Search
  • Follow NativePlanet
Share
» »ಅರೆರೆ...ಎಷ್ಟು ಸುಂದರ ಆರೆ-ವಾರೆ!

ಅರೆರೆ...ಎಷ್ಟು ಸುಂದರ ಆರೆ-ವಾರೆ!

ಆರೆ ವಾರೆ ಅವಳಿ ಕಡಲ ತೀರಗಳು ಮಹಾರಾಷ್ಟ್ರದ ಕೊಂಕಣ ಕರಾವಳಿಯ ಸುಂದರ ಪಟ್ಟಣದ ರತ್ನಾಗಿರಿಯ ಬಳಿ ನೆಲೆಸಿರುವ ಎಲೆಮರೆಯ ಕಾಯಿಯಂತಿರುವ ಸುಂದರ ತೀರವಾಗಿದೆ

By Vijay

ಅಬ್ಬಬ್ಬಾ...ಎಷ್ಟು ಸುಂದರವಾಗಿದೆ ಆರೆ-ವಾರೆ, ಭೇಟಿ ನೀಡಿ ಮನಸಾರೆ. ಹೌದು ಇವು ಎರಡು ಸುಂದರ ಅವಳಿ ಬೀಚುಗಳು. ಬಹಳಷ್ಟು ಜನರು ಇದರು ಕುರಿತು ತಿಳಿದಿಲ್ಲ. ತಿಳಿದವರು ತಮಗೆ ಬೇಕೆಂದಾಗ ಶಾಂತರಾಗಿ ಹೋಗಿ, ಅದ್ಭುತ ಸಮಯ ಕಳೆದು, ಪ್ರಸನ್ನಗೊಂಡು ಮತ್ತೆ ಶಾಂತರಾಗಿಯೆ ಮರಳುತ್ತಾರೆ.

ವಿಶೇಷವೆಂದರೆ, ಇದೊಂದು ಅದ್ಭುತ ಕಡಲ ಕಿನಾರೆಯಾದರೂ ಸಹ ಇಲ್ಲಿ ಪ್ರವಾಸಿ ಚಟುವಟಿಕೆಗಳು ಕಂಡುಬರುವುದೆ ಇಲ್ಲ. ಆವಾಗಾವಾಗ ಅಲ್ಲೊ ಇಲ್ಲೊ ಒಬ್ಬೊಬ್ಬ ಮನುಷ್ಯ ಮಾತ್ರ ಕಾಣಸಿಗುತ್ತಾನೆ. ಮಿಕ್ಕಂತೆ ನೀವು ಭೇಟಿ ನೀಡಿದ್ದರೆ ಅಷ್ಟೆ, ನೀವು ಹಾಗೂ ಆ ಸಮುದ್ರದ ನಿರಂತರ ಅಪ್ಪಳಿಸುವ ಅಲೆಗಳು ಮಾತ್ರ. ಅದು ಬಿಟ್ಟರೆ ಅಣತೆ ದೂರದಲ್ಲಿರುವ ಕೆಲ ಬೆಸ್ತ ಕುಟುಂಬಗಳು ಮಾತ್ರ.

ಅರೆರೆ...ಎಷ್ಟು ಸುಂದರ ಆರೆ-ವಾರೆ!

ಚಿತ್ರಕೃಪೆ: Amankr3081

ಇದರ ನೀರೂ ಸಹ ಅಷ್ಟೆ ಆಕರ್ಷಕ ತಿಳಿ ನೀಲ ವರ್ಣದ ಸ್ಪಷ್ಟ ನೀರು, ತಳವೂ ಕಾಣುವಂತಿರುತ್ತದೆ. ಇನ್ನೂ ಈ ನೀಲವರ್ಣಕ್ಕೆ ಪ್ರಕೃತಿಯಿಂದ ಸಿಂಗರಿಸಲ್ಪಟ್ಟಂತೆ ಸುತ್ತಲೂ ಚಾಚಿರುವ ಕೊಂಕಣದ ಹಸಿರಿನ ಗಿರಿ ಪರ್ವತಗಳು ಒಟ್ಟಾರೆ ಕಡಲ ಕಿನಾರೆಗೆ ವಿಶೇಷವಾದ ಮೆರುಗನ್ನೆ ನೀಡುತ್ತದೆ. ಅಲ್ಲದೆ ಸಮುದ್ರವೂ ಶಾಂತ ಹಾಗೂ ಆಟವಾಡಲು ಯೋಗ್ಯಕರವಾಗಿದೆ.

ಇನ್ನೇನು ಬೇಕು ಮರ್ಕಟ ಮನಸ್ಸಿಗೆ, ನೋಡಿದ ಕ್ಷಣದಲ್ಲೆ ಮನದೊಳಗಿನ ಸಾಹಸಿ ಮಂಗವು ಪುಟಿ ಪುಟಿಯುತ್ತ ಹೊರಬಂದು ನೆಟ್ಟಗೆ ನೀರಲ್ಲಿ ಜಂಪು ಹೊಡೆಯುವ ಕಾಯಕಕ್ಕೆ ಸಿದ್ಧನಾಗುತ್ತಾನೆ. ಇನ್ನೇನಿದ್ದರೂ ಅದನ್ನು ಹೇಗೆ ನಿಯಂತ್ರಿಸಬೇಕೆಂಬುದೆ ನಿಮಗೆ ಸವಾಲು. ಆದರೆ ಸುತ್ತಲಿನ ಅತಿ ಶಾಂತ ಪರಿಸರ, ಅಲೆಗಳ ನಿರಂತರ ಕರೆಗಳು ನೀವು ಸೋಲುವಂತೆ ಮಾಡಿದರೂ ಅಚ್ಚರಿಪಡಬೇಕಾಗಿಲ್ಲ.

ಅರೆರೆ...ಎಷ್ಟು ಸುಂದರ ಆರೆ-ವಾರೆ!

ಚಿತ್ರಕೃಪೆ: Amankr3081

ಈ ಸಮುದ್ರ ತೀರಕ್ಕೆ ಭೇಟಿ ನೀಡಿದರೆ ನಿಮಗೆಂದೂ ನಿರಾಸೆಯಾಗದು. ಇಲ್ಲಿಗೆ ತಲುಪುವುದ ತುಸು ಕಷ್ಟಕರವೆನಿಸಿದರೂ ಭೇಟಿ ನೀಡಿದ ನಂತರ ಆ ಪಟ್ಟ ಕಷ್ಟ ಸಾಕಷ್ಟು ಸಾರ್ಥಕ ಎಂಬ ಭಾವನೆಯೂ ಮೂಡಬಹುದು. ಅಲ್ಲದೆ ಇಂತಹ ಒಂದು ಸುಂದರ ಕಡಲ ಕಿನಾರೆ ನಮ್ಮ ಭಾರತದಲ್ಲೂ ಇದೆಯಲ್ಲಾ! ಅಂಬ ಸಂತಸ, ಅಚ್ಚರಿಗಳೂ ಉಂಟಾಗಬಹುದು.

ಇನ್ನೂ ಈ ಕಡಲ ಕಿನಾರೆಯೆಡೆ ತೆರಳುವ ಮಾರ್ಗವೂ ಸಹ ಸಾಕಷ್ಟು ರೋಮಾಂಚಕವಾಗಿದೆ. ಒಂದೆಡೆ ಬೃಹತ್ತಾದ ಮೊನಚಾದ ಬೆಟ್ಟ-ಗುಡ್ಡಗಳು. ಅದರ ಬುಡದಲ್ಲಿ ಕೌಶಲ್ಯತೆಯಿಂದ ಭೂಮಿ ಕೊರೆದು ಪಥ ನಿರ್ಮಿಸಿ ವ್ಯವಸ್ಥಿತವಾಗಿ ಡಾಂಬರ್ ಹಾಕಿ ನಿರ್ಮಿಸಿದ ರಸ್ತೆ.

ಅರೆರೆ...ಎಷ್ಟು ಸುಂದರ ಆರೆ-ವಾರೆ!

ಚಿತ್ರಕೃಪೆ: Apoo8338

ಆ ರಸ್ತೆಯ ಮೇಲೆ ಸಾಗುವಾಗ ಒಂದು ಬದಿಯಲ್ಲಿ ಗುಡ್ಡಗಳು ಎದೆಯುಬ್ಬಿಸಿ ನಿಂತಿದ್ದರೆ ಇನ್ನೊಂದು ಬದಿಯಲ್ಲಿ ಕಚಗುಳಿ ಇಕ್ಕುವ ನೀರಿನಲೆಗಳು ಭೂಮಿಯ ಒಂದು ಅಂಚಿಗೆ ಪದೆ ಪದೆ ಬಂದು ಆಟವಾಡಲು ಬಾ..ಬಾ..ಎಂದು ಕರೆಯುತ್ತಿವೆಯಾ? ಎಂದು ಅನಿಸುತ್ತಿರುವಂತಿರುತ್ತದೆ.

ರತ್ನದಂತಹ ಆಕರ್ಷಣೆಗಳುಳ್ಳ ರತ್ನಾಗಿರಿ!

ಅಕ್ಟೋಬರ್ ನಿಂದ ಫೆಬ್ರುವರಿಯವರೆಗೂ ಈ ಸುಂದರ ಅವಳಿ ಕಿನಾರೆಗಳಿಗೆ ಭೇಟಿ ನೀಡಲು ಅತಿ ಪ್ರಶಸ್ತ ಸಮಯವಾಗಿದೆ. ಅಷ್ಟಕ್ಕೂ ಈ ಕಡಲ ಕಿನಾರೆ ಇರುವುದಾದರೂ ಎಲ್ಲಿ? ಈ ಆರೆ-ವಾರೆ ಕಡಲ ತೀರಗಳಿರುವುದು ಮಹಾರಾಷ್ಟ್ರದ ರತ್ನಾಗಿರಿಯಲ್ಲಿ. ಗಣಪತಿ ಪುಳೆಯಿಂದ ರತ್ನಾಗಿರಿಗೆ ಹೋಗುವ ಮಾರ್ಗದಲ್ಲಿ ಬಂಡಾರಪುಳೆ ಎಂಬಲ್ಲಿ ಈ ಕಡಲ ತೀರವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X