Search
  • Follow NativePlanet
Share
» »ಅಂಬೋಲಿ ಎಂಬ ಮಾಯಾ ಸಂಕೋಲೆ

ಅಂಬೋಲಿ ಎಂಬ ಮಾಯಾ ಸಂಕೋಲೆ

By Vijay

ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿ ಎಲೆ ಮರೆಯ ಕಾಯಿಯಂತಿದ್ದು, ಅಪರಿಮಿತ ಪ್ರಕೃತಿ ಸೌಂದರ್ಯದಿಂದ ಕೂಡಿರುವ ಅಂಬೋಲಿ ಎಂಬ ಮಾಯಾ ಪ್ರದೇಶ ಒಂದೆ ಸಲದ ಭೇಟಿಯಲ್ಲೆ ಮರಳಾಗುವಂತೆ ಮಾಡುತ್ತದೆ. ಕರ್ನಾಟಕದ ಬೆಳಗಾವಿಯಿಂದ ಕೇವಲ 65 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಸುಂದರ ಗಿರಿಧಾಮವು ಬೆಳಗಾವಿಯಿಂದ ಸಾವಂತವಾಡಿಯೆಡೆ ಹೋಗುವಾಗ ದೊರೆಯುತ್ತದೆ.

ಅಷ್ಟೊಂದಾಗಿ ಅನ್ವೇಷಿಸಲ್ಪಡದ ಈ ಗಿರಿಧಾಮವು ನಿಜಕ್ಕೂ ಒಂದು ಅದ್ಭುತವಾದ ಪ್ರದೇಶವಾಗಿದ್ದು, ಸಾಕಷ್ಟು ಆಯ್ಕೆಗಳನ್ನು ಭೇಟಿ ನೀಡುವ ಪ್ರವಾಸಿಗರಿಗೆ ಕರುಣಿಸುತ್ತದೆ. ಇದೊಂದು "ಹಿಲ್ ಸ್ಟೇಷನ್" ಆಗಿರುವುದರಿಂದ ಬೇಸಿಗೆಯಲ್ಲಷ್ಟೆ ಭೇಟಿ ನೀಡಬೇಕೆಂದಿಲ್ಲ. ಮಳೆಗಾಲ ಹಾಗೂ ಚಳಿಗಾಲದ ಸಮಯದಲ್ಲೂ ತುಂಬ ಆಕರ್ಷಕವಾಗಿರುತ್ತದೆ ಈ ಅಂಬೋಲಿ.

ಅದರಲ್ಲೂ ವಿಶೇಷವಾಗಿ ಮಳೆಗಾಲದ ಸಮಯದಲ್ಲಿ, ಕಪ್ಪೆಗಳು ಯಾವ ರೀತಿ ಮಳೆಗಾಲದ ಸಮಯದಿ ಬಿಲಗಳಿಂದ ಹೊರಬರುತ್ತವೆಯೊ ಅದೇ ರೀತಿ ಈ ಪ್ರದೇಶದಲ್ಲಿಯೂ ಸಹ ಅಲ್ಲಲ್ಲಿ ಕೃತಕ ಜಲಪಾತಗಳು ರೂಪಗೊಂಡು ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.

ಅಷ್ಟೆ ಅಲ್ಲ, ಪ್ರದೇಶದ ಒಂದು ನಿರ್ದಿಷ್ಟ ಜಾಗದಲ್ಲಿ ರಸ್ತೆಯ ಒಂದು ಬದಿ ಆಳವಾದ ಪ್ರಪಾತವಿದ್ದು, ಇನ್ನೊಂದು ಬದಿಯಲ್ಲಿ ಕಲ್ಲು ಬಂಡೆಗಳ ಬೆಟ್ಟ ಹಾಗೂ ಅಲ್ಲಿಂದ ಉಕ್ಕಿ ಹಾಲ್ನೊರೆಯಂತೆ ಹರಿಯುವ ಜಲಪಾತದ ನೋಟ, ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇನ್ನೂ ಮಂಜಂತೂ ಎಲ್ಲೆಡೆ ವ್ಯಾಪಿಸಿದ್ದು ಎರಡಡಿ ದೂರವಿರುವವರು ಗೋಚರಿಸುವುದು ಕಷ್ಟ ಎನ್ನುವ ಹಾಗಿರುತ್ತದೆ.

ತಂಗಲು ಮಹ್ರಾಷ್ಟ್ರ ಸರ್ಕಾರದ ರಿಸಾರ್ಟು ಹಾಗೂ ಇತರೆ ಹೋಟೆಲುಗಳಿದ್ದು ಬಸ್ಸು ಹಾಗೂ ರೈಲಿನ ಮೂಲಕ ಸುಲಭವಾಗಿ ಇಲ್ಲಿಗೆ ತೆರಳಬಹುದಾಗಿದೆ. ಬೆಳಗಾವಿಯಿಂದ ಹಾಗೂ ಮಹಾರಾಷ್ಟ್ರದ ಸಾವಂತವಾಡಿಯಿಂದ ಇಲ್ಲಿಗೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಇನ್ನೂ ರೈಲಿನ ಮೂಲಕ ತಲುಪಬೇಕೆಂದರೆ ಬೆಳಗಾವಿ ಹಾಗೂ ಸಾವಂತವಾಡಿ (ಸಾವಂತವಾಡಿಯಿಂದ ಅಂಬೋಲಿ ಕೇವಲ 28 ಕಿ.ಮೀ ದೂರದಲ್ಲಿದೆ) ಇದಕ್ಕೆ ಹತ್ತಿರದಲ್ಲಿರುವ ಪ್ರಮುಖ ರೈಲು ನಿಲ್ದಾಣಗಳು.

ಈ ಲೇಖನವನ್ನೂ ಓದಿ : ಮಹಾರಾಷ್ಟ್ರದ ಮೈನವಿರೇಳಿಸುವ ಗಿರಿಧಾಮಗಳು

ಅಂಬೋಲಿ:

ಅಂಬೋಲಿ:

ಸುಂದರ ಪ್ರಕೃತಿ ಮೈಸಿರಿಯನು ಹೊಂದಿರುವ ಅಂಬೋಲಿಯಲ್ಲಿ ಹಿರಣ್ಯಕೇಶಿ ದೇವಾಲಯ ನಂಗರ್ತಾ ಜಲಪಾತ, ಶಿರ್ಗಾಂವ್ಕರ್ ವೀಕ್ಷಣಾ ಕೇಂದ್ರ, ಕವಳೇಶೇಟ್ ವೀಕ್ಷಣಾ ಕೇಂದ್ರ, ಅಂಬೋಲಿ ಜಲಪಾತ, ಮಾರುತಿ ಮಂದಿರ, ಹನುಮಾನ್ಗಡ್, ಸೂರ್ಯೋದಯ ವೀಕ್ಷಣಾ ಕೇಂದ್ರಗಳಂತಹ ಅದ್ಭುತವಾದ ಆಕರ್ಷಣೆಗಳನ್ನು ನೋಡಬಹುದಾಗಿದೆ.

ಚಿತ್ರಕೃಪೆ: UrbanWanderer

ಅಂಬೋಲಿ:

ಅಂಬೋಲಿ:

ಮಳೆಗಾಲದ ಸಮಯದಲ್ಲಂತೂ ಅಲ್ಲಲ್ಲಿ ರೂಪಗೊಂಡು ಉಕ್ಕಿ ಹರಿಯುವ ಜಲಪಾತಗಳು ಕಣ್ಣರಳುವಂತೆ ಮಾಡುತ್ತವೆ.

ಚಿತ್ರಕೃಪೆ: Rossipaulo

ಅಂಬೋಲಿ:

ಅಂಬೋಲಿ:

ಬೆಟ್ಟ ಗುಡ್ಡಗಳ ಮಧ್ಯೆ ಹಾದು ಹೋಗಿರುವ ಘಟ್ಟ ರಸ್ತೆಗಳಲ್ಲಿ ಸಂಚರ್ಸುವಾಗ ಎಲ್ಲಿಲ್ಲದ ರೋಮಾಂಚನ ಉಂಟಾಗುವುದು ಖಚಿತ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಮಂತ್ರಮುಗ್ಧವಾಗಿಸುವ ಅಮೋಘವಾದ ಅಂಬೋಲಿ ಜಲಪಾತ ಮಳೆಗಾಲದ ಸಂದರ್ಭದಲ್ಲಂತೂ ಇದನ್ನು ನೋಡುವುದೆ ಬಲು ಚೆಂದ. ಅಷ್ಟೆ ಅಲ್ಲ ಜಲಪಾತದ ಬದಿಗಳಲ್ಲಿ ಏರುತ್ತ ಹಾಲ್ನೊರೆಯಂತಹ ನೀರಿನಲ್ಲಿ ನೆನೆದಾಗ ಆಗುವ ಆನಂದ ಪರಮಾನಂದವೆ ಸರಿ.

ಚಿತ್ರಕೃಪೆ: Ishan Manjrekar

ಅಂಬೋಲಿ:

ಅಂಬೋಲಿ:

ಹಿರಿಯ ಕಿರಿಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಜಲಪಾತದ ಸನಿಹಕ್ಕೆ ತೆರಳಲು ಮೆಟ್ಟಿಲುಗಳು ಇಲ್ಲಿರುವುದನ್ನು ಕಾಣಬಹುದು.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಭವ್ಯ ಪರಿಸರದಲ್ಲಿ ಚಿತ್ರ ತಂಡದವರಿಂದ ಚಿತ್ರೀಕರಣ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಅಂಬೋಲಿಯ ಮಂಜಿನ ವಾತಾವರಣದಲ್ಲಿ ನಯನಗಳೂ ಸಹ ಮಂಜು ಮಂಜು...

ಚಿತ್ರಕೃಪೆ: Naveen Kadam

ಅಂಬೋಲಿ:

ಅಂಬೋಲಿ:

ಆನಂದ ಉಕ್ಕಿಸುವ ಅಂಬೋಲಿಯ ಸುಂದರ ಭೂದೃಶ್ಯಾವಳಿ.

ಚಿತ್ರಕೃಪೆ: nikita.pandit4

ಅಂಬೋಲಿ:

ಅಂಬೋಲಿ:

ಅಂಬೋಲಿಯ ನಂಗರ್ತಾ ಜಲಪಾತದ ದೃಶ್ಯ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಅಂಬೋಲಿಯ ಕವಳೆಶೇಟ್ ಕಣಿವೆಯ ಒಂದು ಸುಂದರ ನೋಟ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಅಂಬೋಲಿಯ ವೀಕ್ಷಣಾ ಕೇಂದ್ರಕ್ಕೆ ತಲುಪುವ ಹಾದಿ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಅಂಬೋಲಿಯಲ್ಲಿರುವ ಮಹಾದೇವ್ಗಡ್ ವೀಕ್ಷಣಾ ಕೇಂದ್ರ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಅಂಬೋಲಿಯಲ್ಲಿರುವ ಮಹಾದೇವ್ಗಡ್ ವೀಕ್ಷಣಾ ಕೇಂದ್ರದಿಂದ ನೋಡಿದಾಗ ಕಂಡುಬರುವ ಸುತ್ತ ಮುತ್ತಲಿನ ಪ್ರಕೃತಿ ಸೌಂದರ್ಯ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಅಂಬೋಲಿಯಲ್ಲಿ ಮಂಗಗಳ ಕಲರವ. ಅಂಬೋಲಿಯ ಸುತ್ತಮುತ್ತಲು ದಟ್ಟವಾದ ಕಾಡು ಪ್ರದೇಶವಿದ್ದು ವಿವಿಧ ಜೀವ ಸಂಕುಲವನ್ನು ಕಾಣಬಹುದು.

ಚಿತ್ರಕೃಪೆ: ptwo

ಅಂಬೋಲಿ:

ಅಂಬೋಲಿ:

ಅಂಬೋಲಿಯ ಸುಂದರ ಪರಿಸರದಲ್ಲಿ ಚಿಟ್ಟೆಗಳ ಸುಮಧುರ ಮಿಲನ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ವೈವಿಧ್ಯಮಯ ಸರಿಸೃಪಗಳು ಇಲ್ಲಿ ಕಾಣಸಿಗುತ್ತವೆ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಅಂಬೋಲಿಯ ಬಂಡೆಯೊಂದರ ಮೇಲೆ ವಿಹರಿಸುತ್ತಿರುವ ಸಹಸ್ರಪದಿ / ಮಿಲ್ಲಿಪೇಡ್.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಅಂಬೋಲಿಯ ಕೆರೆಯೊಂದರಲ್ಲಿ ನಸುನಗುತ್ತ ಅರಳಿರುವ ತಾವರೆ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ತಂಪು ತಂಪಾದ ಹಿತಕರ ವಾತಾವರಣವಿರುವ ಅಂಬೋಲಿಯ ಉಸಿರು ಈ ಹಸಿರಿನಲ್ಲೆ ಅಡಗಿದೆ ಎಂದರೆ ತಪ್ಪಾಗಲಾರದು.

ಚಿತ್ರಕೃಪೆ: UrbanWanderer

ಅಂಬೋಲಿ:

ಅಂಬೋಲಿ:

ಆಳವಾದ ಕಣಿವೆ ಪ್ರದೇಶದಲ್ಲಿ ಸೂಜಿಗಲ್ಲಿನಂತೆ ಹರಿದಿರುವ ನದಿ.

ಚಿತ್ರಕೃಪೆ: Rossipaulo

ಅಂಬೋಲಿ:

ಅಂಬೋಲಿ:

ಗಿಡದ ರೆಂಬೆಯೊಂದು ಜಿಂಕೆಯಾದಾಗ.....

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಅಂಬೋಲಿಯ ಎಲ್ಲ ಭಾಗಗಳು ಕ್ಯಾಮೆರಾಗಳಿಗೆ ಪೋಸು ನೀಡಲು ಯಾವಾಗಲೂ ರೆಡಿ!

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಅಂಬೋಲಿಯ ಶಿರ್ಗಾಂವ್ಕರ್ ವೀಕ್ಷಣಾ ಕೇಂದ್ರಕ್ಕೆ ಕರೆದೊಯ್ಯುವ ದಾರಿ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಅಂಬೋಲಿಯ ಕಾಡಿನ ಪ್ರದೇಶದಲ್ಲಿ ಸ್ವಚ್ಛಂದವಾಗಿ ಹರಿಯುತ್ತಿರುವ ನೀರಿನ ತೊರೆ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಅಂಬೋಲಿಯಲ್ಲಿರುವ ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯ ರಿಸಾರ್ಟಿನ ಕಾಟೇಜುಗಳು.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಎಂ.ಟಿ.ಡಿ.ಸಿ ರಿಸಾರ್ಟು ಸುತ್ತಮುತ್ತಲಿರುವ ದಟ್ಟವಾದ ಗಿಡ ಮರಗಳು.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಶಿರ್ಗಾಂವ್ಕರ್ ವೀಕ್ಷಣಾ ಕೇಂದ್ರದಿಂದ ವೀಕ್ಷಿಸಿದಾಗ ಕಾಣುವ ಸೂರ್ಯಾಸ್ತ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಹಸಿರಿನಿಂದ ನಳ ನಳಿಸುವ ಅಂಬೋಲಿ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಮಳೆಗಾಲದ ಸಮಯದಲ್ಲಿ ಅಂಬೋಲಿಯ ರಸ್ತೆ.

ಚಿತ್ರಕೃಪೆ: Ishan Manjrekar

ಅಂಬೋಲಿ:

ಅಂಬೋಲಿ:

ಅಂಬೋಲಿಯ ಶ್ರೀ ಹನುಮಾನ ಮಂದಿರ.

ಚಿತ್ರಕೃಪೆ: Ishan Manjrekar

ಅಂಬೋಲಿ:

ಅಂಬೋಲಿ:

ಅಂಬೋಲಿಯು ಸೂರ್ಯನನ್ನು ಸ್ವಾಗತಿಸುವುದು ಹೀಗೆ...

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಅಂಬೋಲಿಯ ಎತ್ತರ ಪ್ರದೇಶದಿಂದ ಕಾಣುವ ಸಮಗ್ರ ಪರಿಸರ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ಚಿಕ್ಕದಾದರೂ ಚೊಕ್ಕಾದ ಸ್ವಚ್ಛತೆಯಿಂದ ಕೂಡಿರುವ ಅಂಬೋಲಿ ರೈಲು ನಿಲ್ದಾಣ.

ಚಿತ್ರಕೃಪೆ: Elroy Serrao

ಅಂಬೋಲಿ:

ಅಂಬೋಲಿ:

ನೀರು ಕ್ಷೀರವಾಗಿ ಅಂಬೋಲಿಯ ಬಂಡೆಗಳ ಮಧ್ಯೆ ಹರಿದಾಗ...

ಚಿತ್ರಕೃಪೆ: Naveen Kadam

ಅಂಬೋಲಿ:

ಅಂಬೋಲಿ:

ಅಂಬೋಲಿಯಲ್ಲಿರುವ ಹಿರಣ್ಯಕೇಶಿ ದೇವಸ್ಥಾನ.

ಚಿತ್ರಕೃಪೆ: Nilesh2 str

ಅಂಬೋಲಿ:

ಅಂಬೋಲಿ:

ಅಂಬೋಲಿಯ ಸುಂದರವಾದ ಅಂಬೋಲಿ ಜಲಪಾತ.

ಚಿತ್ರಕೃಪೆ: Ayilliath

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X