದಿಗಳಾದ ಗೌತಮಿ ಹಾಗೂ ಪಶ್ಚಿಮ ಗಂಗೆಯು ಇಲ್ಲಿಂದಲೆ ಹರಿಯುತ್ತಾಳೆನ್ನಲಾಗಿದೆ.

ಚಿತ್ರಕೃಪೆ: Coolgama

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಹಿಂದೆ ಗೌತಮ ಋಷಿ ಹಾಗೂ ಆತನ ಪತ್ನಿ ಅಹಿಲ್ಯೆಯು ಈ ಬ್ರಹ್ಮಗಿರಿಯಲ್ಲಿ ವಾಸವಿದ್ದರು. ಗೌತಮರು ಗಮ್ಗೆಯನ್ನು ಇಲ್ಲಿಗೆ ತರಲು ಶಿವನ ಕುರಿತು ತಪಗೈದಿದ್ದರು. ತ್ರಿಂಬಕೇಶ್ವರದ ಬಳಿ ಅಹಿಲ್ಯಾ ನದಿಯು ಗೋದಾವರಿಯೊಂದಿಗೆ ಸಂಗಮಗೊಳ್ಳುತ್ತದೆ. ಮಕ್ಕಳಿಲ್ಲದ ಕುಟುಂಬಗಳು ಈ ಸಂಗಮದಲ್ಲಿ ಪ್ರಾರ್ಥಿಸಿದರೆ ಸಂತಾನ ಲಭಿಸುತ್ತದೆಂದು ನಂಬಲಾಗಿದೆ. ಬ್ರಹ್ಮಗಿರಿಯಲ್ಲಿ ಗೌತಮ ಹಾಗೂ ಅಹಿಲ್ಯೆಗೆ ಮುಡಿಪಾದ ಪುಟ್ಟ ದೇವಸ್ಥಾನವೂ ಸಹ ಇದೆ.

ಚಿತ್ರಕೃಪೆ: Coolgama

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಶಿರಡಿಯಿಂದ ಬ್ರಹ್ಮಗಿರಿವರೆಗೆ:

ಇನ್ನೂ ಬ್ರಹ್ಮಗಿರಿ ಅತ್ಯದ್ಭುತ ಪ್ರಾಕೃತಿಕ ನೋಟಗಳನ್ನು ಹೊತ್ತ ಸುಂದರ ಗಿರಿಶಿಖರವಾಗಿದ್ದು ಸಾಹಸಮಯ ಪ್ರವಾಸಿಗರನ್ನು ಆಕರ್‍ಶಿಸುತ್ತದೆ. ಇಲ್ಲಿ ಟ್ರೆಕ್ಕಿಂಗ್ ಮಾಡಲು ಹಲವಾರು ಮಾರ್ಗಗಳಿವೆ. ಅಲ್ಲದೆ ಬೆಟ್ಟ ಏರಲು ಅನುವು ಆಗುವಂತೆ ಮೆಟ್ಟಿಲುಗಳೂ ಸಹ ಇವೆ.

ಚಿತ್ರಕೃಪೆ: Coolgama

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X