Search
  • Follow NativePlanet
Share
» »ಅಮರಾವತಿಯ ಅಮರ ಆಕರ್ಷಣೆಗಳು

ಅಮರಾವತಿಯ ಅಮರ ಆಕರ್ಷಣೆಗಳು

By Vijay

ಮಹಾರಾಷ್ಟ್ರದ ಉತ್ತರ ಗಡಿ ಭಾಗದಲ್ಲಿರುವ ಅಮರಾವತಿ ಎಂಬ ಜಿಲ್ಲೆಯು ಸಾಕಷ್ಟು ಪ್ರವಾಸಿ ಕುತೂಹಲ ಕೆರಳಿಸುವ ಸುಂದರ ತಾಣವಾಗಿದೆ. ದಖನ್ ಪ್ರಸ್ತ ಭೂಮಿಯಲ್ಲಿ ಬರುವ ಈ ಜಿಲ್ಲೆಯು ಮುಖ್ಯವಾಗಿ ತಾಪಿ ಮುಖಜ ಭೂಮಿಯಲ್ಲಿ ನೆಲೆಗೊಂಡಿದೆ.

ಉಚಿತ ಕೂಪನ್ : ಯಾತ್ರಾ ಮೂಲಕ ಹೋಟೆಲ್ ಬುಕ್ಕಿಂಗ್ ಮೇಲೆ 50% + 30% ರಷ್ಟು ಕಡಿತ ಪಡೆಯಿರಿ

ಮಹಾರಾಷ್ಟ್ರದ ಏಳನೇ ಅತ್ಯಂತ ಜನಸಂಖ್ಯೆ ಹೊಂದಿರುವ ನಗರವಾದ ಅಮರಾವತಿಯು 12,626 ಚ.ಕಿ.ಮೀ ವಿಸ್ತೀರ್ಣದಷ್ಟು ವಿಶಾಲವಾಗಿ ವ್ಯಾಪಿಸಿದೆ. ಮೂಲತಃ ಅಮರಾವತಿ ಎಂಬ ಪದವು 'ಔದುಂಬರಾವತಿ' ಎಂಬ ಪದದಿಂದ ಬಂದಿದೆ ಎಂದೂ ಹೇಳಲಾಗುತ್ತದೆ. ಕಾರಣ, ಈ ಪ್ರಾಂತ್ಯದಲ್ಲಿ ಯಥೇಚ್ಛವಾಗಿರುವ ಕಂಡುಬರುವ ಔದುಂಬರ ವೃಕ್ಷಗಳಿಂದ ಇದಕ್ಕೆ ಈ ಹೆಸರು ಬಂದಿರ ಬಹುದೆಂದು ನಂಬಲಾಗಿದೆ.

ವಿಶೇಷ ಲೇಖನ : ಹರಿಶ್ಚಂದ್ರಗಡ್ ವಿಸ್ಮಯಗೊಳಿಸುವ ತಾಣ

ಅಲ್ಲದೆ, ಇನ್ನೂ ಕೆಲವರು ಇಲ್ಲಿರುವ ಪುರಾತನವಾದ ಅಂಬಾದೇವಿಯ ದೇವಾಲಯದಿಂದಾಗಿ ಈ ಊರಿಗೆ ಅಮರಾವತಿ ಎಂಬ ಹೆಸರು ಬಂದಿತು ಎಂದೂ ಸಹ ನಂಬುತ್ತಾರೆ. ಅಮೃತಶಿಲೆಯಿಂದ ನಿರ್ಮಿಸಲಾದ ಆದಿನಾಥ ಋಷಭನಾಥನ ಮೂರ್ತಿಯ ಪೀಠದಲ್ಲಿ ಕೆತ್ತಲಾಗಿರುವ ಶಾಸನದಲ್ಲಿ ಅಮರಾವತಿಯ ಪುರಾತನ ಉಲ್ಲೇಖಗಳು ಸಿಗುತ್ತವೆ.

ವಿಶೇಷ ಲೇಖನ : ಉಕ್ಕಿನಂತೆಯೆ ಗಟ್ಟಿಮುಟ್ಟಾದ ಲೋಹಗಡ್

ಪ್ರಸ್ತುತ ಲೇಖನದ ಮೂಲಕ ಅಮರಾವತಿಯ ವಿಶೇಷತೆ, ಅಲ್ಲಿ ಕಂಡುಬರುವ ಸುತ್ತಮುತ್ತಲಿನ ಪ್ರವಾಸಿ ಆಕರ್ಷಣೆಗಳು ಹಾಗೂ ಅಮರಾವತಿಗೆ ಹೊರಡುವ ಬಗೆಗಳ ಕುರಿತು ಸಂಕ್ಷೀಪ್ತವಾಗಿ ತಿಳಿಯಿರಿ.

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿ ಹಾಗೂ ಸುತ್ತಮುತ್ತಲು:

ಹಿಂದಿನ ಕಾಲದಲ್ಲಿ ಅಮರಾವತಿಯು ಮೌರ್ಯ ಸಾಮ್ರಾಜ್ಯದ ಅಶೋಕನ ಆಡಳಿತಾವಧಿಯಲ್ಲಿ ಪ್ರಮುಖ ಪಾತ್ರವಹಿಸಿತ್ತು. ಧಾರ್ಮಿಕ ಆಸಕ್ತರು, ಅಮರಾವತಿಯು ಸುರರ ಅರಸನಾದ ದೇವೆಂದ್ರನಿಗೆ ಸೇರಿದ್ದೆಂದು ವಾದಿಸುತ್ತಾರೆ. ಅಮರಾವತಿಯಲ್ಲಿ ಬಾಲಕೃಷ್ಣ ದೇವಾಲಯ, ಸೋಮೇಶ್ವರ ದೇವಾಲಯ, ಮುರಳೀಧರ್ ಮತ್ತು ಬ್ರಹ್ಮಚಾರಿ ಮಹಾರಾಜ್ ದೇವಾಲಯ ಮುಂತಾದ ಪ್ರಸಿದ್ಧ ದೇವಾಲಯಗಳನ್ನು ನೋಡಲು ಮರೆಯಬಾರದು.

ಚಿತ್ರಕೃಪೆ: wikipedia

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿಯು, ದೇವಾಲಯಗಳಿಗಷ್ಟೆ ಅಲ್ಲದೆ ಇಲ್ಲಿ ಆಚರಿಸಲಾಗುವ ನವರಾತ್ರಿ, ದೀಪಾವಳಿ ಮತ್ತು ಹೋಳಿ ಹಬ್ಬಗಳಿಗೂ ಸಹ ಹೆಸರುವಾಸಿಯಾಗಿದೆ. ನವರಾತ್ರಿ ಹಬ್ಬವು ಇಲ್ಲಿ ಅತ್ಯಂತ ವೈಭವದಿಂದ ಆಚರಿಸಲಾಗುವ ಹಬ್ಬವಾಗಿದೆ. ಸಾಯಿನಗರದಲ್ಲಿರುವ ಸಾಯಿ ಭಕ್ತಿಧಾಮ ದೇವಾಲಯ ಮತ್ತು ರತ್ನಗಾಂವ್ ನಲ್ಲಿರುವ ಶ್ರೀ ಸ್ವಾಮಿ ಸಮರ್ಥ್ ದೇವಾಲಯಕ್ಕೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು, ಹಬ್ಬದ ಸಮಯಗಳಲ್ಲಿ ಪೂಜೆಸಲ್ಲಿಸಲು ಆಗಮಿಸುತ್ತಾರೆ.

ಚಿತ್ರಕೃಪೆ: Ashish Bijwe

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿಯ ಹೃದಯ ಭಾಗದ ಗಾಂಧಿ ವೃತ್ತದಲ್ಲಿರುವ ಅಂಬಾದೇವಿ ದೇವಾಲಯವು ತಾಯಿ ಅಂಬಾ ದೇವಿಗಾಗಿ ಕಟ್ಟಲಾಗಿರುವ ದೇವಾಲಯವಾಗಿದೆ. ಪ್ರಾಚೀನ, ಧಾರ್ಮಿಕ ಕೇಂದ್ರವಾದ ಈ ದೇವಾಲಯದ ಕುರಿತಾದ ಉಲ್ಲೇಖಗಳು ಪ್ರಾಚೀನ ಬರಹಗಳಲ್ಲಿ ಕಾಣಬಹುದು. ನಂಬಿಕೆಗಳ ಪ್ರಕಾರ, ರಾಜ ಭೀಷ್ಮಕನ ಮಗಳಾದ ರುಕ್ಮಿಣಿಯು ಶಿಶುಪಾಲನ ಜೊತೆ ಮದುವೆ ಆಗುವ ಮೊದಲು ಈ ದೇವಾಲಯಕ್ಕೆ ಭೇಟಿಕೊಟ್ಟಿದ್ದಳಂತೆ. ಶ್ರೀ ಕೃಷ್ಣನು ಆಕೆಯನ್ನು ಇಲ್ಲಿಂದಲೆ ಅಪಹರಿಸಿ ನಂತರ ಆಕೆಯೊಂದಿಗೆ ಮದುವೆಯಾದನೆಂದು ಹೇಳಲಾಗುತ್ತದೆ.

ಚಿತ್ರಕೃಪೆ: Arpans88

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿ ಹಾಗೂ ಸುತ್ತಮುತ್ತಲು:

ಚಿಕ್ಕಲ್ದಾರಾ : ಅಮರಾವತಿ ಜಿಲ್ಲೆಯಲ್ಲಿರುವ ಒಂದು ಸುಂದರ ಪ್ರಕೃತಿಯ ನಾಡೆ ಚಿಕ್ಕಲ್ಧಾರಾ. ಇದು ವನ್ಯಜೀವಿಗಳ ಅಭಯಾರಣ್ಯ ಪ್ರಕೃತಿ ಪ್ರೀಯರ ಮನ ಸೂರೆಗೊಳ್ಳುವುದರಲ್ಲಿ ಸಂಶಯವಿಲ್ಲ. ಆದ್ದರಿಂದಲೆ, ಇಲ್ಲಿಗೆ ಪ್ರತಿವರ್ಷ ಹಲವಾರು ಪ್ರವಾಸಿಗರು ಆಗಮಿಸುತ್ತಾರೆ. ಅಮರಾವತಿ ಪಟ್ಟಣದಿಂದ ಸುಮಾರು 85 ಕಿ.ಮೀ ಗಳಷ್ಟು ದೂರದಲ್ಲಿ ಚಿಕ್ಕಲ್ಧಾರಾ ನೆಲೆಸಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: chikhaldara.org

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿ ಹಾಗೂ ಸುತ್ತಮುತ್ತಲು:

ಅಚಲ್ಪುರ : ಅಮರಾವತಿ ಜಿಲ್ಲೆಯಲ್ಲಿರುವ ಅಚಲ್ಪುರವು ಒಂದು ಮನಮೋಹಕ ಪ್ರವಾಸಿ ಕೇಂದ್ರವಾಗಿದೆ. ಕಿತ್ತಳೆ, ಹತ್ತಿ ಹಾಗೂ ಬಾಳೆ ಹಣ್ಣುಗಳ ಬೆಳೆಗೆ ಈ ತಾಣವು ಹೆಚ್ಚು ಹೆಸರುವಾಸಿಯಾಗಿದೆ. ಅಲ್ಲದೆ ಜೇನು ತುಪ್ಪ, ಆಯುರ್ವೇದದ ಔಷಧಿಗಳಿಗೂ ಸಹ ಈ ಸ್ಥಳವು ಅಪಾರ ಜನಮನ್ನಣೆಗಳಿಸಿದೆ.

ಚಿತ್ರಕೃಪೆ: Andre Engels

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿ ಜಿಲ್ಲೆಯಲ್ಲಿರುವ ಮೇಲ್ಘಾಟ್ ಒಂದು ವನ್ಯಜೀವಿ ಧಾಮವಾಗಿದ್ದು, ಹುಲಿ ರಕ್ಷಿತ ಪ್ರದೇಶವೂ ಸಹ ಆಗಿದೆ. 1985 ರಲ್ಲಿ ಮೇಲ್ಘಾಟ್ ವನ್ಯಜೀವಿ ಧಾಮವನ್ನು ಸ್ಥಾಪಿಸಲಾಯಿತು. ಬಲು ವೈವಿಧ್ಯಮಯ ಜೀವಸಂಕುಲವನ್ನು ಈ ಧಾಮದಲ್ಲಿ ಕಾಣಬಹುದು.

ಚಿತ್ರಕೃಪೆ: Bendale.kaustubh

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿ ಹಾಗೂ ಸುತ್ತಮುತ್ತಲು:

ಚಿಕ್ಕಲ್ಧಾರಾದಿಂದ ಕೇವಲ ಮೂರು ಕಿ.ಮೀ ಗಳಷ್ಟು ದೂರದಲ್ಲಿರುವ ಅದ್ಭುತ ಪ್ರಕೃತಿ ಸೌಂದರ್ಯ ಹೊತ್ತ ಬೆಟ್ಟಗಳ ಶ್ರೇಣಿಯಲ್ಲಿ ಪ್ರಾಚೀನ ಕೋಟೆ ಗೋಡೆಗಳನ್ನು ಕಾಣಬಹುದು. ಈ ತಾಣವೆ ಗವೀಲ್ಗಡ್ ಕೋಟೆ ಹಾಗೂ ಇದರ ಸುತ್ತ ಮುತ್ತಲಿನ ಬೆಟ್ಟಗಳನ್ನು ಗವೀಲ್ಗಡ್ ಬೆಟ್ಟಗಳು ಎಂದೆ ಕರೆಯುತ್ತಾರೆ. ಗವೀಲ್ಗಡ್ ಕೋಟೆಯು ರಮಣೀಯ ದೃಶ್ಯಾವಳಿಗಳನ್ನು ಪ್ರವಾಸಿಗರಿಗೆ ಕರುಣಿಸುತ್ತದೆ.

ಚಿತ್ರಕೃಪೆ: C .SHELARE

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿ ಹಾಗೂ ಸುತ್ತಮುತ್ತಲು:

ಮೇಲ್ಘಾಟ್ ರಕ್ಷಿತ ಹುಲಿ ಅಭಯಾರಣ್ಯದ ಒಂದು ಭಾಗವಾಗಿದೆ ಗುಗಮಲ್ ರಾಷ್ಟ್ರೀಯ ಉದ್ಯಾನ. ಇಲ್ಲಿ ವೈವಿಧ್ಯಮಯ ಜೀವ ಸಂಕುಲದ ಜೊತೆ ಅತ್ಯಂತ ಅಪಾಯದ ಅಂಚಿನಲ್ಲಿರುವ ಅಪರೂಪದ ಕಾಡು ಗೂಬೆಗಳನ್ನು ನೋಡಬಹುದಾಗಿದೆ.

ಚಿತ್ರಕೃಪೆ: Ashahar alias Krishna Khan

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿ ಹಾಗೂ ಸುತ್ತಮುತ್ತಲು:

ಗವೀಲ್ಗಡ್ ನಲ್ಲಿರುವ ಒಂದು ಸುಂದರ ಕೆರೆ.

ಚಿತ್ರಕೃಪೆ: Belasd

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿ ಹಾಗೂ ಸುತ್ತಮುತ್ತಲು:

ರಮಣೀಯ ಪ್ರಕೃತಿ ಸೌಂದರ್ಯದ ಗವೀಲ್ಗಡ್ ಕೋಟೆ.

ಚಿತ್ರಕೃಪೆ: C .SHELARE

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿ ಹಾಗೂ ಸುತ್ತಮುತ್ತಲು:

ಅಮರಾವತಿಯು ಮುಂಬೈ - ಕೊಲ್ಕತ್ತಾ ಹೆದ್ದಾರಿಯಲ್ಲಿದ್ದು ಸುಲಭವಾಗಿ ರಸ್ತೆ, ರೈಲು ಮತ್ತು ವಿಮಾನಯಾನದ ಮೂಲಕ ತಲುಪಬಹುದು. ಮಹಾರಾಷ್ಟ್ರ ರಾಜ್ಯ ಸಾರಿಗೆ ಮತ್ತು ಖಾಸಗಿ ಬಸ್ಸು ನಿರ್ವಾಹಕರು ಅಮರಾವತಿ - ಪುಣೆ ಮತ್ತು ಅಮರಾವತಿ - ಇಂದೋರ್ ಮಾರ್ಗಗಳಲ್ಲಿ ಬಸ್ಸುಗಳಲ್ಲಿ ನಿಮ್ಮನ್ನು ಅಮರಾವತಿಗೆ ತಲುಪಿಸುತ್ತಾರೆ. ಮಹಾರಾಷ್ಟ್ರದ ಒಳಗಿನ ನಾಗ್ಪುರ್, ಮುಂಬೈ ಮತ್ತು ಔರಂಗಬಾದ್ ಗಳಿಂದ ಅಮರಾವತಿಗೆ ರಸ್ತೆ ಮತ್ತು ವಿಮಾನಯಾನದ ಮೂಲಕ ತಲುಪಬಹುದು. ಅಲ್ಲದೆ ಮಹಾರಾಷ್ಟ್ರದ ಪ್ರಮುಖ ನಗರಗಳಿಂದ ಅಮರಾವತಿಗೆ ರೈಲಿನಲ್ಲಿ ತಲುಪಬಹುದು. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Amit Chattopadhyay

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X